ಹೀಗೆ ಮಾಡಿ ನೋಡಿ, ನಿಮ್ಮ ಸ್ಮಾರ್ಟ್‌ಫೋನ್‌ ಎಷ್ಟು ಚುರುಕಾಗುತ್ತೆ ಅಂತಾ!

|

ಪ್ರಸ್ತುತ ಎಲ್ಲರಿಗೂ ಸ್ಮಾರ್ಟ್‌ಫೋನ್‌ ಪ್ರಮುಖ ಸಾಧನ ಎನ್ನುವುದರಲ್ಲಿ ಎರಡು ಮಾತಿಲ್ಲ. ಜನರು ತಮ್ಮ ಅನೇಕ ಆನ್‌ಲೈನ್‌ ಕೆಲಸಗಳನಗನು ಸ್ಮಾರ್ಟ್‌ಫೋನ್‌ ಮೂಲಕವೇ ನಡೆಯುತ್ತವೆ. ನೂತನ ಮಾಡೆಲ್‌ಗಳು ಬಳಕೆದಾರರಿಗೆ ನೆರವಾಗುವಂತಹ ಹಲವು ಆಯ್ಕೆಗಳನ್ನು ಒಳಗೊಂಡಿರುತ್ತವೆ. ಆದರೆ ಕೆಲವರು ತಮ್ಮ ಫೋನಿನಲ್ಲಿರುವ ವಿಶೇಷ ಫೀಚರ್‌ ಏನು ಎಂಬುದನ್ನು ತಿಳಿಯುವ ಪ್ರಯತ್ನ ಮಾಡುವುದು ಕಡಿಮೆ. ಆದರೆ ಫೋನಿನಲ್ಲಿನ ಅಪ್‌ಡೇಟ್ ಫೀಚರ್ಸ್‌ಗಳನ್ನು ಬಳಸಿಕೊಂಡರೇ ಉತ್ತಮ ಎನಿಸಲಿದೆ.

ಲಭ್ಯವಾಗುತ್ತವೆ

ಹೌದು, ಇತ್ತೀಚಿನ ಹೊಸ ಸ್ಮಾರ್ಟ್‌ಫೋನ್‌ಗಳು ನೂತನ ಫೀಚರ್ಸ್ ಹಾಗೂ ಸೇವೆಗಳನ್ನು ಹೊಂದಿವೆ. ಅಲ್ಲದೇ ಪ್ಲೇ ಸ್ಟೋರ್‌ನಲ್ಲಿ ಪ್ರತಿಯೊಂದಕ್ಕೂ ಸಂಬಂಧಿಸಿದಂತೆ ಆಪ್‌ಗಳು ಲಭ್ಯವಾಗುತ್ತವೆ. ಅವುಗಳ ಸಹ ಬಳಕೆದಾರರಿಗೆ ನೆರವಾಗಲಿವೆ. ಹಾಗೆಯೇ ಕೆಲವು ಟಿಪ್ಸ್ ಮತ್ತು ಟ್ರಿಕ್ಸ್ ಗಳು ಬಹುತೇಕ ಸಂದರ್ಭದಲ್ಲಿ ಬಳಕೆದಾರರಿಗೆ ಅನುಕೂಲಕರ ಎನಿಸುತ್ತವೆ. ಹಾಗಾದರೇ ಸ್ಮಾರ್ಟ್‌ಫೋನ್‌ ಬಳಕೆಯನ್ನು ಇನ್ನಷ್ಟು ಚುರುಕಾಗಿಸಲು ಕೆಲವು ಟಿಪ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಫೋನ್ ಫಾಸ್ಟ್‌ ಚಾರ್ಜ್‌ ಮಾಡಲು ಈ ಟಿಪ್ಸ್‌ ಅನುಸರಿಸಿ

ಫೋನ್ ಫಾಸ್ಟ್‌ ಚಾರ್ಜ್‌ ಮಾಡಲು ಈ ಟಿಪ್ಸ್‌ ಅನುಸರಿಸಿ

ಫೋನ್ ಬಳಕೆದಾರರ ದೊಡ್ಡ ಸಮಸ್ಯೆ ಎಂದರೇ ಬ್ಯಾಟರಿ ಬಾಳಿಕೆ ಹೆಚ್ಚು ಕಾಲ ಬರುತ್ತಿಲ್ಲ ಎನ್ನುವುದೇ ಆಗಿದೆ. ಆದ್ರೆ, ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು ಫಾಸ್ಟ್ ಚಾರ್ಜಿಂಗ್ ಬೆಂಬಲ ಪಡೆದಿದ್ದು, ಫೋನ್‌ಗೆ ವೇಗವಾಗಿ ಚಾರ್ಜ್ ಒದಗಿಸುತ್ತವೆ. ಫಾಸ್ಟ್‌ ಚಾರ್ಜರ್‌ ಆಯ್ಕೆ ಇಲ್ಲದಿದ್ದರೇ ಬಳಕೆದಾರರು ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವಾಗ ಸ್ಮಾರ್ಟ್‌ಫೋನ್‌ ಅನ್ನು ಏರೋಪ್ಲೇನ್‌ ಮೋಡ್‌ಗೆ ಹಾಕುವದು ಉತ್ತಮ. ಇದು ಸ್ಮಾರ್ಟ್‌ಫೋನ್‌ ವೇಗವಾಗಿ ಚಾರ್ಜ್ ಪಡೆದುಕೊಳ್ಳಲು ನೆರವಾಗಲಿದೆ.

ಆಡಿಯೋ ಸರ್ಚ್ ಸಹ ಮಾಡಬಹುದು

ಆಡಿಯೋ ಸರ್ಚ್ ಸಹ ಮಾಡಬಹುದು

ಸದ್ಯ ಯಾವುದೇ ಮಾಹಿತಿ ಬೇಕಿದ್ದರೂ ಥಟ್‌ ಅಂತಾ ಗೂಗಲ್‌ ಸರ್ಚ್ ಮಾಡಿ ಮಾಹಿತಿ ತಿಳಿದುಕೊಳ್ಳುತ್ತಾರೆ. ಅದೇ ರೀತಿ ಸಾಂಗ್ಸ್‌ ಬಗ್ಗೆ ಮಾಹಿತಿ ಬೇಕಿದ್ದರೇ ಹುಡುಕುವುದು ಸಹ ಇದೀಗ ಈಜೀ ಆಗಿದೆ. ಅದಕ್ಕಾಗಿ (Shazam or SoundHound) ಆಪ್ಸ್‌ಗಳು ನೆರವಾಗಲಿವೆ. ಈ ಆಪ್ಸ್‌ಗಳನ್ನು ಬಳಸಿಕೊಂಡು ಸರಳವಾಗಿ ಸಾಂಗ್ಸ್‌ ಯಾವುದು ಎನ್ನುವ ಮಾಹಿತಿ ತಿಳಿಯಬಹುದು.

ಜೀಪ್‌ ಫೈಲ್‌ ಬಳಕೆ ಹೆಚ್ಚು ಸೂಕ್ತ

ಜೀಪ್‌ ಫೈಲ್‌ ಬಳಕೆ ಹೆಚ್ಚು ಸೂಕ್ತ

ಬಳಕೆದಾರರು ಸ್ಮಾರ್ಟ್‌ಫೋನಿನಲ್ಲಿ ಅನೇಕ ಅಗತ್ಯ ಕೆಲಸಗಳಿಗಾಗಿ ಆಪ್ಸ್‌ಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಾರೆ. ಅಸಲಿಗೆ ಎಷ್ಟು ಆಪ್ಸ್‌ಗಳನ್ನು ಹೆಚ್ಚಾಗಿ ಬಳಸುವುದೇ ಇಲ್ಲ. ಆದ್ರೆ, ಬಳಕೆಯಲ್ಲಿರದ ಆಪ್ಸ್‌ಗಳು ಸಹ ಫೋನಿನ ಸ್ಥಳ ಕಬಳಿಸುತ್ತವೆ. ಹೀಗಾಗಿ ಹೆಚ್ಚಾಗಿ ಬಳಸದ ಆಪ್ಸ್‌ಗಳನ್ನು ಬಳಕೆದಾರರು ಜೀಪ್‌ ಫೈಲ್‌ನಲ್ಲಿ ಮೂವ್‌ ಮಾಡುವುದು ಉತ್ತಮ. ಇದರಿಂದ ಫೋನ್‌ ಸ್ಥಳಾವಕಾಶ ಉಳಿಯುತ್ತದೆ ಜೊತೆಗೆ ಆಪ್ಸ್‌ಗಳು ಸಹ ಜೀಪ್‌ ಫೈಲ್‌ನಲ್ಲಿ ಇರುತ್ತವೆ.

ಡಾಕ್ಯುಮೆಂಟ್ಸ್‌ ಡಿಜಿಟಲ್‌ ಮಾದರಿಯಲ್ಲಿ ಇದ್ರೆ ಬೆಸ್ಟ್‌

ಡಾಕ್ಯುಮೆಂಟ್ಸ್‌ ಡಿಜಿಟಲ್‌ ಮಾದರಿಯಲ್ಲಿ ಇದ್ರೆ ಬೆಸ್ಟ್‌

ಪ್ರಸ್ತುತ ಪ್ರತಿ ಕೆಲಸಕ್ಕೂ ದಾಖಲೆಗಳು ಅಗತ್ಯವಾಗಿದ್ದು, ಮುಖ್ಯವಾಗಿ ಆಧಾರ ಕಾರ್ಡ್‌, ಡ್ರೈವಿಂಗ್ ಲೈಸೆನ್ಸ್‌, ಪಾನ್‌ ಕಾರ್ಡ್‌, ಅತೀ ಅವಶ್ಯವಾಗಿವೆ. ಇವುಗಳನ್ನು ಯಾವಾಗಲು ಜೊತೆಯಲ್ಲಿಯೇ ಇಟ್ಟುಕೊಳ್ಳುವದರಿಂದ ಕೆಲವೊಮ್ಮೆ ದಾಖಲಾತಿಗಳು ಕಳೆಯುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಈ ದಾಖಲೆಗಳಿಗೆ ಡಿಜಿಟಲ್ ಟಚ್‌ ನೀಡಿ ಫೋನ್‌ನಲ್ಲಿ ಸೇವೆ ಮಾಡಿಕೊಳ್ಳಿರಿ. ಅದಕ್ಕಾಗಿ ಹಲವು ಆಪ್ಸ್‌ಗಳು ಲಭ್ಯ ಇದ್ದು, ಗೂಗಲ್‌ ಡ್ರೈವ್, ಕ್ಯಾಮ್‌ಸ್ಕ್ಯಾನರ್‌, ಎವರ್‌ನೋಟ್‌ ಸೂಕ್ತ ಆಪ್ಸ್‌ಗಳಾಗಿವೆ.

ವಾಯಿಸ್‌ ಅಸಿಸ್ಟಂಟ್‌ ಟ್ರೈ ಮಾಡಿ

ವಾಯಿಸ್‌ ಅಸಿಸ್ಟಂಟ್‌ ಟ್ರೈ ಮಾಡಿ

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ ಅಸಿಸ್ಟಂಟ್‌, ಆಪಲ್‌ ಐಫೋನ್‌ಗಳಲ್ಲಿ ಸಿರಿ ವಾಯಿಸ್‌ ಅಸಿಸ್ಟಂಟ್‌ ಹೆಚ್ಚಿನ ಅನುಕೂಲ ಮಾಡಿಕೊಟ್ಟಿವೆ. ಬಹುತೇಕ ಆಪರೇಟಿಂಗ್ ಕೆಲಸಗಳನ್ನು ಬಳಕೆದಾರರು ವಾಯಿಸ್‌ ಕಮಾಂಡ್‌ ಮೂಲಕವೇ ನಿಯಂತ್ರಿಸಬಹುದು. ಹಾಗೇ ವಾಯಿಸ್‌ ಅಸಿಸ್ಟಂಟ್‌ ಮೂಲಕ ಸ್ಮಾರ್ಟ್‌ಫೋನ್‌ನಲ್ಲಿನ ವೈಫೈ ಅನ್ನು ಸಹ ಟರ್ನ್‌ ಆಫ್‌ ಮಾಡಬಹುದಾಗಿವೆ. ಇದು ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಸ್ಮಾರ್ಟ್‌ ಟಚ್‌ ಅನಿಸಲಿದೆ.

Best Mobiles in India

English summary
Few Best Smartphone Tips to Make Your Phone More Useful.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X