SIM ಖರೀದಿಸುವಾಗ, ಇಲ್ಲವೇ ವಾಟ್ಸಾಪ್‌ನಲ್ಲಿ ಈ ತಪ್ಪು ಮಾಡಿದ್ರೆ, ಜೈಲು ಗ್ಯಾರಂಟಿ!

|

ಆನ್‌ಲೈನ್‌ನಲ್ಲಿ ವಂಚನೆ ಘಟನೆಗಳನ್ನು ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳಿಂದ ಬಳಕೆದಾರರನ್ನು ರಕ್ಷಿಸಲು ಭಾರತೀಯ ದೂರಸಂಪರ್ಕ ಇಲಾಖೆ (DoT) ಹೊಸ ಮಾರ್ಗವನ್ನು ಕಂಡುಕೊಂಡಿದೆ. ಹೊಸ ಸಿಮ್ ಕಾರ್ಡ್ ಪಡೆದುಕೊಳ್ಳುವಾಗ ನಕಲಿ/ ತಪ್ಪಾದ ದಾಖಲೆಗಳನ್ನು ಸಲ್ಲಿಸುವುದು ಅಥವಾ ಓಟಿಟಿ (OTT) ಪ್ಲಾಟ್‌ಫಾರ್ಮ್‌ಗಳಲ್ಲಿ ತಪ್ಪಾಗಿ ಪ್ರತಿನಿಧಿಸುವುದು ಅಥವಾ ನಕಲಿ ಮಾಹಿತಿ ಮೂಲಕ ಗುರುತಿಸಿಕೊಳ್ಳುವ ಬಳಕೆದಾರರಿಗೆ ಒಂದು ವರ್ಷ ಜೈಲು ಅಥವಾ ದಂಡ ವಿಧಿಸಬಹುದು.

ಮಾಡುವ

ಹೌದು, ಹೊಸ ಸಿಮ್ ಕಾರ್ಡ್ ಪಡೆಯಲು ನಕಲಿ ದಾಖಲೆಗಳನ್ನು ಸಲ್ಲಿಸುವುದು ಅಥವಾ ವಾಟ್ಸಾಪ್‌, ಸಿಗ್ನಲ್, ಟೆಲಿಗ್ರಾಮ್ ಮತ್ತು ಇತರೆ ಅಪ್ಲಿಕೇಶನ್‌ಗಳಲ್ಲಿ ಗುರುತನ್ನು ನಕಲಿಸುವುದನ್ನು ಮಾಡುವ ಬಳಕೆದಾರರಿಗೆ ಒಂದು ವರ್ಷ ಜೈಲು ಅಥವಾ 50,000ರೂ. ವರೆಗೆ ದಂಡಕ್ಕೆ ಕಾರಣವಾಗಬಹುದು. ಅಕ್ರಮ ಆನ್‌ಲೈನ್ ಚಟುವಟಿಕೆಗಳಿಂದ ಬಳಕೆದಾರರನ್ನು ರಕ್ಷಿಸುವ ಸಲುವಾಗಿ ದೂರಸಂಪರ್ಕ ಇಲಾಖೆ (DoT) ಕರಡು ಮಸೂದೆಯಲ್ಲಿ ಈ ನಿಬಂಧನೆಗಳನ್ನು ಇರಿಸಿದೆ.

ಚಟುವಟಿಕೆಗಳು

ಕಳೆದ ಕೆಲವು ವರ್ಷಗಳಿಂದ, ಸೈಬರ್ ಕ್ರಿಮಿನಲ್‌ಗಳಿಂದ ಸಾಕಷ್ಟು ವಂಚನೆ ಮತ್ತು ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಆನ್‌ಲೈನ್‌ ವಂಚಕರು ಸಾಮಾನ್ಯವಾಗಿ ನಕಲಿ ದಾಖಲೆಗಳೊಂದಿಗೆ ಸಿಮ್ ಅನ್ನು ಪಡೆದು, ಅವರು ನಿಜವಾದ ಗುರುತನ್ನು ಬಿಟ್ಟುಕೊಡುವುದಿಲ್ಲ. ಅಲ್ಲದೆ, ಅವರು ನಕಲಿ ಗುರುತುಗಳೊಂದಿಗೆ OTT ಪ್ಲಾಟ್‌ಫಾರ್ಮ್‌ಗೆ ಪ್ರವೇಶಿಸುವ ಸಾಧ್ಯತೆಗಳಿರುತ್ತವೆ.

ಸೇರಿಸಲಾಗಿದೆ

ದೂರಸಂಪರ್ಕ ಇಲಾಖೆಯ ನೂತನ ಬಿಲ್‌ನ ಪ್ರಕಾರ, ಎಲ್ಲಾ ಟೆಲಿಕಾಂ ಬಳಕೆದಾರರು ಯಾರು ಕರೆ ಮಾಡುತ್ತಿದ್ದಾರೆಂದು ತಿಳಿದಿರಬೇಕು. ಟೆಲಿಕಾಂ ಸೇವೆಗಳನ್ನು ಬಳಸಿಕೊಂಡು ಸೈಬರ್ ವಂಚನೆಗಳನ್ನು ತಡೆಯಲು ಇದು ಸಹಾಯ ಮಾಡುತ್ತದೆ. ಆದ್ದರಿಂದ, ಸಂಬಂಧಿತ ಸ್ಥಳಗಳಲ್ಲಿ ಗುರುತಿಗೆ ಸಂಬಂಧಿಸಿದ ನಿಬಂಧನೆಗಳನ್ನು ಮಸೂದೆಯಲ್ಲಿ ಸೇರಿಸಲಾಗಿದೆ ಎಂದು ತಿಳಿಸಲಾಗಿದೆ. ಹಾಗೆಯೇ ಕರಡು ಮಸೂದೆಯ ಸೆಕ್ಷನ್ 4 ರ ಅಡಿಯಲ್ಲಿ ಉಪ-ವಿಭಾಗ 7 ಟೆಲಿಕಾಂ ಬಳಕೆದಾರರು ತಮ್ಮ ಗುರುತನ್ನು ಘೋಷಿಸುವ ಅಗತ್ಯವಿದೆ. ಇದರರ್ಥ ಸಿಮ್ ಕಾರ್ಡ್‌ಗಳ ನಕಲಿ ಹಾವಳಿಯನ್ನು ತಪ್ಪಿಸಬಹುದು.

ವಾರಂಟ್

ಯಾವುದೇ ಬಳಕೆದಾರರು ತಮ್ಮ ಗುರುತನ್ನು ತಪ್ಪಾಗಿ ಪ್ರತಿನಿಧಿಸಿದರೆ, ಅಂತಹವರನ್ನು ಒಂದು ವರ್ಷದವರೆಗೆ ಜೈಲಿಗೆ ಕಳುಹಿಸಬಹುದು ಅಥವಾ 50,000ರೂ. ವರೆಗೆ ದಂಡವನ್ನು ವಿಧಿಸಬಹುದು. ಇನ್ನು ಈ ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಯು ವಾರಂಟ್ ಇಲ್ಲದೆ ಬಂಧಿಸಬಹುದು ಮತ್ತು ನ್ಯಾಯಾಲಯದ ಅನುಮತಿಯಿಲ್ಲದೆ ತನಿಖೆಯನ್ನು ಪ್ರಾರಂಭಿಸಬಹುದು ಎನ್ನಲಾಗಿದೆ.

ತಿಳಿಯಬೇಕು

ಕರೆ ಸ್ವೀಕರಿಸುವಾಗ ಯಾರು ಕರೆ ಮಾಡುತ್ತಿದ್ದಾರೆಂದು ಬಳಕೆದಾರರು ತಿಳಿಯಬೇಕು. ಅದು ಸಾಮಾನ್ಯ ವಾಯಿಸ್‌ ಕರೆ, ವಾಟ್ಸಾಪ್‌ ಕರೆ, ಫೇಸ್‌ಟೈಮ್ ಅಥವಾ ಯಾವುದೇ ಇತರೆ ಓಟಿಟಿ ಕರೆ ಸೇರಿದಂತೆ ಇದು ಎಲ್ಲಾ ರೀತಿಯ ಕರೆಗಳನ್ನು ಒಳಗೊಂಡಿರುತ್ತದೆ ಎಂದು ಭಾರತದ ಕೇಂದ್ರ ಸಂವಹನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಆನ್‌ಬೋರ್ಡ್

ಈ ಕರಡು ಅನುಮೋದನೆಗೊಂಡು ಕಾರ್ಯರೂಪಕ್ಕೆ ಬಂದರೆ, KYC ಮಾಡಲಾಗುವುದು ಎಂದು ಎಲ್ಲರಿಗೂ ತಿಳಿದಿರುವುದರಿಂದ ಆನ್‌ಲೈನ್ ಮತ್ತು ಕರೆ ವಂಚನೆಗಳು ತೀವ್ರವಾಗಿ ಕಡಿಮೆಯಾಗುತ್ತವೆ. ಇನ್ನು OTT ಪ್ಲಾಟ್‌ಫಾರ್ಮ್‌ಗಳು ಸಹ ಬಳಕೆದಾರರನ್ನು ಆನ್‌ಬೋರ್ಡ್ ಮಾಡುವ ಮೊದಲು KYC ಅನ್ನು ಪೂರ್ಣಗೊಳಿಸಬೇಕು.

ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಎಷ್ಟು ನಂಬರ್‌ಗಳು ಲಿಂಕ್ ಆಗಿವೆ ತಿಳಿಯಲು ಹೀಗೆ ಮಾಡಿ:

ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಎಷ್ಟು ನಂಬರ್‌ಗಳು ಲಿಂಕ್ ಆಗಿವೆ ತಿಳಿಯಲು ಹೀಗೆ ಮಾಡಿ:

ಹಂತ 1. ಮೊದಲು ಅಧಿಕೃತ ಆಧಾರ್ UIDAI ವೆಬ್‌ಸೈಟ್‌ ತೆರೆಯಿರಿ.
ಹಂತ 2. ನಂತರ ನೀವು ಮುಖಪುಟದಲ್ಲಿ ಗೆಟ್ ಆಧಾರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 3. ಇದರ ನಂತರ ಡೌನ್‌ಲೋಡ್ ಆಧಾರ್ ಕ್ಲಿಕ್ ಮಾಡಿ.
ಹಂತ 4. ತದ ನಂತರ ಇಲ್ಲಿ ನೀವು View More ಆಯ್ಕೆಯನ್ನು ನೀಡುತ್ತೀರಿ
ಹಂತ 5. ಆ ನಂತರ ನೀವು ಆಧಾರ್ ಆನ್‌ಲೈನ್ ಸೇವೆಗೆ ಹೋಗಿ ಆಧಾರ್ ದೃಢೀಕರಣ ಇತಿಹಾಸಕ್ಕೆ ಹೋಗಿ.
ಹಂತ 6. ಈಗ ಇಲ್ಲಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಅಲ್ಲಿ Where can a resident chech/ Aadhaar Authentication History ಯಲ್ಲಿ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಸಂಖ್ಯೆಯನ್ನು

ಹಂತ 7. ಆಗ ಹೊಸ ಇಂಟರ್ಫೇಸ್ ನಿಮ್ಮ ಮುಂದೆ ತೆರೆಯುತ್ತದೆ.
ಹಂತ 8. ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾವನ್ನು ನಮೂದಿಸಿ. ಈಗ ನಿಮ್ಮ ಸಂಖ್ಯೆಗೆ OTP ಕಳುಹಿಸು ಕ್ಲಿಕ್ ಮಾಡಿ.
ಹಂತ 9. ಆಗ ನೀವು ಆಲ್ ಆನ್ ದೃಢೀಕರಣ ಪ್ರಕಾರವನ್ನು ಆಯ್ಕೆ ಮಾಡಿ.
ಹಂತ 10. ನೀವು ಅದನ್ನು ನೋಡಲು ಬಯಸುವ ಕಾರಣ ಇಲ್ಲಿ ನೀವು ಸಂಖ್ಯೆಯನ್ನು ನಮೂದಿಸಿ.
ಹಂತ 11. ಆಗ ನೀವು ಎಷ್ಟು ದಾಖಲೆಗಳನ್ನು ನೋಡಲು ಬಯಸುತ್ತೀರಿ ಎಂಬುದನ್ನು ನಮೂದಿಸಿ.
ಹಂತ 12. ಆಗ ನೀವು OTP ನಮೂದಿಸಿ ಮತ್ತು ವೆರಿಫೈ OTP ಕ್ಲಿಕ್ ಮಾಡಿ.
ಹಂತ 13. ಇದರ ನಂತರ ಹೊಸ ಇಂಟರ್ಫೇಸ್ ನಿಮ್ಮ ಮುಂದೆ ತೆರೆಯುತ್ತದೆ.

Best Mobiles in India

English summary
Fake identity on OTT, SIM may lead to year in jail or Rs 50k fine: Report.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X