FIFA ಅಭಿಮಾನಿಗಳಿಂದ ಜಿಯೋ ಸಿನಿಮಾಗೆ ತರಾಟೆ; ಯಾಕೆ ಗೊತ್ತಾ!?

|

ಜಗತ್ತಿನಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಪಡೆದಿರುವ ಕ್ರೀಡೆ ಎಂದರೆ ಅದು ಫುಟ್‌ಬಾಲ್‌. ಈ ಕಾರಣಕ್ಕಾಗಿಯೇ ಫುಟ್‌ಬಾಲ್‌ ಆಟಕ್ಕೆ ಎಲ್ಲಿಲ್ಲದ ಕ್ರೇಜ್‌ ಸೃಷ್ಟಿಯಾಗುತ್ತದೆ. ಆದರೆ, ಈ ಕ್ರೇಜ್‌ಗೆ ಜಿಯೋ ತಣ್ಣೀರೆರಚಿದೆ. ಪರಿಣಾಮ ಫುಟ್‌ಬಾಲ್‌ ಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಜಿಯೋ ಸಿನಿಮಾ ಆಪ್‌ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಶ್ವಕಪ್

ಹೌದು, ಕತಾರ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ 2022(FIFA) ಅನ್ನು ಕೆಲವು ಆಪ್‌ಗಳ ಮೂಲಕ ವೀಕ್ಷಣೆ ಮಾಡಬಹುದಾಗಿದೆ. ಅದರಲ್ಲಿ ಸೋನಿ, ವೂಟ್‌ ಆಪ್‌, ಸೂಪರ್‌ ಸ್ಪೋರ್ಟ್ ಸೇರಿದಂತೆ ಇನ್ನಿತರೆ ಪ್ರಮುಖ ಆಪ್‌ಗಳಲ್ಲಿ ಸ್ಟ್ರೀಮಿಂಗ್‌ ಲಭ್ಯವಿದೆ. ಈ ಆಪ್‌ಗಳ ಹಾಗೆಯೇ ಜಿಯೋ ಸಹ ಲೈವ್‌ ಸ್ಟ್ರೀಮ್‌ ಸೇವೆ ನೀಡಲು ಮುಂದಾಗಿದ್ದು, ಫುಟ್‌ಬಾಲ್‌ ಆಟದ ಅಭಿಮಾನಿಗಳಿಗೆ ಭಾರೀ ಬೇಸರ ಆಗುವಂತೆ ಮಾಡಿದೆ.

ಕಳಪೆ ಲೈವ್ ಸ್ಟ್ರೀಮಿಂಗ್

ಕಳಪೆ ಲೈವ್ ಸ್ಟ್ರೀಮಿಂಗ್

FIFA ವರ್ಲ್ಡ್ ಆಟವನ್ನು ಜಿಯೋ ಸಿನಿಮಾದ ಮೂಲಕ ವೀಕ್ಷಣೆ ಮಾಡುವವರು ಜಿಯೋವನ್ನು ದೂರಲು ಕಾರಣ ಕಳಪೆ ಲೈವ್ ಸ್ಟ್ರೀಮಿಂಗ್. ಇನ್ನು ಫುಟ್‌ಬಾಲ್‌ ಆಟಗಾರರು ಕೇವಲ ಟೀಕೆ ಮಾಡುವುದಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಜಿಯೋ ಸಿನಿಮಾವನ್ನು ಮನಬಂದಂತೆ ಟ್ರೋಲ್ ಮಾಡಿದ್ದಾರೆ. ಈ ಮೂಲಕ ಭಾರತದ ಅಭಿಮಾನಿಗಳಿಗೆ ಬೇಸರ ತಂದಿರುವ ಜಿಯೋ ಟ್ವಿಟ್ಟರ್‌ನಲ್ಲಿ ಟೀಕೆಗೆ ಗುರಿಯಾಗಿದೆ.

