ಫೈರ್-ಬೋಲ್ಟ್ ಡ್ಯಾಝಲ್ ಪ್ಲಸ್ ಸ್ಮಾರ್ಟ್ ವಾಚ್ ಲಾಂಚ್‌; ಬ್ಲೂಟೂತ್ ಕರೆ ಆಯ್ಕೆ

|

ಮಾರುಕಟ್ಟೆಯಲ್ಲಿ ಈಗಾಗಲೇ ಹಲವಾರು ಸ್ಮಾರ್ಟ್‌ವಾಚ್‌ಗಳು ಲಭ್ಯ ಇದ್ದು, ಪ್ರಮುಖ ಗ್ಯಾಜೆಟ್‌ ತಯಾರಿಕಾ ಕಂಪೆನಿಗಳು ಈ ಸ್ಮಾರ್ಟ್‌ವಾಚ್‌ಗಳನ್ನು ಅಪ್‌ಗ್ರೇಡ್‌ ಮಾಡುತ್ತಾ ಮಾರುಕಟ್ಟೆಗೆ ಪರಿಚಯಸುತ್ತಲೇ ಬರುತ್ತಿದೆ. ಇದರ ನಡುವೆ ಈಗ ಫೈರ್-ಬೋಲ್ಟ್ ಡ್ಯಾಝಲ್ ಪ್ಲಸ್ ಸ್ಮಾರ್ಟ್ ವಾಚ್ (Fire-Boltt Dazzle Plus ) ಅನಾವರಣಗೊಂಡಿದೆ. ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್ ಕರೆ ಆಯ್ಕೆಯನ್ನು ಪಡೆದಿದೆ.

ಬ್ಲೂಟೂತ್

ಹೌದು, ಬ್ಲೂಟೂತ್ ಕರೆ ಆಯ್ಕೆ ಇರುವ ಫೈರ್-ಬೋಲ್ಟ್ ಡ್ಯಾಝಲ್ ಪ್ಲಸ್ ಸ್ಮಾರ್ಟ್ ವಾಚ್ ಅನ್ನು ಭಾರತದಲ್ಲಿ ಅನಾವರಣ ಮಾಡಲಾಗಿದೆ. ಈ ಸ್ಮಾರ್ಟ್‌ವಾಚ್‌ 60 ವಿಧದ ಸ್ಪೋರ್ಟ್ಸ್‌ ಮೋಡ್‌ ಆಯ್ಕೆ ಹೊಂದಿದ್ದು, ವಾಟರ್‌ ಹಾಗೂ ಡಸ್ಟ್‌ ರೆಸಿಸ್ಟೆಂಟ್‌ ಫೀಚರ್ಸ್‌ ಪಡೆದಿದೆ. ಇದರ ಜೊತೆಗೆ ಕ್ಯಾಮೆರಾ ಕಂಟ್ರೋಲ್‌ ಆಯ್ಕೆಯನ್ನು ಪಡೆದಿರುವುದು ವಿಶೇಷ.

