ಫೈರ್-ಬೋಲ್ಟ್ ಸೂಪರ್ನೋವಾ ಅನಾವರಣ; ಬೆಲೆ ಎಷ್ಟು ಗೊತ್ತಾ!?

|

ಫೈರ್ ಬೋಲ್ಟ್ ನಿರಂತರವಾಗಿ ಸುಧಾರಿತ ತಂತ್ರಜ್ಞಾನವನ್ನು ತನ್ನ ಡಿವೈಸ್‌ಗಳಲ್ಲಿ ಅಳವಡಿಸಿ ಲಾಂಚ್‌ ಮಾಡಲಾಗುತ್ತಿದ್ದು, ಇದರ ಭಾಗವಾಗಿಯೇ ಸ್ಮಾರ್ಟ್‌ವಾಚ್‌ಗಳನ್ನು ಸಹ ಪರಿಚಿಸಿಕೊಂಡು ಬರುತ್ತಿದೆ. ಅದರಲ್ಲೂ ಅಗ್ಗದ ಬೆಲೆಯಿಂದ ದುಬಾರಿ ಬೆಲೆಯವರೆಗೂ ಈ ಬ್ರ್ಯಾಂಡ್‌ನ ವಾಚ್‌ಗಳು ಲಭ್ಯವಾಗುತ್ತಿದ್ದು, ಇದೀಗ ಮತ್ತೆ ಹೊಸ ಸ್ಮಾರ್ಟ್‌ವಾಚ್‌ವೊಂದನ್ನು ಲಾಂಚ್‌ ಮಾಡಿದೆ. ಇದಕ್ಕೂ ಮೊದಲು ಫೈರ್-ಬೋಲ್ಟ್ ರಾಕೆಟ್ ಸ್ಮಾರ್ಟ್‌ವಾಚ್ ಅನ್ನು ಅನಾವರಣ ಮಾಡಲಾಗಿತ್ತು.

ಸ್ಮಾರ್ಟ್‌ವಾಚ್

ಹೌದು, ಸ್ಮಾರ್ಟ್‌ವಾಚ್ ವಿಭಾಗದಲ್ಲಿ ಫೈರ್ ಬೋಲ್ಟ್ ಸಂಸ್ಥೆಯು ಪ್ರಮುಖ ಸ್ಥಾನದಲ್ಲಿದ್ದು, ಭಾರೀ ಜನಮನ್ನಣೆ ಗಳಿಸಿಕೊಂಡಿದೆ. ಅಂತೆಯೇ ಈ ಹೊಸ ಸ್ಮಾರ್ಟ್‌‌ವಾಚ್‌ಗೆ ಫೈರ್-ಬೋಲ್ಟ್ ಸೂಪರ್ನೋವಾ ಎಂದು ಹೆಸರಿಡಲಾಗಿದ್ದು, ಈ ವಾಚ್‌ ಬ್ಲೂಟೂತ್ ಕಾಲ್‌ ಫೀಚರ್ಸ್‌ ಅನ್ನು ಪಡೆದುಕೊಂಡಿದ್ದು, ಇದರೊಂದಿಗೆ ದೀರ್ಘ ದಿನದ ಬ್ಯಾಕಪ್‌ ನೀಡುವ ಬ್ಯಾಟರಿ ಸಾಮರ್ಥ್ಯ ಪಡೆದುಕೊಂಡಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಏನು?, ಭಾರತದಲ್ಲಿ ಈ ವಾಚ್‌ನ ಬೆಲೆ ಎಷ್ಟು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಓದಿರಿ.

