110ಕ್ಕೂ ಅಧಿಕ ಸ್ಪೋರ್ಟ್ಸ್‌ ಮೋಡ್‌ ಇರುವ ಡಿಜೊ ವಾಚ್ D ಪ್ಲಸ್ ಲಾಂಚ್‌ !

|

ಡಿಜೊ (Dizo) ಕಂಪೆನಿಯು ರಿಯಲ್‌ಮಿ ಸಬ್‌ ಬ್ರ್ಯಾಂಡ್‌ ಆಗಿದ್ದು, ಸ್ಮಾರ್ಟ್‌ ಎಂಟರ್‌ಟೈನ್‌ಮೆಂಟ್, ಸ್ಮಾರ್ಟ್ ಹೋಮ್, ಸ್ಮಾರ್ಟ್ ಕೇರ್ ಮತ್ತು ಆಕ್ಸೆಸರೀಸ್ ವಿಭಾಗದಲ್ಲಿ ಹಲವು ಉತ್ಪನ್ನಗಳನ್ನು ಪರಿಚಯಿಸಿ ಹೆಸರು ಗಳಿಸಿದೆ. ಇದರ ನಡುವೆ ಇದೀಗ ಆಕರ್ಷಕ ಫೀಚರ್ಸ್‌ ಇರುವ ಸ್ಮಾರ್ಟ್‌ವಾಚ್‌ ಅನ್ನು ಪರಿಚಯಿಸಿದ್ದು, ಈ ವಾಚ್‌ 110 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳ ಆಯ್ಕೆಯನ್ನು ಹೊಂದಿದೆ.

ಟೆಕ್‌ಲೈಫ್‌

ಹೌದು, ರಿಯಲ್‌ಮಿಯ ಟೆಕ್‌ಲೈಫ್‌ ಬ್ರ್ಯಾಂಡ್‌ ಆಗಿರುವ ಡಿಜೊ, ಡಿಜೊ ವಾಚ್ D ಪ್ಲಸ್ (Dizo Watch D Plus) ಎಂಬ ವಾಚ್‌ ಅನ್ನು ಅನಾವರಣಗೊಳಿಸಿದೆ. ಈ ವಾಚ್‌ ಭಾರತದಲ್ಲಿ ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವ ವಾಚ್‌ಗಳ ಸಾಲಿಗೆ ಸೇರಿಕೊಳ್ಳಲಿದ್ದು, ವಿವಿಧ ಫೀಚರ್ಸ್‌ ಪಡೆದುಕೊಂಡಿದೆ. SpO2 ಮಾನಿಟರ್, 300mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಒಳಗೊಂಡಂತೆ ಇದು ಆಂಡ್ರಾಯ್ಡ್‌ ಹಾಗೂ ಐಓಎಸ್‌ ಡಿವೈಸ್‌ಗಳಿಗೆ ಬೆಂಬಲ ನೀಡುತ್ತದೆ. ಹಾಗಿದ್ರೆ ಇದರ ಇನ್ನಷ್ಟು ಫೀಚರ್ಸ್‌ ಅನ್ನು ಈ ಲೇಖನದಲ್ಲಿ ನೋಡೋಣ ಬನ್ನಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಡಿಜೊ ವಾಚ್ D ಪ್ಲಸ್ ಸ್ಮಾರ್ಟ್‌ವಾಚ್‌ 1.85 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಜೊತೆಗೆ ಆಯತಾಕಾರದ ಡಯಲ್ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 240x280 ಪಿಕ್ಸೆಲ್ ರೆಸಲ್ಯೂಶನ್ ನೀಡಲಿದ್ದು, 550 nits ಬ್ರೈಟ್‌ನೆಸ್‌ ಪಡೆದುಕೊಂಡಿದೆ. ಜೊತೆಗೆ 150+ ವಾಚ್ ಫೇಸ್‌ಗಳ ಆಯ್ಕೆ ಇದರಲ್ಲಿದ್ದು, ಕರ್ವ್ಡ್ ಡಿಸ್‌ಪ್ಲೇ ಇದಾಗಿದೆ. ಇದರೊಂದಿಗೆ ಸ್ಕ್ರಾಚ್ ರೆಸಿಸ್ಟೆಂಟ್‌ ಫೀಚರ್ಸ್‌ ಇದೆ.

