ಎಲೆಕ್ಟ್ರಿಕ್‌ ವಾಹನ ಬಳಕೆದಾರರಿಗೆ ಸರ್ಕಾರದಿಂದ ಹೊಸ ಆಪ್‌ ಲಾಂಚ್‌; ಇದರ ಪ್ರಯೋಜನ ಏನು?

|

ಭಾರತದಲ್ಲಿ ಡೀಸೆಲ್ ಹಾಗೂ ಪೆಟ್ರೋಲ್‌ ಬೆಲೆ ಗಗನಕ್ಕೇರಿದ್ದು, ಈ ಸಮಸ್ಯೆ ನೀಗಿಸಲು ವಿದ್ಯುತ್ ಆಧಾರಿತ ವಾಹನಗಳನ್ನು ಹಲವಾರು ಕಂಪೆನಿಗಳು ತಯಾರು ಮಾಡುತ್ತಿವೆ. ಇವು ಪರಿಸರ ರಕ್ಷಣೆ ಜೊತೆಗೆ ಬಳಕೆದಾರ ಆರ್ಥಿಕ ಹೊರೆಯನ್ನೂ ಸಹ ತಗ್ಗುವಂತೆ ಮಾಡುತ್ತಿದ್ದು, ಈ ವಿದ್ಯುತ್ ವಾಹನಗಳ ಬಳಕೆಯನ್ನು ಹೆಚ್ಚು ಪ್ರೋತ್ಸಾಹಿಸಲು ಸರ್ಕಾರ ಕೂಡ ಮುಂದಾಗಿದೆ. ಅದರಂತೆ ಈ ವಾಹನಗಳಿಗೆ ಡಿಸ್ಕೌಂಟ್‌ ಸಹ ನೀಡುತ್ತಾ ಬರುತ್ತಿದೆ. ಇದರ ಭಾಗವಾಗಿ ಈಗ ಈ ಇವಿ ವಾಹನಗಳಿಗೆ ಸಹಾಯಕವಾಗುವ ಆಪ್‌ ಒಂದನ್ನು ರಾಷ್ಟ್ರಪತಿ ಮುರ್ಮು ಅವರು ಲಾಂಚ್‌ ಮಾಡಿದ್ದಾರೆ.

ರಾಷ್ಟ್ರಪತಿ

ಹೌದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇವಿ ಯಾತ್ರಾ ಪೋರ್ಟಲ್ ಮತ್ತು ಮೊಬೈಲ್ ಆಪ್‌ ಅನ್ನು ಅನಾವರಣಗೊಳಿಸಿದ್ದಾರೆ. ಭಾರತದ ಇವಿ ಯೋಜನೆಗಳನ್ನು ಹೆಚ್ಚು ಕ್ರಿಯಾಶೀಲವಾಗುವಂತೆ ಮಾಡಲು ಮತ್ತು ದೇಶದಲ್ಲಿ ಇ - ಮೊಬಿಲಿಟಿಯನ್ನು ಉತ್ತೇಜಿಸಲು ಈ ಕೆಲಸ ಮಾಡಲಾಗಿದೆ. ಹಾಗಿದ್ರೆ, ಈ ಆಪ್‌ನಿಂದ ಏನೆಲ್ಲಾ ಪ್ರಯೋಜನ, ಇವಿ ಬಳಕೆದಾರರು ಈ ಆಪ್‌ ಅನ್ನು ಹೇಗೆ ಬಳಕೆ ಮಾಡಬೇಕು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ

ಏನಿದು ಇವಿ ಯಾತ್ರಾ  ಪೋರ್ಟಲ್, ಮೊಬೈಲ್ ಆಪ್‌

ಏನಿದು ಇವಿ ಯಾತ್ರಾ ಪೋರ್ಟಲ್, ಮೊಬೈಲ್ ಆಪ್‌

ಈ ಇವಿ ಯಾತ್ರಾ ಪೋರ್ಟಲ್, ಮೊಬೈಲ್ ಆಪ್‌ ಇವಿ ವಾಹನ ಇರುವ ಬಳಕೆದಾರರಿಗೆ ಸದುಪಯೋಗವಾಗಲಿವೆ. ಈ ಆಪ್‌ ಮೂಲಕ ಗ್ರಾಹಕರು ಎಲ್ಲೆಲ್ಲಿ ಇವಿ ಚಾರ್ಜಿಂಗ್ ಕೇಂದ್ರಗಳಿವೆ? ಎಂಬುದನ್ನು ನ್ಯಾವಿಗೇಷನ್ ಮಾಡಬಹುದಾಗಿದೆ. ಈ ಆಪ್‌ ಅನ್ನು ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (BEE) ಅಭಿವೃದ್ಧಿಪಡಿಸಿದೆ. ಇ-ಮೊಬಿಲಿಟಿಯನ್ನು ಉತ್ತೇಜಿಸಲು ವಿವಿಧ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಉಪಕ್ರಮಗಳ ಮಾಹಿತಿಯನ್ನು ವೆಬ್‌ಸೈಟ್ ಮೂಲಕ ತಿಳಿಸಲಾಗುತ್ತದೆ.

