ಸ್ಮಾರ್ಟ್‌ ಡಿವೈಸ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ ಆದ್ರೆ, ಆಫರ್‌ಗೆ ಇಂದೇ ಕೊನೆಯ ದಿನ!

|

ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಒಂದಿಲ್ಲೊಂದು ಕೊಡುಗೆ ಮೂಲಕ ಗ್ರಾಹಕರನ್ನು ಸೆಳೆಯುತ್ತದೆ. ಆದ್ರೆ ಫ್ಲಿಪ್‌ಕಾರ್ಟ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಈಗ 'ಎಂಡ್‌ ಆಫ್‌ ಸೀಸನ್‌ ಸೇಲ್‌ 2022' (Flipkart End of Season Sale 2022) ಅನ್ನು ಆಯೋಜಿಸಿದ್ದು, ಆನ್‌ಲೈನ್‌ ಶಾಪಿಂಗ್ ಪ್ರಿಯರ ಗಮನ ಸೆಳೆದಿದೆ. ಈ ವಿಶೇ‍ಷನಲ್ಲಿ ಆಯ್ದ ಕೆಲವು ಸ್ಮಾರ್ಟ್‌ಫೋನ್‌ಗಳಿಗೆ ಹಾಗೂ ಇತರೆ ಉತ್ಪನ್ನಗಳಿಗೆ ಭರ್ಜರಿ ರಿಯಾಯಿತಿ ಲಭ್ಯ. ಆದ್ರೆ ಈ ಕೊಡುಗೆಗೆ ಇಂದೇ ಕೊನೆಯ ದಿನ!

ಸೇಲ್‌ನಲ್ಲಿ

ಹೌದು, ಜನಪ್ರಿಯ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ಆಯೋಜಿಸಿರುವ 'ಫ್ಲಿಪ್‌ಕಾರ್ಟ್‌ ಎಂಡ್‌ ಆಫ್‌ ಸೀಸನ್‌ ಸೇಲ್‌ 2022' ಇದೀಗ ಚಾಲ್ತಿ ಇದೆ. ಇದೇ ಜೂನ್ 11 ರಂದು ಪ್ರಾರಂಭವಾಗಿರುವ ಈ ಮಾರಾಟ ಮೇಳ ಇಂದು (ಜೂನ್ 17 ರಂದು) ಕೊನೆಯಾಗಲಿದೆ. ಇನ್ನು ಈ ಸೇಲ್‌ನಲ್ಲಿ ಮೊಟೊ, ರೆಡ್ಮಿ, ಶಿಯೋಮಿ, ವಿವೋ, ಆಪಲ್‌ ಸೇರಿದಂತೆ ಕೆಲವೊಂದು ಕಂಪನಿಗಳ ಅತ್ಯುತ್ತಮ ಡಿವೈಸ್‌ಗಳಿಗೆ ಬೊಂಬಾಟ್‌ ಡಿಸ್ಕೌಂಟ್‌ ಲಭ್ಯವಾಗುತ್ತದೆ.

ಡಿವೈಸ್‌ಗಳಿಗೆ

ಫ್ಲಿಪ್‌ಕಾರ್ಟ್‌ನ ಈ ಸಿಮೀತ ಅವಧಿಯ ಸೇಲ್‌ ನಲ್ಲಿ ಕೆಲವು ನೂತನ ಸ್ಮಾರ್ಟ್‌ಫೋನ್‌ಗಳು ಹಾಗೂ ಸ್ಮಾರ್ಟ್‌ ಡಿವೈಸ್‌ಗಳಿಗೆ ಆಕರ್ಷಕ ರಿಯಾಯಿತಿ ಲಭ್ಯವಾಗಲಿದೆ. ಹಾಗೆಯೇ ಈ ಸೇಲ್‌ನಲ್ಲಿ ಆಕ್ಸಸ್‌ ಬ್ಯಾಂಕ್, ಕೊಟಕ್ ಬ್ಯಾಂಕ್ ಹಾಗೂ ಆರ್‌ಬಿಎಲ್‌ ಬ್ಯಾಂಕ್‌ ಕಾರ್ಡ್‌ ಬಳಕೆದಾರರಿಗೆ ಶೇ. 10 ಪರ್ಸೆಂಟ್‌ ವರೆಗೂ ಇನ್‌ಸ್ಟಂಟ್‌ ರಿಯಾಯಿತಿ ಸಹ ಲಭ್ಯವಾಗಲಿದೆ. ಇದರೊಂದಿಗೆ ಪೇಟಿಎಮ್‌ ಹಾಗೂ ಇತರೆ ಯುಪಿಐ ಆಪ್‌ ಮೂಲಕ ಪೇಮೆಂಟ್‌ ಮಾಡಿದರೇ, ಶೇ. 10 ಪರ್ಸೆಂಟ್‌ ವರೆಗೂ ಡಿಸ್ಕೌಂಟ್‌ ಲಭ್ಯವಾಗಲಿದೆ. ಹಾಗಾದರೇ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ರಿಯಾಯಿತಿ ಪಡೆದ ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಮೊಟೊ G51 5G ಸ್ಮಾರ್ಟ್‌ಫೋನ್‌

