ಏರ್‌ಟೆಲ್‌ ಜೊತೆಗೆ ಕೈ ಜೋಡಿಸಿದ ಮೆಟ್ರೋ, ಇನ್ಮುಂದೆ ಪ್ರಯಾಣಿಕರಿಗೆ ಈ ಸೇವೆ ಇನ್ನಷ್ಟು ಸರಳ!

|

ಏರ್‌ಟೆಲ್‌ ತನ್ನ ಬಳಕೆದಾರರಿಗೆ ವಿಶೇಷ ಆಯ್ಕೆಗಳ ಜೊತೆಗೆ ಹಲವಾರು ರೀಚಾರ್ಜ್‌ ಪ್ಲ್ಯಾನ್‌ ಪರಿಚಯಿಸುತ್ತಾ ಬರುತ್ತಿದೆ. ಇದರ ನಡುವೆ ಏರ್‌ಟೆಲ್‌ ಆಡ್‌ ಆನ್‌ ರೀಚಾರ್ಜ್‌ ಬದಲಾಗಿ ಹೊಸ ರೀಚಾರ್ಜ್‌ ಯೋಜನೆಗಳನ್ನು ಕೆಲವು ದಿನಗಳ ಹಿಂದಷ್ಟೇ ಘೋಷಣೆ ಮಾಡಿತ್ತು. ಇದರಿಂದ ಬಳಕೆದಾರರು ಅಗತ್ಯಕ್ಕೆ ತಕ್ಕಂತೆ ಡೇಟಾ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದೆಲ್ಲದರ ನಡುವೆ ಈಗ ಮೆಟ್ರೋ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದೆ. ಈ ಮುಖಾಂತರ ಪ್ರಯಾಣಿಕರು ಸುಲಭವಾಗಿ ಮೆಟ್ರೋ ಕಾರ್ಡ್‌ ಅನ್ನು ರೀಚಾರ್ಜ್ ಮಾಡಿಕೊಳ್ಳಬಹುದು.

ಏರ್‌ಟೆಲ್‌ ಜೊತೆಗೆ ಕೈ ಜೋಡಿಸಿದ ಮೆಟ್ರೋ,  ಪ್ರಯಾಣಿಕರಿಗೆ ಈ ಸೇವೆ ಇನ್ನಷ್ಟು ಸರಳ!

ಹೌದು, ಏರ್‌ಟೆಲ್‌ ಹೊಸ ರೀತಿಯ ಪ್ಲ್ಯಾನ್‌ಗಳನ್ನು ನಿರಂತರವಾಗಿ ಪರಿಚಯಿಸುತ್ತಿದ್ದು, ಇದರ ಭಾಗವಾಗಿ ದೆಹಲಿ ಮೆಟ್ರೋ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಹೊಂದಿದೆ. ಅಂದರೆ ತನ್ನ ಪ್ರಯಾಣಿಕರಿಗೆ ವಿಶೇಷ ಸೇವೆ ನೀಡಲು ಮುಂದಾಗಿರುವ ಮೆಟ್ರೋ, ಸ್ಮಾರ್ಟ್ ಕಾರ್ಡ್ ಟಾಪ್-ಅಪ್ ಸೌಲಭ್ಯವನ್ನು ನೀಡುವ ಸಲುವಾಗಿ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್‌ನೊಂದಿಗೆ ಕೈ ಜೋಡಿಸಿದೆ. ಹಾಗಿದ್ರೆ ಯಾವ ರಾಜ್ಯದ ಮೆಟ್ರೋ ಬಳಕೆದಾರರು ಈ ಸೇವೆ ಪಡೆದುಕೊಳ್ಳಬಹುದು. ಇದು ಪ್ರಯಾಣಿಕರಿಗೆ ಹೇಗೆ ಲಾಭ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಏರ್‌ಟೆಲ್‌ ಜೊತೆ ಕೈ ಜೋಡಿಸಿದ ದೆಹಲಿ ಮೆಟ್ರೋ
ದೆಹಲಿ ಮೆಟ್ರೋದ ಸ್ಮಾರ್ಟ್ ಕಾರ್ಡ್‌ಗಳ ಟಾಪ್-ಅಪ್ (ರೀಚಾರ್ಜ್) ಸೌಲಭ್ಯವನ್ನು ಈಗ ಏರ್‌ಟೆಲ್ ಪಾವತಿ ಬ್ಯಾಂಕ್ ಮೂಲಕ ಪಡೆದುಕೊಳ್ಳಬಹುದಾಗಿದೆ. ಇನ್ನೂ ಈ ಹೊಸ ಪ್ಲ್ಯಾನ್‌ ಡಿಜಿಟಲ್ ಇಂಡಿಯಾ ಭಾಗವಾಗಿದ್ದು, ಈ ಮೂಲಕ ಸರ್ಕಾರಕ್ಕೆ ಹಾಗೂ ಜನರಿಗೆ ಲಾಭವಾಗಲಿದೆ.

