ನಿಮ್ಮ ಮನೆಗೆ ಬಂದು ಡಿವೈಸ್‌ಗಳನ್ನು ರಿಪೇರಿ ಮಾಡಿಕೊಡಲಾಗುತ್ತದೆ; ಫ್ಲಿಪ್‌ಕಾರ್ಟ್‌ನಿಂದ ಹೊಸ ಹೆಜ್ಜೆ!

|

ಫ್ಲಿಪ್‌ಕಾರ್ಟ್‌ ಅಂದ ತಕ್ಷಣ ಈವರೆಗೂ ನಮ್ಮ ಕಣ್ಣ ಮುಂದೆ ಬರುವ ವಿಷಯ ಎಂದರೆ ಇ-ಕಾಮರ್ಸ್‌ ತಾಣಗಳಲ್ಲಿ ಒಂದು ಎಂದು. ಅಂತೆಯೇ ಈ ಸೈಟ್‌ನಲ್ಲಿ ಹಲವಾರು ಗ್ಯಾಜೆಟ್‌ಗಳನ್ನು ಅಗ್ಗದ ದರದಲ್ಲಿ ಖರೀದಿ ಮಾಡಬಹುದು, ಹಾಗೆಯೇ ಬಹುಪಾಲು ಡಿವೈಸ್‌ ಖರೀದಿಗೆ ಇಎಮ್‌ಐ, ಬ್ಯಾಂಕ್‌ ಆಫರ್‌ ಹಾಗೂ ವಿನಿಯಮ ಆಫರ್‌ ನೀಡುವುದರಿಂದ ಫ್ಲಿಪ್‌ಕಾರ್ಟ್‌ ಗ್ರಾಹಕರಿಗೆ ಅಚ್ಚುಮೆಚ್ಚು, ಇದರ ನಡುವೆ ಹೊಸ ಸೇವೆಯೊಂದನ್ನು ನೀಡಲು ಮುಂದಾಗಿದೆ.

ಫ್ಲಿಪ್‌ಕಾರ್ಟ್‌

ಹೌದು, ಇನ್ಮುಂದೆ ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ ಬೇಕಾದ ವಸ್ತುಗಳನ್ನು ಖರೀದಿ ಮಾಡಲಷ್ಟೇ ಅಲ್ಲದೆ, ಮನೆಯಲ್ಲಿ ಯಾವುದೇ ವಸ್ತು ಕೆಟ್ಟರೂ ಫ್ಲಿಪ್‌ಕಾರ್ಟ್‌ ಆಪ್‌ ಓಪನ್‌ ಮಾಡುವ ಸಮಯ ಬಂದಿದೆ. ಯಾಕೆಂದರೆ ನಿಮ್ಮ ಮನೆಯಲ್ಲಿ ಯಾವುದೇ ಕೆಟ್ಟುಹೋದ ಡಿವೈಸ್‌ ಅನ್ನು ಸರಿಪಡಿಸಲು ಅದರಲ್ಲೂ ನೀವು ಯಾವುದೇ ಅಂಗಡಿಯಲ್ಲಿ ಅಥವಾ ಇತರೆ ಪ್ಲಾಟ್‌ಫಾರ್ಮ್‌ನಲ್ಲಿ ಖರೀದಿ ಮಾಡಿದ್ದರೂ ಸಹ ಅದನ್ನು ರಿಪೇರಿ ಮಾಡಿಕೊಡುವ ಕೆಲಸಕ್ಕೆ ಫ್ಲಿಪ್‌ಕಾರ್ಟ್‌ ಮುಂದಾಗಿದೆ. ಹಾಗಿದ್ರೆ, ಈ ಸೌಲಭ್ಯವನ್ನು ಹೇಗೆ ಪಡೆದುಕೊಳ್ಳುವುದು?, ಸದ್ಯಕ್ಕೆ ಇದು ಎಲ್ಲೆಲ್ಲಿ ಲಭ್ಯ ಎಂಬ ವಿವರವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಟೂಲ್ಸ್‌

