ಫೇಸ್‌ಬುಕ್‌ ತೆಕ್ಕೆಗೆ ವರ್ಚುಯಲ್ ರಿಯಾಲಿಟಿ ಕಂಪೆನಿ

Posted By:

ಇತ್ತೀಚೆಗಷ್ಟೇ ಮೆಸೇಜಿಂಗ್‌ ಆಪ್‌ ವಾಟ್ಸ್‌ಆಪ್‌ನ್ನು ಖರೀದಿಸಿದ್ದ ಫೇಸ್‌‌ಬುಕ್‌ ಗೇಮಿಂಗ್‌ ಕ್ಷೇತ್ರದತ್ತ ಕಣ್ಣು ಹಾಯಿಸಿದ್ದು ಇದೀಗ ಅಮೆರಿಕದ ಮಿಥ್ಯಾವಾಸ್ತವ (ವರ್ಚುಯಲ್ ರಿಯಾಲಿಟಿ )ಗೇಮ್ಸ್‌ ತಯಾರಕಾ ಕಂಪೆನಿಯನ್ನು ಖರೀದಿಸಲು ಮುಂದಾಗುತ್ತಿದೆ.

ವರ್ಚುಯಲ್ ರಿಯಾಲಿಟಿ ಕಂಪೆನಿಯಾದ ಒಕ್ಲಸ್‌ ರಿಫ್ಟ್‌(Oculus Rift) ಖರೀದಿಸುತ್ತಿರುವುದಾಗಿ ಫೇಸ್‌ಬುಕ್‌ ಹೇಳಿದ್ದು ಈ ಎರಡು ಕಂಪೆನಿಗಳ ನಡುವೆ ಎರಡು ಶತಕೋಟಿ ಡಾಲರ್‌ ಖರೀದಿ ಒಪ್ಪಂದ ನಡೆದಿದೆ. ಖರೀದಿ ಬಗ್ಗೆ ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಪ್ರತಿಕ್ರಿಯಿಸಿ ಫೇಸ್‌‌ಬುಕ್‌ ಇಲ್ಲಿಯವರೆಗೆ ಮೊಬೈಲ್‌ ಆಪ್ಸ್‌ಗಳ ಬಗ್ಗೆ ಹೆಚ್ಚಿನ ಗಮನಹರಿಸುತ್ತಿತ್ತು.ಈಗ ಬಳಕೆದಾರರಿಗೆ ಮತ್ತಷ್ಟು ಸೇವೆಗಳನ್ನು ನೀಡಲು ಮನರಂಜನಾ ಕ್ಷೇತ್ರದತ್ತ ಗಮನ ಹರಿಸುತ್ತಿರುವ ಹಿನ್ನೆಲೆಯಲ್ಲಿ ಒಕ್ಲಸ್‌ ರಿಫ್ಟ್‌ನ್ನು ಖರೀದಿಸುತ್ತಿದ್ದೇವೆ ಎಂದು ಫೇಸ್‌‌ಬುಕ್‌ನಲ್ಲಿ ಹೇಳಿದ್ದಾರೆ.

ವರ್ಚುಯಲ್ ರಿಯಾಲಿಟಿ ಕ್ಷೇತ್ರದಲ್ಲಿ ನಾಯಕನಾಗಿರುವ ಒಕ್ಲಸ್‌ ರಿಫ್ಟ್‌ ಕಂಪೆನಿ 2012ರಲ್ಲಿ ಆರಂಭಗೊಂಡಿದ್ದು, ವರ್ಚುಯಲ್ ರಿಯಾಲಿಟಿಗೆ ಸಂಬಂಧಿಸಿದ ಗೇಮ್ಸ್‌ನ್ನುತಯಾರಿಸಿದೆ.ಈ ಗೇಮ್‌ಗಳಿಗೆ ಬಳಕೆದಾರರು ಧರಿಸಲು ಹೆಲ್ಮೆಟ್‌‌, ಕಂಟ್ರೋಲ್‌ ಬಾಕ್ಸ್‌‌ನ್ನು ಸಹ ಅಭಿವೃದ್ಧಿಪಡಿಸಿದೆ.

ಈ ಕಂಪೆನಿ ಅಭಿವೃದ್ಧಿ ಪಡಿಸಿದ ವರ್ಚುಯಲ್ ರಿಯಾಲಿಟಿ ಗೇಮ್ಸ್‌‌ನ್ನು ಹೇಗೆ ಆಡಬಹುದು ಎನ್ನುವುದಕ್ಕೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಬಹುದು.

Post by Mark Zuckerberg.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot