ಪ್ರಪಂಚದ ಮೊದಲ ಎಸ್‌ಎಂಎಸ್ ಕಳುಹಿಸಿದ್ದು ಯಾರು, ಅದು ಹೇಗೆ ಆರಂಭವಾಯಿತು?; ಇಲ್ಲಿದೆ ವಿವರ

|

ಇಂದು ನಾವು ವೀಡಿಯೊ ಕರೆ, ಎಐ, ವರ್ಚುವಲ್ ಪ್ರಪಂಚದಲ್ಲಿದ್ದೇವೆ. ಆದರೆ, ಈ ಹಿಂದೆ ಒಂದು ಕಾಲವಿತ್ತು. ಅದು ಟೆಲಿಗ್ರಾಮ್‌ ಕಾಲ. ಟೆಲಿಗ್ರಾಂ ಯಾರಿಗಾದರೂ ಬಂತೆಂದರೆ ಏನಾದರೂ ಅನಾಹುತ ಆಗಿದೆ ಎಂದರ್ಥ.ಇದಾದ ನಂತರ ಫೋನ್‌ಗಳಲ್ಲಿ ಮೆಸೆಜ್‌ ಸೇವೆ ಬಂತು. ಅದೂ ಸಹ ಕೆಲವು ವಿಷಯಗಳಿಗೆ ಮಾತ್ರ ಬಳಕೆಯಾಗುತ್ತಿತ್ತು. ಯಾಕೆಂದರೆ ಬೇಕಾಬಿಟ್ಟಿ ಮೆಸೆಜ್‌ ಮಾಡಬೇಕು ಎಂದ್ರೆ ಬೇಕಾದಷ್ಟು ಹಣ ವ್ಯಯಿಸಬೇಕಿತ್ತು.

ಮೆಸೆಜಿಂಗ್‌  ಆಪ್‌

ಹೌದು, ಇಂದಿನ ದಿನದಲ್ಲಿ ಹಲವಾರು ರೀತಿಯ ಮೆಸೆಜಿಂಗ್‌ ಆಪ್‌ಗಳು ಫೋಟೋ, ವಿಡಿಯೋ, ಆಡಿಯೋ, ಡಾಕ್ಯುಮೆಂಟ್‌ ಸೇರಿದಂತೆ ಇತರೆ ಎಲ್ಲಾ ಸಂವಹನ ಮಾಹಿತಿಯನ್ನು ಸೆಂಡ್‌ ಮಾಡುವ ಶಕ್ತಿ ಹೊಂದಿವೆ. ಆದರೂ ಎಸ್‌ಎಮ್‌ಎಸ್‌ ಬಳಕೆ ಇಂದಿಗೂ ನಿಂತಿಲ್ಲ. ಯಾಕೆಂದರೆ ನಿಮ್ಮ ಡಾಟಾ ಇರುವವರೆಗೆ ಮಾತ್ರ ಹೊಸ ಯುಗದ ಮೆಸೆಜಿಂಗ್‌ ಆಪ್‌ಗಳು ಕೆಲಸ ಮಾಡುತ್ತವೆ, ಡೇಟಾ ಮುಗಿದ ನಂತರ ಹಳೇ ಗಂಡನ ಪಾದವೇ ಗತಿ ಎಂಬಂತೆ ನಿಮ್ಮ ನೆಚ್ಚಿನವರಿಗೆ ಅಥವಾ ಸ್ನೇಹಿತರಿಗೆ ಸಂದೇಶ ಕಳುಹಿಸಲು ಎಸ್‌ಎಮ್‌ಎಸ್‌ ಸೇವೆ ಪಡೆಯಲೇಬೇಕು. ಅಷ್ಟಕ್ಕೂ ಈ ಎಸ್‌ಎಮ್‌ಎಸ್‌ನ ರೋಚಕ ಇತಿಹಾಸ ನಿಮಗೆ ಗೊತ್ತಾ? ಇದರ ಹಿನ್ನೆಲೆ ಬಗ್ಗೆ ನಿಮಗೆ ಅರಿವಿದೆಯಾ?

