ನೀತಾ ಅಂಬಾನಿ ಹೆಸರಲ್ಲಿ ಹರಿದಾಡುತ್ತಿದೆ ನಕಲಿ ಟ್ವಿಟ್!

|

ಸುದ್ದಿ, ಮಾಹಿತಿ ತ್ವರಿತವಾಗಿ ಎಲ್ಲಡೆ ವೇಗದಲ್ಲಿ ಹರಡಲು ಸಮಾಜಿಕ ಜಾಲತಾಣಗಳು ಅತ್ಯುತ್ತಮ ಪ್ಲಾಟ್‌ಫಾರ್ಮ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಹರಡಿರುವ ಸುದ್ದಿ ನಿಜವಾ ಅಥವಾ ಸುಳ್ಳಾ ಎಂಬುದನ್ನು ಪರಾಮರ್ಶೆ ಮಾಡದೇ ಜನರು ನಂಬುವ ವಾತಾವರಣವನ್ನು ಸದ್ಯ ಇದೆ ಎನ್ನಬಹುದು. ಇತ್ತೀಚಿಗೆ ಗಣ್ಯ ವ್ಯಕ್ತಿಗಳ ಹೆಸರಲ್ಲಿ ನಕಲಿ ಖಾತೆ ತೆರೆದು ತಪ್ಪು ಮಾಹಿತಿ ಹರಡಿಸುವ ಸಂಗತಿಗಳು ಹೆಚ್ಚುತ್ತಲೇ ಇವೆ.

ರಿಲಾಯನ್ಸ್‌ ಜಿಯೋ

ಇದೇ ರೀತಿ ಈಗ ರಿಲಾಯನ್ಸ್‌ ಜಿಯೋ ಮಾಲೀಕ ಮುಕೇಶ್‌ ಅಂಬಾನಿಯವರ ಪತ್ನಿ ನೀತಾ ಅಂಬಾನಿ ಹೆಸರು ಮತ್ತು ಫೋಟೊ ಇರುವ ನಕಲಿ ಟ್ವಿಟ್ಟರ್ ಖಾತೆಯಿಂದ ಟ್ವಿಟ್‌ ಹರಿದಾಡುತ್ತಿದೆ. ಸದ್ಯ ದೇಶದಲ್ಲಿ ಸದ್ದು ಮಾಡುತ್ತಿರುವ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಗೆ (ಎನ್‌ಆರ್‌ಸಿ) ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರನ್ನು ಬೆಂಬಲಿಸಿ ನೀತಾ ಟ್ವೀಟ್‌ ಮಾಡಿದ್ದಾರೆ ಎನ್ನುವ ನಕಲಿ ಟ್ವಿಟ್ ಹರಿದಾಡುತ್ತಿದೆ.

ಅಧ್ಯಕ್ಷೆ ನೀತಾ

ಆದರೆ ಅಸಲಿಗೆ ರಿಲಯನ್ಸ್‌ ಫೌಂಡೇಷನ್‌ ಅಧ್ಯಕ್ಷೆ ನೀತಾ ಅಂಬಾನಿ ಅವರು ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಗೆ (ಎನ್‌ಆರ್‌ಸಿ) ಸಂಬಂಧಿಸಿದಂತೆ ಅಧಿಕೃತವಾಗಿ ಯಾವುದೇ ಟ್ವಿಟ್ ಸಹ ಮಾಡಿಲ್ಲ ಎಂಬುದನ್ನು ರಿಲಾಯನ್ಸ್‌ ಜಿಯೊ ಸಂಸ್ಥೆಯು ಸ್ಪಷ್ಟಪಡಿಸಿದೆ. ಹೀಗಾಗಿ ಸಾರ್ವಜನಿಕರು ನಕಲಿ ಖಾತೆಯಿಂದ ಟ್ವಿಟ್ ಆಗಿರುವ ಮಾಹಿತಿಯನ್ನು ನಿರ್ಲಕ್ಷಿಸಬೇಕು ಎಂದು ರಿಲಯನ್ಸ್‌ ಜಿಯೊ ಸಂಸ್ಥೆಯು ತಿಳಿಸಿದೆ.

ಎನ್‌ಆರ್‌ಸಿ ವಿರುದ್ಧ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ಎನ್‌ಆರ್‌ಸಿ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ, ನೀತಾ ಅಂಬಾನಿಯವರ ಸಿಎಎ ಮತ್ತು ಎನ್‌ಆರ್‌ಸಿ ನೋಂದಣಿಗೆ ಬೆಂಬಲ ಸೂಚಿಸಿದ್ದಾರೆ ಎಂಬುದನ್ನು ಬಿಂಬಿಸಲು ಅವರ ಹೆಸರಿನಲ್ಲಿ ನಕಲಿ ಟ್ವಿಟ್‌ ಮಾಡಿದ್ದಾರೆ. ಆ ನಕಲಿ ಟ್ವೀಟ್ ಸುಮಾರು 4400 ಬಾರಿ ಶೇರ್ ಮಾಡಿದ್ದಾರೆ. ಆದರೆ ಅಸಲಿಗೆ ಅವರ ಅಧಿಕೃತ ಟ್ವಿಟರ್ ಖಾತೆಯೇ ಅಲ್ಲ.

NitaAmbhaani, NitaMAmbani ಈ ರೀತಿಯ ಹೆಸರುಗಳಿಂದ ಹಲವು ನಕಲಿ ಟ್ವಿಟ್ಟರ್ ಖಾತೆಗಳನ್ನು ತೆರೆಯಲಾಗಿದ್ದು, ವಿವಾದಾತ್ಮಕ ಹೇಳಿಕೆಗಳನ್ನು ಪೋಸ್ಟ್‌ ಮಾಡಲಾಗ್ತಿದೆ. ಈ ಅಂಶಗಳನ್ನು ಜಿಯೋ ಸಂಸ್ಥೆಯು ಟ್ವಿಟರ್ ಸಂಸ್ಥೆಯ ಗಮನಕ್ಕೆ ತಂದಿದೆ.

Best Mobiles in India

English summary
Reliance Foundation has purportedly spoken out in favour of PM Narendra Modi and Home Minister Amit Shah, apart from tweets of communal nature. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X