ಡ್ರೋನ್‌ ಮೂಲಕ ಇಂಟರ್‌ನೆಟ್‌: ಫೇಸ್‌‌ಬುಕ್‌ ಯೋಜನೆ

By Ashwath
|

ಇಂಟರ್‌ನೆಟ್‌ನ್ನು ಕಡಿಮೆ ಬೆಲೆಯಲ್ಲಿ ವಿಶ್ವದೆಲ್ಲೆಡೆ ನೀಡಲು ಫೇಸ್‌ಬುಕ್‌ ಮುಂದಾಗುತ್ತಿದ್ದು ಇದಕ್ಕಾಗಿ ವಿಶೇಷ ಮಾನವ ರಹಿತ ಸೋಲಾರ್‌ವಿಮಾನವನ್ನು ನಿರ್ಮಿಸಲು ಯೋಜನೆ ರೂಪಿಸಿದೆ.

ಫೇಸ್‌‌ಬುಕ್‌ ಸಂಸ್ಥಾಪಕ ಮಾರ್ಕ್‌‌ಜುಕರ್‌ಬರ್ಗ್‌ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದು ನಾಸಾದ Jet Propulsion Lab, Ames Research Center ತಜ್ಞರು ಈ ಯೋಜನೆಗೆ ಸಹಕರಿಸಲಿದ್ದಾರೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಮಾನವ ರಹಿತ ಸೋಲಾರ್‌ವಿಮಾನ ತಯಾರಕಾ Ascenta ಕಂಪೆನಿಯ ತಜ್ಞರನ್ನು ಈ ಯೋಜನೆಗಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ವಿಶ್ವದೆಲ್ಲೆಡೆ ಇಂಟರ್‌ನೆಟ್‌ನ್ನುಕಡಿಮೆ ಬೆಲೆಯಲ್ಲಿ ತಲುಪಿಸುವಂತಾಗಲು ವಿಶ್ವದ ಟೆಕ್‌ ದಿಗ್ಗಜ ಕಂಪೆನಿಗಳಾದ ಫೇಸ್‌ಬುಕ್‌‌, ಎರಿಕ್‌ಸನ್‌‌,ಮಿಡಿಯಾಟೆಕ್‌‌‌‌,ನೋಕಿಯಾ,ಒಪೆರಾ,ಕ್ವಾಲಕಂ ಕಂಪೆನಿಗಳು 2013 ಅಗಸ್ಟ್‌‌ 20 ರಂದು Internet.org ಹೆಸರಿನಲ್ಲಿ ಒಂದು ಸಂಘಟನೆಯನ್ನು ಸ್ಥಾಪಿಸಿದೆ.

ಈ ಸಂಘಟನೆಯ ಮುಖ್ಯ ಪಾಲುದಾರ ಫೇಸ್‌ಬುಕ್‌ ಆಗಿದ್ದು,ಯೋಜನೆಗೆ ಸಂಬಂಧಿಸಿದಂತೆ ಮಾನವ ರಹಿತ ವಿಮಾನ ತಯಾರಿಕ ಕಂಪೆನಿ ಟೈಟಾನ್‌ ಏರೋಸ್ಪೇಸ್‌ ಜೊತೆಗೆ ಮಾತುಕತೆ ನಡೆಸಿದ್ದು,ಈ ಕಂಪೆನಿಯನ್ನೇ ಖರೀದಿಸಲು ಫೇಸ್‌ಬುಕ್‌ ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಟೈಟಾನ್‌ ಏರೋಸ್ಪೇಸ್‌ ಈಗಾಗಲೇ ಎರಡು ಮಾನವ ರಹಿತ ವಿಮಾನ(Uunmanned Aerial Vehicles) ಮಾದರಿ ತಯಾರಿಸಿದೆ. ಸೋಲಾರಾ 50 ಮತ್ತು ಸೋಲಾರಾ 60 ಹೆಸರಿನ ಎರಡು ಡ್ರೋನ್‌ ಮಾದರಿಗಳನ್ನು ಟೈಟಾನ್‌ ಏರ್‌ಸ್ಪೇಸ್‌ ಅಭಿವೃದ್ಧಿ ಪಡಿಸಿದೆ.

ಗೂಗಲ್‌ನ ಕಡಿಮೆ ಬೆಲೆಯಲ್ಲಿ ಇಂಟರ್‌ನೆಟ್‌ ಸೇವೆ ನೀಡುವ ಪ್ರೊಜೆಕ್ಟ್‌ ಲೂನ್‌ಗೆ‌ ಪ್ರತಿಯಾಗಿ ಟೆಕ್‌ ಕಂಪೆನಿಗಳು Internet.org ಆರಂಭಿಸಿದ್ದು,ಗೂಗಲ್‌ ಪ್ರೊಜೆಕ್ಟ್‌ ಲೂನ್‌‌ನಲ್ಲಿ ಬಲೂನ್‌ ಹಾರಿಸಿ ಇಂಟರ್‌ನೆಟ್‌ ಸಿಗ್ನಲ್‌ ಪಡೆಯುವ ವ್ಯವಸ್ಥೆ ಇದ್ದರೆ, Internet.orgನಲ್ಲಿ ಮಾನವ ರಹಿತ ವಿಮಾನಗಳ ಮೂಲಕ ಇಂಟರ್‌ನೆಟ್‌ ಸಿಗ್ನಲ್‌ ಕಳುಹಿಸಲಾಗುತ್ತದೆ.