ನೋಂದಣಿ ಮಾಡಿಕೊಳ್ಳಬಹುದು

ನೋಂದಣಿ ಮಾಡಿಕೊಳ್ಳಬಹುದು

ಇದರೊಂದಿಗೆ ಚಾರ್ಜಿಂಗ್ ಪಾಯಿಂಟ್ ಆಪರೇಟರ್‌ಗಳಿಗೆ (CPOs) ತಮ್ಮ ಚಾರ್ಜಿಂಗ್ ವಿವರಗಳನ್ನು ನೋಂದಾಯಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಹಾಗೆಯೇ ಇವಿ ಆಪ್‌ ಮೂಲಕ ಇವಿ ಚಾರ್ಜಿಂಗ್ ಸ್ಟೇಷನ್‌ನಲ್ಲಿ ಯಾವ ಚಾರ್ಜರ್‌ಗಳನ್ನು ಸ್ಥಾಪಿಸಲಾಗಿದೆ, ಎಷ್ಟು ಚಾರ್ಜಿಂಗ್ ಸ್ಲಾಟ್‌ಗಳು ಅಲ್ಲಿ ಲಭ್ಯವಿದೆ, ಎಲೆಕ್ಟ್ರಿಕ್ ವಾಹನವನ್ನು ಚಾರ್ಜ್ ಮಾಡಲು ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎಂಬಿತ್ಯಾದಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ನೊಂದಣಿ ಪ್ರಕ್ರಿಯೆಯಲ್ಲಿ ರಾಷ್ಟ್ರೀಯ ಆನ್‌ಲೈನ್ ಡೇಟಾಬೇಸ್‌ನಲ್ಲಿ ತಮ್ಮ ವಿವರಗಳನ್ನು ದಾಖಲು ಮಾಡಬೇಕಿದೆ.

ಈ ಆಪ್‌ ಎಲ್ಲಿ ಲಭ್ಯ?

ಈ ಆಪ್‌ ಎಲ್ಲಿ ಲಭ್ಯ?

ಈ ಆಪ್‌ ಅನ್ನು ನೀವು ಗೂಗಲ್‌ ಪ್ಲೇ ಸ್ಟೋರ್‌ ಹಾಗೂ ಆಪಲ್‌ ಆಪ್‌ ಸ್ಟೋರ್‌ ಮೂಲಕ ಇನ್‌ಸ್ಟಾಲ್‌ ಮಾಡಿಕೊಳ್ಳಬಹುದಾಗಿದ್ದು, ಎಲ್ಲಾ ಸ್ಮಾರ್ಟ್‌ಫೋನ್‌ಗೂ ಸಪೋರ್ಟ್‌ ಮಾಡಲಿದೆ. ಹಾಗೆಯೇ ಈ ಸ್ಮಾರ್ಟ್‌ ಮಾಹಿತಿ ಇರುವ ಆಪ್‌ ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಗೆ ಬೆಂಬಲ ನೀಡುತ್ತದೆ.

ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ ಎಷ್ಟಿದೆ?

ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ ಎಷ್ಟಿದೆ?

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈ ಹಿಂದೆ ಕೆಲವು ಮಾಹಿತಿಯನ್ನು ನೀಡಿದ್ದು, ಅದರಂತೆ ಭಾರತದಲ್ಲಿ 5,000 ಕ್ಕೂ ಹೆಚ್ಚು ಸಾರ್ವಜನಿಕ ಚಾರ್ಜಿಂಗ್‌ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಭಾರತದಲ್ಲಿ ಸುಮಾರು 18 ಲಕ್ಷಕ್ಕೂ ಅಧಿಕ ಎಲೆಕ್ಟ್ರಿಕ್‌ ವಾಹನಗಳು ಸಂಚಾರ ಮಾಡುತ್ತಿದ್ದು, ಈ ಚಾರ್ಜರ್‌ ಕೇಂದ್ರಗಳ ಸಂಖ್ಯೆ ತುಂಬಾ ಕಡಿಮೆ ಎನ್ನಬಹುದು.

ಚಾರ್ಜಿಂಗ್‌

ಇನ್ನು ಕರ್ನಾಟಕದ ವಿಷಯಕ್ಕೆ ಬಂದರೆ 698 ಚಾರ್ಜಿಂಗ್‌ ಕೇಸ್‌ಗಳಿದ್ದರೆ, ಮಹಾರಾಷ್ಟ್ರದಲ್ಲಿ 660 ಚಾರ್ಜಿಂಗ್‌ ಕೇಸ್‌ಗಳು ಲಭ್ಯ ಇವೆ. ಹಾಗೆಯೇ ದೆಹಲಿಯಲ್ಲಿ 539 ಚಾರ್ಜಿಂಗ್‌ ಕೇಸ್‌ಗಳು ಕೆಲಸ ಮಾಡಲಿವೆ. ಇದನ್ನು ಹೊರತುಪಡಿಸಿ ಉತ್ತರಪ್ರದೇಶ, ದೆಹಲಿ ಹಾಗೂ ಮಹಾರಾಷ್ಟ್ರ ಈ ಇವಿ ವಾಹನಗಳ ದೊಡ್ಡ ಮಾರುಕಟ್ಟೆಗಳನ್ನು ಹೊಂದಿವೆ.

ಬ್ಯಾಟರಿ ಸೆಲ್‌

ಇನ್ನು ಈ ಇವಿ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪನೆ ಮಾಡುವುದರ ಜೊತೆಗೆ ಬ್ಯಾಟರಿ ಸೆಲ್‌ಗಳನ್ನು ತಯಾರು ಮಾಡಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಪ್ರೊಡಕ್ಷನ್‌ ಲಿಂಕ್ಡ್ ಇನ್ಸೆಂಟಿವ್ ಯೋಜನೆಯನ್ನು ಪರಿಚಯಿಸಿದ್ದು, ದೇಶದಲ್ಲಿ ಹೆಚ್ಚಿನ ಇವಿ ವಾಹನ ಬಳಕೆ ಪ್ರೋತ್ಸಾಹಿಸಲು ವಿಶೇಷ ಕೆಲಸಕ್ಕೆ ಮುಂದಾಗಿದೆ.

Best Mobiles in India

English summary
EV yatra portal, mobile app launched in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X