ಸ್ಮಾರ್ಟ್‌ಯುಗದಿಂದ ಇಂದು ಎಲ್ಲವೂ ಸಾಧ್ಯ

ಸ್ಮಾರ್ಟ್‌ಯುಗದಿಂದ ಇಂದು ಎಲ್ಲವೂ ಸಾಧ್ಯ

ಸ್ಮಾರ್ಟ್‌ ಗ್ಯಾಜೆಟ್‌ಗಳು ಇಂದು ಎಲ್ಲವನ್ನೂ ಸಾಧ್ಯವಾಗಿಸಿವೆ. ಅದರಲ್ಲೂ ಇಂದು ನೀವು ಯಾವುದೇ ಸಿಮ್‌ಗೆ ರೀಚಾರ್ಜ್‌ ಮಾಡಿಸಿದರೆ ದಿನಕ್ಕೆ ನೂರು ಉಚಿತ ಎಸ್‌ಎಮ್‌ಎಸ್‌ ಸೇವೆ ನೀಡುತ್ತಿವೆ. ಆದರೆ ಹಿಂದೆ ಹೀಗಿರಲಿಲ್ಲ, ಅಂದು ಒಂದು ಎಸ್‌ಎಮ್‌ಎಸ್‌ಗೆ ಹೆಚ್ಚಿನ ಹಣ ಪಾವತಿ ಮಾಡಬೇಕಿತ್ತು. ಅಂತೆಯೇ ಎಸ್‌ಎಮ್‌ಎಸ್‌ ಸೇವೆ ಪರಿಚಯಿಸಿದಾಗ ಮೊದಲು ಯಾರು ಮೆಸೆಜ್‌ ಮಾಡಿದ್ದರು?, ಯಾರಿಗೆ ಮಾಡಿದ್ದರು, ಏನೆಂದು ಬರೆದಿದ್ದರು ಎಂಬ ಬಗ್ಗೆ ನಿಮಗೆ ಗೊತ್ತಿದೆಯೇ? ಹಾಗಿದ್ರೆ ಈ ಲೇಖನ ಓದಿ.

ಎಸ್‌ಎಮ್‌ಎಸ್‌ ಎಂದರೇನು?

ಎಸ್‌ಎಮ್‌ಎಸ್‌ ಎಂದರೇನು?

ಎಸ್‌ಎಮ್‌ಎಸ್‌ (SMS) ಎಂದರೆ 'ಕಿರು ಸಂದೇಶ ಸೇವೆ' ಎಂದರ್ಥ. ಇದನ್ನು ಸಾಮಾನ್ಯವಾಗಿ ಪಠ್ಯ ಸಂದೇಶ ಎಂದು ಸಹ ಕರೆಯಲಾಗುತ್ತದೆ. ಈ ಆಯ್ಕೆಯನ್ನು 160 ಅಕ್ಷರಗಳ ಮಿತಿಯಲ್ಲಿ ಮೆಸೆಜ್‌ ಸೆಂಡ್ ಮಾಡಬಹುದು.

ಮೊದಲು ಸಂದೇಶ ಕಳುಹಿಸಿದ್ದು ಯಾರು?

ಮೊದಲು ಸಂದೇಶ ಕಳುಹಿಸಿದ್ದು ಯಾರು?

ಈ ಪ್ರಶ್ನೆ ಒಮ್ಮೆಯಾದರೂ ಸ್ಮಾರ್ಟ್‌ಫೋನ್‌ ಬಳಕೆ ಮಾಡುವವರಿಗೆ ಮೂಡಿರುತ್ತದೆ. 30 ವರ್ಷಗಳ ಹಿಂದೆ 22 ವರ್ಷದ ಹುಡುಗ ತನ್ನ ಸಹೋದ್ಯೋಗಿಗೆ ಮೊದಲ ಸಂದೇಶವನ್ನು ಕಳುಹಿಸಿದ್ದ. ಆತನ ಹೆಸರು ಪ್ಯಾಪ್‌ವರ್ತ್, ಆತ ಸಾಫ್ಟ್‌ವೇರ್ ಪ್ರೋಗ್ರಾಮರ್ ಆಗಿ ಕೆಲಸ ಮಾಡುತ್ತಿದ್ದ. ಹಾಗೆಯೇ ಅದೇ ಸಂಸ್ಥೆಯ ಮುಖ್ಯಸ್ಥರಿಗೆ ಆತ ಮೊದಲ ಎಸ್ಎಮ್‌ಎಸ್‌ ಸೆಂಡ್ ಮಾಡಿದ್ದಾನೆ. ಇನ್ನು ನೀಲ್ ತಮ್ಮ ಕ್ಲೈಂಟ್ ವೊಡಾಫೋನ್‌ಗಾಗಿ ಕಿರು ಸಂದೇಶ ಸೇವೆಯನ್ನು (SMS) ರಚಿಸಲು ಡೆವಲಪರ್ ಮತ್ತು ಟೆಸ್ಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

ಏನೆಂದು ಬರೆಯಲಾಗಿತ್ತು..

ಏನೆಂದು ಬರೆಯಲಾಗಿತ್ತು..