ಫೋನ್‌ ಮೂಲಕ ಸುಲಭ ರೀಚಾರ್ಜ್‌
ಇನ್ನು ದೆಹಲಿ ಮೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕರು ಇನ್ಮುಂದೆ ತಮ್ಮ ಸ್ಮಾರ್ಟ್‌ಫೋನ್‌ ಮೂಲಕ ಮೆಟ್ರೋದ ಸ್ಮಾರ್ಟ್‌ಕಾರ್ಡ್‌ಗಳನ್ನು ರೀಚಾರ್ಜ್‌ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಈ ಹಣಕಾಸಿನ ವಹಿವಾಟು ಸಂಪೂರ್ಣವಾಗಿ ಸುರಕ್ಷಿತವಾಗಿರಲಿದ್ದು, ಸ್ಮಾರ್ಟ್‌ಕಾರ್ಡ್‌ ಮತ್ತು ನೆಟ್ ಬ್ಯಾಂಕಿಂಗ್ ವಿವರಗಳನ್ನು ಒಮ್ಮೆ ಮಾತ್ರ ಉಳಿಸುತ್ತದೆ ಎಂದು ಏರ್‌ಟೆಲ್ ಮಾಹಿತಿ ನೀಡಿದೆ. ಇನ್ನು ಈ ವಿಶೇಷ ಸೌಲಭ್ಯದ ಮೂಲಕ ನಡೆಯುವ ಪ್ರಕ್ರಿಯೆಗಳು ಬಹಳ ವೇಗವಾಗಿರಲಿವೆ.

ಏರ್‌ಟೆಲ್‌ ಜೊತೆಗೆ ಕೈ ಜೋಡಿಸಿದ ಮೆಟ್ರೋ,  ಪ್ರಯಾಣಿಕರಿಗೆ ಈ ಸೇವೆ ಇನ್ನಷ್ಟು ಸರಳ!

ರೀಚಾರ್ಜ್‌ ಹೇಗೆ ಮಾಡಿಕೊಳ್ಳಬಹುದು
ಏರ್‌ಟೆಲ್ ಥ್ಯಾಂಕ್ಸ್ ಆಪ್‌ನಲ್ಲಿನ ಬ್ಯಾಂಕ್ ವಿಭಾಗದಲ್ಲಿ ಮೆಟ್ರೋ ರೀಚಾರ್ಜ್ ಐಕಾನ್ ಅನ್ನು ಆಯ್ಕೆ ಮಾಡಿ. ನಂತರ ಅಲ್ಲಿ DMRC ಸ್ಮಾರ್ಟ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ, ಇದಾದ ಬಳಿಕ ರೀಚಾರ್ಜ್ ಮೊತ್ತವನ್ನು ನಮೂದಿಸಿ ಮತ್ತು ಪಾವತಿ ಮಾಡಿ. ರೀಚಾರ್ಜ್‌ ಆದ ನಂತರ ಕಾರ್ಡ್‌ ಅನ್ನು ಬಳಕೆ ಮಾಡುವ ಅದನ್ನು ಸಿಂಕ್ ಮಾಡಲು ಮೆಟ್ರೋ ನಿಲ್ದಾಣದಲ್ಲಿ ಆಡ್ ವ್ಯಾಲ್ಯೂ ಮೆಷಿನ್‌ನಲ್ಲಿ ಇರಿಸಿ ಸಕ್ರಿಯಗೊಳಿಸಬೇಕಿದೆ.

