ರಾಜಕೀಯ ನಾಯಕರನ್ನು ಫಾಲೋಮಾಡಲು ಫೇಸ್‌ಬುಕ್‌ನಿಂದ ಪ್ರತ್ಯೇಕ ಲಿಸ್ಟ್‌

By Ashwath
|

ಫೇಸ್‌‌ಬುಕ್‌ ಇಂಡಿಯಾ ಮುಂದಿನ ಲೋಕಸಭಾ ಚುನಾವಣೆ ವೇಳೆ ತನ್ನ ಬಳಕೆದಾರರಿಗೆ ರಾಜಕೀಯ ನಾಯಕರ ಮತ್ತು ರಾಜಕೀಯ ಪಕ್ಷಗಳ ಅಧಿಕೃತ ಖಾತೆಯ ಪೇಜ್‌ನ್ನು ಸುಲಭವಾಗಿ ವೀಕ್ಷಣೆ ಮತ್ತು ಫಾಲೋ ಮಾಡಲು ಪ್ರತ್ಯೇಕ ಪೇಜ್‌ ತೆರೆದಿದೆ.

ಈ ಪೇಜ್‌ನಲ್ಲಿ ಫೇಸ್‌‌ಬುಕ್‌‌ನಲ್ಲಿ ಅಕೌಂಟ್‌ ಹೊಂದಿರುವ ರಾಜಕೀಯ ನಾಯಕರು,ರಾಜಕೀಯ ಪಕ್ಷಗಳು ಅಪಲೋಡ್‌ ಮಾಡಿರುವ ಪೋಸ್ಟ್‌‌ಗಳನ್ನುಮಾತ್ರ ನೋಡಬಹುದಾಗಿದೆ.ಗೂಗಲ್‌ ಈಗಾಗಲೇ ರಾಜಕೀಯ ಸುದ್ದಿಗಳಿಗೆ ಪ್ರತ್ಯೇಕ ವೆಬ್‌ಸೈಟ್‌ ಓಪನ್‌ ಮಾಡಿದಂತೆ ಫೇಸ್‌ಬುಕ್‌ ಈಗ ರಾಜಕೀಯ ನಾಯಕರ ಪೋಸ್ಟ್‌‌ಗಳನ್ನು ವೀಕ್ಷಿಸಲು ಪ್ರತ್ಯೇಕ ಲಿಸ್ಟ್‌‌ ಓಪನ್‌ ಮಾಡಿದೆ.

ಮುಂದಿನ ಪುಟದಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರಿಗೆ ನೆರವಾಗಲು ಈಗಾಗಲೇ ಗೂಗಲ್‌,ಫೇಸ್‌ಬುಕ್‌,ಚುನಾವಣಾ ಆಯೋಗ ವಿಶೇಷ ಸೇವೆಯನ್ನು ಆರಂಭಿಸಿದೆ.ಜೊತೆಗೆ ಜೊತೆಗೆ ಎನ್‌ಆರ್‌ಐ ಸಾಫ್ಟ್‌ವೇರ್‌ಗಳು ವಿಶೇಷ ಅಪ್ಲಿಕೇಶನ್‌ಗಳ ರೂಪಿಸಿದ್ದಾರೆ. ಮುಂದಿನ ಪುಟದಲ್ಲಿ ಈ ಎಲ್ಲಾ ವಿಶೇಷ ಸೇವೆಗಳ ಮಾಹಿತಿಯಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಗೂಗಲ್ ಒಪ್ಪಂದದಿಂದ ಹಿಂದೆ ಸರಿದ ಚುನಾವಣಾ ಆಯೋಗ

 ಗೂಗಲ್‌ನಿಂದ ಪ್ರತ್ಯೇಕ ವೆಬ್‌ಸೈಟ್‌:

ಗೂಗಲ್‌ನಿಂದ ಪ್ರತ್ಯೇಕ ವೆಬ್‌ಸೈಟ್‌:


ಗೂಗಲ್‌ ಜನರಲ್ಲಿ ಚುನಾವಣಾ ಜಾಗೃತಿ ಮತ್ತು ಮಾಹಿತಿಗಾಗಿ ಹಿಂದಿ ಮತ್ತು ಇಂಗ್ಲಿಷ್‌‌ ಭಾಷೆಯಲ್ಲಿರುವ ಹೊಸ ವೆಬ್‌ಸೈಟ್‌ನ್ನು ಆರಂಭಿಸಿದೆ.ಈ ವೆಬ್‌ಸೈಟ್‌ನಲ್ಲಿ ವೋಟರ್‍ ಐಡಿ ಪಡೆದುಕೊಳ್ಳಲು ಬೇಕಾಗಿರುವ ಆರ್ಹ‌ತೆಗಳ ವಿವರ,ಕೇಂದ್ರ ಚುನಾವಣಾ ಆಯೋಗದ ವೆಬ್‌ಸೈಟ್‌, ರಾಜ್ಯ ಚುನಾವಣಾ ಆಯೋಗದ ವೆಬ್‌ಸೈಟ್‌ ಜೊತೆಗೆ ರಾಷ್ಟ್ರೀಯ ಪಕ್ಷಗಳ ಚುನಾವಣಾ ವೆಬ್‌ಸೈಟ್‌ಗಳ ಕೊಂಡಿಗಳಿವೆ.

 ಮೊಬೈಲ್‌ನಲ್ಲಿ ರಾಜಕೀಯ ನಾಯಕರ ಜಾತಕ!

ಮೊಬೈಲ್‌ನಲ್ಲಿ ರಾಜಕೀಯ ನಾಯಕರ ಜಾತಕ!


ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಅಭ್ಯರ್ಥಿ‌ಗಳ ಸಂಪೂರ್ಣ‌ ಮಾಹಿತಿಯನ್ನು ಜನರ ಮೊಬೈಲ್‌ಗೆ ಉಚಿತವಾಗಿ ತಲುಪಿಸಿ ಜಾಗೃತಿ ಮೂಡಿಸಲು ಆರಂಭಿಸಿದೆ.ಈ ಸಂಬಂಧ ಫೇಸ್‌ಬುಕ್‌ ಇಂಡಿಯಾ ಎಡಿಆರ್‌ ಸಂಸ್ಥೆಯೊಂದಿಗೆ ಕೈ ಜೋಡಿಸಿದ್ದು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಕ್ರಿಮಿನಲ್‌,ಆರ್ಥಿಕ,ಶೈಕ್ಷಣಿಕ‌, ವೃತ್ತಿ ಮಾಹಿತಿಯನ್ನು ಯುಎಸ್‌ಎಸ್‌ಡಿ ಮೆಸೇಜ್‌ ರೂಪದಲ್ಲಿ ಬಳಕೆದಾರನಿಗೆ ನೀಡಲಿದೆ.

 ರಿಜಿಸ್ಟರ್‌ ವೋಟ್‌ ಟೈಮ್‌ಲೈನ್‌:

ರಿಜಿಸ್ಟರ್‌ ವೋಟ್‌ ಟೈಮ್‌ಲೈನ್‌:


ಫೇಸ್‌‌ಬುಕ್‌‌ ಯುವ ಜನರಲ್ಲಿ ಮತದಾನದ ಮಹತ್ವವನ್ನು ಸಾರಲು 'ರಿಜಿಸ್ಟರ್‌ ವೋಟ್‌' ಎನ್ನುವ ಹೊಸ ವಿಶೇಷತೆಯಿರುವ ತನ್ನ ಟೈಮ್‌ಲೈನ್‌ ಈಗಾಗಲೇ ಆರಂಭಿಸಿದೆ.

 ಸ್ಮಾರ್ಟ್‌ಫೋನಲ್ಲಿ ಅರ್ಜಿ ತುಂಬಿ:

ಸ್ಮಾರ್ಟ್‌ಫೋನಲ್ಲಿ ಅರ್ಜಿ ತುಂಬಿ:


ಸ್ಮಾರ್ಟ್‌ಫೋನಲ್ಲೇ ಮತದಾರರ ಪಟ್ಟಿಯ ಅರ್ಜಿಯನ್ನು ತುಂಬಿ, ಸುಲಭವಾಗಿ ಚುನಾವಣೆಯ ನೋಂದಣಿ ಪ್ರಕ್ರಿಯೆಯನ್ನು ಮುಗಿಸಲು ವಿಶೇಷವಾದ ಆಂಡ್ರಾಯ್ಡ್‌ ಆಪ್‌ನ್ನು ಒವಿಬಿಐ ಸಂಘಟನೆಯವರು ತಯಾರಿಸಿದ್ದಾರೆ. ಹೊಸದಾಗಿ ವೋಟರ್‌ ಐಡಿ ಮಾಡಿಸಿಕೊಳ್ಳುವ ಆಂಡ್ರಾಯ್ಡ್‌ ಬಳಕೆದಾರರು ಈ ಆಪ್‌ ಮೂಲಕ ಅರ್ಜಿ‌ ತುಂಬಬಹುದಾಗಿದೆ.

 ವೆಬ್‌ಸೈಟ್‌ನಲ್ಲಿ ಹೆಸರು ಪರೀಕ್ಷಿಸಿಕೊಳ್ಳಿ:

ವೆಬ್‌ಸೈಟ್‌ನಲ್ಲಿ ಹೆಸರು ಪರೀಕ್ಷಿಸಿಕೊಳ್ಳಿ:

ಕರ್ನಾಟಕ ಚುನಾವಣಾ ಆಯೋಗ ತನ್ನ ವೆಬ್‌ಸೈಟ್‌ನಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳ ಮತದಾರರ ಪಟ್ಟಿಯನ್ನು ದಾಖಲಿಸಿದ್ದು ಕೇವಲ ಮೂವತ್ತು ಸೆಕೆಂಡ್‌ನಲ್ಲೇ ನೀವೇ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ/ಇಲ್ಲವೋ ಎಂಬುದನ್ನು ಪರೀಕ್ಷಿಸಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X