ಮೊಟೊ G51 5G ಸ್ಮಾರ್ಟ್‌ಫೋನ್‌

ಮೊಟೊ G51 5G ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ 13,999 ರೂ. ಗಳ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಫೋನ್ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.8 ಇಂಚಿನ ಫುಲ್‌ HD+ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 480 ಪ್ಲಸ್‌ SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್‌11 ನಲ್ಲಿ My UX ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರೊಂದಿಗೆ ಈ ಫೋನ್ ತ್ರಿವಳಿ ಕ್ಯಾಮೆರಾ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಇದು ಒಳಗೊಂಡಿದೆ.

ಆಪಲ್‌ ಐಫೋನ್ 12

ಆಪಲ್‌ ಐಫೋನ್ 12

ಐಫೋನ್ 12 ಫೋನ್ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ 53,999 ರೂ. ಗಳ ಡಿಸ್ಕೌಂಟ್‌ ಪ್ರೈಸ್‌ಟ್ಯಾಗ್‌ನಲ್ಲಿ ಕಾಣಿಸಿಕೊಂಡಿದೆ. ಇನ್ನು ಐಫೋನ್ 12 OLED ಡಿಸ್‌ಪ್ಲೇ ಹೊಂದಿದ್ದು, A14 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ವೈಡ್-ಆಂಗಲ್ ಸಂವೇದಕಗಳನ್ನು ಹೊಂದಿವೆ. ನೈಟ್‌ ಮೋಡ್‌ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಇನ್ನು ಈ ಫೋನ್ ನೀಲಿ, ಹಸಿರು, ಕಪ್ಪು, ಬಿಳಿ ಮತ್ತು ಕೆಂಪು ಬಣ್ಣಗಳ ಆಯ್ಕೆಗಳನ್ನು ಪಡೆದಿದೆ.

ರಿಯಲ್‌ಮಿ ಬುಕ್‌ ಸ್ಲಿಮ್‌

ರಿಯಲ್‌ಮಿ ಬುಕ್‌ ಸ್ಲಿಮ್‌

ರಿಯಲ್‌ಮಿ ಬುಕ್‌ ಸ್ಲಿಮ್‌ ಡಿವೈಸ್‌ (Realme Book Slim) ಫ್ಲಿಪ್‌ಕಾರ್ಟ್ ಎಂಡ್ ಆಫ್ ಸೀಸನ್ ಸೇಲ್ ನಲ್ಲಿ ರಿಯಾಯಿತಿ ಪಡೆದಿದ್ದು, ಗ್ರಾಹಕರು 41,990 ರೂ. ಗಳಲ್ಲಿ ಪಡೆಯಬಹುದು. ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ ವೆಬ್‌ಸೈಟ್ 10 ಪ್ರತಿಶತ ರಿಯಾಯಿತಿಯನ್ನು ಸಹ ನೀಡುತ್ತಿದ್ದು, ಗ್ರಾಹಕರು 1250ರೂ. ರಿಯಾಯಿತಿ ಪಡೆಯಬಹುದು. ಲ್ಯಾಪ್‌ಟಾಪ್ 11ನೇ ಜೆನ್‌ ಇಂಟೆಲ್‌ ಕೋರ್ i3 ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 8GB RAM ನೊಂದಿಗೆ ಜೋಡಿಸಲಾಗಿದೆ. ಲ್ಯಾಪ್‌ಟಾಪ್ 2K (2,160 x 1,440 ಪಿಕ್ಸೆಲ್‌ಗಳು) IPS LCD ಸ್ಕ್ರೀನ್‌ ಹೊಂದಿದ್ದು, 400 nits ಗರಿಷ್ಠ ಬ್ರೈಟ್ನೆಸ್‌ ಅನ್ನು ಹೊಂದಿದೆ. ಹಾಗೆಯೇ ಲ್ಯಾಪ್‌ಟಾಪ್ 65W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಹುವಾಮಿ ಅಮಾಜ್‌ಫಿಟ್ ಬಿಪ್ ಯು

