ಇನ್ನು ಮುಂದೆ ಫೇಸ್‌ಬುಕ್‌ನಲ್ಲಿ ಸುದ್ದಿ ಹುಡುಕುವುದು ಸುಲಭ

Written By:

ಸುದ್ದಿಗಳ ಲಿಂಕ್‌ಗಳನ್ನು ಶೇರ್‌‌ ಮಾಡುತ್ತಿರುವ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಫೇಸ್‌ಬುಕ್‌ ಈಗ,ಪ್ರಮುಖ ಸುದ್ದಿ ವೆಬ್‌ಸೈಟ್‌‌ಗಳು ಪೋಸ್ಟ್‌‌ ಮಾಡಿರುವ ಸುದ್ದಿಗಳನ್ನು ಬಳಕೆದಾರರು ಸುಲಭವಾಗಿ ನೋಡುವಂತಾಗಲು ಹೊಸ ವಿಶೇಷತೆಯನ್ನು ಸೇರಿಸಲು ಮುಂದಾಗುತ್ತಿದೆ.

ಇಲ್ಲಿಯವರೆಗೆ ಫೇಸ್‌‌ಬುಕ್‌‌ನಲ್ಲಿ ಒಂದು ಸುದ್ದಿ ವೆಬ್‌ಸೈಟ್‌ ಸುದ್ದಿಯನ್ನು ಪೋಸ್ಟ್‌ ಮಾಡಿದ್ದರೆ, ಆ ಸುದ್ದಿ ಕೇವಲ ಸ್ನೇಹಿತರಿಗೆ ಮತ್ತು ಪೇಜ್‌ ಲೈಕ್‌ ಮಾಡಿರುವ ಬಳಕೆದಾರ ವಾಲ್‌ನಲ್ಲಿ ಮಾತ್ರ ಕಾಣುತಿತ್ತು. ಆದರೆ ಇನ್ನು ಮುಂದೆ ಸುದ್ದಿ ವೆಬ್‌ಸೈಟ್‌ ಪೋಸ್ಟ್‌ ಮಾಡಿರುವ ನ್ಯೂಸ್‌ನ ಜೊತೆಗೆ ಉಳಿದ ವೆಬ್‌ಸೈಟ್‌ಗಳು ಅದೇ ಸುದ್ದಿಯನ್ನು ಪೋಸ್ಟ್‌‌ ಮಾಡಿದ್ದರೆ ಆ ಸುದ್ದಿಗಳನ್ನು ಬಳಕೆದಾರ ನೋಡಬಹುದಾಗಿದೆ. ಪೋಸ್ಟ್‌ ಆಗಿರುವ ಸುದ್ದಿಯ ಕೆಳಗಡೆಯೇ ಉಳಿದ ಪ್ರಮುಖ ಸುದ್ದಿ ವೆಬ್‌ಸೈಟ್‌ಗಳ ಪೋಸ್ಟ್‌ಗಳನ್ನು ನೋಡುವ ಹೊಸ ವಿಶೇಷತೆಯನ್ನು ಸೇರಿಸಲು ಫೇಸ್‌ಬುಕ್‌ ಚಿಂತನೆ ನಡೆಸಿದೆ.

ಇನ್ನು ಮುಂದೆ ಫೇಸ್‌ಬುಕ್‌ನಲ್ಲಿ ಸುದ್ದಿ ಹುಡುಕುವುದು ಸುಲಭ

ಫೇಸ್‌‌ಬುಕ್‌ ಈ ಹಿಂದೆ ಟ್ರೆಂಡಿಂಗ್ ಸುದ್ದಿಗಳಿಗಾಗಿ ಹ್ಯಾಶ್‌ ಟ್ಯಾಗ್‌ನ್ನು ವಿಶೇಷತೆಯನ್ನು ಸೇರಿಸಿತ್ತು.ಆದರೆ ಈ ವಿಶೇಷತೆ ಟ್ಟೀಟರ್‌ ಮತ್ತು ಗೂಗಲ್ ಪ್ಲಸ್‌ನಲ್ಲಿ ಯಶಸ್ವಿಯಾದಂತೆ ಫೇಸ್‌ಬುಕ್‌‌ನಲ್ಲಿ ಅಷ್ಟೇನು ಯಶಸ್ವಿಯಾಗುತ್ತಿಲ್ಲ ಎನ್ನವ ಮಾತುಗಳು ಕೇಳಿ ಬಂದಿತ್ತು.ಈ ಕಾರಣಕ್ಕಾಗಿ ಫೇಸ್‌‌‌ಬುಕ್‌ ಹೊಸ ವಿಶೇಷತೆಯನ್ನು ಸೇರಿಸಲು ಮುಂದಾಗುತ್ತಿದೆ.

ಈ ಕಾರಣದ ಜೊತೆಗೆ ಈ ವಿಶೇಷತೆಯನ್ನು ಸೇರಿಸಲು ಇನ್ನೂ ಒಂದು ಕಾರಣವಿದೆ. ಗೂಗಲ್‌ ಪ್ಲಸ್‌ನಲ್ಲಿ ಶೇ‌ರ್‌ ಆಗಿರುವ ಸುದ್ದಿಗಳನ್ನು ಗೂಗಲ್‌ ತನ್ನ ನ್ಯೂಸ್‌‌ ವಿಭಾಗದಲ್ಲಿ ಬೇಗನೆ ಕಾಣುವಂತೆ ಮಾಡುತ್ತದೆ.ಆ ಕಾರಣಕ್ಕಾಗಿ ಬಹುತೇಕ ಸುದ್ದಿ ವೆಬ್‌ಸೈಟ್‌‌ಗಳು ಸುದ್ದಿ ಅಪ್‌ಲೋಡ್‌ ಆದ ಕೂಡಲೇ ಗೂಗಲ್‌ ಪ್ಲಸ್‌ನಲ್ಲಿ ಸುದ್ದಿಗಳನ್ನು ಶೇರ್‌ ಮಾಡುತ್ತವೆ. ಆದರೆ ಫೇಸ್‌ಬುಕ್‌ನಲ್ಲಿ ಶೇರ್‌ ಆಗಿರುವ ಸುದ್ದಿಗಳನ್ನು ಗೂಗಲ್‌ ಯಾವುದೇ ಕಾರಣಕ್ಕೂ ತನ್ನ ನ್ಯೂಸ್‌‌ ವಿಭಾಗದಲ್ಲಿ ತೆಗೆದುಕೊಳ್ಳುವುದಿಲ್ಲ.ಇದರಿಂದಾಗಿ ಫೇಸ್‌ಬುಕ್‌ ತನ್ನಲ್ಲೇ ಒಂದು ನ್ಯೂಸ್‌ ಫೀಡ್‌ ನೀಡಲು ಈ ಹೊಸ ವಿಶೇಷತೆಯನ್ನು ಸೇರಿಸಲು ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಸದ್ಯಕ್ಕೆ ಇನ್ನೂ ಈ ವಿಶೇಷತೆ ಆರಂಭಗೊಂಡಿಲ್ಲ.ಮುಂದಿನ ಕೆಲವು ದಿನಗಳಲ್ಲಿ ಫೇಸ್‌‌ಬುಕ್‌‌ ಈ ವಿಶೇಷತೆಯನ್ನು ಆರಂಭಿಸಲಾಗುವುದು ಎಂದು ಫೇಸ್‌ಬುಕ್‌ ತನ್ನ ನ್ಯೂಸ್ ರೂಮ್‌ನಲ್ಲಿ ಹೇಳಿದೆ.

ಇದನ್ನೂ ಓದಿ: ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು ಎಂದು ಗೂಗಲ್‌ನ್ನು ಕೇಳಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot