ಮೆಸೆಂಜರ್‌ಗಾಗಿ ಕೆಲವು ಫೀಚರ್ಸ್‌ ಪರಿಚಯಿಸಿದ ಮೆಟಾ; ಬಳಕೆದಾರರಿಗೆ ಸಾಕಷ್ಟು ಅನುಕೂಲ!

|

ಯಾವುದೇ ಮೆಸೆಜಿಂಗ್‌ ಪ್ಲಾಟ್‌ಫಾರ್ಮ್‌ನಲ್ಲಿಯಾದರೂ ಸಹ ಬಳಕೆದಾರರು ತಮಗೆ ಬೇಕಾದವರ ಜೊತೆಗೆ ಸಂದೇಶ ಮಾಡಲು ಕೊಂಚ ಹಿಂಜರಿಯುತ್ತಾರೆ. ಯಾಕೆಂದರೆ ಎಲ್ಲಿ ತಾವು ಮಾಡಿದ ಮೆಸೆಜ್‌ ಅನ್ನು ಬೇರೆಯವರು ಓದುತ್ತಾರೋ ಅಥವಾ ಹ್ಯಾಕರ್ಸ್‌ಗಳು ಖಾತೆಗೆ ಎಂಟ್ರಿ ಕೊಡುತ್ತಾರೋ ಎನ್ನುವ ಭಯ. ಇದಕ್ಕಾಗಿಯೇ ಈಗಾಗಲೇ ಹಲವಾರು ಪ್ರಮುಖ ಮೆಸೆಜಿಂಗ್‌ ಪ್ಲಾಟ್‌ಫಾರ್ಮ್‌ಗಳಿಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಫೀಚರ್ಸ್‌ ಕಲ್ಪಿಸಲಾಗಿದೆ.

ಮೆಸೆಂಜರ್‌ಗಾಗಿ ಕೆಲವು ಫೀಚರ್ಸ್‌ ಪರಿಚಯಿಸಿದ ಮೆಟಾ!

ಹೌದು, ಈಗ ತಂತ್ರಜ್ಞಾನವನ್ನು ಹೆಚ್ಚು ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಿದ್ದಂತೆ ಸೈಬರ್‌ ಅಪರಾಧಿಗಳ ಸಂಖ್ಯೆ ಸಹ ಗಣನೀಯವಾಗಿ ಏರಿಕೆಯಾಗುತ್ತಾ ಸಾಗುತ್ತಿದೆ.ಈಗಾಗಲೇ ಹಲವಾರು ಜನರ ಖಾಸಗಿ ವಿಚಾರಗಳು ಸಾರ್ವಜನಿಕವಾಗಿರುವುದು ನಮ್ಮ ಕಣ್ಣಮುಂದಿರುವ ಸತ್ಯ. ಇದಕ್ಕೆ ಕಡಿವಾಣ ಎಂದರೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್. ಈ ಫೀಚರ್ಸ್ ಮೂಲಕ ಯಾರು ಯಾರಿಗೇ ಆದರೂ ಸಂದೇಶವನ್ನು ಕಳುಹಿಸಬಹುದು, ಇದರ ನಡುವೆ ಯಾರೂ ಸಹ ಎಂಟ್ರಿ ಆಗುವುದಕ್ಕೆ ಸಾಧ್ಯವಿಲ್ಲ. ಅಂತೆಯೇ ಇನ್ಮುಂದೆ ಈ ಫೀಚರ್ಸ್‌ ಮೆಸೆಂಜರ್‌ನಲ್ಲಿಯೂ ಲಭ್ಯ ಇದೆ.

ಮೆಟಾ ತನ್ನ ಡೀಫಾಲ್ಟ್ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ರೋಲ್‌ಔಟ್ ಅನ್ನು ವಿಸ್ತರಿಸುತ್ತಿರುವ ಭಾಗವಾಗಿ ಈಗ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಖಾಸಗಿಯಾಗಿ ಚಾಟ್ ಮಾಡಬಹುದಾಗಿದೆ. ಇನ್ನು ಕಂಪೆನಿಯು ಮೆಸೆಂಜರ್‌ನಲ್ಲಿ ಡೀಫಾಲ್ಟ್ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಪರೀಕ್ಷಿಸುತ್ತಿದ್ದು, ಇದು ಪ್ರತಿ ಚಾಟ್ ಆಧಾರದ ಮೇಲೆ ಬಳಕೆದಾರರಿಗೆ ವಿಶೇಷವಾದ ಭದ್ರತೆ ನೀಡಲಿದೆ.

