ಐಫೋನಿನ ಈ ಸಿಕ್ರೆಟ್‌ ಬಟನ್‌ ಬಗ್ಗೆ ನಿಮಗೆ ಗೊತ್ತಾ?..ತಿಳಿದ್ರೆ ಖಂಡಿತಾ OMG ಅಂತೀರಾ!

|

ಆಪಲ್‌ ಐಫೋನ್‌ ಮಾಡೆಲ್‌ಗಳು ಮಾರುಕಟ್ಟೆಯಲ್ಲಿ ಟ್ರೆಂಡಿಂಗ್‌ನಲ್ಲಿ ಇವೆ. ಅದರಲ್ಲಿಯೂ ಇತ್ತೀಚಿಗಿನ ಕೆಲವು ಆವೃತ್ತಿಯ ಐಫೋನ್‌ಗಳು ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಗ್ರಾಹಕರ ಗಮನ ಸೆಳೆದಿವೆ. ಆದರೆ ಕೆಲವು ಐಫೋನ್‌ಗಳು ಸಿಕ್ರೆಟ್‌ ಬಟನ್‌ ಆಯ್ಕೆ ಹೊಂದಿರುವ ಬಗ್ಗೆ ನಿಮಗೆ ತಿಳಿದಿದೆಯೇ? ಆ ಸಿಕ್ರೆಟ್‌ ಬಟನ್‌ ಫೋನಿನ ಎಡ ಮತ್ತು ಬಲ ಭಾಗಗಳಲ್ಲಿ ಕಾಣಿಸುವುದಿಲ್ಲ. ಹಾಗೆಯೇ ಮೇಲ್ಭಾಗದಲ್ಲಿ ಅಥವಾ ಕೆಳಭಾಗದಲ್ಲಿಯೂ ಸಿಗಲ್ಲ!

ಸಿಕ್ರೆಟ್‌ (ರಹಸ್ಯ) ಬಟನ್‌

ಹೌದು, ಆಪಲ್‌ ಸಂಸ್ಥೆಯ ಕೆಲವು ಐಫೋನ್‌ ಮಾಡೆಲ್‌ಗಳು ಸಿಕ್ರೆಟ್‌ (ರಹಸ್ಯ) ಬಟನ್‌ ಆಯ್ಕೆ ಪಡೆದಿವೆ. ಅಂದಹಾಗೆ ಈ ಬಟನ್‌ ಫೋನ್‌ನ ಹಿಂಭಾಗದಲ್ಲಿ ಇರಿಸಲಾಗಿದೆ. ಅರೆರೇ ಹಿಂಭಾಗದಲ್ಲಿ ಬಟನ್‌ ಹೇಗೆ ಸಾಧ್ಯ ಎಂದು ಯೋಚಿಸಬೇಡಿ. ಹಿಂಭಾಗದಲ್ಲಿ ನೀಡಲಾಗಿರುವ ಬಟನ್‌ ಭೌತಿಕ ಮಾದರಿಯ ಬಟನ್ ಆಗಿಲ್ಲ. ಆದರೆ ಸಂಪೂರ್ಣ ಹಿಂಭಾಗದ ಪ್ಯಾನೆಲ್ ಅನ್ನು ಬಟನ್ ಆಗಿ ಬಳಸಬಹುದಾಗಿದೆ.

ಬ್ಲ್ಯಾಕ್ ಟ್ಯಾಪ್

ಹಿಂಭಾಗದ ಪ್ಯಾನೆಲ್‌ ಅನ್ನು ಬಟನ್‌ ನಂತೆ ಬಳಕೆ ಮಾಡಲು ಬಳಕೆದಾರರು ಐಫೋನ್‌ನಲ್ಲಿ 'ಬ್ಲ್ಯಾಕ್ ಟ್ಯಾಪ್' (black tap) ಫೀಚರ್ಸ್‌/ ಆಯ್ಕೆಯನ್ನು ಸಕ್ರಿಯಗೊಳಿಸಬೇಕಿರುತ್ತದೆ. ಬ್ಲ್ಯಾಕ್ ಟ್ಯಾಪ್ ಆಯ್ಕೆ ಆಕ್ಟಿವ್ ಮಾಡುವ ಮೂಲಕ ಕೆಲವು ಚಟುವಟಿಕೆಗಳನ್ನು ನಿರ್ವಹಿಸಲು ಪ್ಯಾನೆಲ್‌ ಮೇಲೆ ಟ್ಯಾಪ್ ಮಾಡಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಯಾವ ಐಫೋನ್‌ಗಳಲ್ಲಿ ಬ್ಲ್ಯಾಕ್ ಟ್ಯಾಪ್ ಲಭ್ಯ?

ಯಾವ ಐಫೋನ್‌ಗಳಲ್ಲಿ ಬ್ಲ್ಯಾಕ್ ಟ್ಯಾಪ್ ಲಭ್ಯ?

ಬ್ಲ್ಯಾಕ್ ಟ್ಯಾಪ್ ಆಯ್ಕೆಯು ಆಪಲ್ iOS 14 ಅಥವಾ ಅದಕ್ಕೂ ಮೇಲಿನ ಐಓಎಸ್‌ ಸೌಲಭ್ಯದಲ್ಲಿ ಕಾರ್ಯನಿರ್ವಹಿಸುವ ಐಫೋನ್‌ಗಳಲ್ಲಿ ಲಭ್ಯವಿದೆ. ಬಳಕೆದಾರರು ಬ್ಯಾಕ್ ಟ್ಯಾಪ್ ಆಯ್ಕೆಯನ್ನು ಸಕ್ರಿಯಗೊಳಿಸಿದರೆ, ಐಫೋನ್‌ನ ಹಿಂಭಾಗದಲ್ಲಿ ತ್ವರಿತವಾಗಿ/ ಕ್ವಿಕ್‌ ಆಗಿ ಡಬಲ್ ಅಥವಾ ಟ್ರಿಪಲ್ ಟ್ಯಾಪ್ ಮಾಡಿದರೆ ಕಂಟ್ರೋಲ್ ಸೆಂಟರ್ (Control Center) ಅನ್ನು ತೆರೆಯಬಹುದು, ಸ್ಕ್ರೀನ್‌ಶಾಟ್ ತೆಗೆದುಕೊಳ್ಳಬಹುದು ಹೀಗೆ ಇನ್ನಷ್ಟು ಆಯ್ಕೆ ಲಭ್ಯ.

ಬ್ಲ್ಯಾಕ್ ಟ್ಯಾಪ್‌ ಆಯ್ಕೆ

ಬಳಕೆದಾರರು ಅವರ ಅನುಕೂಲಕ್ಕೆ ಅನುಗುಣವಾಗಿ ಬ್ಲ್ಯಾಕ್ ಟ್ಯಾಪ್‌ ಆಯ್ಕೆಗೆ ಶಾರ್ಟ್‌ಕಟ್‌ಗಳನ್ನು ಸೇರಿಸಬಹುದು. ಉದಾಹರಣೆಗೆ, ಹಿಂಭಾಗದಲ್ಲಿ ಎರಡು ಬಾರಿ ಟ್ಯಾಪ್ ಮಾಡಿ, ಸ್ಕ್ರೀನ್‌ ಲಾಕ್ ಮಾಡಬಹುದು. ಹಾಗೆಯೇ, ಒಮ್ಮೆ ಟ್ಯಾಪ್ ಮಾಡುವ ಮೂಲಕ ತಿರುಗುವಿಕೆಯ ಫೀಚರ್ ಅನ್ನು ಲಾಕ್ ಮಾಡಬಹುದು. ಇಷ್ಟೇ ಅಲ್ಲದೇ ಟ್ಯಾಪ್‌ ಮೂಲಕ ಬಳಸಿಕೊಂಡು ಕ್ಯಾಮೆರಾವನ್ನು ಸಹ ತೆರೆಯಬಹುದು. ಹೀಗೆ ಬಳಕೆದಾರರು ಅವರಿಗೆ ಅನುಕೂಲವಾಗುವಂತೆ ಟ್ಯಾಪ್‌ ಸೆಟ್‌ ಮಾಡಬಹುದು.

ಬ್ಲ್ಯಾಕ್ ಟ್ಯಾಪ್ ಆಯ್ಕೆ ಆಕ್ಟಿವ್ ಮಾಡಲು ಹೀಗೆ ಮಾಡಿರಿ:

ಬ್ಲ್ಯಾಕ್ ಟ್ಯಾಪ್ ಆಯ್ಕೆ ಆಕ್ಟಿವ್ ಮಾಡಲು ಹೀಗೆ ಮಾಡಿರಿ:

* ಮೊದಲಿಗೆ ಐಫೋನ್ ಅನ್‌ಲಾಕ್ ಮಾಡಿ
* ನಂತರ ಸೆಟ್ಟಿಂಗ್‌ಗಳಿಗೆ ಹೋಗಿ
* ಆ ನಂತರ Accessibility ಆಯ್ಕೆ ಮೇಲೆ ಟ್ಯಾಪ್ ಮಾಡಿ.
* ಬಳಿಕ Touchಗೆ ಹೋಗಿ ಮತ್ತು ಬ್ಯಾಕ್ ಟ್ಯಾಪ್ ಆಯ್ಕೆ ಟ್ಯಾಪ್ ಮಾಡಿ.

ಟ್ರಿಪಲ್ ಟ್ಯಾಪ್ ಮಾಡಿ

* ಅಲ್ಲಿ ಬ್ಯಾಕ್ ಟ್ಯಾಪ್ ಅನ್ನು ನಿಷ್ಕ್ರಿಯಗೊಳಿಸುವ ಅಥವಾ ಸಕ್ರಿಯಗೊಳಿಸುವ ಆಯ್ಕೆಯನ್ನು ನೀವು ಕಾಣಬಹುದು
* ಡಬಲ್ ಟ್ಯಾಪ್ ಅಥವಾ ಟ್ರಿಪಲ್ ಟ್ಯಾಪ್ ಮಾಡಿ ಮತ್ತು ಕ್ರಿಯೆಯನ್ನು ಆಯ್ಕೆ ಮಾಡಿ.
* ನೀವು ಸೆಟ್ ಮಾಡಿದ ಕ್ರಿಯೆಯನ್ನು ಚೆಕ್ ಮಾಡಲು, ನಿಮ್ಮ ಐಫೋನ್ ಹಿಂಭಾಗದಲ್ಲಿ ಎರಡು ಅಥವಾ ಮೂರು ಬಾರಿ ಟ್ಯಾಪ್ ಮಾಡಿ.

ಐಫೋನ್‌ ಅನ್ನು ವಾಯರ್‌ಲೆಸ್‌ ಆಗಿ ಅಪ್‌ಡೇಟ್‌ ಮಾಡಲು ಈ ಕ್ರಮ ಅನುಸರಿಸಿ:

ಐಫೋನ್‌ ಅನ್ನು ವಾಯರ್‌ಲೆಸ್‌ ಆಗಿ ಅಪ್‌ಡೇಟ್‌ ಮಾಡಲು ಈ ಕ್ರಮ ಅನುಸರಿಸಿ:

* ಐಕ್ಲೌಡ್ ಅಥವಾ ಕಂಪ್ಯೂಟರ್ ಅನ್ನು ಬಳಸಿ ನಿಮ್ಮ ಫೋನ್‌ ಬ್ಯಾಕಪ್ ಮಾಡಿ.
* ನಂತರ ನಿಮ್ಮ ಐಫೋನ್‌ ಪವರ್‌ಗೆ ಪ್ಲಗ್ ಮಾಡಿ ಮತ್ತು ವೈ-ಫೈ ಮೂಲಕ ಇಂಟರ್ನೆಟ್‌ಗೆ ಕನೆಕ್ಟ್ ಮಾಡಿರಿ.
* ಬಳಿಕ ಸೆಟ್ಟಿಂಗ್‌ಗಳು > General ಆಯ್ಕೆಗೆ ಹೋಗಿ, ನಂತರ ಸಾಫ್ಟ್‌ವೇರ್ ಅಪ್‌ಡೇಟ್‌ ಆಯ್ಕೆ ಟ್ಯಾಪ್ ಮಾಡಿ.

Best Mobiles in India

English summary
Do you know the secret button of iPhone? Here's how to find it.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X