ಹುವಾಮಿ ಅಮಾಜ್‌ಫಿಟ್ ಬಿಪ್ ಯು

ಹುವಾಮಿ ಅಮಾಜ್‌ಫಿಟ್ ಬಿಪ್ ಯು (Huami Amazfit Bip U) ಡಿವೈಸ್‌ ಪ್ರಸ್ತುತ ಫ್ಲಿಪ್‌ಕಾರ್ಟ್‌ ತಾಣದಲ್ಲಿ 2,999ರೂ. ಗಳ ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದೆ. ಗ್ರಾಹಕರು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಶೇಕಡಾ 10 ರಷ್ಟು ರಿಯಾಯಿತಿಯನ್ನು ಸಹ ಪಡೆಯಬಹುದು. ಇನ್ನು ಈ ಸ್ಮಾರ್ಟ್ ವಾಚ್ 1.43 ಇಂಚಿನ (320 x 302 ಪಿಕ್ಸೆಲ್‌ಗಳು) TFT ಡಿಸ್‌ಪ್ಲೇ ಜೊತೆಗೆ 2.5D ಗ್ಲಾಸ್ ಮತ್ತು ಆಂಟಿ ಫಿಂಗರ್‌ಪ್ರಿಂಟ್ ಲೇಪನವನ್ನು ಹೊಂದಿದೆ. ಇದು 60 ಕ್ಕೂ ಹೆಚ್ಚು ಕ್ರೀಡಾ ವಿಧಾನಗಳನ್ನು ಬೆಂಬಲಿಸುತ್ತದೆ ಮತ್ತು ನಿದ್ರೆಯ ಗುಣಮಟ್ಟದ ಮಾಪನ, ಒತ್ತಡ, ಹೃದಯ ಬಡಿತ ಮತ್ತು ರಕ್ತದ ಆಮ್ಲಜನಕದ ಶುದ್ಧತ್ವ (SpO2) ಮಾನಿಟರಿಂಗ್ ಸೇರಿದಂತೆ ಚಟುವಟಿಕೆಯ ಟ್ರ್ಯಾಕಿಂಗ್ ಅನ್ನು ನೀಡುತ್ತದೆ. ಹಾಗೆಯೇ 9 ದಿನಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡುತ್ತದೆ.

ಗೂಗಲ್‌ ಪಿಕ್ಸಲ್‌ ಬಡ್ಸ್‌ A ಸೀರಿಸ್‌ ಇಯರ್‌ಫೋನ್‌ಗಳು

ಗೂಗಲ್‌ ಪಿಕ್ಸಲ್‌ ಬಡ್ಸ್‌ A ಸೀರಿಸ್‌ ಇಯರ್‌ಫೋನ್‌ಗಳು

ಗೂಗಲ್‌ ಪಿಕ್ಸಲ್‌ ಬಡ್ಸ್‌ A ಸೀರಿಸ್‌ನ ವೈರ್‌ಲೆಸ್ ಸ್ಟೀರಿಯೋ (TWS) ಇಯರ್‌ಬಡ್‌ಗಳ ಬೆಲೆ ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ 5,999ರೂ. ಆಗಿದೆ. ಇದರೊಂದಿಗೆ ಗ್ರಾಹಕರು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಶೇಕಡಾ 10 ರಷ್ಟು ರಿಯಾಯಿತಿಯನ್ನು ಪಡೆಯಬಹುದು. ಇದು ಪಿಕ್ಸಲ್‌ ಬಡ್ಸ್‌ A- ಸರಣಿಯ ಇಯರ್‌ಫೋನ್‌ಗಳ ಬೆಲೆಯನ್ನು ಇನ್ನಷ್ಟು ಕಡಿಮೆಗೊಳಿಸುತ್ತದೆ. TWS ಇಯರ್‌ಬಡ್‌ಗಳು ಡ್ಯುಯಲ್ ಬೀಮ್‌ಫಾರ್ಮಿಂಗ್ ಮೈಕ್ರೊಫೋನ್‌ಗಳೊಂದಿಗೆ 12mm ಡೈನಾಮಿಕ್ ಡ್ರೈವರ್‌ಗಳೊಂದಿಗೆ ಸಜ್ಜುಗೊಂಡಿವೆ. ಇದು ಐದು ಗಂಟೆಗಳ ಪ್ಲೇಬ್ಯಾಕ್ ಅನ್ನು ಸೌಲಭ್ಯ ಪಡೆದಿದೆ ಮತ್ತು ಬೆವರು ಮತ್ತು ನೀರಿನ ಪ್ರತಿರೋಧಕ್ಕಾಗಿ IPX4 ರೇಟಿಂಗ್ ಅನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ.

Most Read Articles
Best Mobiles in India

English summary
Flipkart End of Season Sale 2022 Ends Tonight: Best Offers on these Devices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X