ಸ್ಮಾರ್ಟ್‌ವಾಚ್‌

ಈ ಸ್ಮಾರ್ಟ್‌ವಾಚ್‌ ಆಂಡ್ರಾಯ್ಡ್‌ ಹಾಗೂ ಐಓಎಸ್‌ ಡಿವೈಸ್‌ಗಳಿಗೆ ಹೊಂದಿಕೊಳ್ಳಲಿದ್ದು, ನೋಟಿಫಿಕೇಶನ್‌ ಫೀಚರ್‌ನ್ನು ಸಹ ಪಡೆದುಕೊಂಡಿದೆ. ಇದರಲ್ಲಿ ‎64 MB RAM ನ ಸ್ಟೋರೇಜ್‌ ಸಾಮರ್ಥ್ಯ ಇದ್ದು, ಬ್ಲಾಕ್‌, ಬ್ಲೂ, ಗೋಲ್ಡ್, ಸಿಲ್ವರ್‌ ಹಾಗೂ ಬ್ಲಾಕ್‌ಗೋಲ್ಡ್‌ ಬಣ್ಣಗಳಲ್ಲಿ ಲಭ್ಯವಿದೆ. ಹಾಗಿದ್ರೆ ಭಾರತದಲ್ಲಿ ಇದರ ಬೆಲೆ ಎಷ್ಟು? ಏನೆಲ್ಲಾ ಆರೋಗ್ಯ ಸಂಬಂಧಿತ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಈ ಫೈರ್-ಬೋಲ್ಟ್ ಡ್ಯಾಝಲ್ ಪ್ಲಸ್ ಸ್ಮಾರ್ಟ್ ವಾಚ್ 1.83 ಇಂಚಿನ ಐಪಿಎಸ್‌ ಡಿಸ್‌ಪ್ಲೇ ಹೊಂದಿದ್ದು, ಸ್ಮಾರ್ಟ್‌ವಾಚ್‌ಗಳ ವಿಭಾಗದಲ್ಲೇ ದೊಡ್ಡ ಡಿಸ್‌ಪ್ಲೇ ಹೊಂದಿರುವ ವಾಚ್‌ ಎನಿಸಿಕೊಂಡಿದೆ. ಇನ್ನು 240 x 280 ಪಿಕ್ಸೆಲ್‌ ರೆಸಲ್ಯೂಶನ್ ಹೊಂದಿರುವ ಇದು 204 ppi ಫೀಚರ್ಸ್‌ ಪಡೆದಿದೆ. ಹಾಗೆಯೇ ಗಡಿಯಾರವು 100 ಕ್ಕೂ ಹೆಚ್ಚು ಕ್ಲೌಡ್-ಆಧಾರಿತ ವಾಚ್ ಫೇಸ್‌ಗಳ ಆಯ್ಕೆಯನ್ನು ಹೊಂದಿದೆ.

ಏನೆಲ್ಲಾ ಫೀಚರ್ಸ್‌ ಇದೆ

ಏನೆಲ್ಲಾ ಫೀಚರ್ಸ್‌ ಇದೆ

ಸ್ಮಾರ್ಟ್‌ವಾಚ್‌ ಅಂದಮೇಲೆ ನಮ್ಮ ದೇಹದ ಬಹುಪಾಲು ಚಟುವಟಿಕೆಗಳನ್ನು ಅವು ಮೇಲ್ವಿಚಾರಣೆ ಮಾಡುತ್ತವೆ. ಅದರಂತೆ ಈ ಸ್ಮಾರ್ಟ್‌ ವಾಚ್‌ನಲ್ಲಿ ಈ ಹಿಂದೆ ಇದ್ದಂತಹ ಸ್ಮಾರ್ಟ್‌ವಾಚ್‌ಗಳಿಂತಲೂ ಹೆಚ್ಚಿನ ಫೀಚರ್ಸ್‌ ನೀಡಲಾಗಿದೆ. ಇದರಲ್ಲಿ 60 ಕ್ರೀಡಾ ಮೋಡ್‌ಗಳ ಆಯ್ಕೆಗಳನ್ನು ನೀಡಲಾಗಿದೆ. ಇದರ ಜೊತೆಗೆ SpO2 ಮೇಲ್ವಿಚಾರಣೆ, ಹೃದಯ ಬಡಿತದ ಟ್ರ್ಯಾಕಿಂಗ್ ಹಾಗೂ ನಿದ್ರೆಯ ಮೇಲ್ವಿಚಾರಣೆಯಂತಹ ಪ್ರಮುಖ ಫೀಚರ್ಸ್‌ ಇದರಲ್ಲಿದೆ.

ಕ್ಯಾಮೆರಾ ಕಂಟ್ರೋಲ್

ಕ್ಯಾಮೆರಾ ಕಂಟ್ರೋಲ್

ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ಹವಾಮಾನದ ಅಪ್‌ಡೇಟ್‌, ಯಾವಾಗ ಕೂರಬೇಕು, ಯಾವಾಗ ನೀರು ಕುಡಿಯಬೇಕು ಎಂಬಿತ್ಯಾದಿ ಮಾಹಿತಿಯನ್ನು ನೀಡುತ್ತಿರುತ್ತದೆ. ಇದಿಷ್ಟೇ ಅಲ್ಲದೆ ಕ್ಯಾಮೆರಾ ಕಂಟ್ರೋಲ್ ಮಾಡುವುದರ ಜೊತೆಗೆ ಮ್ಯೂಸಿಕ್‌, ಅಲಾರಂ, ಟೈಮರ್‌ಗಳಂತಹ ಇನ್ನಿತರೆ ಆಯ್ಕೆಯನ್ನು ಪಡೆದಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ ಒಂದು ಚಾರ್ಜ್‌ನಲ್ಲಿ 5 ರಿಂದ 8 ದಿನಗಳು ಕಾರ್ಯನಿರ್ವಹಿಸಲಿದ್ದು, 30 ದಿನಗಳ ಸ್ಟ್ಯಾಂಡ್‌ಬೈ ಶಕ್ತಿಯನ್ನು ಹೊಂದಿದೆ.

ಕನೆಕ್ಟಿವಿಟಿ

ಕನೆಕ್ಟಿವಿಟಿ ಆಯ್ಕೆಯಲ್ಲಿ ಇದು ಆಂಡ್ರಾಯ್ಡ್‌ ಹಾಗೂ ಐಓಎಸ್‌ ಡಿವೈಸ್‌ಗಳಿಗೆ ಸಪೋರ್ಟ್‌ ಮಾಡಲಿದ್ದು, ಸ್ಮಾರ್ಟ್‌ ವಾಚ್‌ನಲ್ಲಿ ನೋಟಿಫಿಕೇಶನ್ ಆಯ್ಕೆ ಸಹ ಇದೆ. ಇನ್ನುಳಿದಂತೆ ‎64 MB RAM ನ ಸ್ಟೋರೇಜ್‌ ಸಾಮರ್ಥ್ಯ ಹೊಂದಿರುವ ಇದು 80 ಗ್ರಾಂ. ತೂಕ ಹೊಂದಿದೆ. ಇದರ ಜೊತೆಗೆ ಸ್ಮಾರ್ಟ್ ವಾಚ್ ಡಸ್ಟ್‌, ಮಳೆ ಹಾಗೂ ಬೆವರು ನಿರೋಧಕ ಆಗಿದ್ದು, ವರ್ಷದ ಎಲ್ಲಾ ಸಮಯದಲ್ಲೂ ಧರಿಸಬಹುದಾಗಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಈ ಸ್ಮಾರ್ಟ್‌ವಾಚ್‌ ಬ್ಲಾಕ್‌, ಬ್ಲೂ, ಗೋಲ್ಡ್, ಸಿಲ್ವರ್‌ ಹಾಗೂ ಬ್ಲಾಕ್‌ಗೋಲ್ಡ್‌ ಬಣ್ಣಗಳಲ್ಲಿ ಲಭ್ಯ ಇದೆ. ಭಾರತದಲ್ಲಿ ಇದಕ್ಕೆ ಪರಿಚಯಾತ್ಮಕ ದರ 1,599ರೂ. ಗಳನ್ನು ನಿಗದಿ ಮಾಡಲಾಗಿದೆ. ಈ ಸ್ಮಾರ್ಟ್‌ವಾಚ್‌ ಅನ್ನು ಅಮೆಜಾನ್‌ ಸೈಟ್‌ನಲ್ಲಿ ಖರೀದಿ ಮಾಡಬಹುದಾಗಿದೆ.

Best Mobiles in India

English summary
There are already several smartwatches available in the market and now the Fire-Bolt Dazzle Plus smartwatch will join the ranks. This watch has been unveiled in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X