ಈ ಸ್ಮಾರ್ಟ್‌ಫೋನ್‌ಗಳಿಗೆ ಈಗ ಭರ್ಜರಿ ಡಿಸ್ಕೌಂಟ್‌; ಇನ್ನೆರಡೆ ದಿನ ಬಾಕಿ!

|

ಜನಪ್ರಿಯ ಇ ಕಾಮರ್ಸ್‌ ಫ್ಲಿಪ್‌ಕಾರ್ಟ್‌ ತಾಣವು ಬಿಗ್ ಸೇವಿಂಗ್ ಡೇಸ್ ಸೇಲ್ ಅನ್ನು ಆಯೋಜಿಸಿದೆ. ಈ ಮಾರಾಟ ಮೇಳವು ಸದ್ಯ ಚಾಲ್ತಿ ಇದ್ದು, ಆನ್‌ಲೈನ್‌ ಶಾಪಿಂಗ್ ಗ್ರಾಹಕರನ್ನು ಸೆಳೆಯುತ್ತಿದೆ. ಫ್ಲಿಪ್‌ಕಾರ್ಟ್‌ನ ಈ ಸೇಲ್‌ನಲ್ಲಿ ಮುಖ್ಯವಾಗಿ ವಿವೋ, ಒಪ್ಪೋ, ರೆಡ್ಮಿ, ಸ್ಯಾಮ್‌ಸಂಗ್ ಹಾಗೂ ಆಪಲ್‌ ಸಂಸ್ಥೆಗಳ ಕೆಲವು ಫೋನ್‌ಗಳು ಬೊಂಬಾಟ್‌ ಡಿಸ್ಕೌಂಟ್‌ನಲ್ಲಿ ಕಾಣಿಸಿಕೊಂಡಿವೆ.

ಪ್ರಾರಂಭವಾಗಿರುವ

ಹೌದು, ಪ್ರಸ್ತುತ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ನಲ್ಲಿ ಬಿಗ್ ಸೇವಿಂಗ್ ಡೇಸ್ 2022 ಮಾರಾಟ ಮೇಳವು ಲೈವ್‌ ಆಗಿದೆ. ಇದೇ ಜುಲೈ 23 ರಿಂದ ಪ್ರಾರಂಭವಾಗಿರುವ ಈ ಮಾರಾಟ ಮೇಳವು ಇದೇ ಜುಲೈ 27 ರ ವರೆಗೂ ಇರಲಿದೆ. ಹೊಸ ಫೋನ್‌ ಖರೀದಿ ಮಾಡಬಯಸುವ ಗ್ರಾಹಕರು ಆಕರ್ಷಕ ರಿಯಾಯಿತಿಯಲ್ಲಿ ಫೋನ್‌ ಖರೀದಿಸಲು ಇದು ಸಕಾಲ ಎನ್ನಬಹುದಾಗಿದೆ. ಹಾಗೆಯೇ ಕೆಲವೊಂದು ಬ್ಯಾಂಕ್‌ಗಳಿಂದ ಹೆಚ್ಚುವರಿ ರಿಯಾಯಿತಿ ಸಿಗಲಿದೆ.

ದರದಲ್ಲಿ

ಡಿಸ್ಕೌಂಟ್‌ ಬೆಲೆಯಲ್ಲಿ ಫೋನ್ ಖರೀದಿಸಬೇಕು ಎಂದುಕೊಂಡ ಗ್ರಾಹಕರಿಗೆ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಆಕರ್ಷಕ ಆಗಿದೆ. ಪ್ರಮುಖ ಸ್ಮಾರ್ಟ್‌ಫೋನ್‌ಗಳು ರಿಯಾಯಿತಿ ದರದಲ್ಲಿ ಲಭ್ಯ. ಹಾಗಾದರೇ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಭರ್ಜರಿ ಕೊಡುಗೆ ಪಡೆದ ಟಾಪ್‌ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ವಿವೋ T1 5G

ವಿವೋ T1 5G

ವಿವೋ T1 5G ಫೋನ್‌ 120Hz ಪೂರ್ಣ- ಹೆಚ್‌ಡಿ+ ಡಿಸ್‌ಪ್ಲೇ, ಆಕ್ಟಾ-ಕೋರ್ ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 695 5G ಪ್ರೊಸೆಸರ್ ಅನ್ನು ಹೊಂದಿದೆ. ಈ ಫೋನ್ 50ಎಂಪಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ, ಅತ್ಯುತ್ತಮ ಸೆಲ್ಫಿ ಕ್ಯಾಮೆರಾ ಪಡೆದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳು ಮತ್ತು 5,000 mAh ಬ್ಯಾಟರಿ, 8GB RAM - 4GB ವರ್ಚುವಲ್ RAM ಮತ್ತು ಮೈಕ್ರೊ SD ಕಾರ್ಡ್ ಬೆಂಬಲದೊಂದಿಗೆ 12GB RAM ವರೆಗೆ ವಿಸ್ತರಿಸಬಹುದಾಗಿದೆ. ಇನ್ನು ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಇದನ್ನು 15,000 ರೂ. ಒಳಗೆ ಖರೀದಿಸಬಹುದಾಗಿದೆ.

ಪೊಕೊ C31

ಪೊಕೊ C31

ಪೊಕೊ C31 ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಇನ್ನಷ್ಟು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಈ ಫೋನ್ 5,000mAh ಬ್ಯಾಟರಿ, ಆಕ್ಟಾ ಕೋರ್ ಮೀಡಿಯಾ ಟೆಕ್‌ ಹಿಲಿಯೋ G35 ಚಿಪ್ ಮತ್ತು 13ಎಂಪಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ರಚನೆ ಹೊಂದಿದೆ. ಈ ಫೋನ್ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಬರೀ 6,999ರೂ. ಗಳಿಗೆ ಖರೀದಿಗೆ ಸಿಗಲಿದೆ.

ಆಪಲ್‌ ಐಫೋನ್‌ 11

ಆಪಲ್‌ ಐಫೋನ್‌ 11

ಆಪಲ್‌ ಐಫೋನ್‌ 11 ಫೋನ್ ಆಪಲ್‌ A13 ಬಯೋನಿಕ್ ಚಿಪ್ ಒಳಗೊಂಡಿದ್ದು, ಡ್ಯುಯಲ್ 12ಎಂಪಿ ಫ್ಲ್ಯಾಗ್‌ಶಿಪ್ ಕ್ಯಾಮೆರಾ ಸೆನ್ಸರ್‌ ಪಡೆದಿದೆ. ಇನ್ನು ಈ ಫೋನ್ 6.1 ಇಂಚಿನ ರೆಟಿನಾ ಹೆಚ್‌ಡಿ ಡಿಸ್‌ಪ್ಲೇ ಯನ್ನು ಹೊಂದಿದ್ದು, ಟ್ರೂ ಟೋನ್ ಮತ್ತು P3 ವೈಡ್ ಕಲರ್ ಪ್ಯಾನೆಲ್‌ಗೆ ಬೆಂಬಲವನ್ನು ಹೊಂದಿದೆ. ಹಾಗೆಯೇ ಈ ಫೋನ್ IP68 ರೇಟ್ ಮಾಡಲಾಗಿದೆ. ಆಪಲ್‌ ಐಫೋನ್‌ 11 ಅನ್ನು 39,999ರೂ. ಗಳಿಗೆ ಖರೀದಿಸಬಹುದಾಗಿದೆ.

ರಿಯಲ್‌ಮಿ 9 4G

ರಿಯಲ್‌ಮಿ 9 4G

ರಿಯಲ್‌ಮಿ 9 4G ಫೋನ್ ಇದೊಂದು ಸ್ಲಿಮ್ ಹ್ಯಾಂಡ್‌ಸೆಟ್ ಆಗಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇದ್ದು, ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸಲ್‌ ಸೆನ್ಸಾರ್‌ ನಲ್ಲಿದೆ. ಇನ್ನು ಇದು 90Hz ಸೂಪರ್ AMOLED ಪ್ಯಾನೆಲ್ ರಚನೆ ಪಡೆದಿದೆ. ಇದರೊಂದಿಗೆ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಜೊತೆಗೆ 13 GB RAM ಆಯ್ಕೆ ಒಳಗೊಂಡಿದೆ. ಇದಕ್ಕೆ ಪೂರಕವಾಗಿ ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್‌ ಪಡೆದಿದೆ. ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಈ ಫೋನ್ 15,000 ರೂ. ಒಳಗೆ ಲಭ್ಯ ಇದ್ದು, ಆಫರ್ ಬೆಲೆ 13,499 ರೂ. ಆಗಿದೆ.

ಪೊಕೊ M4 5G

ಪೊಕೊ M4 5G

ಪೊಕೊ M4 5G ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ನೀವು ಖರೀದಿಸಬಹುದಾದ ಅತ್ಯಂತ ಒಳ್ಳೆ 5G ಸ್ಮಾರ್ಟ್‌ಫೋನ್ ಆಗಿದೆ. ಇದು 6GB RAM, 50ಎಂಪಿ ಟ್ರಿಪಲ್ ಹಿಂಬದಿಯ ಕ್ಯಾಮೆರಾ, 5,000 mAh ಬ್ಯಾಟರಿ, 90Hz ಪೂರ್ಣ-HD+ ಡಿಸ್ಪ್ಲೇ ಮತ್ತು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 SoC ಒಳಗೊಂಡಿದೆ. ಈ ಫೋನ್ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ 9,999 ರೂ. ಗಳಿಗೆ ಖರೀದಿಗೆ ಸಿಗಲಿದೆ.

ರಿಯಲ್‌ಮಿ 9 ಪ್ರೊ+ 5G

ರಿಯಲ್‌ಮಿ 9 ಪ್ರೊ+ 5G

ರಿಯಲ್‌ಮಿ 9 ಪ್ರೊ+ 5G ಫೋನ್ 8GB RAM ಮತ್ತು 256GB ಸಂಗ್ರಹಣೆಯೊಂದಿಗೆ ಮೀಡಿಯಾ ಟೆಲಕ್ ಡೈಮೆನ್ಸಿಟಿ 920 SoC ಪ್ರೊಸೆಸರ್‌ ಹೊಂದಿದೆ. ಹಾಗೆಯೇ ಇದು 60W ವೇಗದ ಚಾರ್ಜಿಂಗ್‌ನೊಂದಿಗೆ 4,500mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಇದರೊಂದಿಗೆ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 50 ಎಂಪಿ ಆಗಿದೆ. ಮತ್ತು 16ಎಂಪಿ ಮುಂಭಾಗದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ 20,000 ರೂ ಕ್ಕಿಂತ ಕಡಿಮೆ ಲಭ್ಯವಿದೆ. ಇದರ ಆಫರ್ ಬೆಲೆಯು 19,999 ರೂ. ಆಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F13

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F13

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F13 ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2408x1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಎಕ್ಸಿನೋಸ್‌ 850 ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಹಾಗೂ 4GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಅವಕಾಶವನ್ನು ಸಹ ನೀಡಿದೆ. ಜೊತೆಗೆ ARM ಮಾಲಿ G52 ಬೆಂಬಲವನ್ನು ಒಳಗೊಂಡಿದೆ. ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ 10,000 ರೂ ಕ್ಕಿಂತ ಕಡಿಮೆ ಲಭ್ಯವಿದೆ. ಇದರ ಆಫರ್ ಬೆಲೆಯು 9,999 ರೂ. ಆಗಿದೆ.

Best Mobiles in India

English summary
Few best Mobiles you can buy in Flipkart Big Saving Days Sale.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X