'ಫೈರ್‌ಫಾಕ್ಸ್ ನೂತನ ಆವೃತ್ತಿ ರಿಲೀಸ್!..ಗೂಗಲ್ ಕ್ರೋಮ್‌ ಕೊಲ್ಲಲಿವೆ ಹಲವು ಫೀಚರ್ಸ್‌ಗಳು!!

Written By:

ಬಹುತೇಕ ಜನರು ಬಳಕೆ ಮಾಡುವ ಗೂಗಲ್ ಕಂಪೆನಿ ಸರ್ಚ್ ಎಂಜಿನ್‌ ಗೂಗಲ್ ಕ್ರೋಮ್‌ಗೆ ಈಗಲೂ ಸೆಡ್ಡುಹೊಡೆಯುತ್ತಿರುವ ಸರ್ಚ್ ಎಂಜಿನ್ ಎಂದರೆ ಅದು ಮೊಜಿಲ್ಲಾ ಫೈರ್‌ಫಾಕ್ಸ್.! ಗೂಗಲ್ ಅಬ್ಬರದ ನಡುವೆಯೋ ಹಲವು ವೈಶಿಷ್ಟ್ಯಗಳೊಂದಿಗೆ ಇಂದಿಗೂ ಉಳಿದಿರುವ ಫೈರ್‌ಫಾಕ್ಸ್ ಇದೀಗ ಗೂಗಲ್ ಕ್ರೋಮ್‌ಗೆ ಎದಿರೇಟು ನೀಡಲು ತಯಾರಾಗಿದೆ.!!

ಹೌದು, ಮೊಜಿಲ್ಲಾ ಫೈರ್‌ಫಾಕ್ಸ್ ನೂತನ ವರ್ಷನ್ "ಫೈರ್‌ಫಾಕ್ಸ್ ಕ್ವಾಂಟಮ್" ಆವೃತ್ತಿ ಇದೀಗ ಬಿಡುಗಡೆಯಾಗಿದ್ದು, ವೇಗ ಮತ್ತು RAM ಬಳಕೆ ಮತ್ತು ಇನ್ನಿತರ ಫೀಚರ್ಸ್‌ಗಳಲ್ಲಿ ಗೂಗಲ್ ಕ್ರೋಮ್‌ ಮೀರಿಸುವ ಸಾಮರ್ಥ್ಯವನ್ನು ಹೊಂದಿದೆ.!! ಹಾಗಾದರೆ, 'ಫೈರ್‌ಫಾಕ್ಸ್ ಕ್ವಾಂಟಮ್" ಆವೃತ್ತಿ ಹೇಗಿದೆ? ಮತ್ತು ಹೊಸ ಫೀಚರ್ಸ್ಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನವೆಂಬರ್ 14 ರಂದು ಲಾಂಚ್!!

ನವೆಂಬರ್ 14 ರಂದು ಲಾಂಚ್!!

ಮೊಜಿಲ್ಲಾ ಫೈರ್‌ಫಾಕ್ಸ್ ನೂತನ ವರ್ಷನ್ "ಫೈರ್‌ಫಾಕ್ಸ್ ಕ್ವಾಂಟಮ್" ನವೆಂಬರ್ 14 ರಂದು ಲಾಂಚ್ ಆಗಿದೆ.! ಬೀಟಾ ವರ್ಷನ್‌ನಲ್ಲಿ ಫೈರ್‌ಫಾಕ್ಸ್ ಕ್ವಾಂಟಮ್ ಬಿಡುಗಡೆಯಾಗಿದ್ದು, ಕ್ರೋಮ್ ಅನ್ನು ಹಿಂದಿಕ್ಕುವ ಸಲುವಾಗಿ ಹಲವು ಸುಧಾರಿತ ಅಂಶಗಳನ್ನು ಫೈರ್‌ಫಾಕ್ಸ್ ಕ್ವಾಂಟಮ್ ಅಳವಡಿಸಿಕೊಂಡಿದೆ.!!

ಸಂಸ್ಕರಣಾ ಸಾಮರ್ಥ್ಯ ಹೆಚ್ಚಳ!!

ಸಂಸ್ಕರಣಾ ಸಾಮರ್ಥ್ಯ ಹೆಚ್ಚಳ!!

ಮೊಜಿಲ್ಲಾ ಫೈರ್ಫಾಕ್ಸ್ ಕ್ವಾಂಟಮ್ ಆವೃತ್ತಿಯಲ್ಲಿ ಹೆಚ್ಚು-ಕೋರ್ ಸಿಪಿಯುಗಳನ್ನು ಹತೋಟಿಯಲ್ಲಿಡಲು ಸಮಾನಾಂತರ ಸಂಸ್ಕರಣಾ ಸಾಮರ್ಥ್ಯಗಳನ್ನು ಸೇರಿಸಿಕೊಳ್ಳಲಾಗಿದೆ. ಇದರಿಂದ ಫೈರ್‌ಫಾಕ್ಸ್ ಕ್ವಾಂಟಮ್ ಆವೃತ್ತಿಯಲ್ಲಿ ಇಂಟರ್‌ನೆಟ್ ವೇಗ ಮತ್ತು ಕಾರ್ಯನಿರ್ವಹಣೆ ಬಹಳ ಸುಲಭವಾಗಲಿದೆ.!!

