Subscribe to Gizbot

ಫೇಸ್‌ ಏಜಿಂಗ್ ಸಾಫ್ಟ್‌ವೇರ್‌ನಲ್ಲಿ ನೋಡಿ ನಿಮ್ಮ 70 ವರ್ಷದ ಮುಖ

Written By:

ಕೈಯಲ್ಲಿ ಸ್ಮಾರ್ಟ್‌ಫೋನ್‌ ಹಿಡಿದು ಇಷ್ಟುದಿನ ಸೆಲ್ಫೀಗೆ ಫೋಜ್‌ ಕೊಡುತ್ತಾ ಆ ಕ್ಷಣದಲ್ಲಿ ಹೇಗೆ ಕಾಣುತ್ತೇನೆ ಎಂದು ನೋಡಿಕೊಳ್ಳುವ ಟ್ರೆಂಡ್‌ ಜೊತೆಗೆ ಜನತೆಗೆ ಇನ್ನೊಂದು ಹೊಸ ಟ್ರೆಂಡ್‌ ನೀಡಲು ಹೊಸ ಟೆಕ್ನಾಲಜಿ ಸಿದ್ಧಗೊಂಡಿದೆ. ಆ ಟೆಕ್ನಾಲಜಿ ಎಲ್ಲರಿಗೂ ಸಹ ಅಚ್ಚರಿ ಮೂಡಿಸುವಂತಹದ್ದು.

ಓದಿರಿ: ಅಬ್ಬಾ ಸೆಲ್ಫಿ ಅಂದರೆ ಹೀಗಿರಬೇಕು!!!

ನಾನು 70 ವರ್ಷಗಳ ನಂತರ ಹೇಗೆ ಕಾಣುತ್ತೇನೆ ಎಂದು ನೀವು ಈಗಲೇ ನೋಡಿಕೊಳ್ಳಬೇಕೆ ? ಹಾಗಾದರೆ ಫೇಸ್‌ ಏಜಿಂಗ್ ಸಾಫ್ಟ್‌ವೇರ್‌ಗೆ ಫೋಜ್‌ ಕೊಡಲು ಸಿದ್ಧರಾಗಿ, ನೀವು ದೈಹಿಕವಾಗಿ, ಮತ್ತು ಮುಖದ ರೂಪದಲ್ಲಿ ಹೇಗೆ ಬದಲಾಗುತ್ತೀರಿ ಎಂಬುದನ್ನು ನೋಡಿಕೊಳ್ಳಿ. ಗಿಜ್‌ಬಾಟ್‌ನ ಇಂದಿನ ಲೇಖನ ಓದಿ ಫೇಸ್‌ ಏಜಿಂಗ್ ಸಾಫ್ಟ್‌ವೇರ್‌ ಬಗ್ಗೆ ವಿಶೇಷ ಮಾಹಿತಿ ತಿಳಿದುಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
70 ನೇ ವರ್ಷದ ಭವಿಷ್ಯ ತೋರಿಸುವ ಸಾಫ್ಟ್‌ವೇರ್

70 ನೇ ವರ್ಷದ ಭವಿಷ್ಯ ತೋರಿಸುವ ಸಾಫ್ಟ್‌ವೇರ್

ವಾಷಿಂಗ್ಟನ್‌ ವಿಶ್ವವಿದ್ಯಾನಿಲಯವು 5 ವರ್ಷದ ಚಿಕ್ಕ ಮಗು 70ನೇ ವರ್ಷದಲ್ಲಿ ಹೇಗಿರುತ್ತದೆ ಎಂದು ಹೇಳುವ ಸಾಫ್ಟ್‌ವೇರ್ ಅಭಿವೃದ್ದಿಗಳಿಸಿದೆ.

ಫೇಸ್‌ ಏಜಿಂಗ್ ಸಾಫ್ಟ್‌ವೇರ್‌

ಫೇಸ್‌ ಏಜಿಂಗ್ ಸಾಫ್ಟ್‌ವೇರ್‌

ವಾಷಿಂಗ್ಟನ್‌ ವಿಶ್ವವಿದ್ಯಾನಿಲಯ ಅಭಿವೃದ್ದಿಗೊಳಿಸಿರುವ ಫೇಸ್‌ ಏಜಿಂಗ್ ಸಾಫ್ಟ್‌ವೇರ್‌ ಕಂಡುಹಿಡಿಯಲು ಹೆಚ್ಚು ಪ್ರಯತ್ನಗಳನ್ನು ನಡೆಸಿತ್ತು.

 ಫೇಸ್‌ ಏಜಿಂಗ್ ಸಾಫ್ಟ್‌ವೇರ್‌

ಫೇಸ್‌ ಏಜಿಂಗ್ ಸಾಫ್ಟ್‌ವೇರ್‌

ಅಭಿವೃದ್ದಿಗೊಂಡ ಸಾಫ್ಟ್‌ವೇರ್ 1 ವರ್ಷದಿಂದ 100 ವರ್ಷ ತನಕದ 40,000 ಸಾವಿರ ಜನರ ಫೋಟೋಗಳ ವಿಶಾಲ ಡಾಟಾ ಆಧಾರದಿಂದ ಅಭಿವೃದ್ದಿಗೊಂಡಿದೆ.

 ಸಾಫ್ಟ್‌ವೇರ್ ಕೀ ಫೀಚರ್

ಸಾಫ್ಟ್‌ವೇರ್ ಕೀ ಫೀಚರ್

ಚಿಕ್ಕ ವಯಸ್ಸಿನ ಮಕ್ಕಳು ಬೆಳೆಯುತ್ತಾ ಬೆಳೆಯುತ್ತಾ ಹೇಗೆ ಕಾಣುತ್ತಾರೆ ಎಂಬುದನ್ನು ತಿಳಿಸುತ್ತದೆ.

ಸಾಫ್ಟ್‌ವೇರ್‌ ಉಪಯೋಗ

ಸಾಫ್ಟ್‌ವೇರ್‌ ಉಪಯೋಗ

ಫೇಸ್‌ ಏಜಿಂಗ್ ಸಾಫ್ಟ್‌ವೇರ್‌ ಮೂಲಕ ಕಳೆದು ಹೋದ ಮಕ್ಕಳು ಹಲವು ವರ್ಷಗಳಾದರು ಸಿಗದಿದ್ದಲ್ಲಿ ಅವರು ಹಲವು ವರ್ಷಗಳ ನಂತರ ಹೇಗೆ ಕಾಣುತ್ತಾರೆ ಎಂಬುದನ್ನು ಫೋಟೋ ಹೋಲಿಸಿ ಹುಡುಕಲು ಸಾಧ್ಯವಾಗಿದೆ.

 ತಜ್ಞರು ಸಮೀಕ್ಷೆ ನೆಡೆಸಿದ್ದಾರೆ

ತಜ್ಞರು ಸಮೀಕ್ಷೆ ನೆಡೆಸಿದ್ದಾರೆ

ತಜ್ಞರು ಕೆಲವು ಮಕ್ಕಳ ಫೋಟೋಗಳನ್ನು ಬಳಸಿ ಮುಂದೆ ಹೇಗೆ ಕಾಣುತ್ತಾರೆ ಎಂಬುದನ್ನು ಹಾಗೂ ಕೆಲವು ಮಕ್ಕಳ ಹಿಂದಿನ ಫೋಟೋಗಳನ್ನು ಬಳಸಿ ಹೋಲಿಕೆ ನೋಡಿ 'ವಿಜ್ಞಾನ, ಕಲೆ ಹಾಗು ಸಂಶೋಧನೆಯ ಆಧಾರದಲ್ಲಿ ಒಪ್ಪುವಂತಹದ್ದು'' ಎಂದಿದ್ದಾರೆ.

ವಿಜ್ಞಾನ ಸೇರ್ಪಡೆ

ವಿಜ್ಞಾನ ಸೇರ್ಪಡೆ

ಮುಂದಿನ ದಿನಗಳಲ್ಲಿ ಪ್ರತಿ ಒಂದೇ ವಯಸ್ಸಿನ 1500 ಜನರ ಫೋಟೋವನ್ನು ಹೆಚ್ಚಿನ ವಿಜ್ಞಾನ ಆಧಾರಿತ ಅಂಶಗಳನ್ನು ಡಾಟಾ ಆಧಾರವಾಗಿ ಸೇರಿಸಲಾಗುತ್ತದೆ ಎಂದು ಹೇಳಲಾಗಿದೆ.

ಇಮೇಜ್‌ಗಳು

ಇಮೇಜ್‌ಗಳು

ಸಂಶೋಧಕರು ಗೂಗಲ್‌ ಇಮೇಜ್‌ಗಳು ನಮಗೆ ಪ್ರಾಥಮಿಕ ಮಾಹತಿಗಳಾಗಿವೆ ಎಂದು ಹೇಳಿದ್ದಾರೆ.

