ಭಾರತದಲ್ಲಿದ್ದಾರೆ ಹತ್ತು ಕೋಟಿ ಫೇಸ್‌ಬುಕ್‌ ಬಳಕೆದಾರರು

By Ashwath
|

ವಿಶ್ವದ ನಂಬರ್‌ ಒನ್‌ ಸೋಶಿಯಲ್‌ ನೆಟ್‌ವರ್ಕ್ ಫೇಸ್‌ಬುಕ್‌ನ್ನು ಭಾರತದಲ್ಲಿ ಬಳಸುವ ಬಳಕೆದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು,ಇದೀಗ ಹತ್ತು ಕೋಟಿ ಫೇಸ್‌ಬುಕ್‌ ಬಳಕೆದಾರರು ಭಾರತದಲ್ಲಿದ್ದಾರೆ.

ವಿಶ್ವದಲ್ಲಿ ಅತಿಹೆಚ್ಚು ಫೇಸ್‌ಬುಕ್‌ ಬಳಕೆ ಮಾಡುವ ದೇಶಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿದ್ದು,ಅಲ್ಲಿ 18.2ಕೋಟಿ ಜನ ಫೇಸ್‌‌ಬುಕ್‌‌ನ್ನು ಬಳಸುತ್ತಿದ್ದಾರೆ.

ಭಾರತದಲ್ಲಿ ಮಾರ್ಚ್‌ 31 ರಂದು ಹತ್ತು ಕೋಟಿ ಸಂಖ್ಯೆಯನ್ನು ದಾಟುವ ಮೂಲಕ ಹೊಸ ಮೈಲುಗಲ್ಲನ್ನು ಫೇಸ್‌ಬುಕ್‌ ಬರೆದಿದೆ ಎಂದು ಫೇಸ್‌ಬುಕ್‌ನ ಬೆಳವಣಿಗೆ ಮತ್ತು ವಿಶ್ಲೇಷಣೆ ವಿಭಾಗದ ಉಪಾಧ್ಯಕ್ಷ ಜೇವಿಯರ್ ಒಲಿವನ್‌(Javier Olivan,)ಎಕಾನಮಿಕ್ಸ್‌ ಟೈಮ್ಸ್‌ಗೆ ಹೇಳಿದ್ದಾರೆ.

 ಭಾರತದಲ್ಲಿದ್ದಾರೆ ಹತ್ತು ಕೋಟಿ  ಫೇಸ್‌ಬುಕ್‌ ಬಳಕೆದಾರರು

ಫೇಸ್‌ಬುಕ್‌ ಭಾರತದಲ್ಲಿ ತನ್ನ ಕಚೇರಿಯನ್ನು ತೆರೆದದ್ದು2010ರಲ್ಲಿ. ಆ ಸಂದರ್ಭದಲ್ಲಿ 80 ಲಕ್ಷ ಜನ ಫೇಸ್‌ಬುಕ್‌ನ್ನು ಬಳಸುತ್ತಿದ್ದರೆ ಈಗ ಮೊಬೈಲ್‌,ಸ್ಮಾರ್ಟ್‌ಫೋನ್‌‌ ಇಂಟರ್‌ನೆಟ್‌ನಿಂದಾಗಿ ನಾಲ್ಕು ವರ್ಷದಲ್ಲಿ ಈ ಸಂಖ್ಯೆ ಹತ್ತು ಕೋಟಿಗೆ ಏರಿದೆ ಎಂದು ಹೇಳಿದ್ದಾರೆ.

ಫೇಸ್‌ಬುಕ್‌ 2004ರಲ್ಲಿ ಆರಂಭಗೊಂಡಿದ್ದು ವಿಶ್ವದಲ್ಲಿ 123 ಕೋಟಿ ಜನ ಫೇಸ್‌ಬುಕ್‌‌ನ್ನು ಬಳಸುತ್ತಿದ್ದಾರೆ. ಫೇಸ್‌‌‌ಬುಕ್‌ ಬಳಸುವ ದೇಶಗಳ ಪೈಕಿ ಬ್ರಝಿಲ್‌(3),ಇಂಡೋನೇಷ್ಯಾ(4),ಮೆಕ್ಸಿಕೋ(5) ಭಾರತದ ನಂತರದ ಸ್ಥಾನದಲ್ಲಿದೆ.

ಫೇಸ್‌ಬುಕ್‌ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿದ್ದರೂ ವಿಶ್ವದ ಕೆಲವು ರಾಷ್ಟ್ರಗಳು ಫೇಸ್‌ಬುಕ್‌ ಬಳಕೆಗೆ ನಿಷೇಧ ಹೇರಿದೆ.ಬಾಂಗ್ಲಾದೇಶ,ಚೀನಾ,ಈಜಿಪ್ಟ್‌,ಇರಾನ್‌,ಮಾರಿಷಸ್‌, ಮೊರಕ್ಕೋ,ಸಿರಿಯಾ,ತಜಕಿಸ್ತಾನ್‌ನಲ್ಲಿ ಫೇಸ್‌ಬುಕ್‌ ಬಳಕೆಯನ್ನು ನಿಷೇಧಿಸಲಾಗಿದೆ.

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌.

ಇದನ್ನೂ ಓದಿ: 2014 ಸೋನಿ ಪೋಟೋಗ್ರಫಿ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಸುಂದರ ಫೋಟೋಗಳನ್ನು ನೋಡಿದ್ದೀರಾ?

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X