Union Budget Mobile App : ಈ ಆಪ್‌ನಲ್ಲಿ ಪಡೆಯಿರಿ ಬಜೆಟ್ 2023 ರ ಸಂಪೂರ್ಣ ವಿವರ!

|

ಭಾರತದಲ್ಲಿ ಬಜೆಟ್‌ ಮಂಡನೆ ವಿಷಯ ಬಂದಾಗ ಮಾಧ್ಯಮಗಳು ಒಂದು ರೀತಿಯ ಚರ್ಚೆಯಲ್ಲಿ ಮುಳುಗಿದರೆ, ಜನಸಾಮಾನ್ಯರು ಮತ್ತೊಂದು ರೀತಿಯಲ್ಲಿ ವಿಶ್ಲೇಷಿಸುತ್ತಾ ಬರುತ್ತಾರೆ. ಅದಾಗ್ಯೂ ಕೇಂದ್ರ ಸರ್ಕಾರ ಈ ಬಜೆಟ್‌ ಮಂಡನೆ ಮೂಲಕ ಯಾರಿಗೆ ಅಥವಾ ಯಾವ ವಿಭಾಗಕ್ಕೆ ಎಷ್ಟು ಬಜೆಟ್‌ ಘೋಷಣೆ ಮಾಡಲಾಗುತ್ತದೆ ಎಂಬ ಕುತೂಹಲ ಎಲ್ಲರಿಗೂ ಖಂಡಿತಾ ಇರುತ್ತದೆ. ಆ ಕುತೂಹಲ ತಣಿಸಲು ಇಲ್ಲಿದೆ ಪರಿಹಾರ.

Budget 2023: ಈ ಆಪ್‌ನಲ್ಲಿ ಪಡೆಯಿರಿ ಬಜೆಟ್ 2023 ರ ಸಂಪೂರ್ಣ ವಿವರ!

ಹೌದು, ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಬಜೆಟ್‌ ಪ್ರಮುಖ ಪಾತ್ರ ವಹಿಸುತ್ತದೆ. ಈ ಕಾರಣಕ್ಕೆ ರಾಜ್ಯಗಳು ಹಾಗೂ ಕೇದ್ರಾಡಳಿತ ಪ್ರದೇಶಗಳಿಗೆ ಭಿನ್ನ ವಿಭಿನ್ನವಾದ ಕೊಡುಗೆಗಳನ್ನು ಘೋಷಣೆ ಮಾಡಲಾಗುತ್ತದೆ. ಅದರಂತೆ 2023 ರ ಹಣಕಾಸು ವರ್ಷದ ಸಾಮಾನ್ಯ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2023 ರಂದು ಮಂಡಿಸಲಿದ್ದು, ಇದು ನಿರ್ಮಲಾ ಸೀತಾರಾಮನ್ ಅವರ ಐದನೇ ಬಜೆಟ್ ಆಗಿರಲಿದೆ. ಹಾಗಿದ್ರೆ, ಇದನ್ನು ಜನಸಾಮಾನ್ಯರೆಲ್ಲರೂ ಸುಲಭವಾಗಿ ಹಾಗೂ ವೇಗವಾಗಿ ತಿಳಿದುಕೊಳ್ಳುವುದು ಹೇಗೆ?, ಇದಕ್ಕೆ ಯಾವ ಆಪ್‌ ಬಳಕೆ ಮಾಡಬೇಕು ಎಂಬ ವಿವರವನ್ನು ನಾವಿಲ್ಲಿ ತಿಳಿಸಿಕೊಟ್ಟಿದ್ದೇವೆ ಓದಿರಿ.

ಯೂನಿಯನ್ ಬಜೆಟ್ ಮೊಬೈಲ್ ಆಪ್‌
ಸೀತಾರಾಮನ್ ಅವರ ಬಜೆಟ್‌ ಭಾಷಣದ ನಂತರ ಸಂಪೂರ್ಣ ಬಜೆಟ್ ವಿವರವನ್ನು ಸಾರ್ವಜನಿಕರಿಗೆ ಮೊಬೈಲ್ ಆಪ್‌ ಮೂಲಕ ನೀಡಲಾಗುತ್ತದೆ. ಈ ಮಾಹಿತಿ 'ಯೂನಿಯನ್ ಬಜೆಟ್ ಮೊಬೈಲ್ ಆಪ್‌' ( Union Budget Mobile App) ನಲ್ಲಿ ಲಭ್ಯವಾಗಲಿದ್ದು, ಭಾರತದ ಪ್ರತಿಯೊಬ್ಬರು ಅತ್ಯಂತ ಸರಳವಾಗಿ ಬಜೆಟ್‌ನ ಸಂಪೂರ್ಣ ವಿವರವನ್ನು ಓದಬಹುದಾಗಿದೆ.