ಖಂಡಿತಾ ಈ ವಿಷಯದಲ್ಲಿ ನಿಮಗೆ ಕ್ಯೂರಿಯಾಸಿಟಿ ಹೆಚ್ಚಿಗೆ ಇರುತ್ತದೆ. ಪ್ಯಾಪ್‌ವರ್ತ್ ಮೊದಲ ಬಾರಿಗೆ ಮೆಸೆಜ್‌ ಮಾಡಿದಾದ ಅವರು ಬರೆದಿದ್ದು ಏನೆಂದರೆ 'Merry Christmas'. ಈ ಮೆಸೆಜ್‌ ಮೊದಲ ಪ್ರಪಂಚದ ಎಸ್‌ಎಮ್‌ಎಸ್ ಟೆಕ್ಟ್ಸ್‌ ಆಗಿದೆ.

ಯಾವ ದಿನದಂದು ಕಳುಹಿಸಿದ್ದರು?

ಯಾವ ದಿನದಂದು ಕಳುಹಿಸಿದ್ದರು?

ಈ ಸಂದೇಶವನ್ನು ಸಾಫ್ಟ್‌ವೇರ್ ಪ್ರೋಗ್ರಾಮರ್ ಪ್ಯಾಪ್‌ವರ್ತ್ ಅವರು 3ನೇ ಡಿಸೆಂಬರ್ 1992 ರಲ್ಲಿ ಕಳುಹಿಸಿದ್ದರು. ಆದರೆ, ಈ ಮೆಸೆಜ್‌ಗೆ ಅವರ ಮುಖ್ಯಸ್ಥರರಿಂದ ಪ್ರತಿಕ್ರಿಯೆ ಲಭ್ಯವಾಗಲಿಲ್ಲ. ಯಾಕೆಂದರೆ ಇನ್ನೂ ಆ ಸೇವೆ ಪ್ರಗತಿಯಲ್ಲಿತ್ತು.

ಏಳು ವರ್ಷಗಳ ನಂತರ ಹೆಚ್ಚಿನ ಬಳಕೆ

ಏಳು ವರ್ಷಗಳ ನಂತರ ಹೆಚ್ಚಿನ ಬಳಕೆ

ನೀಲ್ ಅವರು ಮೊದಲು ಕಳುಹಿಸಿದ ಸಂದೇಶದ ನಂತರ ಸರಿ ಸುಮಾರು ಏಳು ವರ್ಷಗಳ ನಂತರ, ಅಂದರೆ 2009 ರಲ್ಲಿ ಅನೇಕ ನೆಟ್‌ವರ್ಕ್‌ಗಳಲ್ಲಿ ಟೆಕ್ಟ್ಸ್‌ ಮೆಸೆಜ್‌ ಸೇವೆ ಆರಂಭವಾಯಿತು. ಆ ಸೇವೆ ಇಂದಿಗೂ ಯಶಸ್ವಿಯಾಗಿ ಮುಂದುವರೆದಿದೆ. ಈ ಮೂಲಕ ಅದೆಷ್ಟೋ ಪ್ರೇಮಿಗಳು ಒಂದಾಗಿದ್ದಾರೆ, ಅದೆಷ್ಟೋ ಮಾಹಿತಿಯನ್ನು ಬೇಕಾದವರಿಗೆ ತಿಳಿಸಲಾಗಿದೆ, ಹಾಗೆಯೇ ಅದೆಷ್ಟೋ ಜನರಿಗೆ ಬದುಕು ರೂಪಿತವಾಗಿದೆ. ಆದರೆ, ಈಗ ಇದನ್ನು ಒಂದು ಆಯ್ಕೆಯಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಇಂದು ಪ್ರತಿದಿನ 100 ಎಸ್‌ಎಮ್‌ಎಸ್‌ ಕಳುಹಿಸಬಹುದು

ಇಂದು ಪ್ರತಿದಿನ 100 ಎಸ್‌ಎಮ್‌ಎಸ್‌ ಕಳುಹಿಸಬಹುದು

ಇಂದು ನೀವು ತಿಂಗಳಿಗೆ ಅಥವಾ ವರ್ಷಕ್ಕೆ ನಿಮ್ಮ ಸಿಮ್‌ಗೆ ರೀಚಾರ್ಜ್‌ ಮಾಡಿಸಿಕೊಂಡರೆ ಬರೋಬ್ಬರಿ 100 ಎಸ್‌ಎಮ್‌ಎಸ್‌ ಗಳು ಲಭ್ಯವಾಗುತ್ತದೆ. ಆದರೆ, ಹಲವಾರು ಬಳಕೆದಾರರು ಈ ನೂರರಲ್ಲಿ ಒಂದು ಮೆಸೆಜ್‌ ಕೂಡ ಯಾರಿಗೂ ಮಾಡುವುದಿಲ್ಲ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ಸತ್ಯದ ಸಂಗತಿ.

Best Mobiles in India

English summary
Do you know who sent SMS to whom first in the world!?.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X