ಗೂಗಲ್‌ ಅಸಿಸ್ಟೆಂಟ್‌ನಲ್ಲಿ ನಿಮಗೆ ಗೊತ್ತಿಲ್ಲದ ಫೀಚರ್ಸ್‌ ಇವು!?

|

ಗೂಗಲ್ ಅಸಿಸ್ಟೆಂಟ್ ಎನ್ನುವುದು ಗೂಗಲ್ ಅಭಿವೃದ್ಧಿಪಡಿಸಿದ ವರ್ಚುವಲ್ ಅಸಿಸ್ಟೆಂಟ್ ಸಾಫ್ಟ್‌ವೇರ್ ಆಪ್‌ ಆಗಿದ್ದು, ಮೊಬೈಲ್ ಹಾಗೂ ಹೋಮ್ ಆಟೊಮೇಷನ್ ಡಿವೈಸ್‌ಗಳಲ್ಲಿ ಕೆಲಸ ಮಾಡುತ್ತದೆ. ಇದು ಕೃತಕ ಬುದ್ಧಿಮತ್ತೆಯ ಆಧಾರದ ಮೇಲೆ ಕಾರ್ಯನಿರ್ವಹಿಸಲಿದ್ದು, ದ್ವಿಮುಖ ಸಂಭಾಷಣೆಗಳಲ್ಲಿ ಇದನ್ನು ತೊಡಗಿಸಬಹುದು. ಅದರಂತೆ ಏನಾದರೂ ಮಾಹಿತಿ ಬೇಕೆಂದರೆ ಅಥವಾ ಕರೆ ಮಾಡಲು 'ಹೇ ಗೂಗಲ್‌' ಎಂದು ಹೇಳಿದರೆ ಸಾಕು 'ನಾನು ನಿಮಗೆ ಹೇಗೆ ಸಹಾಯ ಮಾಡಲಿ' ಎನ್ನುವ ಧ್ವನಿ ಕೇಳಿಬರುತ್ತದೆ. ಇದೆಲ್ಲಕ್ಕೂ ಮಿಗಿಲಾಗಿ ಈ ಗೂಗಲ್‌ ಅಸಿಸ್ಟೆಂಟ್‌ನಲ್ಲಿ ಹಲವಾರು ಆಕರ್ಷಕ ಫೀಚರ್ಸ್‌ ಅಡಗಿವೆ.

ಗೂಗಲ್‌

ಹೌದು, ಗೂಗಲ್‌ನಲ್ಲಿ ತನ್ನ ಎಲ್ಲಾ ಡಿವೈಸ್‌ಗಳಲ್ಲಿ ಅಥವಾ ಇನ್ನಿತರೆ ಸೇವೆಗಳಲ್ಲಿ ಹೊಸ ರೀತಿಯ ಫೀಚರ್ಸ್‌ಗಳನ್ನು ನೀಡುತ್ತಾ ಬರುತ್ತಿದೆ. ಅದರಂತೆ ಈ ಗೂಗಲ್ ಅಸಿಸ್ಟೆಂಟ್‌ನಲ್ಲೂ ಸಹ ನಿಮ್ಮ ನಿರೀಕ್ಷೆಗೂ ಮೀರಿದ ಫೀಚರ್ಸ್‌ ನೀಡಿದೆ. ಹಾಗೆಯೇ ನೀವು ಇನ್ಮುಂದೆ ಈ ಫೀಚರ್ಸ್‌ ಬಳಕೆ ಮಾಡಿಕೊಂಡು ಗೂಗಲ್‌ ಅಸಿಸ್ಟೆಂಟ್‌ ಮೂಲಕ ಹೆಚ್ಚಿನ ಅನುಭವ ಪಡೆಯಬಹುದು.