ವಾಚ್‌ ಫೇಸ್‌

ವೈಯುಕ್ತೀಕರಿಸಿಕೊಳ್ಳಬಹುದಾದ ವಾಚ್‌ ಫೇಸ್‌ಗಳನ್ನು ಈ ವಾಚ್ ಹೊಂದಿದ್ದು, ಆಟೋಮ್ಯಾಟಿಕ್‌ ಆಗಿ ಡಿಸ್‌ಪ್ಲೇ ಬ್ರೈಟ್‌ನೆಟ್‌ ಪರಿಸರಕ್ಕೆ ತಕ್ಕಂತೆ ಹೊಂದಾಣಿಕೆ ಆಗಲಿದೆ. ಇನ್ನು ಡಿವೈಸ್‌ನ ಬಲಭಾಗದಲ್ಲಿ ಒಂದು ಬಟನ್ ನೀಡಲಾಗಿದೆ. ಇನ್ನುಳಿದಂತೆ ಈ ವಾಚ್‌ ಅಲ್ಯೂಮಿನಿಯಂ ಫ್ರೇಮ್ ಮತ್ತು ಡಿಟ್ಯಾಚೇಬಲ್ ಸಾಫ್ಟ್ ಸಿಲಿಕೋನ್ ಸ್ಟ್ರಾಪ್ ಆಯ್ಕೆಯನ್ನು ಪಡೆದುಕೊಂಡಿದೆ.

ಪ್ರಮುಖ ಫೀಚರ್ಸ್‌

ಪ್ರಮುಖ ಫೀಚರ್ಸ್‌

ಈ ಸ್ಮಾರ್ಟ್‌ವಾಚ್‌ 3ATM ವಾಟರ್ ರೆಸಿಸ್ಟೆಂಟ್ ರೇಟಿಂಗ್‌ ಪಡೆದಿದ್ದು, ನೀರಿನ ಸ್ಪ್ಲಾಶ್‌ಗಳಿಂದ ಇದನ್ನು ರಕ್ಷಿಸಬಹುದು ಆದರೆ, ಈಜು ಅಥವಾ ಸೌನಾದಲ್ಲಿ ಇದನ್ನು ಬಳಕೆ ಮಾಡಬಾರದು ಎಂದು ಕಂಪೆನಿ ತಿಳಿಸಿದೆ. ಇನ್ನುಳಿದಂತೆ ಜಿಮ್ನಾಸ್ಟಿಕ್ಸ್, ಯೋಗ, ಹೈಕಿಂಗ್, ಕ್ರಾಸ್ ಫಿಟ್, ನೃತ್ಯ, ಕರಾಟೆ, ಟೇಕ್ವಾಂಡೋ, ಕುದುರೆ ಸವಾರಿ, ಡಿಸ್ಕ್ ಪ್ಲೇಗಳು ಸೇರಿದಂತೆ 110 ಕ್ಕೂ ಹೆಚ್ಚು ಸ್ಪೋರ್ಟ್ಸ್‌ಮೋಡ್‌ಗಳನ್ನು ಹೊಂದಿದೆ.

