'ಟಿಕ್‌ಟಾಕ್‌' ಆಪ್‌ಗೆ ಇನ್ನು ಉಳಿಗಾಲವಿಲ್ಲ!.ಎಂಟ್ರಿ ಕೊಡ್ತಿದೆ 'ಫೈರ್‌ವರ್ಕ್'!

|

ಜನಪ್ರಿಯ ಶಾರ್ಟ್‌ ವಿಡಿಯೊ ಮೇಕಿಂಗ್ ಅಪ್ಲಿಕೇಶನ್ ಟಿಕ್‌ಟಾಕ್‌ ಸದ್ಯ ದೇಶದಲ್ಲಿ ಭಾರೀ ಕ್ರೇಜ್‌ ಹುಟ್ಟುಹಾಕಿದ್ದು, ಅನೇಕರು ಟಿಕ್‌ಟಾಕ್‌ಗೆ ಅಡಿಕ್ಟ್‌ ಆಗಿದ್ದಾರೆ. ಇದರೊಂದಿಗೆ ವಿಗೊ ವಿಡಿಯೊ ಮತ್ತು ಲೈಕ್‌ ಸಾಮಾಜಿಕ್ ಆಪ್‌ಗಳು ಸಹ ಬಳಕೆದಾರರನ್ನು ಆಕರ್ಷಿಸುತ್ತಿವೆ. ಆದರೆ ಇದೀಗ ಭಾರತಕ್ಕೆ ಮತ್ತೊಂದು ಹೊಸ ಅಪ್ಲಿಕೇಶನ್ ಎಂಟ್ರಿ ಕೊಡುತ್ತಿದ್ದು, ಹೀಗಾಗಿ ಇನ್ನು ಟಿಕ್‌ಟಾಕ್‌ ಹವಾ ಕಡಿಮೆ ಆಗಲಿದೆ.

ಫೈರ್‌ವರ್ಕ್

ಹೌದು, ಚೀನಾ ಮೂಲದ ಬೈಟ್‌ಡ್ಯಾನ್ಸ್‌ ಸಂಸ್ಥೆಗೆ ಸೇರಿದ ಟಿಕ್‌ಟಾಕ್‌ ಅಪ್ಲಿಕೇಶನ್‌ಗೆ ಈಗ ಪ್ರಬಲ ಫೈಟ್‌ ನೀಡಲು 'ಫೈರ್‌ವರ್ಕ್' ಆಪ್‌ ಆಗಮಿಸುತ್ತಿದೆ. ಫೈರ್‌ವರ್ಕ್‌ ಆಪ್‌ ಅನ್ನು ಕ್ಯಾಲಿಫೊರ್ನಿಯದ ಸ್ಟಾರ್ಟ್‌ ಅಪ್‌ 'ಲೂಪ್‌ ನೌ ಟೆಕ್ನಾಲಜೀಸ್ ಸಂಸ್ಥೆ' (Loop Now Technologies) ಅಭಿವೃದ್ಧಿ ಪಡೆಸಿದೆ. ಫೈರ್‌ವರ್ಕ್ ಅಪ್ಲಿಕೇಶನ್ ಫೀಚರ್ಸ್‌ಗಳು ಬಹುತೇಕ ಟಿಕ್‌ಟಾಕ್‌ನಂತೆ ಶಾರ್ಟ್‌ ವಿಡಿಯೊಗೆ ಸಪೋರ್ಟ್‌ ಮಾಡಲಿದೆ.

ಅತ್ಯುತ್ತಮ ಸ್ಮಾರ್ಟ್‌ಫೋನ್ ಮಾರುಕಟ್ಟೆ

ವಿಶ್ವದಲ್ಲಿಯೇ ಭಾರತ ದೇಶವು ಅತ್ಯುತ್ತಮ ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ಒಳಗೊಂಡಿದ್ದು, ಪ್ರತಿಯೊಬ್ಬರ ಮೇಲೆಯು ಪ್ರಭಾವ ಬೀರುತ್ತಿವೆ. ಈ ಕ್ರಾಂತಿಯ ಭಾಗವಾಗಲು ರೋಮಾಂಚಕ ಎನಿಸುತ್ತದೆ ಎಂದು ಫೈರ್‌ವರ್ಕ್‌ ಅಪ್ಲಿಕೇಶನ್ ತಯಾರಕ ಲೂಪ್ ನೌ ಟೆಕ್ನಾಲಜೀಸ್ ಸಂಸ್ಥೆಯ ಸಿಇಒ ವಿನ್ಸೆಂಟ್ ಯಾಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಫೈರ್‌ವರ್ಕ್‌ ಆಪ್‌ ಸಹ 30 ಸೆಕೆಂಡ್‌ ವಿಡಿಯೊಗೆ ಅವಕಾಶ ನೀಡಲಿದೆ.

ಶಾರ್ಟ್‌ ವಿಡಿಯೊ ಮೇಕಿಂಗ್

ಫೈರ್‌ವರ್ಕ್ ಶಾರ್ಟ್‌ ವಿಡಿಯೊ ಮೇಕಿಂಗ್ ಆಪ್‌ನಲ್ಲಿ ಬಳಕೆದಾರರು ಸ್ಮಾರ್ಟ್‌ಫೋನ್‌ಗಳಲ್ಲಿಯೇ ವಿಡಿಯೊಗಳನ್ನು ಮಾಡಬಹುದಾಗಿದೆ. ಅಡ್ಡಲಾಗಿ ಅಥವಾ ಉದ್ದವಾಗಿ ವಿಡಿಯೊಗಳನ್ನು ಶೂಟ್‌ ಮಾಡುವ ಆಯ್ಕೆಗಳು ಬಳಕೆದಾರರಿಗೆ ಲಭ್ಯವಾಗಲಿವೆ. ಫೈರ್‌ವರ್ಕ್ ದೇಶದ ಮನರಂಜನಾ ವಲಯದಲ್ಲಿ ದೊಡ್ಡ ಹೆಸರು ಮಾಡುವ ಗುರಿಯನ್ನು ಒಳಗೊಂಡಿದ್ದು, ಅದಕ್ಕಾಗಿ ಸಂಸ್ಥೆಯು ಹಲವು ಆಕರ್ಷಕ ಸೌಲಭ್ಯಗಳು ಆಪ್‌ನಲ್ಲಿ ನೀಡಲಿದೆ.

ಸೆನ್ಸಾರ್ ಟವರ್

ಸೆನ್ಸಾರ್ ಟವರ್ ಅಂಕಿಅಂಶಗಳ ಪ್ರಕಾರ ಟಿಕ್‌ಟಾಕ್‌ ಅತೀ ಹೆಚ್ಚು ಡೌನ್‌ಲೋಡ್ ಆಗಿರುವ ಆಪ್‌ ಆಗಿದ್ದು, ಆದರೆ ಫೇಸ್‌ಬುಕ್ ಜನಪ್ರಿಯತೆ ಕುಗ್ಗಿಸುವಲ್ಲಿ ಟಿಕ್‌ಟಾಕ್‌ ಸೋತಿದೆ. ಆದ್ರೆ ಇದೀಗ ಟಿಕ್‌ಟಾಕ್‌ಗೆ ನೇರವಾಗಿ ಫೈಟ್‌ ನೀಡಲು ಫೈರ್‌ವಾರ್ಕ್ ಶಾರ್ಟ್‌ ವಿಡಿಯೊ ಆಪ್‌ ಭಾರತಕ್ಕೆ ಎಂಟ್ರಿ ನೀಡಲಿದೆ. ಈ ಆಪ್‌ ಆಂಡ್ರಾಯ್ಡ್ ಮತ್ತು ಐಓಎಸ್‌ ಫ್ಲಾಟ್‌ಫಾರ್ಮ್‌ ಎರಡಕ್ಕೂ ಬೆಂಬಲ ನೀಡಲಿದೆ.

Best Mobiles in India

English summary
TikTok, Vigo Video and Likee growing in India, a similar platform called Firework, based in Silicon Valley, has now entered the Indian market. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X