ಫ್ಲಿಪ್‌ಕಾರ್ಟ್‌ ಅಪ್ಲಿಕೇಶನ್‌ನಲ್ಲಿ ಈಗ ಕನ್ನಡ ಭಾಷೆಯ ಆಯ್ಕೆ!

|

ಪ್ರಸ್ತುತ ಇ ಕಾಮರ್ಸ್‌ ವೆಬ್‌ಸೈಟ್‌ಗಳು ಶಾಪಿಂಗ್ ಪ್ರಿಯರ ಪ್ರಮುಖ ಅಡ್ಡಾಗಳಾಗಿವೆ. ಅವುಗಳಲ್ಲಿ ವಾಲ್‌ಮಾರ್ಟ್‌ ಒಡೆತನದ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣವು ಒಂದಿಲ್ಲೊಂದು ನೂತನ ಫೀಚರ್ಸ್‌ ಅಳವಡಿಸುವ ಮೂಲಕ ಗ್ರಾಹಕರನ್ನು ಸೆಳೆದಿದೆ. ಅದೇ ಹಾದಿಯಲ್ಲಿ ಮುನ್ನಡೆದಿರುವ ಫ್ಲಿಪ್‌ಕಾರ್ಟ್‌ ಸಂಸ್ಥೆಯು ತನ್ನ ಅಪ್ಲಿಕೇಶನಿನಲ್ಲಿ ಇದೀಗ ಪ್ರಾದೇಶಿಕ ಭಾಷೆಯ ಆಯ್ಕೆಗಳನ್ನು ಪರಿಚಯಿಸಿದೆ.

ಫ್ಲಿಪ್‌ಕಾರ್ಟ್‌

ಹೌದು, ಇ ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ತಾಣವು ತನ್ನ ಅಪ್ಲಿಕೇಶನ್‌ನಲ್ಲಿ ಈಗ ಕನ್ನಡ, ತಮಿಳು ಮತ್ತು ತೆಲುಗು ಈ ಮೂರು ಪ್ರಾದೇಶಿಕ ಭಾಷೆಗಳ ಆಯ್ಕೆಯನ್ನು ಒದಗಿಸಿದೆ. ಫ್ಲಿಪ್‌ಕಾರ್ಟ್‌ ಈಗಾಗಲೇ ಅಪ್ಲಿಕೇಶನ್ನಲ್ಲಿ ಕಿರಾಣಿ ಶಾಪಿಂಗ್‌ಗಾಗಿ ಹಿಂದಿ, ಇಂಗ್ಲಿಷ ಭಾಷೆಯ ರ್ಧವನಿ ಮೂಲಕ ಆದೇಶಿಸುವ ಸೌಲಭ್ಯ ನೀಡಿದೆ. ಈ ಮೂಲಕ ಸಂಸ್ಥೆಯು ದೇಶದ ಸ್ಥಳೀಯ ಇ ಶಾಪಿಂಗ್ ಪ್ರಿಯರನ್ನು ತಲುಪಲು ಬಯಸುತ್ತದೆ.

ಇ-ಕಾಮರ್ಸ್

ಕಳೆದ ವರ್ಷದಲ್ಲಿ ಲಕ್ಷಾಂತರ ಗ್ರಾಹಕರಿಗೆ ಇ-ಕಾಮರ್ಸ್ ಅಳವಡಿಕೆಯನ್ನು ಹೆಚ್ಚಿಸಲು ನಾವು ವಾಯಿಸ್, ವಿಡಿಯೋ ಮತ್ತು ವರ್ನಾಕ್ಯುಲರ್ ಅಡಿಯಲ್ಲಿ ಅನೇಕ ಸಲ್ಯೂಷನ್‌ಗಳನ್ನು ಪರಿಚಯಿಸಿದ್ದೇವೆ. ಭಾಷೆ ತಡೆಗೋಡೆ ಪರಿಹರಿಸಲ್ಪಟ್ಟರೆ, ಬಹುಬೇಗನೆ ಹೆಚ್ಚಿನ ಗ್ರಾಹಕರನ್ನು ತಲುಪಲು ಒಂದು ಅವಕಾಶ ಲಭ್ಯ ಎಂಬುದನ್ನು ನಾವು ನಂಬುತ್ತೇವೆ. ಎಂದು ಫ್ಲಿಪ್‌ಕಾರ್ಟ್ ಗ್ರೂಪ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಲ್ಯಾಣ್ ಕೃಷ್ಣಮೂರ್ತಿ ಹೇಳಿದ್ದಾರೆ.

ಭಾಷೆ

ಭಾಷೆ

ಫ್ಲಿಪ್‌ಕಾರ್ಟ್‌ನ ಪ್ರತಿಸ್ಪರ್ಧಿಯಾದ ಅಮೆಜಾನ್ 2018 ರಲ್ಲಿ ತನ್ನ ವೆಬ್‌ಸೈಟ್‌ನಲ್ಲಿ ಹಿಂದಿ ಭಾಷೆಯನ್ನು ಪ್ರಾರಂಭಿಸಿತು. ಹಾಗೆಯೇ ಕಳೆದ ವರ್ಷ ಹಿಂದಿ ಭಾಷೆಗೆ ಅಲೆಕ್ಸಾ ಸ್ಮಾರ್ಟ್ ವಾಯ್ಸ್ ಅಸಿಸ್ಟೆಂಟ್‌ ಬೆಂಬಲವನ್ನು ನೀಡಿತು. ಇದೀಗ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳ ಆಯ್ಕೆಯನ್ನು ಅಪ್ಲಿಕೇಶನಿನಲ್ಲಿ ಸೇರಿಸಿದೆ.

TRAI ಪ್ರಕಾರ

ಟೆಲಿಕಾಂ ರೆಗ್ಯುಲೇಟರಿ ಅಥಾ%E

Most Read Articles
Best Mobiles in India

English summary
Flipkart has added Tamil, Telugu, and Kannada languages for consumer interface of its ecommerce platform.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X