ಟ್ರ್ಯಾಕಿಂಗ್

ಇನ್ನು ಈ ಸ್ಮಾರ್ಟ್‌ವಾಚ್‌ನಲ್ಲಿನ ಸ್ಪೋರ್ಟ್ಸ್‌ ಮೋಡ್‌‌ಗಳ ಪಟ್ಟಿಯನ್ನು ಬಳಕೆದಾರರು ಆಪ್‌ನಿಂದ ಬದಲಾಯಿಸಬಹುದಾಗಿದೆ. ಇದು ನಿಖರವಾದ ಹೃದಯ ಬಡಿತ ಸೆನ್ಸರ್, SpO2 ಮಾನಿಟರ್, ನಿದ್ರೆಯ ಟ್ರ್ಯಾಕಿಂಗ್, ಮಹಿಳೆಯರಿಗೆ ಸಂಬಂಧಿಸಿದ ಆರೋಗ್ಯ ಮಾಹಿತಿ, ಸ್ಟೆಪ್ ಕೌಂಟರ್, ಕ್ಯಾಲೋರಿ ಟ್ರ್ಯಾಕಿಂಗ್, ವಾಟರ್ ಡ್ರಿಂಕ್ ರಿಮೈಂಡರ್ ಫೀಚರ್ಸ್‌ ಪಡೆದಿದೆ.

ಇನ್‌ಬಿಲ್ಟ್‌

ಈ ವಾಚ್‌ನಲ್ಲಿ ಇನ್‌ಬಿಲ್ಟ್‌ ಜಿಪಿಎಸ್‌ ಫೀಚರ್ಸ್‌ ಇಲ್ಲದಿರುವುದರಿಂದ ನಿಮ್ಮ ವರ್ಕೌಟ್‌ ಮ್ಯಾಪ್‌ ಪರಿಶೀಲಿಸಲು ಸ್ಮಾರ್ಟ್‌ಫೋನ್‌ಗೆ ಸಂಪರ್ಕಿಸಬೇಕಾಗುತ್ತದೆ. ಇದರ ಜೊತೆಗೆ ಫೋನಿನ ಕ್ಯಾಮೆರಾ ಕಂಟ್ರೋಲ್‌, ಮ್ಯೂಸಿಕ್‌ ಕಂಟ್ರೋಲ್, ಅಲಾರಾಂ, ಫೈಂಡ್‌ ಮೈ ಫೋನ್, ಕಾಲ್‌ ಹಾಗೂ ಮೆಸೆಜ್‌ ನೋಟಿಫಿಕೇಶನ್, ಮಿಸ್ಸೆಡ್‌ ಕಾಲ್‌ ವಿವರ, ಹವಾಮಾನದ ಬಗ್ಗೆ ಮುನ್ಸೂಚನೆ ಸೇರಿದಂತೆ ಇನ್ನಿತರೆ ಪ್ರಮುಖ ಮಾಹಿತಿ ನೀಡುವ ಆಯ್ಕೆಯನ್ನು ಈ ವಾಚ್‌ ಹೊಂದಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ಡಿಜೊ ವಾಚ್ 300mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಒಂದು ಪೂರ್ಣ ಚಾರ್ಜ್‌ನಲ್ಲಿ 14 ದಿನಗಳ ವರೆಗೆ ಬಳಕೆ ಮಾಡಬಹುದಾಗಿದೆ. ಹಾಗೆಯೇ ಸ್ಟ್ಯಾಂಡ್‌ಬೈನಲ್ಲಿ 60 ದಿನಗಳವರೆಗೆ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಡಿಜೊ ವಾಚ್ D ಪ್ಲಸ್ ಸ್ಮಾರ್ಟ್‌ವಾಚ್‌ಗೆ ಆರಂಭಿಕ ಬೆಲೆಯಾಗಿ 1,999ರೂ. ಗಳನ್ನು ನಿಗದಿ ಮಾಡಲಾಗಿದೆ. ಹಾಗೆಯೇ ಈ ವಾಚ್‌ ಕ್ಲಾಸಿಕ್ ಬ್ಲ್ಯಾಕ್, ಸಿಲ್ವರ್ ಗ್ರೇ ಮತ್ತು ಡೀಪ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಜೊತೆಗೆ ನವೆಂಬರ್ 15 ರಿಂದ ಫ್ಲಿಪ್‌ಕಾರ್ಟ್ ಮೂಲಕ ಈ ವಾಚ್‌ ಅನ್ನು ಖರೀದಿ ಮಾಡಬಹುದಾಗಿದೆ.

Best Mobiles in India

English summary
Dizo company is a sub-brand of Realme. Meanwhile, Dizo has now unveiled the Dizo Watch D Plus.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X