'ಮಾರ್ಕ್‌ ಜುಕರ್‌ಬರ್ಗ್' ಸಾಮಾಜಿಕ ತಾಣಗಳ ಖಾತೆ ಹ್ಯಾಕ್

Written By:

ಸಾಮಾಜಿಕ ತಾಣ ಫೇಸ್‌ಬುಕ್‌, ಟ್ವಿಟರ್‌, ಪಿಂಟೆರೆಸ್ಟ್‌, ಲಿಂಕ್ಡ್ಇನ್ ಬಳಸುವವರಿಗೆಲ್ಲಾ ತಮ್ಮ ಸಾಮಾಜಿಕ ತಾಣಗಳ ಲಾಗಿನ್‌ ಪಾಸ್‌ವರ್ಡ್‌ ಚೇಂಜ್‌ ಮಾಡಿಕೊಳ್ಳಲು ಒಂದು ಒಳ್ಳೆ ಅವಕಾಶ. ಯಾಕಂದ್ರೆ ಫೇಮಸ್‌ ಹ್ಯಾಕರ್‌ಗಳು ಹ್ಯಾಕ್‌ ಮಾಡುವ ಮುನ್ನ ಒಮ್ಮೆ ನೀವೇ ಹಲವು ವರ್ಷಗಳಿಂದ ಬಳಸುತ್ತಿರುವ ಪಾಸ್‌ವರ್ಡ್‌ಗಳನ್ನು ಒಮ್ಮೆ ಹಾಗೆ ಸುರಕ್ಷತೆ ದೃಷ್ಟಿಯಿಂದ ಚೇಂಜ್‌ ಮಾಡುವುದು ಒಳ್ಳೆಯದು. ಯಾಕಂದ್ರೆ 2012 ಕ್ಕಿಂತ ಹೆಚ್ಚಾಗಿ ಇತ್ತೀಚೆಗೆ ಪ್ರೊಫೆನಲ್‌ಗಳ ಸಾಮಾಜಿಕ ತಾಣ ಖಾತೆಗಳು ಹೆಚ್ಚಾಗಿ ಹ್ಯಾಕ್‌ ಆಗುತ್ತಿರುವ ಬಗ್ಗೆ ವರದಿಯಾಗಿದೆ.

ಪಾಸ್‌ವರ್ಡ್‌ ಅನ್ನು ಏಕಾದ್ರು ಚೇಂಜ್‌ ಮಾಡಬೇಕು ಎಂದು ಹಲವರು ಪ್ರಶ್ನೆ ಕೇಳಬಹುದು. ಏಕಂದ್ರೆ ಪ್ರಪಂಚದ ಬೃಹತ್‌ ಸಾಮಾಜಿಕ ತಾಣ ಫೇಸ್‌ಬುಕ್‌(Facebook) ಸಿಇಓ 'ಮಾರ್ಕ್‌ ಜುಕರ್‌ಬರ್ಗ್‌'ರವರ 'ಪಿಂಟೆರೆಸ್ಟ್‌ ಮತ್ತು ಟ್ವಿಟರ್‌' ಖಾತೆಗಳನ್ನು ಹ್ಯಾಕ್‌ ಮಾಡಲಾಗಿದೆ. ಫೇಮಸ್‌ ಸಾಮಾಜಿಕ ತಾಣದ ಸಿಇಓ ಖಾತೆಗಳನ್ನೇ ಹ್ಯಾಕ್‌ ಮಾಡುವ ಹ್ಯಾಕರ್‌ಗಳು ಇನ್ನೂ ಸಾಮಾನ್ಯರ ಖಾತೆಗಳನ್ನು ಹ್ಯಾಕ್‌ ಮಾಡುವುದರರಲ್ಲಿ ಸಂಶಯವಿಲ್ಲ. ಹಾಗೇ ಅವರಿಗೆ ಕಷ್ಟವು ಅಲ್ಲ. ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಾರ್ಕ್‌ ಜುಕರ್‌ಬರ್ಗ್‌

ಮಾರ್ಕ್‌ ಜುಕರ್‌ಬರ್ಗ್‌

1

ಮಾರ್ಕ್‌ ಜುಕರ್‌ಬರ್ಗ್‌'ರವರ ಪಿಂಟೆರೆಸ್ಟ್‌ ಮತ್ತು ಟ್ವಿಟರ್‌ ಖಾತೆಗಳು ಹ್ಯಾಕ್‌ ಆಗಿದ್ದು ಸಂಪೂರ್ಣವಾಗಿ ವಿರೂಪಗೊಂಡಿವೆ. ಈ ಮಾಹಿತಿಯನ್ನು ಹ್ಯಾಕರ್‌ ಗುಂಪು ಲೀಕ್‌ ಮಾಡಲಾದ 'ಲಿಂಕ್ಡ್‌ಇನ್‌' ಲಿಂಕ್‌ ಆಧಾರಿತವಾಗಿ ಹೇಳಲಾಗಿದೆ.
ಫೇಸ್‌ಬುಕ್‌ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ?