ಯಾಕೆಂದರೆ, ಅಸ್ತಿತ್ವದಲ್ಲಿರುವ ಎನ್‌ಕ್ರಿಪ್ಶನ್‌ಗಿಂತ ಮೆಟಾ ನೀಡುತ್ತಿರುವ ಎನ್‌ಕ್ರಿಪ್ಶನ್‌ ಭಿನ್ನವಾಗಿದೆ ಎಂದು ಹೇಳಲಾಗುತ್ತಿದೆ. ಇದಿಷ್ಟೇ ಅಲ್ಲದೆ, ಲಿಂಕ್ ಪೂರ್ವವೀಕ್ಷಣೆಗಳು, ಕಸ್ಟಮ್ ಎಮೋಜಿಗಳು, ಹೊಸ ಥೀಮ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಹೊಸ ಆಯ್ಕೆಗಳನ್ನು ಆಡ್‌ ಮಾಡಲು ಮೆಟಾ ಮುಂದಾಗಿದೆ.

ಮೆಸೆಂಜರ್‌ಗಾಗಿ ಕೆಲವು ಫೀಚರ್ಸ್‌ ಪರಿಚಯಿಸಿದ ಮೆಟಾ!

ಸದ್ಯಕ್ಕೆ ಮೆಟಾ ಬಳಕೆದಾರರಿಗೆ ಚಾಟ್-ಟು-ಚಾಟ್ ಆಧಾರದ ಮೇಲೆ ಖಾಸಗಿಯಾಗಿ ಚಾಟ್ ಮಾಡುವ ಆಯ್ಕೆಯನ್ನು ನೀಡುತ್ತಿತ್ತು. ಉದಾಹರಣೆ ಸಹಿತ ಹೇಳುವುದಾದರೆ ಬಳಕೆದಾರರು ಚಾಟ್ ಪ್ರಾರಂಭಿಸುವ ಮೊದಲು ಭದ್ರತಾ ಪ್ರೋಟೋಕಾಲ್ ಅನ್ನು ಹಸ್ತಚಾಲಿತವಾಗಿ ಸಕ್ರಿಯಗೊಳಿಸಬೇಕಿದೆ. ಇನ್ನು ಆಡಿಯೋ ಮತ್ತು ವಿಡಿಯೋ ಕರೆಗಳಿಗೆ ಇದೇ ರೀತಿಯ ಫೀಚರ್ಸ್‌ ಅನ್ನು ನೀಡಲು ಮುಂದಾಗಿರುವ ಮೆಟಾ ಬಳಕೆದಾರರಿಗೆ ಹೊಸ ಅನುಭವ ನೀಡಲು ಸಿದ್ಧತೆ ಮಾಡಿಕೊಂಡಿದೆ. ಇದರೊಂದಿಗೆ ಮೆಟಾ ವಿವಿಧ ಆಯ್ಕೆಗಳ ಮೇಲೂ ಸಹ ಕೆಲಸ ಮಾಡುತ್ತಿದ್ದು, ಅದರ ವಿವರ ಇಲ್ಲಿದೆ.

ಮೆಟಾ ಚಾಟ್ ಥೀಮ್ ಫೀಚರ್ಸ್‌ ಅನ್ನು ಸಹ ನೀಡಲು ಮುಂದಾಗಿದ್ದು, ಈ ಮೂಲಕ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಚಾಟ್‌ಗಳಲ್ಲಿ ಸಂಭಾಷಣೆಗಳನ್ನು ಹೆಚ್ಚಿಸುವ ಉದ್ದೇಶದಿಂದ ಇದಕ್ಕೆ ಸಹಾಯ ಮಾಡಲು ಚಾಟ್ ಥೀಮ್‌ಗಳನ್ನು ಸೇರಿಸುತ್ತಿದೆ ಎಂದು ಮೆಟಾ ಹೇಳುತ್ತದೆ.

ಹಾಗೆಯೇ ಕಸ್ಟಮ್ ಚಾಟ್ ಎಮೋಜಿ ಮತ್ತು ಪ್ರತಿಕ್ರಿಯೆಗಳ ಸೌಲಭ್ಯ ಸಹ ಲಭ್ಯವಾಗಲಿದ್ದು, ಚಾಟ್‌ಗಳನ್ನು ವೈಯಕ್ತೀಕರಿಸುವುದರ ಜೊತೆಗೆ ಬಳಕೆದಾರರ ಪ್ರತಿಕ್ರಿಯೆಗಳನ್ನು ವೈಯಕ್ತೀಕರಿಸಬಹುದಾಗಿದೆ. ಬಳಕೆದಾರರು ಎಮೋಜಿ ಮತ್ತು ಪ್ರತಿಕ್ರಿಯೆಗಳ ಪೂರ್ಣ ಮೆನುವನ್ನು ನೋಡಲು ಈ ಮೂಲಕ ಸಾಧ್ಯವಾಗುತ್ತದೆ.

ಮೆಸೆಂಜರ್‌ಗಾಗಿ ಕೆಲವು ಫೀಚರ್ಸ್‌ ಪರಿಚಯಿಸಿದ ಮೆಟಾ!

ಇದಿಷ್ಟೇ ಅಲ್ಲದೆ ಗ್ರೂಪ್‌ ಪ್ರೊಫೈಲ್ ಫೋಟೋ ಫೀಚರ್ಸ್‌ ಆಯ್ಕೆ ಸಹ ಆಕರ್ಷಕವಾಗಿದ್ದು, ಬಳಕೆದಾರರು ಇನ್ಮುಂದೆ ವೈಯಕ್ತಿಕ ಚಾಟ್‌ಗಳಿಗಾಗಿ ಗ್ರೂಪ್‌ ಪ್ರೊಫೈಲ್ ಫೋಟೋವನ್ನು ಆಯ್ಕೆ ಮಾಡಲು ಅನುಕೂಲ ಮಾಡಿಕೊಡಲು ಮುಂದಾಗಿದೆ.

ಇನ್ನು ಲಿಂಕ್ ಪೂರ್ವವೀಕ್ಷಣೆ ಎಂಬ ಹೊಸ ಫೀಚರ್ಸ್‌ ಬಗ್ಗೆ ಮೆಟಾ ಕೆಂದ್ರೀಕರಿಸಿದೆ. ಈ ಫೀಚರ್ಸ್‌ ಈಗಾಗಲೇ ವಾಟ್ಸಾಪ್‌ನಲ್ಲಿ ಲಭ್ಯ ಇದ್ದು, ಇದರೊಂದಿಗೆ ಸಕ್ರಿಯ ಸ್ಥಿತಿ ಫೀಚರ್ಸ್‌ ಹಾಗೂ ಆಂಡ್ರಾಯ್ಡ್‌ನಲ್ಲಿನ ಬಬಲ್‌ಗಳ ಮೇಲೆ ಮೆಟಾ ಕೆಲಸ ಮಾಡುತ್ತಿದೆ. ಸಕ್ರಿಯ ಸ್ಥಿತಿ ಮೂಲಕ ಪ್ಲಾಟ್‌ಫಾರ್ಮ್‌ನಲ್ಲಿ ಸಕ್ರಿಯವಾಗಿರುವಾಗ ಜನರನ್ನು ನೋಡಲು ಅನುಮತಿಸುತ್ತದೆ. ಇದು ಬೇಡ ಎಂದರೆ ಬಳಕೆದಾರರು ಆಫ್ ಮಾಡಬಹುದಾಗಿದೆ.

Best Mobiles in India

English summary
Meta CEO Mark Zuckerberg has now announced that Messenger has end-to-end encrypted chat. It has new features including link preview, details in Kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X