ಭಾರತದಲ್ಲಿ ಎರಡು ಸ್ಮಾರ್ಟ್‌ವಾಚ್‌ ಲಾಂಚ್‌ ಮಾಡಿದ ಡಿಜೊ; ಆಫರ್‌ ಬೆಲೆ ಗಮನಿಸಿ!

|

ಡಿಜೊ ಕಂಪೆನಿಯು ಸ್ಮಾರ್ಟ್ ಎಂಟರ್‌ಟೈನ್‌ಮೆಂಟ್, ಸ್ಮಾರ್ಟ್ ಹೋಮ್, ಸ್ಮಾರ್ಟ್ ಕೇರ್ ಮತ್ತು ಆಕ್ಸೆಸರೀಸ್ ಎಂಬ ನಾಲ್ಕು ವಿಭಾಗದಲ್ಲಿ ತನ್ನದೇ ಆದ ಡಿವೈಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಈಗಾಗಲೇ ಇದರ ಸ್ಮಾರ್ಟ್‌ವಾಚ್‌ಗಳು ಭಾರೀ ಸದ್ದು ಮಾಡುತ್ತಿವೆ. ಇದರ ನಡುವೆ ಸುಧಾರಿತ ತಂತ್ರಜ್ಞಾನ ಆಧಾರಿತ ಹೊಸ ಸ್ಮಾರ್ಟ್‌ಗಳನ್ನು ಅನಾವರಣ ಮಾಡಲಾಗಿದ್ದು, ಈ ಎರಡೂ ಪ್ರಮುಖ ವಾಚ್‌ಗಳು ಬ್ಲೂಟೂತ್‌ ಕಾಲ್‌ ಫೀಚರ್ಸ್‌ ಆಯ್ಕೆ ಪಡೆದುಕೊಂಡಿವೆ.

ಭಾರತದಲ್ಲಿ ಎರಡು ಸ್ಮಾರ್ಟ್‌ವಾಚ್‌ ಲಾಂಚ್‌ ಮಾಡಿದ ಡಿಜೊ; ಆಫರ್‌ ಬೆಲೆ ಗಮನಿಸಿ!

ಹೌದು, ಡಿಜೊ ಕಂಪೆನಿಯು ಡಿಜೊ ವಾಚ್ ಡಿ ಪ್ರೊ ಹಾಗೂ ವಾಚ್ ಡಿ ಅಲ್ಟ್ರಾ ಸ್ಮಾರ್ಟ್‌‌ವಾಚ್‌ಗಳನ್ನು ಅನಾವರಣ ಮಾಡಲಾಗಿದ್ದು, ಇದರಲ್ಲಿ ವಾಚ್ ಡಿ ಅಲ್ಟ್ರಾ ಸ್ಮಾರ್ಟ್‌‌ವಾಚ್‌ ಮಾತ್ರ ಬಹಳ ವಿಶೇಷ ನೋಟದೊಂದಿಗೆ ಅತ್ಯಾಕರ್ಷಕ ಫೀಚರ್ಸ್‌ ಅನ್ನು ಪಡೆದುಕೊಂಡಿದೆ. ವಾಚ್ ಡಿ ಅಲ್ಟ್ರಾ 500nits ಗರಿಷ್ಠ ಬ್ರೈಟ್‌ನೆಸ್‌ ಹೊಂದಿದ್ದು, ಇನ್‌ಬಿಲ್ಟ್‌ ಮೈಕ್ರೋಫೋನ್‌ ಹಾಗೂ ಸ್ಪೀಕರ್‌ ಆಯ್ಕೆ ಇದೆ. ಹಾಗಿದ್ರೆ ಇದರ ಇನ್ನಿತರೆ ಪ್ರಮುಖ ಫೀಚರ್ಸ್‌ ಹಾಗೂ ಭಾರತದಲ್ಲಿ ಇವುಗಳ ಬೆಲೆ ಬಗ್ಗೆ ಮಾಹಿತಿ ನೀಡಲಾಗಿದೆ ಓದಿರಿ.

ವಾಚ್ ಡಿ ಅಲ್ಟ್ರಾ ಫಿಚರ್ಸ್‌
ವಾಚ್ ಡಿ ಅಲ್ಟ್ರಾ 1.78 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, ಇದು 368 x 448 ಪಿಕ್ಸೆಲ್‌ ರೆಸಲ್ಯೂಶನ್ ಪಡೆದುಕೊಂಡಿದೆ. ಹಾಗೆಯೇ ಈ ವಾಚ್‌ 500nits ಗರಿಷ್ಠ ಬ್ರೈಟ್‌ನೆಸ್‌ ಪಡೆದುಕೊಂಡಿರುವುದು ಮತ್ತೊಂದು ಸಂಗತಿ

ಇದರೊಂದಿಗೆ ಈ ಹೊಸ ಸ್ಮಾರ್ಟ್ ವಾಚ್ ಇನ್‌ಬಿಲ್ಟ್‌ ಮೈಕ್ರೊಫೋನ್ ಮತ್ತು ಸ್ಪೀಕರ್ ಆಯ್ಕೆ ಪಡೆದುಕೊಂಡಿದ್ದು, ನಾಯ್ಸ್‌ ಕ್ಯಾಲ್ಸಲಿಂಗ್ ಆಯ್ಕೆಯ ಜೊತೆಗೆ ಬ್ಲೂಟೂತ್‌ ಕಾಲ್‌ ಫೀಚರ್ಸ್‌ ಪಡೆದುಕೊಂಡಿರುವುದು ಬಳಕೆದಾರರಿಗೆ ಮತ್ತಷ್ಟು ಅನುಕೂಲ ಎಂದೇ ಹೇಳಬಹುದು.