OurMine ಹ್ಯಾಕಿಂಗ್ ಗುಂಪು

OurMine ಹ್ಯಾಕಿಂಗ್ ಗುಂಪು

2

ಹ್ಯಾಕಿಂಗ್‌ ಟೀಮ್‌ ' OurMine' ಸ್ವತಃ ಜುಕರ್‌ಬರ್ಗ್‌'ರವರ ಪಿಂಟೆರೆಸ್ಟ್‌ ಮತ್ತು ಟ್ವಿಟರ್‌ ಖಾತೆಗಳಲ್ಲೇ ಹ್ಯಾಕ್‌ ಮಾಡಿರುವ ಬಗ್ಗೆ ಧೈರ್ಯದಿಂದ ಬಡಾಯಿ ಕೊಚ್ಚಿಕೊಂಡಿದೆ. ಜುಕರ್‌ಬರ್ಗ್‌ರ ಖಾತೆಗಳಲ್ಲಿ ಈಗ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ತೆಗೆದುಹಾಕಲಾಗಿದೆ. OurMine ಖಾತೆಯನ್ನು ಟ್ವಿಟರ್ ರದ್ದುಗೊಳಿಸಿದ್ದು ಅದರ ಸ್ಕ್ರೀನ್‌ ಶಾಟ್‌ಗಳು ಮಾತ್ರ ಉಳಿದಿವೆ.
ಮೊಬೈಲ್‌ನಲ್ಲಿ ಫೇಸ್‌ಬುಕ್‌ ಮೆಸೇಜಿಂಗ್‌ ಫೀಚರ್‌ ಡಿಸೇಬಲ್‌

 OurMine ಹೇಳಿದ್ದೇನು?

OurMine ಹೇಳಿದ್ದೇನು?

3

'OurMine' ಹ್ಯಾಕರ್‌ ಗ್ರೂಪ್‌ ಮಾರ್ಕ್‌ ಜುಕರ್‌ಬರ್ಗ್‌'ರವರ ಇನ್‌ಸ್ಟಗ್ರಾಮ್‌ ಖಾತೆಯನ್ನು ಹ್ಯಾಕ್‌ ಮಾಡುವ ಬಗ್ಗೆ ಹೇಳಿದೆ. ಫೇಸ್‌ಬುಕ್‌ ಸಿಇಓ'ರನ್ನು ಮುಜುಗರಕ್ಕೀಡುಮಾಡಲು ಉದ್ದೇಶಿಸಲಾಗಿದೆ.

ಶಾಶ್ವತವಾಗಿ ಫೇಸ್‌ಬುಕ್‌ ಖಾತೆ ಡಿಲೀಟ್‌ ಮಾಡುವುದು ಹೇಗೆ?

ಚಿತ್ರ ಕೃಪೆ: Ben Hall ಟ್ವಿಟರ್‌ ಪೇಜ್‌

ಫೇಸ್‌ಬುಕ್ ವಕ್ತಾರ

ಫೇಸ್‌ಬುಕ್ ವಕ್ತಾರ

4

ಫೇಸ್‌ಬುಕ್‌ ವಕ್ತಾರ "ಇನ್‌ಸ್ಟಗ್ರಾಮ್‌ಖಾತೆ ಹ್ಯಾಕ್‌ ಮಾಡುವ ಹೇಳಿಕೆಯನ್ನು ವಿರೋಧಿಸಿದ್ದು, ಯಾವುದೇ ಫೇಸ್‌ಬುಕ್‌ ಸಿಸ್ಟಮ್‌ ಮತ್ತು ಖಾತೆಗಳನ್ನು ಹ್ಯಾಕ್‌ ಮಾಡಲು ಆಕ್ಸೆಸ್‌ ನೀಡಲಾಗುವುದಿಲ್ಲ. ಈಗಾಗಲೇ ಸಮಸ್ಯೆಗೊಳಗಾದ ಖಾತೆಗಳನ್ನು ಸುರಕ್ಷಿತಗೊಳಿಸಲಾಗಿದೆ" ಎಂದಿದ್ದಾರೆ.
'ಫೇಸ್‌ಬುಕ್‌ ಪೇಜ್‌' ಕ್ರಿಯೇಟ್ ಮಾಡುವುದು ಹೇಗೆ?

 ಬಳಕೆದಾರರು ಎಚ್ಚರ ವಹಿಸಿ

ಬಳಕೆದಾರರು ಎಚ್ಚರ ವಹಿಸಿ

5

ಮಾರ್ಕ್‌ ಜುಕರ್‌ಬರ್ಗ್‌'ರ ಸಾಮಾಜಿಕ ತಾಣ ಖಾತೆಗಳ ಖಾತೆ ಹ್ಯಾಕ್ ಆಗಿರುವ ಸಂಪೂರ್ಣ ಘಟನೆ ಆನ್‌ಲೈನ್ ಬಳಕೆದಾರರು ಹೆಚ್ಚು ಸುರಕ್ಷಿತರಾಗಿರಲು ಎಚ್ಚರ ವಹಿಸುತ್ತದೆ. ಸಾಮಾಜಿಕ ತಾಣ ಬಳಕೆದಾರರು ಹೆಚ್ಚು ನಟೋರಿಯಸ್‌ ಪಾಸ್‌ವರ್ಡ್‌ಗಳನ್ನು ನೀಡುವುದು, ಆಗಾಗೆ ಪಾಸ್‌ವರ್ಡ್‌ ಚೇಂಜ್‌ ಮಾಡುವುದು, ಎಲ್ಲಾ ಖಾತೆಗಳಿಗೂ ಬೇರೆ ಬೇರೆ ಪಾಸ್‌ವರ್ಡ್‌ ನೀಡುವುದು, ಮುಖ್ಯ ಇಮೇಲ್‌ ಐಡಿ'ಯನ್ನು ಇತರೆ ಖಾತೆಗಳಿಗೆ ನೀಡುವುದನ್ನು ತಪ್ಪಿಸಬೇಕಾಗಿದೆ.
ಫೇಸ್‌ಬುಕ್‌ ಬಳಸದವರನ್ನು ಟ್ರ್ಯಾಕ್ ಮಾಡಲಿದೆಯಂತೆ ಫೇಸ್‌ಬುಕ್‌

ಜುಕರ್‌ಬರ್ಗ್‌ ಬ್ಯಾಂಕ್‌ ಖಾತೆ

ಜುಕರ್‌ಬರ್ಗ್‌ ಬ್ಯಾಂಕ್‌ ಖಾತೆ

6

ಫೇಸ್‌ಬುಕ್‌ ಸಿಇಓ ಮಾರ್ಕ್‌ ಜುಕರ್‌ಬರ್ಗ್‌ ಹಿಂದಿನ ಸ್ಲೈಡರ್‌ನಲ್ಲಿ ತಿಳಿಸಿದ ಯಾವುದೇ ಅಂಶಗಳನ್ನು ಹೆಚ್ಚು ಫಾಲೋ ಮಾಡುತ್ತಿರಲಿಲ್ಲ. ಆದರೂ ಅವರ ಬ್ಯಾಂಕ್‌ ಖಾತೆಯನ್ನು ಹ್ಯಾಕರ್‌ಗಳು ಇದುವರೆಗೂ ಹ್ಯಾಕ್‌ ಮಾಡಿಲ್ಲ ಎಂದು ಹೇಳಲಾಗಿದೆ.

ಇತರರಿಗೆ ಎಚ್ಚರ

ಇತರರಿಗೆ ಎಚ್ಚರ

7

ಉನ್ನತ ಮಟ್ಟದ ಪ್ರೊಫೇಶನಲ್‌ಗಳ ಸಾಮಾಜಿಕ ತಾಣಗಳ ಖಾತೆ ಹ್ಯಾಕ್‌ ಆಗಿರುವುದು ಇತರರಿಗೆ ಎಚ್ಚರಿಕೆಯ ಪಾಠ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

 

English summary
Facebook CEO Mark Zuckerberg's Pinterest and Twitter Accounts Hacked. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot