ಮೊಬೈಲ್‌ನಲ್ಲಿ ಫೇಸ್‌ಬುಕ್‌ ಮೆಸೇಜಿಂಗ್‌ ಫೀಚರ್‌ ಡಿಸೇಬಲ್‌

By Suneel
|

ಪ್ರಪಂಚದ ಅತಿದೊಡ್ಡ ಸಾಮಾಜಿಕ ತಾಣ ಫೇಸ್‌ಬುಕ್‌(Facebook) ಮೊಬೈಲ್‌ ವೆಬ್‌ ಅಪ್ಲಿಕೇಶನ್‌ನಲ್ಲಿ ಮೆಸೇಜ್‌ ಮಾಡುವುದನ್ನು ಡಿಸೇಬಲ್‌ ಮಾಡುತ್ತಿದೆಯಂತೆ. ಮೊಬೈಲ್‌ ವೆಬ್‌ ಅಪ್ಲಿಕೇಶನ್‌ನಲ್ಲಿ ಮೆಸೇಜ್‌ ಕಳುಹಿಸುವ ಫೀಚರ್ ರೀಮೂವ್‌ ಮಾಡುವುದರ ಮುಖಾಂತರ ತನ್ನ ಬಳಕೆದಾರರನ್ನು ಫೇಸ್‌ಬುಕ್‌ ಮೆಸೇಂಜರ್ ಅಪ್ಲಿಕೇಶನ್‌ ಬಳಸುವಂತೆ ಮಾಡಲು ಈ ನಿರ್ಧಾರ ಕೈಗೊಂಡಿದೆ ಎಂದು ಮಾದ್ಯಮಗಳು ವರದಿ ಮಾಡಿವೆ.ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

'ಫೇಸ್‌ಬುಕ್‌ ಪೇಜ್‌' ಕ್ರಿಯೇಟ್ ಮಾಡುವುದು ಹೇಗೆ?

1

1

ಟೆಕ್‌ ವೆಬ್‌ಸೈಟ್ Techcrunch.com ವರದಿ ಪ್ರಕಾರ ಫೇಸ್‌ಬುಕ್‌ ತನ್ನ ಬಳಕೆದಾರರಿಗೆ "Your conversation are moving to messenger" ಎಂದು ನೋಟೀಸ್‌ ಮಾಡಿರುವ ಬಗ್ಗೆ ವರದಿ ಮಾಡಲಾಗಿದೆ.

2

2

ಪ್ರಸ್ತುತದಲ್ಲಿ ಫೇಸ್‌ಬುಕ್‌ ಮೊಬೈಲ್‌ ವೆಬ್‌ ಅಪ್ಲಿಕೇಶನ್‌ ಬಳಸುವವರು ಫೇಸ್‌ಬುಕ್ ನೋಟೀಸ್‌ ಅನ್ನು ಸ್ಕಿಪ್‌ ಮಾಡಬಹುದಾಗಿದ್ದು, ಶೀಘ್ರದಲ್ಲಿ ಮೆಸೇಂಜರ್‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

3

3

ಫೇಸ್‌ಬುಕ್‌ ಕಂಪನಿ ತನ್ನ ಬಳಕೆದಾರರಿಗೆ ಮೆಸೇಜಿಂಗ್‌ ಅಪ್ಲಿಕೇಶನ್‌ "ಫೇಸ್‌ಬುಕ್‌ ಮೆಸೇಂಜರ್" ವೇದಿಕೆಯಲ್ಲಿ ಉತ್ತಮ ಅನುಭವ ನೀಡುವ ಉದ್ದೇಶದಿಂದ ಈ ತೀರ್ಮಾನ ಕೈಗೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

4

4

ಗುರುವಾರ'ವಷ್ಟೆ ಫೇಸ್‌ಬುಕ್‌ ತನ್ನ ಹೊಸ ಬೆಳವಣಿಗೆಯಾದ ಆರ್ಟಿಫೀಸಿಯಲ್‌ ಇಂಟೆಲಿಜೆನ್ಸ್‌ ಸಿಸ್ಟಮ್‌ "Deep Text" ಅನ್ನು ಪ್ರಕಟಗೊಳಿಸಿದ್ದು, ಈ ಸಿಸ್ಟಮ್‌ 20 ಭಾಷೆಗಳಲ್ಲಿ ನಿಖರವಾಗಿ ಪೋಸ್ಟ್‌ನಲ್ಲಿ ಜನರು ಬರೆಯುವುದರ ಬಗ್ಗೆ ವಿಶ್ಲೇಷಣೆ ಮಾಡುತ್ತದೆ.