 ಸಾಫ್ಟ್‌ವೇರ್ ಅಭಿವೃದ್ದಿ ಟೀಮ್‌

ಸಾಫ್ಟ್‌ವೇರ್ ಅಭಿವೃದ್ದಿ ಟೀಮ್‌

ಸಾಫ್ಟ್‌ವೇರ್ ಅಭಿವೃದ್ದಿ ಟೀಮ್‌ 'ಅಲ್ಗಾರಿದಮ್ಗಳು x ವಯಸ್ಸಿನ ಮತ್ತು y ವಯಸ್ಸಿನ ಜನರ ಫೋಟೋಗಳ ವ್ಯತ್ಯಾಸವನ್ನು ಲೆಕ್ಕಹಾಕಿ ಡಾಟಾ ಬೇಸ್‌ ಆಧಾರದಲ್ಲಿ ಉತ್ತರ ನೀಡುತ್ತವೆ'' ಎಂದಿದ್ದಾರೆ.

ಮುಖ್ಯ ಮಾಹಿತಿಗಳು

ಮುಖ್ಯ ಮಾಹಿತಿಗಳು

* ಅಲ್ಗಾರಿದಮ್ಗಳು ವಯಸ್ಸಿನ ಗುಂಪಿನ ಆಧಾರದಲ್ಲಿ ಫೇಸ್‌ ಬದಲಾವಣೆ ಹೇಗಾಗುತ್ತದೆ ಎಂಬುದನ್ನು ತಿಳಿಸುತ್ತವೆ.
* ಅಲ್ಗಾರಿದಮ್ಗಳು ಕ್ರೇಜಿ ಮುಖಭಾವ ಹಾಗೂ ಫೋಟೋಗಳು ಬೆಳಕಿನ ವ್ಯತ್ಯಾಸದಿಂದ ಕೂಡಿದ್ದರು ಸಹ ಭವಿಷ್ಯ ಚಿತ್ರ ನೀಡುತ್ತವೆ.

 ಭವಿಷ್ಯದ ಮುಖದ ಚಿತ್ರ ನೀಡಲು ಕೇವಲ ಒಂದು ಫೋಟೋ ಸಾಕು

ಭವಿಷ್ಯದ ಮುಖದ ಚಿತ್ರ ನೀಡಲು ಕೇವಲ ಒಂದು ಫೋಟೋ ಸಾಕು

ಫೇಸ್‌ ಏಜಿಂಗ್ ಸಾಫ್ಟ್‌ವೇರ್‌ಗೆ ಭವಿಷ್ಯದ ಮುಖ ತೋರಿಸಲು ಮಗುವಿನ ಒಂದು ಫೋಟೋ ಇದ್ದರೇ ಸಾಕು, ಅದು 80 ವರ್ಷದ ತನಕವು ಪ್ರತಿ ವರ್ಷದ ಮುಖದ ಲಕ್ಷಣವನ್ನು ನೀಡುತ್ತದೆ.

 Ira Kemelmacher-Shlizerman

Ira Kemelmacher-Shlizerman

ಇವರು ಸಾಫ್ಟ್‌ವೇರ್‌ ಅಭಿವೃದ್ದಿಗೊಳಿಸಿದವರ ಬಳಿ, ಶೋಷಣೆಗೊಳಗಾಗಿ ಕಾಣೆಯಾದವರ ಬಗ್ಗೆ ಮಾಹಿತಿ ತಿಳಿಯಲು ಹೋದಾಗ ಅಪರಾಧ ಸಂಬಂಧಿಸಿದ ಪ್ರಕರಣಕ್ಕೆ ಪ್ರಸ್ತುತದಲ್ಲಿ ಮಾಹಿತಿ ನೀಡುತ್ತಿಲ್ಲದಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

 ಸಾಂಸ್ಕೃತಿಕ ಬದಲಾವಣೆಯ ಬಗ್ಗೆಯು ಮಾಹಿತಿ

ಸಾಂಸ್ಕೃತಿಕ ಬದಲಾವಣೆಯ ಬಗ್ಗೆಯು ಮಾಹಿತಿ

ಸಾಫ್ಟ್‌ವೇರ್‌ ಪ್ರಸ್ತುತದಲ್ಲಿ ಸಾಂಸ್ಕೃತಿಕ ಬದಲಾವಣೆಯ ಬಗ್ಗೆಯು ಮಾಹಿತಿನೀಡುವಂತೆ ಅಭಿವೃದ್ದಿಗೊಳ್ಳತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
When we see a kid under the age of five, it’s hard to predict what he or she will look like in 70 years. But a new software has been developed by the University of Washington that can do just that, and with great accuracy.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot