ಫಾಸ್ಟ್ರಾಕ್‌ನಿಂದ ಅತ್ಯಾಕರ್ಷಕ ಸ್ಮಾರ್ಟ್‌ವಾಚ್‌ ಲಾಂಚ್‌; ಆಫರ್‌ ಬೆಲೆ ಎಷ್ಟು!?

|

ಫಾಸ್ಟ್ರಾಕ್ ಭಾರತದ ಅಗ್ರಗಣ್ಯ ವಾಚ್‌ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿದ್ದು, ಈ ಕ್ಷಣಕ್ಕೂ ಈ ಸಂಸ್ಥೆಯ ವಾಚ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದರ ನಡುವೆ ಭಾರತದಲ್ಲಿ ತನ್ನ ಸ್ಮಾರ್ಟ್‌ವಾಚ್‌ ಪೋರ್ಟ್‌ಫೋಲಿಯೊವನ್ನು ವಿಸ್ತರಣೆ ಮಾಡಲು ಮುಂದಾಗಿರುವ ಫಾಸ್ಟ್ರಾಕ್ ಹೊಸ ಸ್ಮಾರ್ಟ್‌ವಾಚ್‌ವೊಂದನ್ನು ಅನಾವರಣ ಮಾಡಿದೆ. ಈ ವಾಚ್‌ ಫ್ಯಾಶನ್ ಗೂ ಸೈ ಫಿಟ್‌ನೆಸ್‌ಗೂ ಜೈ ಎನ್ನುವಂತಹ ಶೈಲಿಯನ್ನು ಪಡೆದುಕೊಂಡಿದೆ.

ವಾಚ್‌

ಹೌದು, ಜನಪ್ರಿಯ ವಾಚ್‌ ತಯಾರಿಕಾ ಸಂಸ್ಥೆಯಾದ ಫಾಸ್ಟ್ರಾಕ್ ಮಾರುಕಟ್ಟೆಯಲ್ಲಿ ಹೊಸ ಸ್ಮಾರ್ಟ್ ವಾಚ್ ಅನ್ನು ಲಾಂಚ್‌ ಮಾಡಿದ್ದು, ಇದಕ್ಕೆ ರಿಫ್ಲೆಕ್ಸ್ ಬೀಟ್+ (Reflex Beat+) ಎಂದು ಹೆಸರನ್ನಿಟ್ಟಿದೆ. ಈ ವಾಚ್‌ ದೊಡ್ಡ ಡಿಸ್‌ಪ್ಲೇ ಹೊಂದಿದ್ದು, ಈ ಹಿಂದೆ ಲಾಂಚ್ ಮಾಡಲಾಗಿರುವ ಎಲ್ಲಾ ಫಿಟ್‌ನೆಸ್ ವಾಚ್‌ಗಳಿಗಿಂತ ಭಿನ್ನವಾಗಿ ಕಾಣಿಸಿಕೊಂಡಿದೆ. ಹಾಗಿದ್ರೆ, ಇದರ ಆಫರ್‌ ಬೆಲೆ ಹಾಗೂ ಪ್ರಮುಖ ಫೀಚರ್ಸ್‌ ಅನ್ನು ತಿಳಿಯೋಣ ಬನ್ನಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಈ ಹೊಸ ಸ್ಮಾರ್ಟ್‌ವಾಚ್ 1.69 ಇಂಚಿನ ಅಲ್ಟ್ರಾ Vu ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, 60hz ರಿಫ್ರೆಸ್‌ ರೇಟ್‌ ಹಾಗೂ 500 nits ಬ್ರೈಟ್‌ನೆಸ್ ಸಾಮರ್ಥ್ಯವನ್ನು ಇದು ಪಡೆದುಕೊಂಡಿದೆ. ಈ ಮೂಲಕ ಯಾವುದೇ ಸಮಯದಲ್ಲೂ ಸಹ ನೀವು ಈ ವಾಚ್‌ ಅನ್ನು ಬಳಕೆ ಮಾಡಬಹುದಾಗಿದೆ.

ಪ್ರಮುಖ ಫೀಚರ್ಸ್

ಪ್ರಮುಖ ಫೀಚರ್ಸ್

ಈ ವಾಚ್ ಯುಟಿಲಿಟಿ ಫೀಚರ್‌ಗಳ ಜೊತೆಗೆ 60 ಮಲ್ಟಿ ಸ್ಪೋರ್ಟ್ಸ್ ಮೋಡ್‌ನೊಂದಿಗೆ ಪ್ಯಾಕ್‌ ಆಗಿದ್ದು, ಹೃದಯ ಬಡಿತ ಮಾನಿಟರ್, ವುಮೆನ್ ಹೆಲ್ತ್ ಮಾನಿಟರ್, ಸ್ಲೀಪ್ ಟ್ರ್ಯಾಕರ್ ಮತ್ತು SpO2 ಮಾನಿಟರ್‌ನಂತಹ ಆರೋಗ್ಯ ಫೀಚರ್ಸ್‌ಗಳನ್ನು ಈ ವಾಚ್‌ ಹೊಂದಿದೆ.