5

5

ಫೇಸ್‌ಬುಕ್‌ ಕಂಪನಿ ತನ್ನ ಮೆಸೇಂಜರ್ ಅಪ್ಲಿಕೇಶನ್‌ನಲ್ಲಿ 'Deep Learning-based text Understanding engine' ಅನ್ನು ಪರೀಕ್ಷೆ ನಡೆಸುತ್ತಿರುವ ಬಗ್ಗೆ ಮಾಹಿತಿ ಪ್ರಕಟಮಾಡಿದೆ.

6

6

ಪ್ರಪಂಚದಾದ್ಯಂತದ ಹಲವು ಫೇಸ್‌ಬುಕ್ ಮೊಬೈಲ್‌ ವೆಬ್‌ ಅಪ್ಲಿಕೇಶನ್‌ ಬಳಕೆದಾರರು ಮೆಸೇಜ್‌ ಅನ್ನು ಚೆಕ್‌ ಮಾಡಿದಾಗ ಅಲ್ಲಿ ಓದಬಹುದು, ಆದರೆ ಮೆಸೇಜ್‌ ಸಂಭಾಷಣೆ ಮೆಸೇಂಜರ್‌ಗೆ ಮೂವ್‌ ಆಗಿರುತ್ತದೆ ಎಂದು ಅವರ ಅನುಭವದ ಪ್ರಕಾರ ಹೇಳಲಾಗಿದೆ.

7

7

ಫೇಸ್‌ಬುಕ್ 2014 ರ ಹಿಂದೆ ಆಂಡ್ರಾಯ್ಡ್‌ ಮತ್ತು ಐಫೋನ್‌ಗಳಿಗೆ ಮುಖ್ಯ ಅಪ್ಲಿಕೇಶನ್‌ ನೀಡುವುದರ ಮುಖಾಂತರ ತನ್ನ ಇನ್‌ಸ್ಟಾಂಟ್‌ ಮೆಸೇಜಿಂಗ್ ಅಪ್ಲಿಕೇಶನ್‌ ಅನ್ನು ಸ್ಟಾಪ್‌ಮಾಡಿತ್ತು. ಕಂಪನಿಯ ಸ್ವತಂತ್ರ ಮೆಸೆಂಜರ್‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಲು ಪ್ರೇರೇಪಿಸಿತ್ತು.

8

8

ಫೇಸ್‌ಬುಕ್‌ 900 ದಶಲಕ್ಷ ತಿಂಗಳ ಆಕ್ಟೀವ್‌ ಬಳಕೆದಾರರನ್ನು ಮೆಸೇಜಿಂಗ್‌ ವಾಯ್ಸ್‌ ಕಾಲಿಂಗ್ ಮತ್ತು ಮೆಸೇಜಿಂಗ್‌ ಆಪ್ ಬಳಸುವವರನ್ನು ಹೊಂದಿರುವ ಬಗ್ಗೆ ಏಪ್ರಿಲ್‌ನಲ್ಲಿ ಮಾಹಿತಿ ನೀಡಿತ್ತು. ಶೀಘ್ರದಲ್ಲಿ ಫೇಸ್‌ಬುಕ್‌ ಮೊಬೈಲ್‌ ವೆಬ್‌ ಅಪ್ಲಿಕೇಶನ್‌ನಲ್ಲಿ ಮೆಸೇಜ್‌ ಡಿಸೇಬಲ್‌ ಮಾಡುವುದರಿಂದ ಇನ್ನು ಹೆಚ್ಚು ಫೇಸ್‌ಬುಕ್‌ ಮೆಸೇಂಜರ್ ಆಪ್‌ ಬಳಕೆದಾರರನ್ನು ಫೇಸ್‌ಬುಕ್‌ ಹೊಂದಲಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಫೇಸ್‌ಬುಕ್‌ ಬಳಸದವರನ್ನು ಟ್ರ್ಯಾಕ್ ಮಾಡಲಿದೆಯಂತೆ ಫೇಸ್‌ಬುಕ್‌ಫೇಸ್‌ಬುಕ್‌ ಬಳಸದವರನ್ನು ಟ್ರ್ಯಾಕ್ ಮಾಡಲಿದೆಯಂತೆ ಫೇಸ್‌ಬುಕ್‌

ಎಚ್ಚರ! ಈಕೆ ನಿಮ್ಮ ಫೇಸ್‌ಬುಕ್‌ನಲ್ಲಿದ್ದರೆ ಈಗಲೇ ಬ್ಲಾಕ್ ಮಾಡಿ ಎಚ್ಚರ! ಈಕೆ ನಿಮ್ಮ ಫೇಸ್‌ಬುಕ್‌ನಲ್ಲಿದ್ದರೆ ಈಗಲೇ ಬ್ಲಾಕ್ ಮಾಡಿ

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Most Read Articles
Best Mobiles in India

English summary
Facebook Disabling Messaging on Mobile Web. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X