ಜಿಯೋ ಗ್ರಾಹಕರೇ ನೀವು ಈ ಪ್ಲ್ಯಾನ್‌ ಆಯ್ದುಕೊಳ್ಳುವುದು ಸೂಕ್ತ!

|

ಏರ್‌ಟೆಲ್, ವೊಡಾಫೋನ್, ಜಿಯೋ ಮತ್ತು ಬಿಎಸ್‌ಎನ್ಎಲ್ ಸಂಸ್ಥೆಗಳ ದರ ಸಮರದಿಂದಾಗಿ ಭಾರತೀಯ ಟೆಲಿಕಾಂ ವಲಯದಲ್ಲಿ ಅನೇಕ ಬದಲಾವಣೆಗಳು ನಡೆದಿವೆ. ಇದೀಗ ಆರ್ಥಿಕವಾಗಿ ಪೆಟ್ಟು ತಿಂದಿರುವ ಟೆಲಿಕಾಂ ಸಂಸ್ಥೆಗಳು ಪ್ಲ್ಯಾನ್‌ಗಳ ದರ ಏರಿಕೆಯತ್ತ ಮುಖ ಮಾಡಿದ್ದು, ಇದೇ ಡಿಸೆಂಬರ್ 1ರಿಂದ ಹೊಸ ಬೆಲೆ ತಿಳಿಸಲಿವೆ. ಅದೇ ರೀತಿ ಜಿಯೋ ಸಂಸ್ಥೆ ಸಹ ಸದ್ಯದಲ್ಲಿಯೇ ತನ್ನ ಪ್ಲ್ಯಾನ್‌ಗಳ ದರದಲ್ಲಿ ಹೆಚ್ಚಳ ಮಾಡುವ ಸೂಚನೆ ನೀಡಿದೆ.

ಜಿಯೋ

ಹೌದು, ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಬೆಲೆ ಏರಿಕೆಯ ಸುಳಿವು ನೀಡಿದ್ದು, ತಮ್ಮ ರೀಚಾರ್ಜ್ ಪ್ಲ್ಯಾನ್‌ಗಳ ಬೆಲೆಯಲ್ಲಿ ಹೆಚ್ಚಳ ಮಾಡುವುದು ಬಹುತೇಕ ಖಚಿತವೇ ಆಗಿದೆ. ಇತ್ತೀಚಿಗೆ ಜಿಯೋ ಇತರೆ ನೆಟವರ್ಕ್‌ಗಳ ಹೊರಹೋಗುವ ಕರೆಗಳಿಗೆ ಪ್ರತಿನಿಮಿಷಕ್ಕೆ 6ಪೈಸೆ ನಿಗದಿ ಮಾಡಿದ್ದು, ಅದರಿಂದ ಗ್ರಾಹಕರಿಗೆ ಹೊರೆ ಆಗದಿರಲಿ ಎಂದು ಆಲ್‌-ಇನ್-ಒನ್ ಪ್ಲ್ಯಾನ್‌ ಮತ್ತು IUC ಪ್ಲ್ಯಾನ್‌ಗಳನ್ನು ಪರಿಚಯಿಸಿದೆ.

ಟೆಲಿಕಾಂ

ಟೆಲಿಕಾಂ ವಲಯದಲ್ಲಿನ ಈ ದರ ಹೆಚ್ಚಳದ ನಡೆ ಗ್ರಾಹಕರನ್ನು ಕಂಗೆಡಿಸಿದೆ. ಜನಪ್ರಿಯ ಜಿಯೋ ಸಹ ಈಗ ತಮ್ಮ ಟಾರೀಫ್‌ ಹೈಕ್ ಮಾಡುವ ಮಾತುಗಳು ಕೇಳಿಬರುತ್ತಿದ್ದು, ಯಾವ ಪ್ಲ್ಯಾನ್ ರೀಚಾರ್ಜ್ ಮಾಡಿಸಿಕೊಳ್ಳಬೇಕು ಎನ್ನುವ ಗೊಂದಲದಲ್ಲಿದ್ದಾರೆ. ಆದರೆ ಜಿಯೋ ಗ್ರಾಹಕರಿಗೆ ಎರಡು ಆಯ್ಕೆಗಳು ಲಭ್ಯ. ಹಾಗಾದರೇ ಜಿಯೋ ಗ್ರಾಹಕರಿಗೆ ಲಭ್ಯ ಇರುವ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಜಿಯೋ IUC ಟಾಕ್‌ಟೈಮ್‌ ಪ್ಲ್ಯಾನ್‌

