ನೇಪಾಳಕ್ಕೆ ಫೇಸ್‌ಬುಕ್‌ನಿಂದ ಸಹಾಯ ಹಸ್ತ

Written By:

ನೇಪಾಳದಲ್ಲಿ ಸರಿಸುಮಾರು ಏಳು ಮಿಲಿಯನ್ ಜನರು ಫೇಸ್‌ಬುಕ್ ಅನ್ನು ಬಳಸಿ ತಮ್ಮ ಸ್ನೇಹಿತರನ್ನು ಮತ್ತು ಸಂಬಂಧಿಕರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಫೇಸ್‌ಬುಕ್ ಅಧಿಕೃತವಾಗಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದೆ.

ಓದಿರಿ: 11 ವರ್ಷದ ಫೇಸ್‌ಬುಕ್ ಗಮ್ಮತ್ತು ಏನೆಂಬುದು ಗೊತ್ತೇ?

ನೇಪಾಳಕ್ಕೆ ಫೇಸ್‌ಬುಕ್‌ನಿಂದ ಸಹಾಯ ಹಸ್ತ

ಇನ್ನು ಫೇಸ್‌ಬುಕ್ ಸಹಸ್ಥಾಪಕರಾಗಿರುವ ಮಾರ್ಕ್ ಜುಕರ್‌ಬರ್ಗ್ ಹೇಳುವಂತೆ "ನಾವು ತಾಣದಲ್ಲಿ 'ಸೇಫ್ಟಿ ಚೆಕ್" ಅನ್ನು ಕ್ರಿಯಾತ್ಮಕಗೊಳಿಸಿದ್ದು 7 ಮಿಲಿಯನ್‌ಗಿಂತಲೂ ಹೆಚ್ಚಿನ ಜನರನ್ನು ಸುರಕ್ಷಿತರು ಎಂದು ಗುರುತಿಸಲಾಗಿದೆ. 150 ಮಿಲಿಯನ್‌ಗಿಂತಲೂ ಹೆಚ್ಚಿನ ಸ್ನೇಹಿತರನ್ನು ಗುರುತಿಸಲಾಗಿದ್ದು ತಮ್ಮ ಸಂಬಂಧಿಕರನ್ನು ಗೆಳೆಯರನ್ನು ತಲುಪಲು ಇವರಿಗೆ ಸಹಾಯ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಓದಿರಿ: ದಿನಬಳಕೆಯ ಹರಿಕಾರ ಆಂಡ್ರಾಯ್ಡ್ ಬೆಸ್ಟ್ ಉತ್ಪನ್ನಗಳು

ನೇಪಾಳಕ್ಕೆ ಫೇಸ್‌ಬುಕ್‌ನಿಂದ ಸಹಾಯ ಹಸ್ತ

ಇನ್ನು ಫೇಸ್‌ಬುಕ್ ನಿಧಿ ಸಂಗ್ರಹಣಾ ಕಾರ್ಯವನ್ನು ತನ್ನ ತಾಣದಲ್ಲಿ ಮಾಡಿದ್ದು ಬರೇ ಎರಡು ದಿನಗಳಲ್ಲಿ ಅರ್ಧ ಮಿಲಿಯನ್‌ನಷ್ಟು ಜನರು ಪರಿಹಾರಾರ್ಥವಾಗಿ ಧನ ಸಹಾಯವನ್ನು ಮಾಡಿದ್ದಾರೆ. ಇದಕ್ಕೆ ಹೆಚ್ಚುವರಿಯಾಗಿ ಫೇಸ್‌ಬುಕ್ 2 ಮಿಲಿಯನ್ ಧನಸಹಾಯವನ್ನು ನೇಪಾಳ ಭೂಕಂಪದಲ್ಲಿ ನೊಂದವರಿಗೆ ನೀಡಲಿದೆ.

ಓದಿರಿ: ಶ್ಯೋಮಿ ಎಮ್ಐ 4i, ವೈಯು ಯುರೇಕಾ ಮತ್ತು ಲೆನೊವೊ ಎ7000 ಬೆಸ್ಟ್ ಯಾವುದು?

ಇನ್ನು ಭೂಕಂಪ ಪೀಡಿತ ವಲಯಗಳ ಅಭಿವೃದ್ಧಿಗಾಗಿ ತನ್ನಿಂದ ಆಗುವ ಎಲ್ಲಾ ನೆರವನ್ನು ಮಾಡುವುದಾಗಿ ವಾಟ್ಸಾಪ್ ಯಜಮಾನ ಫೇಸ್‌ಬುಕ್ ತಿಳಿಸಿದೆ. ಇನ್ನು ಫೇಸ್‌ಬುಕ್ ಬಳಕೆದಾರರು ತಮ್ಮಿಂದಾದಷ್ಟು ನೆರವನ್ನು ನೀಡುತ್ತಿದ್ದು ನಮ್ಮೊಂದಿಗೆ ಕೈಜೋಡಿಸುತ್ತಿರುವುದು ನಿಜಕ್ಕೂ ಹರ್ಷದಾಯಕವಾಗಿದೆ ಎಂದು ಜುಕರ್‌ಬರ್ಗ್ ತಿಳಿಸಿದ್ದಾರೆ.

English summary
Over seven million people in Nepal used Facebook to reach out to over 150 million friends and family members across the globe after last week's devastating earthquake, a company official said in a statement on Friday.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot