ಆನ್‌ಲೈನ್‌ನಲ್ಲಿ ಆಫರ್‌ ಸಿಗುತ್ತೆ ಅಂತಾ, ಅವಸರದಲ್ಲಿ ಈ ಎಡವಟ್ಟು ಮಾಡಿಕೊಳ್ಳಬೇಡಿ!

|

ಇಂದಿನ ದಿನಗಳಲ್ಲಿ ಇ-ಕಾಮರ್ಸ್‌ ವೆಬ್‌ಸೈಟ್‌ಗಳು ಶಾಪಿಂಗ್‌ ಮಾಡಲು ಮಾರುಕಟ್ಟೆಗೆ ತಿರುಗಾಡುವ ಅಗತ್ಯವೇ ಇಲ್ಲದಂತಹ ವಾತಾವರಣ ನಿರ್ಮಾಣ ಮಾಡಿವೆ. ಮೊಬೈಲ್‌ ಅಥವಾ ಲ್ಯಾಪ್‌ಟಾಪ್‌ ಮೂಲಕ ಮನೆಯಲ್ಲಿ ಕುಳಿತುಕೊಂಡು ಬೇಕಾದ ವಸ್ತುಗಳನ್ನು ಖರೀದಿ ಮಾಡುವ ಅವಕಾಶ ಒದಗಿಸಿವೆ. ಇದರೊಂದಿಗೆ ಉತ್ಪನ್ನಗಳಿಗೆ ಭರ್ಜರಿ ರಿಯಾಯಿತಿ ಕೊಡುಗೆಗಳನ್ನು ಆನ್‌ಲೈನ್‌ ಇ ಕಾಮರ್ಸ್‌ (e commerce) ಪ್ಲಾಟ್‌ಫಾರ್ಮ್ ಗಳು ನೀಡುತ್ತಿರುವುದು ಗ್ರಾಹಕರಿಗೆ ಆಕರ್ಷಕ ಎನಿಸಿದೆ.

ಆನ್‌ಲೈನ್‌

ಹೌದು, ಸದ್ಯ ಆನ್‌ಲೈನ್‌ (Online shopping) ಮೂಲಕ ಅಗತ್ಯ ವಸ್ತುಗಳನ್ನು ಸುಲಭವಾಗಿ ಖರೀದಿ ಮಾಡಬಹುದಾಗಿದೆ. ಆದರೆ ಆನ್‌ಲೈನ್‌/ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಗಳಲ್ಲಿ ಶಾಪಿಂಗ್ ಮಾಡುವಾಗ ಗ್ರಾಹಕರು ಎಚ್ಚರವಹಿಸುವುದು ಅಗತ್ಯವಾಗಿದೆ. ಏಕೆಂದರೆ ಆನ್‌ಲೈನ್‌ ವ್ಯವಹಾರಗಳಲ್ಲಿ ಸೈಬರ್‌ ವಂಚನೆ ಸಾಧ್ಯತೆಗಳನ್ನು ತಳ್ಳಹಾಕುವಂತಿಲ್ಲ. ಈ ನಿಟ್ಟಿನಲ್ಲಿ ಆನ್‌ಲೈನ್‌ ಶಾಪಿಂಗ್‌ ಮಾಡುವ ಗ್ರಾಹಕರು ಕೆಲವು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಸೂಕ್ತ. ಹಾಗಾದರೆ ಇ-ಕಾಮರ್ಸ್‌ ತಾಣಗಳಲ್ಲಿ ಶಾಪಿಂಗ್ ಮಾಡುವ ಮುನ್ನ ಯಾವೆಲ್ಲಾ ಅಂಶಗಳನ್ನು ಗಮನಿಸಬೇಕು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಅಧಿಕೃತ ವೆಬ್‌ಸೈಟ್‌ನಲ್ಲಿ ಶಾಪಿಂಗ್ ಮಾಡಿ

ಅಧಿಕೃತ ವೆಬ್‌ಸೈಟ್‌ನಲ್ಲಿ ಶಾಪಿಂಗ್ ಮಾಡಿ

ವಾಟ್ಸಾಪ್ ಸೇರಿದಂತೆ ಕೆಲವು ಸೋಶಿಯಲ್‌ ಮೀಡಿಯಾಗಳಲ್ಲಿ ಈ ಲಿಂಕ್ ಮೂಲಕ ಶಾಪಿಂಗ್ ಮಾಡಿ ಭರ್ಜರಿ ರಿಯಾಯಿತಿ ಪಡೆಯಿರಿ ಎನ್ನುವಂತಹ ಮೆಸೆಜ್‌ಗಳ ಬಗ್ಗೆ ಎಚ್ಚರ ವಹಿಸಿ. ಅವಸರದಲ್ಲಿ ಇಂತಹ ಲಿಂಕ್ ಮೂಲಕ ಖರೀದಿ ಮಾಡಲು ಹೋದರೇ ನೀವು ಮೋಸ ಹೋಗುವ ಸಾಧ್ಯತೆಗಳು ಇರುತ್ತವೆ. ಏಕೆಂದರೇ ಅದು ನಕಲಿ ಇ ಕಾಮರ್ಸ್‌ (e commerce) ಸೈಟ್ ಆಗಿರಬಹುದು. ಹೀಗಾಗಿ ಇ ಕಾಮರ್ಸ್‌ ತಾಣಗಳ ಅಧಿಕೃತ ಆಪ್‌ ಅಥವಾ ಅಧಿಕೃತ ವೆಬ್‌ಸೈಟ್‌ ಮೂಲಕವೇ ಖರೀದಿ ಮಾಡುವುದು ಸೂಕ್ತ.

ಡೆಬಿಟ್ ಕಾರ್ಡ್‌ ಅಥವಾ ಕ್ರೆಡಿಟ್ ಕಾರ್ಡ್‌ ಮಾಹಿತಿ

ಡೆಬಿಟ್ ಕಾರ್ಡ್‌ ಅಥವಾ ಕ್ರೆಡಿಟ್ ಕಾರ್ಡ್‌ ಮಾಹಿತಿ

ಇ ಕಾಮರ್ಸ್‌ ತಾಣಗಳಲ್ಲಿ ಖರೀದಿಗೆ ಮುಂದಾಗುವ ಬಹುತೇಕರು ಆನ್‌ಲೈನ್ ಪೇಮೆಂಟ್ ಮಾಡಿ ಬಿಡುತ್ತಾರೆ. ಅದಕ್ಕಾಗಿ ಡೆಬಿಟ್ ಕಾರ್ಡ್‌ ಅಥವಾ ಕ್ರೆಡಿಟ್ ಕಾರ್ಡ್‌ ಮಾಹಿತಿ ಇ ಕಾಮರ್ಸ್‌ ಸೈಟ್‌ಗಳಲ್ಲಿ ಸೇವ್ ಮಾಡಿಬಿಡುತ್ತಾರೆ. ಆದರೆ ಕೆಲವೊಮ್ಮೆ ಡೆಬಿಟ್ ಕಾರ್ಡ್‌ ಅಥವಾ ಕ್ರೆಡಿಟ್ ಕಾರ್ಡ್‌ ಮಾಹಿತಿ ಸೇವ್ ಮಾಡುವುದು ಸೂಕ್ತವಲ್ಲ. ಏಕೆಂದರೇ ಇದರಿಂದ ಕೆಲವೊಮ್ಮೆ ಅಪಾಯ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿ ಸೇವ್ ಮಾಡದೇ, ಖರೀದಿಸುವಾಗ ಮಾತ್ರ ನಮೂದಿಸಬಹುದು.

ವಾರೆಂಟಿ ಅಥವಾ ಗ್ಯಾರೆಂಟಿ ಇದೆಯಾ?

ವಾರೆಂಟಿ ಅಥವಾ ಗ್ಯಾರೆಂಟಿ ಇದೆಯಾ?

ಆನ್‌ಲೈನ್‌ ಶಾಪಿಂಗ್ (Online shopping) ಮಾಡುವ ಗ್ರಾಹಕರೇ, ಆನ್‌ಲೈನ್‌ನಲ್ಲಿ ಯಾವುದೇ ಎಲೆಕ್ಟ್ರಾನಿಕ್ ಅಥವಾ ಗ್ಯಾಡ್ಜೆಟ್ಸ್‌ ಉತ್ಪನ್ನ ಖರೀದಿಸುವಾಗ ಎಚ್ಚರ ವಹಿಸುವುದು ಸೂಕ್ತ. ಆಫರ್‌ನಲ್ಲಿ ಖರೀದಿಸುವ ಆ ಉತ್ಪನ್ನ ವಾರೆಂಟಿ ಅಥವಾ ಗ್ಯಾರೆಂಟಿ ಪಡೆದಿದೆಯೇ?..ಇಲ್ಲವೇ ತಿಳಿದುಕೊಂಡು ಖರೀದಿಸುವುದು ಉತ್ತಮ.

ಕ್ಯಾಶ್‌ಆನ್ ಡೆಲಿವರಿ ಬೆಸ್ಟ್‌ ಅಲ್ಲವೇ?

ಕ್ಯಾಶ್‌ಆನ್ ಡೆಲಿವರಿ ಬೆಸ್ಟ್‌ ಅಲ್ಲವೇ?

ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಗಳು ಭರ್ಜರಿ ರಿಯಾಯಿತಿ ನೀಡುತ್ತವೆ. ಹಾಗೆಯೇ ನೋ ಕಾಸ್ಟ್‌ ಇಎಮ್‌ಐ ಸೌಲಭ್ಯ ಸಹ ಒದಗಿಸುತ್ತವೆ. ಆದರೆ ಇ ಕಾಮರ್ಸ್‌ ತಾಣಗಳ ಮೂಲಕ ಉತ್ಪನ್ನಗಳನ್ನು ಖರೀದಿಸುವಾಗ ಕ್ಯಾಶ್‌ ಆನ್‌ ಡೆಲಿವರಿ ಆಯ್ಕೆ ಮಾಡುವುದು ಉತ್ತಮ ಆಗಿದೆ. ಉತ್ಪನ್ನ ನಿಮ್ಮ ಕೈ ಸೇರಿದಾಗ ಹಣ ನೀಡಬಹುದು. ಇದರಿಂದಾಗಿ ಮೋಸ ಹೋಗುವ ಭಯ ಇರದು.

ದಾರಿ ತಪ್ಪಿಸುವ ಕೊಡುಗೆಗಳಿಂದ ದೂರವಿರಿ

ದಾರಿ ತಪ್ಪಿಸುವ ಕೊಡುಗೆಗಳಿಂದ ದೂರವಿರಿ

ತುಂಬಾ ಕಡಿಮೆ ಬೆಲೆಯಲ್ಲಿ ಹೆಚ್ಚು ಭರವಸೆ ನೀಡುವ ಯಾವುದೇ ಇ-ಕಾಮರ್ಸ್‌ (e commerce) ಸೈಟ್‌ ಬಗ್ಗೆ ಎರಡು ಬಾರಿ ಯೋಚಿಸಿ ಮುಂದುವರೆಯಿರಿ. ಅನುಮಾನಾಸ್ಪದವಾಗಿದೆ. ಬೆಲೆ ತುಂಬಾ ಕಡಿಮೆಯಿದ್ದರೆ, ವ್ಯಾಪಾರಿಯು ಕಾನೂನುಬದ್ಧವಾಗಿ ಐಟಂಗಳ ಮೂಲಕ ಬಂದಿದ್ದಾರೆಯೇ ಎಂದು ಪರಿಗಣಿಸಿ.

Best Mobiles in India

English summary
Online shopping is convenient, in that you can shop around, find the best prices, and have your packages delivered right to your doorstep without ever having to leave the comfort of your own home.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X