ಜಿಯೋ IUC ಟಾಕ್‌ಟೈಮ್‌ ಪ್ಲ್ಯಾನ್‌

ಜಿಯೋ ಸಂಸ್ಥೆಯು ಇತ್ತೀಚಿಗೆ ಇತರೆ ನೆಟವರ್ಕ್‌ಗಳ ಹೊರಹೋಗುವ ಕರೆಗಳಿಗೆ ಪ್ರತಿನಿಮಿಷಕ್ಕೆ 6ಪೈಸೆ ನಿಗದಿ ಮಾಡಿದ ಹಿನ್ನಲೆಯಲ್ಲಿ ಕೆಲವು IUC ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅವುಗಳು 10ರೂ.ಗಳಿಂದ ಆರಂಭವಿದ್ದು, 20ರೂ, 50ರೂ, 100ರೂ. 500ರೂ ಮತ್ತು 1000ರೂ.ಗಳಲ್ಲಿ ಲಭ್ಯ ಇವೆ. ಈ ಪ್ಲ್ಯಾನ್‌ಗಳು ಟಾಕ್‌ಟೈಮ್‌ ಪಡೆಯುವುದಕ್ಕಾಗಿ ಸೂಕ್ತವಾಗಿವೆ. ಗ್ರಾಹಕರು ಡೇಟಾ ಪ್ಲ್ಯಾನ್‌ಗಳೊಂದಿಗೆ ಅಗತ್ಯ IUC ಟಾಕ್‌ಟೈಮ್‌ ಪ್ಲ್ಯಾನ್‌ ರೀಚಾರ್ಜ್‌ ಮಾಡಿಸಿಕೊಳ್ಳಬಹುದು.

ಆಲ್‌-ಇನ್‌-ಒನ್ ಪ್ಲ್ಯಾನ್‌

ಆಲ್‌-ಇನ್‌-ಒನ್ ಪ್ಲ್ಯಾನ್‌

ಅದೇ ರೀತಿ ಜಿಯೋ 6ಪೈಸೆ ಏರಿಕೆಯ ಹೊರೆ ಗ್ರಾಹಕರ ಆಗದಿರಲಿ ಎಂದು ಮತ್ತೊಂದು ಆಯ್ಕೆ ನೀಡಿದ್ದು, ಅದುವೇ ಆಲ್‌-ಇನ್‌-ಒನ್ ಪ್ಲ್ಯಾನ್‌ಗಳು. ಆಲ್‌-ಇನ್‌-ಒನ್ ಪ್ಲ್ಯಾನ್‌ಗಳಲ್ಲಿ ಗ್ರಾಹಕರಿಗೆ ಡೇಟಾ ಮತ್ತು ಇತರೆ ನೆಟವರ್ಕ್‌ಗಳಿಗೆ ನಿಗದಿತ ಉಚಿತ ಕರೆಯ ನಿಮಿಷಗಳು ಲಭ್ಯವಾಗಲಿದೆ. ಅದರೊಂದಿಗೆ ಈ ಪ್ಲ್ಯಾನ್‌ಗಳು ಸೂಕ್ತ ವ್ಯಾಲಿಡಿಟಿಯನ್ನು ಸಹ ಪಡೆದಿವೆ. 222ರೂ. 333ರೂ. ಮತ್ತು 444ರೂ.ಆಲ್‌-ಇನ್‌-ಒನ್‌ ಪ್ಲ್ಯಾನ್‌ಗಳು ಆಕರ್ಷಕವಾಗಿವೆ.

ಕೊನೆಯ ಮಾತು

ಕೊನೆಯ ಮಾತು

ಸದ್ಯ ಜಿಯೋ ಗ್ರಾಹಕರು ಆಲ್‌-ಇನ್‌-ಒನ್ ಪ್ಲ್ಯಾನ್‌ಗಳಲ್ಲಿ ಒಂದನ್ನು ರೀಚಾರ್ಜ್ ಮಾಡಿಸಿಕೊಳ್ಳುವುದು ಸೂಕ್ತ ಅನಿಸುತ್ತದೆ ಎಕೆಂದರೇ ಈ ಪ್ಲ್ಯಾನ್‌ಗಳಲ್ಲಿ ಜಿಯೋದಿಂದ ಇತರೆ ನೆಟವರ್ಕ್‌ಗಳ ಹೊರಹೋಗುವ ಕರೆಗಳಿಗೆ ಉಚಿತ ನಿಮಿಷಗಳು ಸಿಗುತ್ತವೆ ಜೊತೆಗೆ ಡೇಟಾ ಸೌಲಭ್ಯವು ಲಭ್ಯವಾಗಲಿದೆ ಹಾಗೂ ವ್ಯಾಲಿಡಿಟಿ ಸಹ ಸಿಗಲಿದೆ. ಗ್ರಾಹಕರು ಅವರಿಗೆ ಸೂಕ್ತ ಮತ್ತು ಅಗತ್ಯತೆ ನೋಡಿ ಆಲ್‌-ಇನ್‌-ಒನ್ ಪ್ಲ್ಯಾನ್‌ಗಳಲ್ಲಿ ಒಂದನ್ನು ಆಯ್ಕೆ ಮಾಡುವುದು ಉತ್ತಮ.

Best Mobiles in India

English summary
Reliance Jio is offering data plans, combo offerings, IUC talk time vouchers and all-in-one plans in its portfolio and the subscribers have to choose one from it. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X