ಗೂಗಲ್‌ಗಿಂತ ಕಡಿಮೆ RAM ಬಳಕೆ!!

ಗೂಗಲ್‌ಗಿಂತ ಕಡಿಮೆ RAM ಬಳಕೆ!!

ಗೂಗಲ್ ಕ್ರೋಮ್‌ಗೆ ಸೆಡ್ಡುಹೊಡೆಯುವ ನಿಟ್ಟಿನಲ್ಲಿ ಹೆಚ್ಚು ಪ್ರಯತ್ನಿಸಿರುವ ಮೊಜಿಲ್ಲಾ ಫೈರ್ಫಾಕ್ಸ್ ಕ್ವಾಂಟಮ್ ಆವೃತ್ತಿಯಲ್ಲಿ ಕಡಿಮೆ RAM ಬಳಕೆ ಮಾಡುವಂತೆ ಅಭಿವೃದ್ದಿ ಮಾಡಲಾಗಿದೆ. ಮೊದಲಿನ ಆವೃತ್ತಿಗಿಂತ ನೂತನ ಫೈರ್‌ಫಾಕ್ಸ್ ಆವೃತ್ತಿ ಗೂಗಲ್‌ಗಿಂತ 30% RAM ಬಳಕೆ ಕಡಿಮೆಯಾಗಲಿದೆ ಎಂದು ಫೈರ್‌ಫಾಕ್ಸ್ ಹೇಳಿದೆ.!!

ಟ್ರ್ಯಾಕಿಂಗ್ ಪ್ರೊಟೆಕ್ಷನ್

ಟ್ರ್ಯಾಕಿಂಗ್ ಪ್ರೊಟೆಕ್ಷನ್

ಮೊಜಿಲ್ಲಾ ಕ್ವಾಂಟಮ್ ಆವೃತ್ತಿಯಲ್ಲಿ ಟ್ರ್ಯಾಕಿಂಗ್ ಪ್ರೊಟೆಕ್ಷನ್ ಎಂಬ ಹೊಸ ವೈಶಿಷ್ಟ್ಯವನ್ನು ಸೇರಿಸಿದೆ. ಈ ಟ್ರ್ಯಾಕಿಂಗ್ ಪ್ರೊಟೆಕ್ಷನ್ ಆನ್ಲೈನ್ ಬಳಕೆದಾರ ಟ್ರ್ಯಾಕಿಂಗ್ ಡೇಟಾ ಮತ್ತು ಸಂಪನ್ಮೂಲಗಳ ಹ್ಯಾಂಗಿಗ್ ವಿನಂತಿಗಳನ್ನು ನಿರ್ಬಂಧಿಸುತ್ತದೆ. ಮೊಜಿಲ್ಲಾದ ಪ್ರಕಾರ, ಈ ಟ್ರ್ಯಾಕಿಂಗ್ ಪ್ರೊಟೆಕ್ಷನ್ ವೈಶಿಷ್ಟ್ಯವು ಪೇಜ್ ಲೋಡ್ ಸಮಯವನ್ನು ಸುಮಾರು 44% ನಷ್ಟು ಕಡಿಮೆ ಮಾಡುತ್ತದೆ ಎಂದು ಹೇಳಿದೆ.

ಹೊಸ ಸಿಎಸ್ಎಸ್ ಎಂಜಿನ್

ಹೊಸ ಸಿಎಸ್ಎಸ್ ಎಂಜಿನ್

ಫೈರ್ಫಾಕ್ಸ್ ಕ್ವಾಂಟಮ್ ಆವೃತ್ತಿಯಲ್ಲಿ 'ರಸ್ಟ್ ಪ್ರೊಗ್ರಾಮಿಂಗ್' ಭಾಷೆಯಲ್ಲಿ ಬರೆಯಲ್ಪಟ್ಟ ಹೊಸ ಸಿಎಸ್ಎಸ್ ಎಂಜಿನ್ ಜಾರಿಗೆ ಬಂದಿದೆ.! ಇದರಿಂದ ಮೊಜಿಲ್ಲಾ ಫೈರ್‌ಫಾಕ್ಸ್ ಓಪನ್ ಸೋರ್ಸ್ ಆಯ್ಕೆ ಕೂಡ ಬದಲಾಗಿದ್ದು, ವಿಂಡೋಸ್, ಲಿನಕ್ಸ್ ಮತ್ತು ಮ್ಯಾಕ್ಓಎಸ್‌ಗಳ ಮೇಲೆ ಮೊದಲ ಬಾರಿಗೆ ಕ್ವಾಂಟಮ್ ಫೈರ್ಫಾಕ್ಸ್ ಆವೃತ್ತಿ ಬಿಡುಗಡೆಯಾಗಿದೆ.

ಓದಿರಿ:'ATM'ಗೆ ಗುಡ್‌ಬೈ!..ಭವಿಷ್ಯದ ಬ್ಯಾಂಕ್‌ 'ITM' ಮಷಿನ್ ಬರಲಿದೆ ಶೀಘ್ರದಲ್ಲಿ!!.ಎಲ್ಲರೂ ತಿಳಿಯಬೇಕು!?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
There are many reasons why people choose to stick with Google Chrome browser instead of Mozilla Firefox.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot