Subscribe to Gizbot

ಫೇಸ್‌ಬುಕ್‌ನಿಂದ ಇಂಡಿಯಾ ಎಲೆಕ್ಷನ್‌ ಟ್ರ್ಯಾಕರ್ ಆಪ್‌ ಬಿಡುಗಡೆ

Posted By:

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಜನರಲ್ಲಿ ಜಾಗೃತಿ ಮೂಡಿಸಲು ಫೇಸ್‌ಬುಕ್‌ ಹೊಸ ಆಪ್‌‌ ಬಿಡುಗಡೆ ಮಾಡಿದೆ. ಈ ಬಾರಿಯ ಚುನಾವಣೆಯಲ್ಲಿ ಮತದಾರ ಯಾವ ವಿಚಾರವನ್ನು ಗಮನದಲ್ಲಿಟ್ಟು ಮತದಾನ ಮಾಡುತ್ತಾನೆ ಎನ್ನುವುದನ್ನು ತಿಳಿಯಲು 'ಇಂಡಿಯಾ ಎಲೆಕ್ಷನ್‌ ಟ್ರ್ಯಾಕರ್ ' ಆಪ್‌ನ್ನು ಫೇಸ್‌‌‌‌ಬುಕ್‌ ತಯಾರಿಸಿದೆ.

ಶಿಕ್ಷಣ,ಉದ್ಯೋಗ,ಆರೋಗ್ಯ,ಭ್ರಷ್ಟಚಾರ ಒಟ್ಟು ನಾಲ್ಕು ಆಯ್ಕೆಗಳನ್ನು ಆಪ್‌‌ನಲ್ಲಿ ನೀಡಿದ್ದು ಬಳಕೆದಾರರು ಒಂದು ಆಯ್ಕೆಗೆ ಮತ ಚಲಾಯಿಸಿ ತಮ್ಮ ನಿರ್ಧಾರವನ್ನು ಶೇರ್‌ ಮಾಡಬಹುದಾಗಿದೆ.

ಫೇಸ್‌ಬುಕ್‌ನಿಂದ ಇಂಡಿಯಾ ಎಲೆಕ್ಷನ್‌ ಟ್ರ್ಯಾಕರ್ ಆಪ್‌ ಬಿಡುಗಡೆ

ಈ ಬಾರಿಯ ಚುನಾವಣೆಯಲ್ಲಿ ಸೋಶಿಯಲ್‌ ಮೀಡಿಯಾಗಳು ಬಾರಿ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಫೇಸ್‌ಬುಕ್‌ ಮತ್ತು ಗೂಗಲ್‌ ಈಗಾಗಲೇ ಚುನಾವಣೆ ಸಂಬಂಧ ಪ್ರತ್ಯೇಕ ವೆಬ್‌ ಪುಟಗಳನ್ನು ಆರಂಭಿಸಿದೆ.ರಾಜಕೀಯ ನಾಯಕರನ್ನು ಫಾಲೋಮಾಡಲು ಫೇಸ್‌ಬುಕ್‌ ಪ್ರತ್ಯೇಕ ಪೇಜ್‌ ಆರಂಭಿಸಿದ್ದು ಇಲ್ಲಿ ರಾಜಕೀಯ ನಾಯಕರ ಅಧಿಕೃತ ಖಾತೆ,ರಾಜಕೀಯ ಪಕ್ಷಗಳ ಲೈಕ್‌ ಪೇಜ್‌‌ಗಳನ್ನು ಬಳಕೆದಾರರು ಸುಲಭವಾಗಿ ವೀಕ್ಷಿಸಿ ರಾಜಕೀಯ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಇಂಡಿಯಾ ಎಲೆಕ್ಷನ್‌ ಟ್ರ್ಯಾಕರ್ ಆಪ್‌ನಲ್ಲಿ ವೋಟ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ:FacebookIndia/app

ಇದನ್ನೂ ಓದಿ: ಫೇಸ್‌‌ಬುಕ್‌ ಕೇಂದ್ರ ಕಚೇರಿ ಹೇಗಿದೆ ನೋಡಿದ್ದೀರಾ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot