ಮುಂದಿನ ವರ್ಷ ಇನ್ನಷ್ಟು ಸೆಕ್ಯೂರ್‌ ಫೀಚರ್ಸ್‌ ಪರಿಚಯಿಸಲು ಫೇಸ್‌ಬುಕ್‌ ಸಿದ್ಧತೆ!

|

ಸಾಮಾಜಿಕ ಜಾಲತಾಣಗಳ ದೈತ್ಯ ಫೇಸ್‌ಬುಕ್‌ ತನ್ನ ವಿಶೇಷ ಫೀಚರ್ಸ್‌ಗಳ ಮೂಲಕ ಬಳಕೆದಾರರಿಂದ ಮೆಚ್ಚುಗೆ ಪಡೆದಿದೆ. ಈಗಾಲೇ ಹಲವು ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸಿರುವ ಫೇಸ್‌ಬುಕ್‌ ಬಳಕೆದಾರರ ಪ್ರೈವೆಸಿ ಸೆಕ್ಯೂರ್‌ಗಾಗಿ ಹಲವು ಫೀಚರ್ಸ್‌ಗಳನ್ನ ಪರಿಚಯಿಸಿದೆ. ಇದೀಗ ಮುಂದಿನ ವರ್ಷದಿಂದ ಫೇಸ್‌ಬುಕ್‌ ಮೊಬೈಲ್ ಅಪ್ಲಿಕೇಶನ್‌ಗೆ ಲಾಗ್ ಇನ್ ಆಗುವ ಮೊದಲು ಬಳಕೆದಾರರು ತಮ್ಮ ಗುರುತನ್ನು ಪರಿಶೀಲಿಸುವುದಕ್ಕೆ ಹೊಸ ಮಾರ್ಗವನ್ನು ಪರಿಚಯಿಸುವುದಾಗಿದೆ ಹೇಳಿದೆ. ಇದಕ್ಕಾಗಿ ಭೌತಿಕ ಭದ್ರತಾ ಕೀಲಿಗಳನ್ನು ಸೆಟ್‌ ಮಾಡಲು ಅವಕಾಶ ನೀಡುವುದಾಗಿ ಫೇಸ್‌ಬುಕ್ ತಿಳಿಸಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ತನ್ನ ಬಳಕೆದಾರರಿಗೆ ಮುಂದಿನ ವರ್ಷದಿಂದ ಹೊಸ ಅವಕಾಶವನ್ನು ಕಲ್ಪಿಸಲು ಮುಂದಾಗಿದೆ. ಅದರಂತೆ ಪ್ರತಿ ಲಾಗ್-ಇನ್ ಮಾಡುವ ಮೊದಲು ಡೆಸ್ಕ್‌ಟಾಪ್ ಕಂಪ್ಯೂಟರ್‌ಗೆ ಕನೆಕ್ಟ್‌ ಮಾಡಲು ಹಾರ್ಡ್‌ವೇರ್ ಭದ್ರತಾ ಕೀಲಿಯ ಅಗತ್ಯವಿರುವ ಆಯ್ಕೆಯನ್ನು ಕಂಪನಿಯು ಪ್ರಸ್ತುತ ನೀಡಲಿದೆ. ಬಳಕೆದಾರರು ಚಿಲ್ಲರೆ ವ್ಯಾಪಾರಿಗಳಿಂದ ಹಾರ್ಡ್‌ವೇರ್ ಕೀಲಿಯನ್ನು ಖರೀದಿಸಬಹುದು ಮತ್ತು ಅದನ್ನು ಫೇಸ್‌ಬುಕ್‌ನಲ್ಲಿ ನೋಂದಾಯಿಸಬಹುದು ಎಂದು ಕಂಪನಿ ತಿಳಿಸಿದೆ. ಇನ್ನುಳಿದಂತೆ ಈ ಸೆಕ್ಯೂರಿಟಿ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್

ಫೇಸ್‌ಬುಕ್‌ ಬಳಕೆದಾರರ ಅನುಕೂಲಕ್ಕಾಗಿ ಹಲವು ಫೀಚರ್ಸ್‌ಗಳನ್ನ ಪರಿಚಯಿಸುತ್ತಿದೆ. ಸದ್ಯ ಹೆಚ್ಚಿನ ಬಳಕೆದಾರರಿಗಾಗಿ ಭೌತಿಕ ಕೀಲಿಗಳ ಮೂಲಕ ದೃಡೀಕರಣವನ್ನು ಪರಿಚಯಿಸುವುದಕ್ಕೆ ಮುಂದಾಗಿದೆ. ಮುಂದಿನ ವರ್ಷ ಜಾಗತಿಕವಾಗಿ ಹೆಚ್ಚಿನ ರೀತಿಯ ಖಾತೆಗಳಿಗೆ ಹಾಗೂ ಉನ್ನತ ಮಟ್ಟದ ಖಾತೆಗಳಿಗಾಗಿ ಅದರ ಭದ್ರತಾ ಕಾರ್ಯಕ್ರಮವಾದ ಫೇಸ್‌ಬುಕ್ ಪ್ರೊಟೆಕ್ಟ್ ಅನ್ನು ವಿಸ್ತರಿಸಲು ಯೋಜಿಸಿದೆ.

ಫೇಸ್ಬುಕ್

ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಈ ಫೀಚರ್ಸ್‌ ಲಭ್ಯವಿದೆ. ಫೇಸ್ಬುಕ್ ಪ್ರೊಟೆಕ್ಟ್ ರಾಜಕಾರಣಿಗಳು, ಸರ್ಕಾರಿ ಸಂಸ್ಥೆಗಳು ಮತ್ತು ಚುನಾವಣಾ ಸಿಬ್ಬಂದಿಗೆ ಹೆಚ್ಚುವರಿ ಸುರಕ್ಷತಾ ನಿಬಂಧನೆಗಳನ್ನು ಸ್ಥಾಪಿಸಲು ಒಂದು ಮಾರ್ಗವನ್ನು ನೀಡಿದೆ. ಅಲ್ಲದೆ ಎರಡು ಅಂಶಗಳ ದೃಡೀಕರಣ ಮತ್ತು ಸಂಭಾವ್ಯ ಹ್ಯಾಕಿಂಗ್ ಬೆದರಿಕೆಗಳಿಗೆ ನೈಜ-ಸಮಯದ ಮೇಲ್ವಿಚಾರಣೆಯನ್ನು ನಡೆಸಲಿದೆ. ಅತ್ಯಾಧುನಿಕ ಹ್ಯಾಕರ್‌ಗಳಿಂದ ಗುರಿಯಾಗುವ ಅಪಾಯದಲ್ಲಿರುವ ಪತ್ರಕರ್ತರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರಂತಹ ಬಳಕೆದಾರರಿಗೆ ಇದು ಈಗ ಲಭ್ಯವಾಗಲಿದೆ ಎಂದು ಫೇಸ್‌ಬುಕ್ ತಿಳಿಸಿದೆ.

ಅಪ್ಲಿಕೇಶನ್

ಇನ್ನು ತಮ್ಮ ಖಾತೆಗೆ ಭೌತಿಕ ಭದ್ರತೆಯನ್ನು ಹೊಂದಿಸಲು ಬಯಸುವ ಬಳಕೆದಾರರು ಮೊದಲು ಪಠ್ಯ ಸಂದೇಶ ಅಥವಾ ಮೂರನೇ ವ್ಯಕ್ತಿಯ ದೃಡೀಕರಣ ಅಪ್ಲಿಕೇಶನ್ ಮೂಲಕ ಎರಡು ಅಂಶಗಳ ದೃಡೀಕರಣವನ್ನು ಸಕ್ರಿಯಗೊಳಿಸಬೇಕಾಗುತ್ತದೆ ಎಂದು ಫೇಸ್‌ಬುಕ್ ಹೇಳಿದೆ. ನಂತರ ಬಳಕೆದಾರರು ಯುನಿವರ್ಸಲ್ 2 ನೇ ಫ್ಯಾಕ್ಟರ್ (U2F) ಹೊಂದಾಣಿಕೆಯ ಭದ್ರತಾ ಕೀಲಿಯನ್ನು ದೃಡೀಕರಣ ವಿಧಾನವಾಗಿ ಸೇರಿಸಬಹುದು ಮತ್ತು ಅವರ ಖಾತೆಗಳಿಗೆ ಲಾಗ್ ಇನ್ ಮಾಡುವಾಗ ಅದನ್ನು ಬಳಸಬಹುದಾಗಿದೆ.

Best Mobiles in India

English summary
Facebook currently gives users the option to verify their account via physical security keys on computers.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X