IP68 ರೇಟಿಂಗ್

IP68 ರೇಟಿಂಗ್

ರಿಫ್ಲೆಕ್ಸ್ ಬೀಟ್+ ವಾಚ್‌ ಸಿಲಿಕಾನ್ ಪಟ್ಟಿಯೊಂದಿಗೆ ಪ್ಯಾಕ್‌ ಆಗಿದ್ದು, ಇದು ಮಣಿಕಟ್ಟಿನ ಮೇಲೆ ಹಿತಕರವಾದ ಅನುಭವವನ್ನು ನೀಡಲು ಸಹಕಾರಿಯಾಗಿದೆ. ಇದರೊಂದಿಗೆ IP68 ರೇಟಿಂಗ್ ಆಯ್ಕೆ ಪಡೆದುಕೊಂಡಿರುವುದರಿಂದ ಧೂಳು ಮತ್ತು ನೀರು-ನಿರೋಧಕವಾಗಿದೆ. ಈ ಮೂಲಕ ಎಲ್ಲಾ ರೀತಿಯ ಕ್ರೀಡೆಗಳು ಮತ್ತು ಸಾಹಸ ಸಮಯಗಳಲ್ಲಿ ಈ ಸ್ಮಾರ್ಟ್‌ವಾಚ್‌ ಅನ್ನು ಯಾವುದೇ ಸಮಸ್ಯೆ ಇಲ್ಲದೆ ಧರಿಸಬಹುದಾಗಿದೆ.

ಕ್ಲೌಡ್

ಇದರೊಂದಿಗೆ 100+ ಕ್ಲೌಡ್ ವಾಚ್‌ಫೇಸ್‌ಗಳ ಆಯ್ಕೆ ನೀಡಲಾಗಿದ್ದು, ಬಳಕೆದಾರರು ತಮ್ಮ ವೈಯಕ್ತಿಕ ಶೈಲಿಗೆ ಹೊಂದಿಕೆಯಾಗುವಂತೆಯೂ ವಾಚ್‌ ಫೇಸ್‌ಗಳನ್ನು ಕಸ್ಟಮೈಸ್ ಮಾಡಲು ಅನುಕೂಲ ಮಾಡಿಕೊಡಲಾಗಿದೆ.

ಕ್ಯಾಮೆರಾ

ಈ ವಾಚ್ ಕ್ಯಾಮೆರಾ ಕಂಟ್ರೋಲ್‌ ಮತ್ತು ಸಂಗೀತ ಕಂಟ್ರೋಲ್‌ ಸೇರಿದಂತೆ ಇನ್ನಿತರೆ ಫೀಚರ್ಸ್‌ಗಳನ್ನೂ ಸಹ ಹೊಂದಿದ್ದು, ಬಳಕೆದಾರರಿಗೆ ನೋಟಿಫಿಕೇಶನ್‌ಗಳನ್ನು ನೀಡುವ ಮೂಲಕ ಎಚ್ಚರಿಸುತ್ತದೆ. ಜೊತೆಗೆ ಕರೆಗಳನ್ನು ತಿರಸ್ಕರಿಸಲು ಸಹ ಇದು ಅನುಮತಿಸುತ್ತದೆ. ಇದೆಲ್ಲದರ ಜೊತೆಗೆ ಹವಾಮಾನ ಎಚ್ಚರಿಕೆಗಳನ್ನು ಸಹ ಈ ಮೂಲಕ ಪಡೆದುಕೊಳ್ಳಬಹುದಾಗಿದೆ.

ಕಂಪೆನಿ

ಟೈಟಾನ್ ಕಂಪೆನಿ ಲಿಮಿಟೆಡ್‌ನ ವೇರಬಲ್ಸ್ ಡಿಜಿಟಲ್ ಹೆಲ್ತ್ ಇನ್ನೋವೇಟರ್ ಸಿಒಒ ರವಿ ಕುಪ್ಪುರಾಜ್ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ಕೈಗೆಟುಕುವ ದರದಲ್ಲಿ ಧರಿಸಬಹುದಾದ ವಿಭಾಗದಲ್ಲಿ ನಮ್ಮ ಮೊದಲ ಕೊಡುಗೆ ರಿಫ್ಲೆಕ್ಸ್ ಬೀಟ್+ ಅನ್ನು ನೀಡಲು ನಾವು ರೋಮಾಂಚನಗೊಂಡಿದ್ದೇವೆ. ಸ್ಮಾರ್ಟ್‌ವಾಚ್‌ಗಳು ಈಗ ದೇಶದಾದ್ಯಂತ ಗ್ರಾಹಕರಿಗೆ ಕ್ರಿಯಾತ್ಮಕ ಮತ್ತು ಫ್ಯಾಶನ್‌ಗೆ ಅಗತ್ಯವಾಗಿದೆ. ಹೀಗಾಗಿ, ಹೊಸ ಲಾಂಚ್‌ನೊಂದಿಗೆ ದೊಡ್ಡ ಫ್ಯಾಶನ್ ಮತ್ತು ಫಿಟ್‌ನೆಸ್ ಪ್ರಜ್ಞೆಯ ಪ್ರೇಕ್ಷಕರನ್ನು ತಲುಪಲು ನಾವು ಪ್ರಯತ್ನಿಸುತ್ತೇವೆ ಎಂದಿದ್ದಾರೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಈ ರಿಫ್ಲೆಕ್ಸ್ ಬೀಟ್+ ಅನ್ನು 1,495 ರೂ.ಗಳ ಆಫರ್‌ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಜೊತೆಗೆ ಈ ಸ್ಮಾರ್ಟ್ ವಾಚ್ ಬೀಜ್ ಲ್ಯಾಟೆ, ವೈನ್ ರೆಡ್, ಬ್ಲಾಕ್, ಆಲಿವ್ ಗ್ರೀನ್ ಮತ್ತು ಡೀಪ್ ಟೀಲ್ ಸೇರಿದಂತೆ ಐದು ವಿಭಿನ್ನ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

Best Mobiles in India

English summary
An exciting smartwatch launch has been unveiled by Fastrack, which has got a number of convenient features. details are in Kannada.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X