ಪ್ರಮುಖ ಫೀಚರ್ಸ್‌

ಪ್ರಮುಖ ಫೀಚರ್ಸ್‌

ಫೈರ್-ಬೋಲ್ಟ್ ಸೂಪರ್‌ನೋವಾ ಸ್ಮಾರ್ಟ್‌ವಾಚ್‌ 1.78 ಇಂಚಿನ ಆಲ್‌ವೇಸ್‌ ಆನ್ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದ್ದು, 368 x 448 ಪಿಕ್ಸೆಲ್‌ ರೆಸಲ್ಯೂಶನ್ ನೀಡಲಿದೆ. ಇದರೊಂದಿಗೆ 500nits ಬ್ರೈಟ್‌ನೆಸ್‌ ನೀಡುತ್ತಿರುವುದು ಮತ್ತೊಂದು ವಿಶೇಷ. ಜೊತೆಗೆ ಟೆಕ್ಸ್ಚರ್ಡ್ ಸ್ಟ್ರಾಪ್ ಮತ್ತು ನಯವಾದ ಲೋಹೀಯ ಬಾಡಿ ಡಿಸೈನ್‌ ಹೊಂದಿದ್ದು ಇನ್ನಷ್ಟು ಆಕರ್ಷಕವಾಗಿದೆ.

ರೊಟೇಟ್‌ ಕ್ರೌನ್‌ ಬಟನ್

ರೊಟೇಟ್‌ ಕ್ರೌನ್‌ ಬಟನ್

ಸುಲಭ ನ್ಯಾವಿಗೇಷನ್‌ ಉದ್ದೇಶಕ್ಕೆ ರೊಟೇಟ್‌ ಕ್ರೌನ್‌ ಬಟನ್‌ ಆಯ್ಕೆ ನೀಡಲಾಗಿದೆ. ಹಾಗೆಯೇ ನಿಮ್ಮ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು 123 ಕ್ಕೂ ವಿವಿಧ ಸ್ಪೋರ್ಟ್ಸ್‌ ಮೋಡ್‌ಅನ್ನು ಹೊಂದಿದ್ದು, ಇನ್‌ಬಿಲ್ಟ್‌ ಗೇಮ್‌ಗಳು, ವಿವಿಧ ವಾಚ್ ಫೇಸ್‌ಗಳು ಮತ್ತು ವೈಯುಕ್ತೀಕರಿಸಿಕೊಳ್ಳಬಹುದಾದ 8 ವಾಚ್‌ ಫೇಸ್‌ಗಳು ಸಹ ಇದರಲ್ಲಿದೆ.

ಇನ್‌ಬಿಲ್ಟ್‌ ವಾಯ್ಸ್‌ ಅಸಿಸ್ಟೆಂಟ್‌ ಫೀಚರ್ಸ್‌

ಇನ್‌ಬಿಲ್ಟ್‌ ವಾಯ್ಸ್‌ ಅಸಿಸ್ಟೆಂಟ್‌ ಫೀಚರ್ಸ್‌

ತ್ವರಿತ ಮತ್ತು ಸುಗಮ ಸಂಪರ್ಕಕ್ಕಾಗಿ ಬ್ಲೂಟೂತ್ ಆವೃತ್ತಿ 5.0 ಆಯ್ಕೆ ನೀಡಲಾಗಿದೆ. ಇದರೊಂದಿಗೆ ತಡೆರಹಿತ ಕರೆ ಅನುಭವಕ್ಕಾಗಿ ಇನ್‌ಬಿಲ್ಟ್‌ ಮೈಕ್ರೊಫೋನ್ ಮತ್ತು ಸ್ಪೀಕರ್ ಆಯ್ಕೆ ಸಹ ಇದ್ದು, ಇದರೊಂದಿಗೆ ಇನ್‌ಬಿಲ್ಟ್‌ ವಾಯ್ಸ್‌ ಅಸಿಸ್ಟೆಂಟ್‌ ಆಯ್ಕೆ ಮಾತ್ರ ಹೆಚ್ಚು ಉಪಯುಕ್ತ ಫೀಚರ್ಸ್‌ ಎನಿಸಲಿದೆ.

 IP67 ರೇಟಿಂಗ್‌ ಆಯ್ಕೆ

IP67 ರೇಟಿಂಗ್‌ ಆಯ್ಕೆ

ಫೈರ್-ಬೋಲ್ಟ್ ಸೂಪರ್ನೋವಾವು SPO2, ಡೈನಾಮಿಕ್ ಹೃದಯ ಬಡಿತ, ನಿದ್ರೆ ಮತ್ತು ಇನ್ನಿತರೆ ಆರೋಗ್ಯ ಸಂಬಂಧಿ ವಿಷಯಗಳನ್ನು ಟ್ರ್ಯಾಕ್‌ ಮಾಡುವುದರ ಜೊತೆಗೆ ವಾಟರ್‌ ರೆಸಿಸ್ಟೆಂಟ್‌ಗಾಗಿ IP67 ರೇಟಿಂಗ್‌ ಆಯ್ಕೆ ನೀಡಲಾಗಿದೆ. ಹಾಗೆಯೇ ಬಿರುಕು ಮತ್ತು ಧೂಳು ನಿರೋಧಕವಾಗಿದ್ದು, ಇದು ಫಿಟ್ನೆಸ್ ಮತ್ತು ಹೊರಾಂಗಣದಲ್ಲಿ ಇರುವವರು ಅಥವಾ ಬಹುಪಾಲು ಸಮಯ ಕ್ರೀಡೆಯಲ್ಲಿ ತೊಡಗುವವರಿಗೆ ಪರಿಪೂರ್ಣ ಆಯ್ಕೆಯಾಗಿದೆ. ಇದರೊಂದಿಗೆ ಈ ವಾಚ್‌ ಐಓಎಸ್‌ ಹಾಗೂ ಆಂಡ್ರಾಯ್ಡ್‌ ಡಿವೈಸ್‌ ಎರಡಕ್ಕೂ ಸಹ ಹೊಂದಿಕೊಳ್ಳುತ್ತದೆ.

ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ

ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ

ಫೈರ್-ಬೋಲ್ಟ್ ಸೂಪರ್ನೋವಾ ವಾಚ್‌ 5 ದಿನಗಳವರೆಗೆ ಬಾಳಿಕೆ ಬರುವ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಇನ್ನು ಕ್ಯಾಮರಾ ಮತ್ತು ಮ್ಯೂಸಿಕ್‌ ಕಂಟ್ರೋಲ್‌ ಮಾಡಲು ಹಾಗೂ ಹವಾಮಾನ ನವೀಕರಣಗಳನ್ನು ಪಡೆದುಕೊಳ್ಳಲು ಈ ವಾಚ್‌ ಬಹಳ ಸಹಾಯಕ. ಜೊತೆಗೆ ನೋಟಿಫಿಕೇಶನ್‌ ಅನ್ನು ಸಹ ವೀಕ್ಷಣೆ ಮಾಡಬಹುದಾಗಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಫೈರ್-ಬೋಲ್ಟ್ ಸೂಪರ್ನೋವಾ ಸ್ಮಾರ್ಟ್ ವಾಚ್‌ಗೆ 3,499 ರೂ. ಗಳ ಆಫರ್ ಬೆಲೆ ನಿಗದಿ ಮಾಡಲಾಗಿದ್ದು, ಫ್ಲಿಪ್‌ಕಾರ್ಟ್‌ ಹಾಗೂ ಫೈರ್‌ ಬೋಲ್ಟ್‌ ಆನ್‌ಲೈನ್‌ ತಾಣದಿಂದ ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಈ ವಾಚ್‌ ಹಳದಿ, ಕಿತ್ತಳೆ ಮತ್ತು ನೀಲಿ, ಕಪ್ಪು, ತಿಳಿ ಚಿನ್ನದ ಬಣ್ಣ ಸೇರಿದಂತೆ ವಿವಿಧ ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ.

Best Mobiles in India

English summary
Fire-Boltt Supernova 1.78 AMOLED display launched in india.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X