ಡ್ರೋನ್‌ ಮೂಲಕ ಇಂಟರ್‌ನೆಟ್‌: ಫೇಸ್‌‌ಬುಕ್‌ ಯೋಜನೆ

ಫೇಸ್‌ಬುಕ್‌‌ ಡ್ರೋನ್‌‌‌ ವಿಡಿಯೋ

 ಡ್ರೋನ್‌ ಮೂಲಕ ಇಂಟರ್‌ನೆಟ್‌: ಫೇಸ್‌‌ಬುಕ್‌ ಯೋಜನೆ

ಡ್ರೋನ್‌ ಮೂಲಕ ಇಂಟರ್‌ನೆಟ್‌: ಫೇಸ್‌‌ಬುಕ್‌ ಯೋಜನೆ

ವಿಶ್ವದೆಲ್ಲೆಡೆ ಇಂಟರ್‌ನೆಟ್‌ನ್ನುಕಡಿಮೆ ಬೆಲೆಯಲ್ಲಿ ತಲುಪಿಸುವಂತಾಗಲು ವಿಶ್ವದ ಟೆಕ್‌ ದಿಗ್ಗಜ ಕಂಪೆನಿಗಳಾದ ಫೇಸ್‌ಬುಕ್‌‌, ಎರಿಕ್‌ಸನ್‌‌, ಮಿಡಿಯಾಟೆಕ್‌‌‌‌, ನೋಕಿಯಾ, ಒಪೆರಾ,ಕ್ವಾಲಕಂ ಕಂಪೆನಿಗಳು 2013 ಅಗಸ್ಟ್‌‌ 20 ರಂದು Internet.org ಹೆಸರಿನಲ್ಲಿ ಒಂದು ಸಂಘಟನೆಯನ್ನು ಸ್ಥಾಪಿಸಿದೆ.

 ಡ್ರೋನ್‌ ಮೂಲಕ ಇಂಟರ್‌ನೆಟ್‌: ಫೇಸ್‌‌ಬುಕ್‌ ಯೋಜನೆ

ಡ್ರೋನ್‌ ಮೂಲಕ ಇಂಟರ್‌ನೆಟ್‌: ಫೇಸ್‌‌ಬುಕ್‌ ಯೋಜನೆ

ಸೋಲಾರಾ 50

 ಡ್ರೋನ್‌ ಮೂಲಕ ಇಂಟರ್‌ನೆಟ್‌: ಫೇಸ್‌‌ಬುಕ್‌ ಯೋಜನೆ

ಡ್ರೋನ್‌ ಮೂಲಕ ಇಂಟರ್‌ನೆಟ್‌: ಫೇಸ್‌‌ಬುಕ್‌ ಯೋಜನೆ

ಟೈಟಾನ್‌ ಏರೋಸ್ಪೇಸ್‌ ಅಭಿವೃದ್ಧಿ ಪಡಿಸಿದ ಸೋಲಾರಾ 50 ಮತ್ತು ಸೋಲಾರಾ 60 ಹೆಸರಿನ ಎರಡು ಡ್ರೋನ್‌ ಮಾದರಿಗಳು ಸೂರ್ಯ‌ನ ಶಕ್ತಿಯನ್ನು ಉಪಯೋಗಿಸಿಕೊಂಡು ಕಾರ್ಯ‌ನಿರ್ವ‌ಹಿಸುತ್ತದೆ.

 ಡ್ರೋನ್‌ ಮೂಲಕ ಇಂಟರ್‌ನೆಟ್‌: ಫೇಸ್‌‌ಬುಕ್‌ ಯೋಜನೆ

ಡ್ರೋನ್‌ ಮೂಲಕ ಇಂಟರ್‌ನೆಟ್‌: ಫೇಸ್‌‌ಬುಕ್‌ ಯೋಜನೆ

ಸಮುದ್ರ ಮಟ್ಟದಿಂದ 20 ಕಿ.ಮೀ ಎತ್ತರದಲ್ಲಿ ಕಾರ್ಯ‌ನಿರ್ವ‌ಹಿಸುವ ಈ ಡ್ರೋನ್‌ಗಳು ಐದು ವರ್ಷ‌ಗಳವರೆಗೆ ಆಕಾಶದಲ್ಲೇ ಹಾರಾಡುವ ಸಾಮರ್ಥ್ಯವನ್ನು ಹೊಂದಿವೆ.

ಡ್ರೋನ್‌ ಮೂಲಕ ಇಂಟರ್‌ನೆಟ್‌: ಫೇಸ್‌‌ಬುಕ್‌ ಯೋಜನೆ

ವಿಡಿಯೋ ವೀಕ್ಷಿಸಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X