ಉಚಿತ ಸೇವೆ ಎಂದು ಘೋಷಿಸಿತ್ತು

ಉಚಿತ ಸೇವೆ ಎಂದು ಘೋಷಿಸಿತ್ತು

ಕತಾರ್‌ನಲ್ಲಿ ನಡೆಯುತ್ತಿರುವ FIFA ವಿಶ್ವಕಪ್ 2022 ಅನ್ನು ಉಚಿತವಾಗಿ ತೋರಿಸುತ್ತೇವೆ ಎಂದು ಈ ಹಿಂದೆ ಜಿಯೋ ಹೇಳಿಕೊಂಡಿತ್ತು. ಅದರಂತೆ ವಿಡಿಯೋ ಸ್ಟ್ರೀಮಿಂಗ್‌ ಸೇವೆ ನೀಡಿದೆಯಾದರೂ ಅದೂ ಕಳಪೆ ಹಿನ್ನೆಲೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಜಿಯೋ ಸಿನಿಮಾ

ಜಿಯೋ ಸಿನಿಮಾದ ವಿರುದ್ಧ ಬಳಕೆದಾರರು ತಮ್ಮ ಹತಾಶೆಯನ್ನು ತೋರಿಸಲು ಟ್ವಿಟರ್‌ ಪ್ಲಾಟ್‌ಫಾರ್ಮ್‌ ಬಳಕೆ ಮಾಡಿದ್ದಾರೆ. ಇದರಲ್ಲಿ ಭಾರತದ ಕೆಲವು ಪ್ರಸಿದ್ಧ ವ್ಯಕ್ತಿಗಳು ಈ ಬಗ್ಗೆ ಬೇಸರ ಹೊರಹಾಕಿರುವುದೂ ವಿಶೇಷ ಸಂಗತಿಯಾಗಿದೆ. ಈ ಕಾಣಕ್ಕೆ ಈ ವಿಷಯ ಇದದೀಗ ಟ್ವಿಟ್ಟರ್‌ನಲ್ಲಿ ಟ್ರೆಂಡ್‌ ಆಗಿದೆ.

ಕೆಟ್ಟ ಅನುಭವ

ಕೆಟ್ಟ ಅನುಭವ

ಜಿಯೋ ಸಿನಿಮಾ ಅತ್ಯಂತ ಭಯಾನಕ ಲೈವ್ ಟೆಲಿಕಾಸ್ಟ್ ಅನುಭವವನ್ನು ನೀಡಿದೆ, ನಾನು ಮಾತ್ರ ಮೋಸ ಹೋಗಿದ್ದೇನೆಯೇ? ಎಂದು ಚೇತನ್‌ ನಾಯಕ್‌ ಎಂಬುವರು ಟ್ವೀಟ್‌ ಮಾಡಿದ್ದರೆ, ಇದಕ್ಕೆ ಮತ್ತೊಬ್ಬರು ಫಿಫಾದ ವಿಡಿಯೋ ತುಣುಕೊಂದನ್ನು ಹಾಕಿ ಮೊದಲ ಗೋಲ್ ಬಾರಿಸಿದ್ದನ್ನು ನಾವು ನೋಡಿದ್ದು ಹೀಗೆ ಎಂದು ಬರೆದುಕೊಂಡಿದ್ದಾರೆ. ವಿಷಯ ಏನೆಂದರೆ ಗೋಲ್‌ ಹೊಡೆಯುವಾಗಲೇ ವಿಡಿಯೋ ಬಫರಿಂಗ್ ಆಗಲು ಶುರುವಾಗಿದೆ.

ಕತಾರ್‌ನಿಂದ ಕೊರಿಯರ್ ಮೂಲಕ ಸ್ಟ್ರೀಮಿಂಗ್‌ ಮಾಡುತ್ತಿದ್ದಾರೆ

ಕತಾರ್‌ನಿಂದ ಕೊರಿಯರ್ ಮೂಲಕ ಸ್ಟ್ರೀಮಿಂಗ್‌ ಮಾಡುತ್ತಿದ್ದಾರೆ

ವಿಶ್ವಕಪ್ ಪ್ರಸಾರದಲ್ಲಿ ಇದು ಕೆಟ್ಟ ಆರಂಭ, ನಿಮಗೆ ಸಾಧ್ಯವಾಗದಿದ್ದರೆ ಸುಮ್ಮನೆ ಇದ್ದುಬಿಡಿ, ತುಂಬಾ ನಿರಾಶೆಯಾಗಿದೆ ಎಂದು ಲಿಯಾಫಸ್‌ ಎಂಬುವರು ಟ್ವೀಟ್‌ ಮಾಡಿದ್ದರೆ, ಅವರು ಕತಾರ್‌ನಿಂದ ಕೊರಿಯರ್ ಮೂಲಕ ಜಿಯೋ ಸಿನಿಮಾಕ್ಕೆ ಲೈವ್ ಟೆಲಿಕಾಸ್ಟ್ ಫ್ರೇಮ್‌ಗಳನ್ನು ಕಳುಹಿಸುತ್ತಿರುವಂತೆ ಕಾಣುತ್ತಿದೆ. ಯಾಕೆಂದರೆ, ಪ್ರತಿ ಸೆಕೆಂಡಿಗೆ ಪ್ರೇಮ್‌ಗಳು ಬದಲಾಗುವ ಬದಲು ಪ್ರತಿ 3-5 ದಿನಗಳಿಗೆ ಪ್ರೇಮ್‌ಗಳು ಬದಲಾಗುತ್ತಿವೆ ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ.

ಜಿಯೋ ಹೇಳಿದ್ದೇನು?

ಜಿಯೋ ಹೇಳಿದ್ದೇನು?

ಇದಿಷ್ಟೇ ಅಲ್ಲದೆ, ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಮೀಮ್‌ಗಳು ಸಹ ಭಾರೀ ಸದ್ದು ಮಾಡುತ್ತಿವೆ. ಆದರೆ ಇದಕ್ಕೆ ಜಿಯೋ ಮಾತ್ರ ಬೇರೆಯದೇ ಆದ ಉತ್ತರ ನೀಡಿದೆ. ಜಿಯೋ ಸಿನಿಮಾ ಅಭಿಮಾನಿಗಳೇ... ದಯಮಾಡಿ ನಿಮ್ಮ ಆಪ್‌ ಅನ್ನು ಅಪ್‌ಗ್ರೇಡ್‌ ಮಾಡುವ ಮೂಲಕ ಉತ್ತಮ ವಿಡಿಯೋ ಸ್ಟ್ರೀಮಿಂಗ್‌ ಪಡೆಯಿರಿ ಎಂದಿದೆ. ಜೊತೆಗೆ ಈ ಸಮಸ್ಯೆಗೆ ಕ್ಷಮೆ ಯಾಚಿಸುತ್ತೇವೆ ಎಂದು ಟ್ವೀಟ್‌ ಮಾಡಿದೆ.

ಪಂದ್ಯ

ಕೆಲವರು ಈ ಪಂದ್ಯ ನೋಡುವ ಉದ್ದೇಶದಿಂದ ಇತರೆ ಪ್ಲಾಟ್‌ಫಾರ್ಮ್‌ಗೆ ಚಂದಾದಾರಿಕೆ ಪಡೆಯಲು ಮುಂದಾದರು. ಆದರೆ, ಜಿಯೋ, ನಮ್ಮಲ್ಲಿ ಯಾವುದೇ ಚಂದಾದಾರಿಕೆ ಇಲ್ಲ ಉಚಿತವಾಗಿ ವೀಕ್ಷಣೆ ಮಾಡಬಹುದು ಎಂದು ಘೋಷಣೆ ಮಾಡಿತು. ಇದರಿಂದ ಆರಂಭದಲ್ಲಿ ಸಂತಸಗೊಂಡ ಜಿಯೋ ಬಳಕೆದಾರರು. ಈಗ ಈ ಬೇಸರದ ಅನುಭವವನ್ನು ಪಡೆಯುವಂತಾಗಿದೆ.

Best Mobiles in India

Read more about:
English summary
FIFA fans hit Jio cinema; Do you know why!?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X