ಗೂಗಲ್‌ಕೀಪ್‌ನಲ್ಲಿ ನೋಟ್ಸ್‌ ಮಾಡಿ

ಗೂಗಲ್‌ಕೀಪ್‌ನಲ್ಲಿ ನೋಟ್ಸ್‌ ಮಾಡಿ

ಸಾಮಾನ್ಯವಾಗಿ ಈವರೆಗೂ ಹಲವಾರು ಬಳಕೆದಾರರ ಹಸ್ತಚಾಲಿತವಾಗಿ ಗೂಗಲ್‌ ಕೀಪ್‌ ತೆರೆದು ಅಲ್ಲಿ ಕೀಬೋರ್ಡ್‌ ಬಳಕೆ ಮಾಡಿಕೊಂಡು ಬೇಕಾದ ಟಿಪ್ಪಣಿ ಮಾಡುತ್ತಿದ್ದೀರಿ ಎಂದು ಭಾವಿಸೋಣ. ಆದರೆ, ಈ ಫೀಚರ್ಸ್‌ ನಿಂದ ಸುಲಭವಾಗಿ ಟಿಪ್ಪಣಿ ಮಾಡಬಹುದು. ಅದು ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ ನೋಡಿ.

 ಮೇಕ್‌ ಎ ನೋಟ್

vಮೊದಲು ನೀವು 'ಮೇಕ್‌ ಎ ನೋಟ್' ಎಂದು ಹೇಳಿ, ನಂತರ ಗೂಗಲ್‌ ಕೀಪ್‌ನಲ್ಲಿ ಟಿಪ್ಪಣಿ ಮಾಡಿ. ಅದಾಗ್ಯೂ ನೀವು ಈಗಾಗಲೇ ಎವರ್‌ನೋಟ್‌ ನಂತಹ ಥರ್ಡ್-ಪಾರ್ಟಿ ನೋಟ್ಸ್ ಆಪ್‌ಗಳನ್ನು ಬಳಕೆ ಮಾಡುತ್ತಿದ್ದರೆ 'ಮೇಕ್‌ ಎ ನೋಟ್‌ ಇನ್‌ ಎವರ್‌ನೋಟ್‌' ಎಂದು ಹೇಳಬೇಕು. ಹಾಗೆಯೇ ಯಾವುದೇ ಬೇರೆ ಆಪ್‌ ಬಳಕೆ ಮಾಡಿದರೂ ಸಹ ಆ ಆಪ್‌ನ ಹೆಸರನ್ನು ಮೊದಲು ಉಲ್ಲೇಖ ಮಾಡಿದರೆ ನಿಮ್ಮ ಟಿಪ್ಪಣಿ ರಚನೆಯಾಗಿ ಅಲ್ಲಿ ಸೇವ್‌ ಆಗುತ್ತದೆ.

ರಿಮೆಂಬರ್‌ ಥಿಂಗ್ಸ್‌

ರಿಮೆಂಬರ್‌ ಥಿಂಗ್ಸ್‌

ನಿಮ್ಮ ತಲೆಯಲ್ಲಿ ಎಷ್ಟು ವಿಷಯ ಅಂತಾ ನೆನಪಿಟ್ಟುಕೊಳ್ಳೋದಕ್ಕೆ ಸಾಧ್ಯ ಇದೆ ಹೇಳಿ. ಇದೇ ಕಾರಣಕ್ಕೆ ಈ ಫೀಚರ್ಸ್‌ ನಿಮಗೆ ಅನುಕೂಲಕರವಾಗಿದೆ. ಅದರಲ್ಲೂ ಪ್ರಮುಖವಾಗಿ ನಾವು ಸ್ಮಾರ್ಟ್‌ ಡಿವೈಸ್‌ಗಳಲ್ಲಿ ಇರಿಸಲಾದ ಮಾಹಿತಿ ಎಂದಿಗೂ ಶಾಶ್ವತವಾಗಿರುತ್ತದೆ. ಇವನ್ನು ಗೂಗಲ್‌ ಅಸಿಸ್ಟೆಂಟ್ ಮೂಲಕ ಯಾವಾಗ ಬೇಕು ಅವಾಗ ಪಡೆಯಬಹುದು. ಹಾಗೆಯೇ ನೀವು ಎಲ್ಲಾದರೂ ಡಾಕ್ಯೂಮೆಂಟ್‌ಗಳನ್ನು ಇರಿಸಿ ಅದನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಫೀಡ್‌ ಮಾಡಿದ್ದರೆ 'ರಿಮೆಂಬರ್ X' ಎಂದು ಹೇಳುವ ಮೂಲಕ ನಿಮ್ಮ ಡಾಕ್ಯುಮೆಂಟ್‌ಗಳು ಎಲ್ಲಿವೆ ಎಂಬುದನ್ನು ಕಂಡುಕೊಳ್ಳಬಹುದು. ಅದಕ್ಕೂ ಮೊದಲು ನೀವು 'ಓಪನ್ ಮೆಮೊರಿ' ಎಂದು ಹೇಳಬೇಕಾಗುತ್ತದೆ. ಆಗ ನೀವು ಉಳಿಸಿದ ಮಾಹಿತಿ ನಿಮಗೆ ಲಭ್ಯವಾಗುತ್ತದೆ.

ಕ್ರೀಡಾ ಪ್ರಶ್ನೆಗಳನ್ನು ಕೇಳಬಹುದು

ಕ್ರೀಡಾ ಪ್ರಶ್ನೆಗಳನ್ನು ಕೇಳಬಹುದು

ಗೂಗಲ್‌ ಅಸಿಸ್ಟೆಂಟ್‌ ಫೀಚರ್ಸ್‌ನಲ್ಲಿ ನೀವು ಕ್ರೀಡಾ ಸಂಬಂಧಿತ ಪ್ರಶ್ನೆಗಳನ್ನು ಕೇಳುವ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಅದರಲ್ಲೂ ನಿಮ್ಮ ನೆಚ್ಚಿನ ತಂಡದ ಸ್ಕೋರ್ ಎಷ್ಟು?, ಅವರ ಮುಂದಿನ ಆಟ ಯಾವುದು? ಎಂಬುದನ್ನು ಸೇರಿದಂತೆ ಇನ್ನಿತರೆ ಪ್ರಶ್ನೆಗಳನ್ನು ಕೇಳಬಹುದು. ಉದಾಹರಣೆಗೆ ನೀವು 'ತಂಡವು ಹೇಗೆ ಆಡುತ್ತಿದೆ' ಎಂದು ಕೇಳಿದರೆ ಅದಕ್ಕೆ ಸಂಬಂಧಿಸಿದ ಇತ್ತೀಚಿನ ಎಲ್ಲಾ ಸುದ್ದಿಗಳನ್ನು ಡಿಸ್‌ಪ್ಲೇ ಮಾಡುತ್ತದೆ.

ನಾಣ್ಯವನ್ನು ತಿರುಗಿಸಬಹುದು

ನಾಣ್ಯವನ್ನು ತಿರುಗಿಸಬಹುದು

ನೀವು ನಿಮ್ಮ ಸ್ನೇಹಿತರ ಜೊತೆ ಮೈದಾನಕ್ಕೆ ಹೋಗಿ ನಂತರ ನಾಟ್ಯವನ್ನು ಪ್ಲಿಪ್‌ ಮಾಡುವ ಮೂಲಕ ಯಾರು ಮೊದಲು ಆಟ ಆಡಬೇಕು ಎಂದು ನಿರ್ಧಾರ ಮಾಡುತ್ತೀರಿ ಅಲ್ಲವೇ. ಅಕಸ್ಮಾತ್‌ ನಿಮ್ಮ ಬಳಿ ನಾಣ್ಯ ಇಲ್ಲವಾದರೆ ಏನು ಮಾಡುವಿರಿ?. ಅದಕ್ಕೆಂದೇ ಗೂಗಲ್‌ ಅಸಿಸ್ಟೆಂಟ್‌ ನಲ್ಲಿ ಒಂದು ಸೌಲಭ್ಯ ಇದೆ. 'ಫ್ಲಿಪ್ ಎ ಕಾಯಿನ್' ಎಂದು ಗೂಗಲ್‌ ಅಸಿಸ್ಟೆಂಟ್‌ ನಲ್ಲಿ ಹೇಳಿದರೆ ಅನಿಮೇಷನ್‌ನೊಂದಿಗೆ ನಾಣ್ಯ ಪ್ಲಿಪ್‌ ಆಗುತ್ತದೆ. ಆಗ ಸುಲಭವಾಗಿ ಯಾರು ಮೊದಲು ಆಟ ಆಡಬಹುದು, ನಂತರ ಆಡಬಹುದು ಎಂಬುದನ್ನು ತೀರ್ಮಾನಿಸಿಕೊಳ್ಳಬಹುದು.