ಇತ್ತೀಚಿನ ದಿನಗಳಲ್ಲಿ ಮೆಟ್ರೋ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದು, ಸರತಿ ಸಾಲುಗಳನ್ನು ತಪ್ಪಿಸಲು ಮತ್ತು ನಿಲ್ದಾಣಗಳಲ್ಲಿ ಸಮಯವನ್ನು ಉಳಿಸಲು ಸ್ಮಾರ್ಟ್ ಕಾರ್ಡ್‌ಗಳ ಸುಲಭ ಟಾಪ್-ಅಪ್/ಟೋಕನ್‌ಗಳ ಮಾರಾಟಕ್ಕೆ ಅನುಕೂಲವಾಗುವಂತೆ DMRC ಹಲವಾರು ಇತರೆ ಉಪಕ್ರಮಗಳನ್ನು ಈಗಾಗಲೇ ಪ್ರಾರಂಭಿಸಿದೆ.

ಟಿವಿಎಂಗಳ ಮೂಲಕ ಸ್ಮಾರ್ಟ್ ಕಾರ್ಡ್ ಟಾಪ್-ಅಪ್ ಆಯ್ಕೆ, ಇತರ ಬ್ಯಾಂಕ್‌ಗಳೊಂದಿಗೆ ಮೆಟ್ರೋ ಕಾಂಬೊ ಕಾರ್ಡ್‌ಗಳ ಲಾಂಚ್‌, ನಿಲ್ದಾಣಗಳಲ್ಲಿ ಕ್ರೆಡಿಟ್/ಡೆಬಿಟ್ ಕಾರ್ಡ್ ವಹಿವಾಟು ಸೌಲಭ್ಯ, dmrcsmartcard.com ಬಳಸಿಕೊಂಡು ನೆಟ್ ಬ್ಯಾಂಕಿಂಗ್, ಮೊಬೈಲ್ ಇ-ವ್ಯಾಲೆಟ್‌ಗಳು ಮತ್ತು ಇನ್ನೂ ಹೆಚ್ಚಿನ ಆಯ್ಕೆಗಳನ್ನು ಬಳಕೆ ಮಾಡಿಕೊಂಡು ಈ ರೀಚಾರ್ಜ್‌ ಪ್ರಕ್ರಿಯೆ ನಡೆಸಬಹುದಾಗಿದೆ. ಇನ್ನು ಸದ್ಯಕ್ಕೆ ದೆಹಲಿಯಲ್ಲಿ ಈ ಸೇವೆ ಲಭ್ಯವಾಗುತ್ತಿದ್ದು, ಬೆಂಗಳೂರು ಸೇರಿದಂತೆ ಇತರೆ ಮೆಟ್ರೋ ನಗರಗಳಲ್ಲಿ ಯಾವಾಗ ಏರ್‌ಟೆಲ್‌ ಈ ಸೇವೆ ನೀಡಲಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.

ಏರ್‌ಟೆಲ್‌ ಜೊತೆಗೆ ಕೈ ಜೋಡಿಸಿದ ಮೆಟ್ರೋ,  ಪ್ರಯಾಣಿಕರಿಗೆ ಈ ಸೇವೆ ಇನ್ನಷ್ಟು ಸರಳ!

ಏರ್‌ಟೆಲ್‌ನ ಹೊಸ ರೀಚಾರ್ಜ್‌ ಪ್ಲ್ಯಾನ್
ಇದರ ನಡುವೆ ಮೊನ್ನೆ ಲಾಂಚ್‌ ಮಾಡಲಾಗಿರುವ ಎರಡು ರೀಚಾರ್ಜ್‌ ಪ್ಲ್ಯಾನ್‌ಗಳು ಬಳಕೆದಾರರಿಗೆ ವಿಶೇಷ ಅನುಕೂಲ ಒದಗಿಸಲಿವೆ. ಈ ಮೂಲಕ ಬಳಕೆದಾರರು ಜಾಲತಾಣವನ್ನು ದಿನಪೂರ್ತಿ ಬಳಕೆ ಮಾಡಿದರೂ ಸಹ ಇಂಟರ್ನೆಟ್‌ ಖಾಲಿಯಾವುದಿಲ್ಲ. ಅದರಲ್ಲೂ ಈ ರೀಚಾರ್ಜ್ ಪ್ಲ್ಯಾನ್‌ನಲ್ಲಿ 5G ಸೇವೆಯನ್ನೂ ಸಹ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಏರ್‌ಟೆಲ್‌ 489ರೂ. ಹಾಗೂ 509 ರೂ. ಗಳ ರೀಚಾರ್ಜ್‌ ಪ್ಲ್ಯಾನ್‌ ಪರಿಚಯಿಸಿದೆ.

Best Mobiles in India

English summary
Delhi Metro partners with Airtel Payments Bank, will now offer easy recharge options to passengers. passengers can do the recharge process through their smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X