ಭಾರತದಲ್ಲಿ ಎರಡು ಸ್ಮಾರ್ಟ್‌ವಾಚ್‌ ಲಾಂಚ್‌ ಮಾಡಿದ ಡಿಜೊ; ಆಫರ್‌ ಬೆಲೆ ಗಮನಿಸಿ!

ಹಾಗೆಯೇ, ಹೃದಯ ಬಡಿತ ಟ್ರ್ಯಾಕಿಂಗ್, SpO2 ರಕ್ತದ ಆಮ್ಲಜನಕದ ಮೇಲ್ವಿಚಾರಣೆ ಹಾಗೂ ಇತರ ಆರೋಗ್ಯ ಸಂಬಂಧಿತ ಟ್ರ್ಯಾಕಿಂಗ್‌ ತಂತ್ರಜ್ಞಾನವನ್ನು ಒಳಗೊಂಡಿದ್ದು, 100 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಈ ವಾಚ್‌ ಪಡೆದುಕೊಂಡಿದೆ.

ಡಿಜೊ ವಾಚ್ ಡಿ ಪ್ರೊ ಫೀಚರ್ಸ್‌
ಡಿಜೊ ವಾಚ್ ಡಿ ಪ್ರೊ ಸ್ಮಾರ್ಟ್‌ವಾಚ್ ದೊಡ್ಡ 1.85 ಇಂಚಿನ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, ಇದು 600nits ಗರಿಷ್ಠ ಬ್ರೈಟ್‌ನೆಸ್‌ ಹಾಗೂ 60Hz ರಿಫ್ರೆಶ್ ರೇಟ್‌ ಆಯ್ಕೆಯೊಂದಿಗೆ ವಿಶೇಷ ಅನುಭವ ನೀಡಲಿದೆ.

ಡಿಜೊ ಹೆಲ್ತ್ ಆಪ್‌ನೊಂದಿಗೆ ಜಿಪಿಎಸ್‌ ರನ್ನಿಂಗ್ ಸೇರಿದಂತೆ ಸುಧಾರಿತ ತಂತ್ರಜ್ಞಾನದ ಮೂಲಕ ಹಲವು ದೈನಂದಿನ ಚಟುವಟಿಕೆಯನ್ನು ಟ್ರ್ಯಾಕ್‌ ಮಾಡಬಹುದಾಗಿದೆ. ಇದರೊಂದಿಗೆ ಬ್ಲೂಟೂತ್ ಆವೃತ್ತಿ v5.3 ಮೂಲಕ ಕಾಲ್ ಫೀಚರ್ಸ್‌ ಅನ್ನು ಸಹ ಹೊಂದಿದ್ದು, ಕರೆ ಸಂದರ್ಭದಲ್ಲಿ ನಾಯ್ಸ್‌ ಕ್ಯಾನ್ಸಲಿಂಗ್‌ ಆಯ್ಕೆ ಬಳಕೆ ಮಾಡುವುದರಿಂದ ಉತ್ತಮವಾಗಿ ಸಂವಹನದಲ್ಲಿ ತೊಡಗಬಹುದಾಗಿದೆ.

ವಾಚ್ ಡಿ ಪ್ರೊ 150 ಕ್ಕೂ ಹೆಚ್ಚು ವಾಚ್ ಫೇಸ್‌ಗಳ ಆಯ್ಕೆ ಹೊಂದಿದ್ದು, 110 ಕ್ಕೂ ಹೆಚ್ಚು ಸ್ಪೋರ್ಟ್ಸ್‌ಮೋಡ್‌ಗಳು ಇದರಲ್ಲಿದ್ದು, ನೈಜ-ಸಮಯದ ಹೃದಯ ಬಡಿತ ಮಾನಿಟರಿಂಗ್, ಕ್ಯಾಲೋರಿ ಟ್ರ್ಯಾಕರ್, ಸ್ಟೆಪ್ ಟ್ರ್ಯಾಕರ್ ಮತ್ತು SpO2 ಮಾನಿಟರ್ ಅನ್ನು ಇದು ಮಾಡಲಿದೆ. ಇದರಿಂದಾಗಿ ಬಳಕೆದಾರರು ಸುಲಭವಾಗಿ ತಮ್ಮ ದೈನಂದಿನ ಆರೋಗ್ಯದ ಏರುಪೇರುಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ.

ಭಾರತದಲ್ಲಿ ಎರಡು ಸ್ಮಾರ್ಟ್‌ವಾಚ್‌ ಲಾಂಚ್‌ ಮಾಡಿದ ಡಿಜೊ; ಆಫರ್‌ ಬೆಲೆ ಗಮನಿಸಿ!

ಬೆಲೆ ಹಾಗೂ ಲಭ್ಯತೆ
ಡಿಜೊ ವಾಚ್ ಡಿ ಪ್ರೊ ನೀಲಿ, ಕಪ್ಪು ಮತ್ತು ಬೂದು ಬಣ್ಣದ ಮೂರು ಆಯ್ಕೆಗಳಲ್ಲಿಲಭ್ಯವಿದ್ದು, 2,699 ರೂ. ಗಳ ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದು. ಹಾಗೆಯೇ ವಾಚ್ ಡಿ ಅಲ್ಟ್ರಾ ಕಪ್ಪು, ಬಿಳಿ ಮತ್ತು ನೀಲಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದ್ದು, 3,299 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಪ್ರೊ ವೇರಿಯಂಟ್‌ ಜನವರಿ 17, 2023 ರಂದು ಖರೀದಿಗೆ ಲಭ್ಯವಿದ್ದು, ಅಲ್ಟ್ರಾ ವೇರಿಯಂಟ್‌ ಜನವರಿ 12, 2023 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗಲಿದೆ.

Best Mobiles in India

English summary
DIZO Watch D Pro, Watch D Ultra launched in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X