ಹಾಗೆಯೇ, ಈ ಮೊಬೈಲ್‌ ಆಪ್‌ ಆಂಡ್ರಾಯ್ಡ್‌ ಹಾಗೂ ಐಓಎಸ್‌ ಡಿವೈಸ್‌ಗಳೆರಡಕ್ಕೂ ಲಭ್ಯವಿದ್ದು, ಈಗಲೇ ನೀವು ಸಂಬಂಧಿಸಿದ ಆಪ್‌ ಸ್ಟೋರ್‌ಗಳ ಮೂಲಕ ಇನ್‌ಸ್ಟಾಲ್‌ ಮಾಡಿಕೊಂಡು ದೇಶದ ಪ್ರಗತಿ ಈ ವರ್ಷದಿಂದ ಹೇಗೆ ಇರಲಿದೆ ಎನ್ನುವುದನ್ನು ಬೇಗನೆ ತಿಳಿದುಕೊಳ್ಳಬಹುದಾಗಿದೆ.

Budget 2023: ಈ ಆಪ್‌ನಲ್ಲಿ ಪಡೆಯಿರಿ ಬಜೆಟ್ 2023 ರ ಸಂಪೂರ್ಣ ವಿವರ!

ಯೂನಿಯನ್ ಬಜೆಟ್ ಮೊಬೈಲ್ ಆಪ್‌ ಇನ್‌ಸ್ಟಾಲ್‌ ಮಾಡುವುದು ಹೇಗೆ?
ಸಾಮಾನ್ಯವಾಗಿ ನಿಮ್ಮ ಫೋನ್‌ನಲ್ಲಿ ಇರುವ ಆಪ್‌ ಸ್ಟೋರ್‌ನಿಂದ ಹೇಗೆ ಇತರೆ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುತ್ತೀರೋ ಅದೇ ಶೈಲಿಯಲ್ಲಿ ಈ ಆಪ್‌ ಅನ್ನು ಸಹ ಇನ್‌ಸ್ಟಾಲ್‌ ಮಾಡಬಹುದಾಗಿದೆ. ಅಂದರೆ ನೀವು ಆಂಡ್ರಾಯ್ಡ್‌ ಡಿವೈಸ್‌ ಬಳಕೆ ಮಾಡುತ್ತಿದ್ದರೆ ಗೂಗಲ್‌ ಪ್ಲೇ ಸ್ಟೋರ್‌ಗೆ ಭೇಟಿ ನೀಡಬೇಕಿದೆ. ಹಾಗೆಯೇ ಐಫೋನ್‌ ಬಳಕೆ ಮಾಡುತ್ತಿದ್ದರೆ ಆಪಲ್‌ ಆಪ್‌ ಸ್ಟೋರ್‌ಗೆ ಭೇಟಿ ನೀಡಬೇಕಿದೆ.

ಇದರ ಹೊರತಾಗಿಯೂ ನೀವು ಸುಲಭವಾಗಿ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು ಎಂದರೆ ಯೂನಿಯನ್ ಬಜೆಟ್ ವೆಬ್ ಪೋರ್ಟಲ್ ಆದ www.Indiabudget.Gov.In ಗೆ ಭೇಟಿ ನೀಡಬಹುದಾಗಿದೆ. ಈ ಆಪ್‌ನಲ್ಲಿ 2021-22 ಮತ್ತು ಬಜೆಟ್ 2022-23 ಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಸ್ಟೋರೇಜ್‌ ಮಾಡಲಾಗಿದ್ದು, ಬಳಕೆದಾರರು ಸುಲಭವಾಗಿ ಓದಲು ಅನುವು ಮಾಡಿಕೊಡುವ ಉದ್ದೇಶದಿಂದ ಮಾಹಿತಿಯನ್ನು ವಿವಿಧ ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ಇದರಿಂದ ಅಗತ್ಯವಿರುವ ಮಾಹಿತಿಯನ್ನು ಪರಿಶೀಲಿಸಲು ಸಹಾಯಕವಾಗಿದೆ.

Budget 2023: ಈ ಆಪ್‌ನಲ್ಲಿ ಪಡೆಯಿರಿ ಬಜೆಟ್ 2023 ರ ಸಂಪೂರ್ಣ ವಿವರ!

ಬಜೆಟ್‌ ಹೊರತಾಗಿ ಇತರೆ ಮಾಹಿತಿಗಳೂ ಈ ಆಪ್‌ನಲ್ಲಿ ಲಭ್ಯ
ಇದಿಷ್ಟೇ ಅಲ್ಲದೆ ದೇಶದ ಅರ್ಥ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ಈ ಆಪ್‌ ಬಹಳ ಸುಲಭವಾಗಿದೆ. ಯಾಕೆಂದರೆ, 14 ಬಜೆಟ್ ದಾಖಲೆಗಳು, ವಾರ್ಷಿಕ ಹಣಕಾಸು ಹೇಳಿಕೆ , ಡಿಮ್ಯಾಂಡ್‌ ಫಾರ್‌ ಗ್ರ್ಯಾಂಟ್‌, ಸಂವಿಧಾನ ಸೂಚಿಸಿದ ಹಣಕಾಸು ಮಸೂದೆಯ ವಿವರ ಇದರಲ್ಲಿ ಲಭ್ಯ ಇರಲಿದೆ. ಈ ಮೂಲಕ ಯಾವುದೇ ವಾಹಿನಿಯಾಗಲಿ ಅಥವಾ ಸಾಮಾಜಿಕ ಜಾಲತಾಣದಲ್ಲಿ ಬರುವ ಮಾಹಿತಿಗಾಗಿ ಕಾದು ಕೂರದೆ ಬೇಕಾದಾಗ ಅಥವಾ ತಕ್ಷಣವೇ ಈ ಎಲ್ಲಾ ಮಾಹಿತಿಯನ್ನು ನಿಮ್ಮ ಅಂಗೈನಲ್ಲಿಯೇ ನೋಡಬಹುದು.

ಈ ವರ್ಷದ ಬಜೆಟ್‌ ಡಾಕ್ಯುಮೆಂಟ್‌ ಪರಿಶೀಲಿಸಲು ಈ ಕ್ರಮ ಅನುಸರಿಸಿ
ನಿಮಗೆ ಬಜೆಟ್‌ ವಿವರವನ್ನು ತಿಳಿದುಕೊಳ್ಳಬೇಕು ಎಂಬ ಆಸಕ್ತಿ ಇದ್ದರೆ ಮೊದಲು https://www.indiabudget.gov.in/ ನ ಅಧಿಕೃತ ಸೈಟ್‌ಗೆ ಭೇಟಿ ನೀಡಿ. ಇದಾದ ನಂತರ ಅಲ್ಲಿ ನಿಮಗೆ ಬಜೆಟ್‌ ಭಾಷಣಗಳು (Budget Speeches) ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ. ಬಳಿಕ ಅಲ್ಲಿ ವಿವಿಧ ವರ್ಷಗಳ ಬಜೆಟ್‌ ವಿವರದೊಂದಿಗೆ ಈ ವರ್ಷದ ಬಜೆಟ್‌ ಮಾಹಿತಿ ಸಹ ಲಭ್ಯವಾಗುತ್ತದೆ. ಅಂದರೆ, ಅದರಲ್ಲಿ 2023-2024 PDF ಡಾಕ್ಯುಮೆಂಟ್‌ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿದರೆ ಈ ಸಾಲಿನ ಸಂಪೂರ್ಣ ಬಜೆಟ್‌ ವಿವರವನ್ನು ನೀವು ಓದಬಹುದಾಗಿದೆ.

Best Mobiles in India

English summary
Nirmala Sheetaraman will present the budget on February 1, 2023, the details of which can be easily read by all on the Union Budget mobile app. This app is available for Android and iOS users. details in Kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X