ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ಈ ಫೋನ್‌ಗಳು ಲಭ್ಯ!

|

ಜನಪ್ರಿಯ ಇ-ಕಾಮರ್ಸ್‌ ದಿಗ್ಗಜ ಫ್ಲಿಪ್‌ಕಾರ್ಟ್‌ ಆಯೋಜಿಸಿರುವ ಎಲೆಕ್ಟ್ರಾನಿಕ್ಸ್ ಸೇಲ್‌ ಇಂದು (ಡಿ.28) ಮುಕ್ತಾಯವಾಗಲಿದೆ. ಡಿ. 26ರಿಂದ ಶುರುವಾಗಿದ್ದ, ಈ ಸೇಲ್‌ ಮೇಳದಲ್ಲಿ ಸ್ಮಾರ್ಟ್‌ಫೋನ್‌ ಸೇರಿದಂತೆ ಗೃಹ ಉಪಯೋಗಿ ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗಿದೆ. ಮುಖ್ಯವಾಗಿ ಇತ್ತೀಚಿಗಿನ ನೂತನ ಹಾಗೂ ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ನೀಡಿರುವುದು ವಿಶೇಷ ಆಕರ್ಷಣೆ ಅನಿಸಿದೆ.

ಪ್ಲಾಟ್‌ಫಾರ್ಮ್

ಹೌದು, ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ನಲ್ಲಿನ ಎಲೆಕ್ಟ್ರಾನಿಕ್ಸ್ ಸೇಲ್‌ ಇಂದು ಕೊನೆಯಾಗಲಿದೆ. ಈ ಸೇಲ್‌ ಮೇಳದಲ್ಲಿ ಆಪಲ್ ಐಫೋನ್‌ 11 ಸರಣಿಯ ಫೋನ್‌ಗಳು ಸೇರಿದಂತೆ ಆಯ್ದ ಗೂಗಲ್‌ ಪಿಕ್ಸಲ್, ಒಪ್ಪೊ, ರಿಯಲ್‌ ಮಿ, ಪೊಕೊ ಕಂಪನಿಯ ಸ್ಮಾರ್ಟ್‌ಫೋನ್‌ಗಳಿಗೆ ಭಾರೀ ರಿಯಾಯಿತಿ ಸಿಗಲಿದೆ. ಇದರೊಂದಿಗೆ ಆಯ್ದ ಬ್ಯಾಂಕ್‌ಗಳಿಂದ ಇನ್‌ಸ್ಟಂಟ್‌ ಡಿಸ್ಕೌಂಟ್‌ ಸಹ ಲಭ್ಯವಾಗಲಿದೆ. ಹಾಗಾದರೇ ಫ್ಲಿಪ್‌ಕಾರ್ಟ್‌ನ ಈ ಸೇಲ್‌ ಮೇಳದಲ್ಲಿ ಆಫರ್‌ನಲ್ಲಿ ಲಭ್ಯವಿರುವ ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಪೊಕೊ X3 ಸ್ಮಾರ್ಟ್‌ಫೋನ್

ಪೊಕೊ X3 ಸ್ಮಾರ್ಟ್‌ಫೋನ್

ಪೊಕೊ ಮೊಬೈಲ್‌ ಕಂಪನಿಯ ಪೊಕೊ X3 ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ ಆಫರ್‌ನಲ್ಲಿದ್ದು, 15,999ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಹಾಗೆಯೇ 6000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ.

ಆಪಲ್‌ ಐಫೋನ್‌ 11 ಪ್ರೊ

ಆಪಲ್‌ ಐಫೋನ್‌ 11 ಪ್ರೊ

ಜನಪ್ರಿಯ ಐಫೋನ್ 11 ಪ್ರೊ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ ಎಲೆಕ್ಟ್ರಾನಿಕ್ಸ್‍ ಸೇಲ್ ಮೇಳದಲ್ಲಿ ಡಿಸ್ಕೌಂಟ್‌ ಪಡೆದಿದ್ದು, 79,999ರೂ. ಗಳ ಬೆಲೆಯಲ್ಲಿ ಸಿಗಲಿದೆ. ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಆ ಮೂರು ಕ್ಯಾಮೆರಾಗಳು 12ಎಂಪಿ ಸೆನ್ಸಾರ್‌ ಬಲವನ್ನು ಪಡೆದಿವೆ. ಹಾಗೆಯೇ ಮುಂಬದಿಯ ಸೆಲ್ಫಿ ಕ್ಯಾಮೆರಾವು ಸಹ 12ಎಂಪಿ ಸೆನ್ಸಾರ್‌ನ ಸಾಮರ್ಥ್ಯದಲ್ಲಿದೆ.

ರಿಯಲ್‌ ಮಿ 7

ರಿಯಲ್‌ ಮಿ 7

ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ರಿಯಲ್‌ ಮಿ 7 6GB RAM + 64GB ವೇರಿಯಂಟ್‌ ಡಿಸ್ಕೌಂಟ್‌ 14,999ರೂ.ಗಳಿಗೆ ಗ್ರಾಹಕರು ಖರೀದಿಸಬಹುದಾಗಿದೆ. ಇನ್ನು ಈ ಫೋನ್ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ನಲ್ಲಿದೆ. 5000mAh ಸಾಮರ್ಥ್ಯ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿದೆ. ಹಾಗೆಯೇ ರಿಯಲ್‌ ಮಿ 7 ಪ್ರೊ ಸ್ಮಾರ್ಟ್‌ಫೋನ್ ಸಹ ಡಿಸ್ಕೌಂಟ್‌ನಲ್ಲಿ ಲಭ್ಯವಿದೆ.

ಒಪ್ಪೊ F17 ಪ್ರೊ

ಒಪ್ಪೊ F17 ಪ್ರೊ

ಫ್ಲಿಪ್‌ಕಾರ್ಟ್‌ ಎಲೆಕ್ಟ್ರಾನಿಕ್ಸ್ ಸೇಲ್ ಮೇಳದಲ್ಲಿ ಒಪ್ಪೊ F17 ಪ್ರೊ ಸ್ಮಾರ್ಟ್‌ಫೋನ್ 21,490ರೂ. ಗಳಿಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್ ಸಹ ಕ್ವಾಡ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ ಬಲದಲ್ಲಿದೆ. ಹಾಗೆಯೇ ಮೀಡಿಯಾ ಟೆಕ್‌ ಹಿಲಿಯೊ P95 ಪ್ರೊಸೆಸರ್‌ ಹೊಂದಿದ್ದು, 30W VOOC ಫ್ಲ್ಯಾಶ್‌ ಚಾರ್ಜಿಂಗ್ ಸಪೋರ್ಟ್‌ ಅನ್ನು ಪಡೆದಿದೆ.

Most Read Articles
Best Mobiles in India

English summary
Flipkart Electronics Sale: Best Deals On These Smartphone Today.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X