ಹಾಡುಗಳನ್ನು ಪತ್ತೆ ಮಾಡಿ

ಹಾಡುಗಳನ್ನು ಪತ್ತೆ ಮಾಡಿ

ಸಾಮಾನ್ಯವಾಗಿ ನೀವು ಗುನುಗುವ ಹಾಡನ್ನು ಅಥವಾ ನಮ್ಮ ಸುತ್ತಮುತ್ತಲು ಕೇಳ ಬಂದ ಹಾಡನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಲಿಸಬೇಕು ಎಂದರೆ ಅದಕ್ಕಾಗಿ ಹುಡುಕಾಟ ನಡೆಸಬೇಕು. ಅಥವಾ ಶಾಝಮ್ ಆಪ್‌ ಮೂಲಕ ನಿಮ್ಮ ಇಷ್ಟದ ಸಂಗೀತವನ್ನು ಪತ್ತೆ ಮಾಡಬಹುದು. ಆದರೆ, ಈ ಗೂಗಲ್‌ ಅಸಿಸ್ಟೆಂಟ್‌ ಮೂಲಕವೇ ಬೇಕಾದ ಹಾಡನ್ನು ಪ್ಲೇ ಮಾಡಬಹುದು. ಇದಕ್ಕಾಗಿ ನಿಮ್ಮ ಸ್ಮಾರ್ಟ್‌ಫೋನ್‌ನ ವಿಜೆಟ್‌ನಲ್ಲಿ(widget) ಕಾಣಿಸಿಕೊಳ್ಳವ ಮೈಕ್ ಐಕಾನ್ ಮೇಲೆ ಕ್ಲಿಕ್ ಮಾಡಿ, ನಂತರ ಕೆಳಭಾಗದಲ್ಲಿ ಕಾಣುವ 'ಸರ್ಚ್‌ ಫಾರ್‌ ಎ ಸಾಂಗ್‌' ಆಯ್ಕೆಯ ಮೇಲೆ ಟ್ಯಾಪ್‌ ಮಾಡಿ. ತಕ್ಷಣವೇ ನಿಮ್ಮ ಸುತ್ತ ಮುತ್ತ ಪ್ಲೇ ಆಗುತ್ತಿರುವ ಹಾಡನ್ನು ಆಲಿಸಿಕೊಂಡು ಅದೇ ಸಾಂಗ್‌ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪ್ಲೇ ಮಾಡುತ್ತದೆ. ಅಥವಾ ನಿಮಗೆ ಗೊತ್ತಿರುವ ಕೆಲವು ಸಾಲನ್ನು ಹಾಡಿದರೆ ಗೂಗಲ್‌ ಅದೇ ಸಾಂಗ್‌ ಅನ್ನು ಪ್ಲೇ ಮಾಡುತ್ತದೆ.

ಆಸಕ್ತಿಕರ ಕೀವರ್ಡ್ಸ್‌

ಆಸಕ್ತಿಕರ ಕೀವರ್ಡ್ಸ್‌

ನೀವು ಗೂಗಲ್‌ ಅಸಿಸ್ಟೆಂಟ್‌ ಮೂಲಕ 'Do a barrel roll' ಎಂದು ಹೇಳಿದರೆ ಅಥವಾ ಗೂಗಲ್‌ನಲ್ಲಿ ಸರ್ಚ್‌ ಮಾಡಿದರೆ ಗೂಗಲ್‌ ಪುಟ ನಿಮ್ಮನ್ನು ರಂಜಿಸುವ ಹಾಗೆ ಒಂದೆರಡು ಸುತ್ತು ತಿರುಗುತ್ತದೆ. ಇದೆ ರೀತಿಯ ವಿಷಯಗಳನ್ನು ಈ ಕೆಳಗೆ ನೀಡಲಾಗಿದೆ ನೀವು ಒಮ್ಮೆ ಪ್ರಯತ್ನಿಸಿ ನೋಡಿ.

Do a barrel roll
What's the loneliest number?
Who are you?
Can you rap?
Can you sing?
Are you sentient?
Are we in the Matrix?
Tell me a joke
Roll a dice

Best Mobiles in India

English summary
Google Assistant plays an important role in Android smartphones. Accordingly, here are five interesting things about Google Assistant.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X