ಭಾರತದ ಗ್ರಾಮೀಣ ಭಾಗಕ್ಕೂ ಹೈಟೆಕ್ ವೈಫೈ

By Shwetha
|

ದೇಶದ ಗ್ರಾಮೀಣ ವಲಯಗಳಲ್ಲಿ ಇಂಟರ್ನೆಟ್ ವ್ಯವಸ್ಥೆಯನ್ನು ಅತ್ಯುತ್ತಮಗೊಳಿಸುವ ಹಿನ್ನಲೆಯಲ್ಲಿ ಫೇಸ್‌ಬುಕ್ ಬಿಎಸ್ಎನ್ಎಲ್‌ನೊಂದಿಗೆ ಕೈಜೋಡಿಸಿದ್ದು 100 ವೈಫೈ ಹಾಟ್‌ಸ್ಪಾಟ್‌ಗಳನ್ನು ರಚಿಸುವ ಇರಾದೆಯನ್ನು ಇದು ಹೊಂದಿದೆ.

ಓದಿರಿ: ವೈಫೈ ವೇಗಗೊಳಿಸಬೇಕೇ ಇಲ್ಲಿದೆ ಸಲಹೆಗಳು

ಈ ಯೋಜನೆಗಾಗಿ ಫೇಸ್‌ಬುಕ್ ಬಿಎಸ್‌ಎನ್‌ಎಲ್‌ನೊಂದಿಗೆ ರೂ 5 ಕೋಟಿಯನ್ನು ಹೂಡಿಕೆ ಮಾಡುತ್ತಿದ್ದು ಬಿಎಸ್‌ಎನ್‌ಎಲ್‌ನಿಂದ ಬ್ಯಾಂಡ್‌ವಿಡ್ತ್ ಅನ್ನು ಖರೀದಿಸುವ ಯೋಜನೆಯಲ್ಲಿ ಕೈ ಜೋಡಿಸಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಈ ಲೇಖನದ ಕುರಿತ ಇನ್ನಷ್ಟು ಮಾಹಿತಿಗಳನ್ನು ನಾವು ನೀಡುತ್ತಿದ್ದೇವೆ.

100 ಹಳ್ಳಿ

100 ಹಳ್ಳಿ

ಫೇಸ್‌ಬುಕ್ ಈ ಯೋಜನೆಗಾಗಿ 100 ಹಳ್ಳಿಗಳನ್ನು ಆಯ್ದುಕೊಂಡಿದೆ.

ಬ್ಯಾಂಡ್ ವಿಡ್ತ್ ಖರೀದಿ

ಬ್ಯಾಂಡ್ ವಿಡ್ತ್ ಖರೀದಿ

ಬಿಎಸ್‌ಎನ್‌ಎಲ್‌ನಿಂದ ಬ್ಯಾಂಡ್ ವಿಡ್ತ್ ಖರೀದಿ ಮಾಡಲು ವಾರ್ಷಿಕವಾಗಿ ರೂ 5 ಲಕ್ಷವನ್ನು ಸೈಟ್‌ಗಾಗಿ ಹೂಡಿಕೆ ಮಾಡಲಾಗುತ್ತದೆ.

ಮುಂದಿನ ಮೂರು ವರ್ಷಗಳಿಗಾಗಿ ಇದನ್ನು ವಿಸ್ತರಿಸಲಾಗುತ್ತಿದೆ

ಮುಂದಿನ ಮೂರು ವರ್ಷಗಳಿಗಾಗಿ ಇದನ್ನು ವಿಸ್ತರಿಸಲಾಗುತ್ತಿದೆ

ಭಾರತದ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಈ ಯೋಜನೆಯು 25 ಹಳ್ಳಿಗಳನ್ನು ಕವರ್ ಮಾಡಿದ್ದು ಮುಂದಿನ ಮೂರು ವರ್ಷಗಳಿಗಾಗಿ ಇದನ್ನು ವಿಸ್ತರಿಸಲಾಗುತ್ತಿದೆ.

ವೈಫೈ ಯೋಜನೆ

ವೈಫೈ ಯೋಜನೆ

ಈ ವರ್ಷದ ಡಿಸೆಂಬರ್ 31 ಕ್ಕೆ ವೈಫೈ ಯೋಜನೆಯನ್ನು ಸಂಪೂರ್ಣಗೊಳಿಸುವ ಇರಾದೆ ಕಂಪೆನಿಯದ್ದಾಗಿದೆ. ಯೋಜನೆಯ ಅನುಸಾರ ಮೊದಲ ಅರ್ಧದಲ್ಲಿ ಉಚಿತ ಇಂಟರ್ನೆಟ್ ಸಂಪರ್ಕವನ್ನು ಬಳಕೆದಾರರು ಪಡೆದುಕೊಳ್ಳಲಿದ್ದಾರೆ.

ವೈಫೈ ನೆಟ್‌ವರ್ಕ್ ಅನ್ನು ಪ್ರವೇಶಿಸುವ ಸಾಮರ್ಥ್ಯ

ವೈಫೈ ನೆಟ್‌ವರ್ಕ್ ಅನ್ನು ಪ್ರವೇಶಿಸುವ ಸಾಮರ್ಥ್ಯ

ಒಂದೇ ಸಮಯದಲ್ಲಿ ಸರಾಸರಿ 2,000 ವ್ಯಕ್ತಿಗಳು ವೈಫೈ ನೆಟ್‌ವರ್ಕ್ ಅನ್ನು ಪ್ರವೇಶಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

ಭಾರತದ ಹಳ್ಳಿಗಳೂ

ಭಾರತದ ಹಳ್ಳಿಗಳೂ

ಭಾರತದ ಹಳ್ಳಿಗಳೂ ಇಂಟರ್ನೆಟ್ ವ್ಯವಸ್ಥೆಯ ಪ್ರಯೋಜನವನ್ನು ಪಡೆದುಕೊಳ್ಳುವಂತಾಗಬೇಕು ಎಂಬುದು ಈ ಯೋಜನೆಯ ಹಿಂದಿರುವ ಉದ್ದೇಶವಾಗಿದೆ.

450 ಹಾಟ್‌ಸ್ಪಾಟ್‌

450 ಹಾಟ್‌ಸ್ಪಾಟ್‌

ವೈಫೈ ಪ್ರಾರಂಭ ಸೇವೆಗೆ ಕೈ ಜೋಡಿಸಿರುವ ಬಿಎಸ್‌ಎನ್‌ಎಲ್ 450 ಹಾಟ್‌ಸ್ಪಾಟ್‌ಗಳನ್ನು ಬಿಡುಗಡೆ ಮಾಡಿದೆ ಇದರಲ್ಲಿ ಹೆಚ್ಚಿನವುಗಳು ಪ್ರಯಾಣ ಸ್ಥಳಗಳಾಗಿವೆ.

2,500 ವೈಫೈ ಹಾಟ್‌ಸ್ಪಾಟ್‌

2,500 ವೈಫೈ ಹಾಟ್‌ಸ್ಪಾಟ್‌

ಮಾರ್ಚ್ 2016 ರಕ್ಕೂ ಮುನ್ನ 2,500 ವೈಫೈ ಹಾಟ್‌ಸ್ಪಾಟ್‌ಗಳನ್ನು ತಲುಪುವ ಯೋನೆಯನ್ನು ಬಿಎಸ್‌ಎನ್‌ಎಲ್ ಹಮ್ಮಿಕೊಂಡಿದೆ.

ಡಿಜಿಟಲ್ ಇಂಡಿಯಾ

ಡಿಜಿಟಲ್ ಇಂಡಿಯಾ

ಸರಕಾರದ ಡಿಜಿಟಲ್ ಇಂಡಿಯಾ ಯೋಜನೆಗೆ ಬದ್ಧವಾಗಿ ಬಿಎಸ್‌ಎನ್‌ಎಲ್ ವೈಫೈ ಹಾಟ್‌ಸ್ಪಾಟ್‌ಗಳ ಮೇಲೆ ಲಕ್ಷ್ಯವಿರಿಸಿದೆ.

ಗ್ರಾಮೀಣ ವಲಯ

ಗ್ರಾಮೀಣ ವಲಯ

ಗ್ರಾಮೀಣ ವಲಯಗಳಲ್ಲಿ ಇಂಟರ್ನೆಟ್ ಸೌಲಭ್ಯದಿಂದ ಜನರು ಹೆಚ್ಚು ಹೆಚ್ಚು ತಮ್ಮನ್ನು ಈ ಸೌಲಭ್ಯಕ್ಕೆ ಮೀಸಲಾಗಿಸಿಕೊಂಡು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುತ್ತಾರೆ.

Most Read Articles
Best Mobiles in India

English summary
US social networking major Facebook has partnered state-owned Bharat Sanchar Nigam Ltd (BSNL) to create 100 Wi-Fi hotspots in rural India to drive digital penetration in the country.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X