Subscribe to Gizbot

ಫೇಸ್‌ಬುಕ್‌ ಖಾತೆಗೆ ಮೊಬೈಲ್‌ ನಂಬರ್ ಜೋಡಣೆಗಾಗಿ ಪಾಕಿಸ್ತಾನ ಮನವಿ!!.ಏಕೆ ಗೊತ್ತಾ??

Written By:

ದ್ವೇಷ ಹರಡಲು ನಕಲಿ ಫೇಸ್‌ಬುಕ್‌ ಖಾತೆಗಳನ್ನು ಬಳಸುವುದನ್ನು ಪತ್ತೆ ಮಾಡಲು, ಫೇಸ್‌ಬುಕ್‌ ಬಳಕೆದಾರರ ಖಾತೆಗಳನ್ನು ಮೊಬೈಲ್‌ ಸಂಖ್ಯೆಯೊಂದಿಗೆ ಜೋಡಿಸುವಂತೆ ಪಾಕಿಸ್ತಾನ ಫೇಸ್‌ಬುಕ್‌ಗೆ ಮನವಿ ಮಾಡಿದೆ. ಆದರೆ, ಪಾಕಿಸ್ತಾನ ಸರ್ಕಾರ ಮಾಡಿದ ಮನವಿಯನ್ನು ಫೇಸ್‌ಬುಕ್‌ ನಿರಾಕರಿಸಿದೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ.!!

ಸರ್ಕಾರಕ್ಕೆ ನೆರವಾಗಲಿ ಎನ್ನುವ ಉದ್ದೇಶದಿಂದ ಈ ಸಲಹೆ ನೀಡಲಾಗಿತ್ತು ಎಂದು ಅಧಿಕಾರಿಯೋರ್ವರು ತಿಳಿಸಿದ್ದಾಗಿ ಡಾನ್‌ ಪತ್ರಿಕೆ ವರದಿಯಲ್ಲಿ ಹೇಳಿದೆ. ಫೇಸ್‌ಬುಕ್ ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರೂ ಸಹ, ಮೊಬೈಲ್‌ ಸಂಖ್ಯೆಯೊಂದಿಗೆ ಫೇಸ್‌ಬುಕ್‌ ಖಾತೆ ಜೋಡಣೆ ಸಲಹೆ 'ಅಸಾಧ್ಯ' ಎಂದು ಫೇಸ್‌ಬುಕ್‌ ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿದೆ.!!

ಫೇಸ್‌ಬುಕ್‌ ಖಾತೆಗೆ ಮೊಬೈಲ್‌ ನಂಬರ್ ಜೋಡಣೆಗಾಗಿ ಪಾಕಿಸ್ತಾನ ಮನವಿ!!.ಏಕೆ ಗೊತ್ತಾ?

ಫೇಸ್‌ಬುಕ್‌ ಖಾತೆಗಳನ್ನು ಬಳಕೆದಾರರ ಮೊಬೈಲ್‌ ಸಂಖ್ಯೆಯೊಂದಿಗೆ ಜೋಡಿಸಬೇಕು ಎಂದು ಪಾಕಿಸ್ತಾನ ಫೇಸ್‌ಬುಕ್‌ ಕಂಪೆನಿಗೆ ಸಲಹೆ ನೀಡಿತ್ತು. ಆದರೆ ಇ-ಮೇಲ್‌ ಜತೆಗೆ ಫೇಸ್‌ಬುಕ್‌ ಖಾತೆ ಜೋಡಿಸುವುದು ಹೆಚ್ಚು ಸುಲಭ ಎಂದು ಫೇಸ್‌ಬುಕ್‌ ಭಾವಿಸಿದೆ' ಎಂದು ಅಲ್ಲಿನ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಫೇಸ್‌ಬುಕ್‌ ಖಾತೆಗೆ ಮೊಬೈಲ್‌ ನಂಬರ್ ಜೋಡಣೆಗಾಗಿ ಪಾಕಿಸ್ತಾನ ಮನವಿ!!.ಏಕೆ ಗೊತ್ತಾ?

ಸಾಮಾಜಿಕ ಜಾಲತಾಣಗಳ ಮೂಲಕ ಫೇಸ್‌ಬುಕ್ ಬಳಕೆದಾರರು ದ್ವೇಷ ಹರಡುವಂತಹ ಹಾಗೂ ಮನೋಭಾವೆನೆಗಳನ್ನು ಕೆಡಿಸುವಂತಹ ಕಾರ್ಯಗಳು ಫೆಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ, ಅವುಗಳನ್ನು ತಡೆಗಟ್ಟಲು ಫೇಸ್‌ಬುಕ್‌ ಖಾತೆಗಳನ್ನು ಬಳಕೆದಾರರ ಮೊಬೈಲ್‌ ಸಂಖ್ಯೆಯೊಂದಿಗೆ ಜೋಡಿಸಬೇಕು ಎಂದು ಪಾಕಿಸ್ತಾನ ಕೇಳಿಕೊಂಡಿತ್ತು.!!

ಓದಿರಿ: ಮೈಕ್ರೋಸಾಫ್ಟ್‌ ಕೃತಕ ಬುದ್ದಿಮತ್ತೆಯ ಆಪ್ ಬಿಡುಗಡೆ!!..ಏನೆಲ್ಲಾ ಉಪಯೋಗ ಗೊತ್ತಾ?

English summary
A Pakistani official said the purpose of the request, turned down by Facebook, was to help the government deal with fake accounts.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot