Subscribe to Gizbot

ಇನ್ಮುಂದೆ ಫೇಸ್‌ಬುಕ್ ಖಾತೆ ಹೊಂದಿಲ್ಲದಿದ್ದರೂ 'ಮೆಸೇಂಜರ್' ಬಳಸಬಹುದಂತೆ!?

Written By:

ಬಳಕೆದಾರರ ವೈಯಕ್ತಿಕ ಡೇಟಾ ಸೋರಿಕೆಯಾದ ನಂತರ ಫೇಸ್‌ಬುಕ್ ಭಾರೀ ಬದಲಾವಣೆ ಕಾಣುತ್ತಿದೆ. ಈ ಮೊದಲು ಫೇಸ್‌ಬುಕ್ ಬಳಕೆದಾರರಿಗೆ ಮಾತ್ರ ಮೆಸೇಂಜರ್ ಆಪ್ ಬಳಕೆ ಮಾಡುವ ಅವಕಾಶ ನೀಡಿದ್ದ ಫೇಸ್‌ಬುಕ್, ಇದೀಗ ಫೇಸ್‌ಬುಕ್ ಖಾತೆ ಹೊಂದಿಲ್ಲದಿದ್ದರೂ ಮೆಸೇಂಜರ್ ಆಪ್ ಬಳಕೆ ಮಾಡುವಂತಹ ಆಯ್ಕೆ ತರಲಿದೆ ಎನ್ನಲಾಗಿದೆ.

ಟೆಕ್‌ಸೈಟ್‌ಗಳು ಈ ಬಗ್ಗೆ ವರದಿ ಮಾಡಿದ್ದು, ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್ ತನ್ನ ಮುಂಬರುವ ಮೆಸೇಂಜರ್ ಆಪ್‌ಡೇಟ್‌ನಲ್ಲಿ ಫೇಸ್‌ಬುಕ್‌ನಿಂದ ಮೆಸೇಂಜರ್ ಅನ್ನು ದೂರಮಾಡಲಿದೆ ಎಂದು ಹೇಳಿವೆ. ಹಾಗಾಗಿ, ಇನ್ಮುಂದೆ ಫೇಸ್‌ಬುಕ್ ಬಳಕೆದಾರರ ಜೊತೆಗೆ ಫೇಸ್‌ಬುಕ್ ಬಳಕೆದಾರರಲ್ಲದವರೂ ಕೂಡ ಮೆಸೇಂಜರ್ ಬಳಸಬಹುದು ಎಂದು ತಿಳಿಸಿವೆ.

ಇನ್ಮುಂದೆ ಫೇಸ್‌ಬುಕ್ ಖಾತೆ ಹೊಂದಿಲ್ಲದಿದ್ದರೂ 'ಮೆಸೇಂಜರ್' ಬಳಸಬಹುದಂತೆ!?

ಆದರೆ, ಬಳಕೆದಾರರಲ್ಲದವರೂ ಕೂಡ ಮೆಸೇಂಜರ್ ಬಳಸಬಹುದಾದ ಆಯ್ಕೆ ಬಗ್ಗೆ ಫೇಸ್‌ಬುಕ್ ಕಂಪೆನಿ ಯಾವುದೇ ಮಾಹಿತಿಯನ್ನು ಬಿಟ್ಟುಕೊಟಟಿಲ್ಲದಿರುವುದರಿಂದ ಇದು ರೂಮರ್ಸ್ ಆಗಿರಬಹುದು ಎಂದು ಸಹ ಹೇಳಲಾಗುತ್ತಿದೆ. ಏಕೆಂದರೆ, ಮೆಸೇಂಜರ್ ಆಪ್‌ನಲ್ಲಿ ಅಪ್‌ಡೇಟ್ ತರುತ್ತಿರುವ ಮಾಹಿತಿಗಳನ್ನು ಫೇಸ್‌ಬುಕ್ ಈಗಾಗಲೇ ನೀಡಿದೆ.

How to view all photos, pages, comments and posts you liked on Facebook (KANNADA)

ವರ್ಷದ ಪ್ರಾರಂಭದಲ್ಲಿ ಮೆಸೆಂಜರ್ ಮೂಲಕ ಫೋಟೊಗಳು, ವಿಡಿಯೋ, ಸ್ಟಿಕರ್, ಜಿಫ್ ಗಳನ್ನು ಕಳಿಸುವ ಸೌಲಭ್ಯವನ್ನು ಒದಗಿಸಿದ್ದ ಫೇಸ್‌ಬುಕ್, ಇದೀಗ ಮೆಸೇಂಜರ್ ಆಪ್ ಅನ್ನು ಮತ್ತಷ್ಟು ಆಕರ್ಷಕವಾಗಿಸಲು ಮುಂದಿನ ದಿನಗಳಲ್ಲಿ ಫೇಸ್ ಬುಕ್ ಮೆಸೆಂಜರ್ ಮೂಲಕ 360 ಡಿಗ್ರಿ ಫೋಟೊ ಹಾಗೂ ಹೆಚ್ ಡಿ ವಿಡಿಯೋಗಳನ್ನು ಕಳಿಸುವ ಸೌಲಭ್ಯವನ್ನು ಫೇಸ್‌ಬುಕ್ ನೀಡಲಿದೆ.

ಇನ್ಮುಂದೆ ಫೇಸ್‌ಬುಕ್ ಖಾತೆ ಹೊಂದಿಲ್ಲದಿದ್ದರೂ 'ಮೆಸೇಂಜರ್' ಬಳಸಬಹುದಂತೆ!?

ಒಟ್ಟಿನಲ್ಲಿ ಟೆಕ್‌ಸೈಟ್‌ಗಳು ವರದಿ ಮಾಡಿರುವಂತೆ ಬಳಕೆದಾರರಲ್ಲದವರೂ ಕೂಡ ಮೆಸೇಂಜರ್ ಬಳಸಬಹುದಾದ ಆಯ್ಕೆ ಫೇಸ್‌ಬುಕ್ ಹೇಳುವತನಕ ಗಾಳಿಮಾತಾಗಿಯೇ ಇರಲಿದೆ. ಏಕೆಂದರೆ, ಈ ವರೆಗೂ ಫೇಸ್‌ಬುಕ್‌ನಿಂದ ಮೆಸೇಂಜರ್ ಅನ್ನು ದೂರಮಾಡಿಕೊಳ್ಳುವ ಯಾವುದೇ ಯೋಚನೆಯನ್ನು ಫೇಸ್‌ಬುಕ್ ಮಾಡಿಕೊಮಡಿದೆ ಎಂದರೆ ನಂಬುವವರಿಲ್ಲ.!!

ಓದಿರಿ: ಯಾವ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಎಂದು ಮೊಬೈಲ್‌ನಲ್ಲಿಯೇ ತಿಳಿಯುವುದು ಹೇಗೆ?

English summary
The latest update to Facebook’s Messenger app will let you use it even if you don’t have (or want) an account for the social-media platform.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot