ಫ್ಲಿಪ್‌ಕಾರ್ಟ್‌ ಬಿಗ್ ಮಿಲಿಯನ್ ಡೇಸ್‌ : ಬಜೆಟ್‌ ಫೋನ್‌ಗಳು ಇನ್ನಷ್ಟು ಅಗ್ಗ!

|

ಜನಪ್ರಿಯ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನ ಬಿಗ್‌ ಮಿಲಿಯನ್ ಡೇಸ್‌ ಸೇಲ್ ಶುರುವಾಗಲು ಇನ್ನೇನು ಕೆಲವೇ ದಿನಗಳು ಅಷ್ಟೇ ಬಾಕಿ ಉಳಿದಿದೆ. ಇ-ಶಾಪಿಂಗ್ ಪ್ರಿಯರಂತೂ ಫ್ಲಿಪ್‌ಕಾರ್ಟ್‌ನಲ್ಲಿ ಯಾವೆಲ್ಲಾ ಉತ್ಪನ್ನಗಳನ್ನು ಖರೀದಿಸಬೇಕೆಂದು ಈಗಾಗಲೇ ಲೆಕ್ಕಾಚಾರ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಸ್ಮಾರ್ಟ್‌ಫೋನ್‌ ಖರೀದಿಸುವವರು ಈಗಾಗಲೇ ಅದೆಷ್ಟು ಬಾರಿ ಫ್ಲಿಪ್‌ಕಾರ್ಟ್‌ ತಾಣಕ್ಕೆ ಲಾಗ್‌ಇನ್‌ ಮಾಡಿ ಡಿಸ್ಕೌಂಟ್‌ ಬಗ್ಗೆ ಚೆಕ್‌ ಮಾಡಿದ್ದಾರೋ.?.ಅದು ಅವರಿಗೆ ಗೊತ್ತು.

ಬಿಗ್ ಮಿಲಿಯನ್‌ ಡೇಸ್‌

ಹೌದು, ಫ್ಲಿಪ್‌ಕಾರ್ಟ್‌ ಆಯೋಜಿಸುವ 'ಬಿಗ್ ಮಿಲಿಯನ್‌ ಡೇಸ್‌' ಸೇಲ್‌ ಅಂದರೇ ಅದು ಹಾಗೆನೇ, ಗ್ರಾಹಕರನ್ನು ಖರೀದಿಗೆ ಪ್ರೇರೆಪಿಸುತ್ತದೆ. ಈ ಬಾರಿಯ ಫ್ಲಿಪ್‌ಕಾರ್ಟ್ 'ಬಿಗ್ ಮಿಲಿಯನ್‌ ಡೇಸ್‌' ಸೇಲ್‌ ಇದೇ ಸೆಪ್ಟಂಬರ್ 29ರಂದು ಶುರುವಾಗಲಿದ್ದು, ಅಕ್ಟೋಬರ್ 4ರ ವರೆಗೂ ನಡೆಯಲಿದೆ. ಈ ಸೇಲ್ ಮೇಳದಲ್ಲಿ ಇತ್ತೀಚಿಗೆ ಮಾರುಕಟ್ಟೆಗೆ ಲಾಂಚ್ ಆಗಿರುವ ಅತ್ಯುತ್ತಮ ಫೀಚರ್ಸ್‌ಗಳ ಸ್ಮಾರ್ಟ್‌ಫೋನ್‌ಗಳು ಡಿಸ್ಕೌಂಟ್‌ನಲ್ಲಿ ಲಭ್ಯವಾಗಲಿವೆ.

ಡಿಸ್ಕೌಂಟ್‌ ಸೇಲ್

ಬಿಗ್ ಬ್ಯಾಟರಿ ಲೈಫ್, ತ್ರಿಪಲ್ ಕ್ಯಾಮೆರಾ, ಪವರ್‌ಫುಲ್ ಪ್ರೊಸೆಸರ್‌, ಫೀಚರ್ಸ್‌ಗಳನ್ನು ಒಳಗೊಂಡ ಬ್ರ್ಯಾಂಡೆಡ್ ಸ್ಮಾರ್ಟ್‌ಫೋನ್‌ಗಳಿಗೂ ಅತ್ಯುತ್ತಮ ರಿಯಾಯಿತಿ, ಕ್ಯಾಶ್‌ಬ್ಯಾಕ್‌ ಪ್ರಯೋಜನಗಳು ದೊರೆಯಲಿವೆ. ಹಾಗಾದರೇ ಫ್ಲಿಪ್‌ಕಾರ್ಟ್‌ 'ಬಿಗ್ ಮಿಲಿಯನ್‌ ಡೇಸ್‌' ಸೇಲ್ ಮೇಳದಲ್ಲಿ ಬೆಸ್ಟ್‌ ಡಿಸ್ಕೌಂಟ್‌ನಲ್ಲಿ ಲಭ್ಯವಾಗುವ ಸ್ಮಾರ್ಟ್‌ಫೋನ್‌ಗಳು ಯಾವುವು ಮತ್ತು ಅವುಗಳ ಕೀ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ.

ರೆಡ್ಮಿ ನೋಟ್ 7s

ರೆಡ್ಮಿ ನೋಟ್ 7s

ಶಿಯೋಮಿ ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಈ ಸ್ಮಾರ್ಟ್‌ಫೋನ್ 48ಎಂಪಿ ಕ್ಯಾಮೆರಾ, 4,000mAh ಬ್ಯಾಟರಿ ಲೈಫ್‌, 4GB RAM ಮತ್ತು 64GB ಸ್ಟೋರೇಜ್ ಫೀಚರ್ಸ್‌ಗಳಿಂದ ಗುರುತಿಸಿಕೊಂಡಿದೆ. ಹಾಗೆಯೇ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಫ್ಲಿಪ್‌ಕಾರ್ಟ್‌ ಸೇಲ್ ಮೇಳದಲ್ಲಿ ಈ ಸ್ಮಾರ್ಟ್‌ಫೋನ್ 11,999ರೂ.ಗಳಿಗೆ ದೊರೆಯಲಿದೆ.

ಮೊಟೊರೊಲಾ ಒನ್‌ ಆಕ್ಷನ್

ಮೊಟೊರೊಲಾ ಒನ್‌ ಆಕ್ಷನ್

ಇತ್ತೀಚಿಗೆ ಬಿಡುಗಡೆ ಆಗಿರುವ 'ಮೊಟೊರೊಲಾ ಒನ್‌ ಆಕ್ಷನ್' ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ನೊಂದಿಗೆ 3,500mAh ಬ್ಯಾಟರಿ ಬಾಳಿಕೆ ಪಡೆದಿದೆ. ಹಾಗೂ 4GB RAM ಮತ್ತು 128GB ಆಂತರಿಕ ಸ್ಟೋರೇಜ್ ಹೊಂದಿದ್ದು, 6.3 ಇಂಚಿನ ಪೂರ್ಣ ಹೆಚ್‌ಡಿ ಡಿಸ್‌ಪ್ಲೇಯನ್ನು ಪಡೆದಿದೆ. ಬಿಗ್ ಮಿಲಿಯನ್‌ ಡೇಸ್‌ ಸೇಲ್ ಮೇಳದಲ್ಲಿ ಈ ಸ್ಮಾರ್ಟ್‌ಫೋನ್ 13,999ರೂ.ಗಳಿಗೆ ದೊರೆಯಲಿದೆ.

ರಿಯಲ್‌ ಮಿ 5

ರಿಯಲ್‌ ಮಿ 5

6.5 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿರುವ 'ರಿಯಲ್‌ ಮಿ 5' ಸ್ಮಾರ್ಟ್‌ಫೋನ್ ಮೂರು ರಿಯರ್ ಕ್ಯಾಮೆರಾ ಒಳಗೊಂಡಿದೆ. ಜೊತೆಗೆ 4GB RAM ಮತ್ತು 128GB ಆಂತರಿಕ ಸ್ಟೋರೇಜ್ ಸ್ಥಳಾವಕಾಶ ಹೊಂದಿದ್ದು, 5,000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಲೈಫ್‌ ಪಡೆದುಕೊಂಡಿದೆ. ಬಿಗ್ ಮಿಲಿಯನ್‌ ಡೇಸ್‌ ಸೇಲ್ ಮೇಳದಲ್ಲಿ ಗ್ರಾಹಕರು 11,999ರೂ. ಗಳಿಗೆ 'ರಿಯಲ್‌ ಮಿ 5' ಸ್ಮಾರ್ಟ್‌ಫೋನ್ ಖರೀದಿಸಬಹುದು.

ವಿವೋ Z1 ಪ್ರೊ

ವಿವೋ Z1 ಪ್ರೊ

ವಿವೋ Z1 ಪ್ರೊ ಸ್ಮಾರ್ಟ್‌ಫೋನ್ ಇತ್ತೀಚಿಗೆ ಬಿಡುಗಡೆ ಆಗಿದ್ದು, 6.5 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿರುವ ಈ ಫೋನ್ ಮೂರು ರಿಯರ್ ಕ್ಯಾಮೆರಾ ಪಡೆದುಕೊಂಡಿದೆ. ಹಾಗೆಯೇ 5,000mAh ಸಾಮರ್ಥ್ಯದ ಬ್ಯಾಟರಿ ಇದ್ದು, 4GB RAM ಮತ್ತು 64GB ಮತ್ತು 6GB RAM ಮತ್ತು 128GB ವೇರಿಯಂಟ್‌ ಆಯ್ಕೆಗಳಲ್ಲಿ ಲಭ್ಯ. ಫ್ಲಿಪ್‌ಕಾರ್ಟ್‌ ಸೇಲ್ ಮೇಳದಲ್ಲಿ ಈ ಫೋನಿನ ಆರಂಭಿಕ ದರದವು 14,990ರೂ. ಆಗಿದೆ.

ರೆಡ್ಮಿ ನೋಟ್ 7 ಪ್ರೊ

ರೆಡ್ಮಿ ನೋಟ್ 7 ಪ್ರೊ

ಶಿಯೋಮಿ ಕಂಪನಿಯ ಜನಪ್ರಿಯ ಸ್ಮಾರ್ಟ್‌ಫೋನ್ 'ರೆಡ್ಮಿ ನೋಟ್ 7 ಪ್ರೊ' ಡ್ಯುಯಲ್ ಕ್ಯಾಮೆರಾ ಹೊಮದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್ನಲ್ಲಿದೆ. 4,000mAh ಸಾಮರ್ಥ್ಯದ ಬಿಗ್ ಬ್ಯಾಟರಿ ಲೈಫ್‌ ಪಡೆದುಕೊಂಡಿದ್ದು, ಸ್ನ್ಯಾಪ್‌ಡ್ರಾಗನ್ 675 ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದೆ. ಬಿಗ್ ಮಿಲಿಯನ್‌ ಡೇಸ್‌ ಸೇಲ್ ಮೇಳದಲ್ಲಿ ಗ್ರಾಹಕರು 11,999ರೂ.ಗಳಿಗೆ 'ರೆಡ್ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ ಖರೀದಿಸಬಹುದು.

Best Mobiles in India

English summary
Flipkarts Big Billion Days 2019 sale promises to bring the lowest prices on Budget Phones. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X