ಮೊಬೈಲ್‌ಗಳು, ಟೂಲ್ಸ್‌ಗಳು, ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು, ಪೀಠೋಪಕರಣಗಳು ಮತ್ತು ಇತರೆ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಎಲ್ಲಿಂದ ಖರೀದಿಸಲಾಗಿದೆ ಎಂಬುದನ್ನೂ ಲೆಕ್ಕಿಸದೆ ಎಲ್ಲಾ ಗೃಹೋಪಯೋಗಿ ಉಪಕರಣಗಳನ್ನು ಜೀವ್ಸ್ (Jeeves) ಮೂಲಕ ರಿಪೇರಿ ಮಾಡಿಕೊಡುವುದಾಗಿ ಫ್ಲಿಪ್‌ಕಾರ್ಟ್ ಸ್ಪಷ್ಟಪಡಿಸಿದೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಇದೇ ರೀತಿಯ ಸೇವೆಯನ್ನು ಟೈಗರ್ ಗ್ಲೋಬಲ್ ಬೆಂಬಲಿತ ಅರ್ಬನ್ ಕಂಪೆನಿಯು ಮಾಡುತ್ತಿದ್ದು, ಅದನ್ನೇ ಫ್ಲಿಪ್‌ಕಾರ್ಟ್‌ ಅನುಸರಿಸಿದೆ.

ಇದರಿಂದ ಭಾರೀ ಲಾಭ

ಇದರಿಂದ ಭಾರೀ ಲಾಭ

ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅರ್ಬನ್ ಕಂಪೆನಿ ಇದರಿಂದ ಹೆಚ್ಚಿನ ಆದಾಯ ಪಡೆಯುತ್ತಿದೆಯಂತೆ. ಅಂದರೆ, ಕಂಪೆನಿಯ ಆದಾಯದ ಸುಮಾರು 20-30% ಈ ವಲಯದಿಂದ ಬರುತ್ತದೆ ಎಂದು ತಿಳಿದುಬಂದಿದೆ. ಜೊತೆಗೆ 2022 ರಲ್ಲಿ ಈ ವಿಭಾಗದಲ್ಲಿ ಸುಮಾರು 510 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದನ್ನು ಮನಗಂಡಿರುವ ಫ್ಲಿಪ್‌ಕಾರ್ಟ್‌ ಸಹ ತಾನೂ ಯಾಕೆ ಈ ರೀತಿ ಮಾಡಬಾರದು ಎಂದು ಜೀವ್ಸ್ ಹೆಸರಲ್ಲಿ ಈ ಸೇವೆ ನೀಡಲು ಮುಂದಾಗಿದೆ.

ಜನರ ನಾಡಿ ಮಿಡಿತ ಅರ್ಥ ಮಾಡಿಕೊಂಡಿರುವ ಫ್ಲಿಪ್‌ಕಾರ್ಟ್‌

ಜನರ ನಾಡಿ ಮಿಡಿತ ಅರ್ಥ ಮಾಡಿಕೊಂಡಿರುವ ಫ್ಲಿಪ್‌ಕಾರ್ಟ್‌

ಸದ್ಯಕ್ಕೆ ಜಗತ್ತು ಹೆಚ್ಚು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದೆ. ಈ ಕಾರಣಕ್ಕೆ ಪ್ರತಿ ಮನೆಯಲ್ಲೂ ಅದೆಷ್ಟೋ ಗ್ಯಾಜೆಟ್‌ಗಳು ಆ ಕುಟುಂಬಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಸೇವೆ ನೀಡುತ್ತಾ ಬರುತ್ತಿವೆ. ಇವುಗಳು ಕೆಟ್ಟಾಗ ತಕ್ಷಣಕ್ಕೆ ಅಂಗಡಿಗಳಿಗೆ ಹೋಗಿ ರಿಪೇರಿ ಮಾಡಿಸಿಕೊಂಡು ಬರುವ ಸಮಯ ಸದ್ಯಕ್ಕೆ ಯಾರಿಗೂ ಇರುವುದಿಲ್ಲ. ಅದೆಷ್ಟೋ ದಿನಗಳ ನಂತರ ಅದನ್ನು ರಿಪೇರಿ ಅಂಗಡಿಗೆ ಕೊಂಡು ಹೋಗುವುದುಂಟು. ಇದನ್ನು ಮನಗಂಡಿರುವ ಫ್ಲಿಪ್‌ಕಾರ್ಟ್‌ ಈ ಮೂಲಕ ಮನೆಗೆ ಬಂದು ಕೆಟ್ಟುಹೋದ ಡಿವೈಸ್‌ಗಳನ್ನು ರಿಪೇರಿ ಮಾಡಿಕೊಡಲಿದೆ.

ಏನಿದು ಜೀವ್ಸ್‌

ಏನಿದು ಜೀವ್ಸ್‌

ಫ್ಲಿಪ್‌ಕಾರ್ಟ್‌ ಜೀವ್ಸ್‌ ಎಂಬ ಹೆಸರಿನ ಈ ಸೇವೆಯನ್ನು ಕೆಲವು ದಿನಗಳ ಹಿಂದಷ್ಟೇ ಘೋಷಣೆ ಮಾಡಿದೆ. ಅದರಂತೆ ಈ ಮೂಲಕ 20-30% ಆದಾಯವನ್ನು ಗಳಿಸಬಹುದು ಎಂದು ಫ್ಲಿಪ್‌ಕಾರ್ಟ್‌ ಅಂದಾಜಿಸಿದೆ. ಗ್ರಾಹಕರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಮೂಲಕ ನಾವು ಈ ವಿಭಾಗಕ್ಕೆ ಪ್ರವೇಶಿಸಿದ್ದೇವೆ ಮತ್ತು ಎಲ್ಲಾ ಗೃಹೋಪಯೋಗಿ ಉಪಕರಣಗಳ ದುರಸ್ತಿಗೆ ವಿಶ್ವಾಸಾರ್ಹ ವೇದಿಕೆಯನ್ನು ನೀಡುತ್ತೇವೆ ಎಂದು ಜೀವ್ಸ್ ಅಧಿಕಾರಿಗಳು ಹೇಳಿದ್ದಾರೆ.

400 ನಗರಗಳಲ್ಲಿ ಸೇವೆ

400 ನಗರಗಳಲ್ಲಿ ಸೇವೆ

ಈ ಜೀವ್ಸ್‌ 400 ನಗರಗಳಲ್ಲಿ ಕೆಲಸ ಮಾಡಲಿದ್ದು, ಅದರಲ್ಲಿ 21 ವಿಶೇಷ ಮಳಿಗೆಗಳು ಇರಲಿವೆ. ವಿವಿಧ ಬ್ರಾಂಡ್‌ಗಳನ್ನು ಒಳಗೊಂಡಂತೆ 1,000 ಸೇವಾ ಪಾಲುದಾರರೊಂದಿಗೆ ಇದು ಕಾರ್ಯನಿರ್ವಹಿಸುತ್ತದೆ. ಈ ಮೂಲಕ ಒಟ್ಟಾರೆಯಾಗಿ, ಕಂಪೆನಿಯು ದೇಶಾದ್ಯಂತ ಸುಮಾರು 9,000 ಎಂಜಿನಿಯರ್‌ಗಳು ಮತ್ತು ಸುಮಾರು 300 ವಾಕ್-ಇನ್ ಸೇವಾ ಕೇಂದ್ರಗಳನ್ನು ಹೊಂದಿರಲಿದೆಯಂತೆ. ಇದಿಷ್ಟೇ ಅಲ್ಲದೆ 2014 ರಲ್ಲಿ ಫ್ಲಿಪ್‌ಕಾರ್ಟ್ ಜೀವ್ಸ್ ಷೇರುಗಳನ್ನು ಖರೀದಿಸಿದೆ.

ಮೊದಲ ಹಂತದಲ್ಲಿ ಎಲ್ಲೆಲ್ಲಿ ಲಭ್ಯ?

ಮೊದಲ ಹಂತದಲ್ಲಿ ಎಲ್ಲೆಲ್ಲಿ ಲಭ್ಯ?

ಮೊದಲ ಹಂತದಲ್ಲಿ ಫ್ಲಿಪ್‌ಕಾರ್ಟ್‌ನ ದುರಸ್ತಿ ಸೇವೆಯು ಈಗ ದೇಶದ 19,000 ಪಿನ್ ಕೋಡ್‌ಗಳಲ್ಲಿ ಲಭ್ಯವಿರುತ್ತದೆ. ಫ್ಲಿಪ್‌ಕಾರ್ಟ್‌ನ ಆಪ್‌ ಮೂಲಕ ಜಿವ್ಸ್ ಸೇವೆ ಪಡೆದುಕೊಳ್ಳಬಹುದಾಗಿದ್ದು, ನಿಮ್ಮ ಪ್ರದೇಶದಲ್ಲೂ ಈ ಸೇವೆ ಲಭ್ಯವಿದೆಯೇ ಎಂಬುದನ್ನು ನೋಡಲು ನಿಮ್ಮ ಏರಿಯಾದ ಪಿನ್‌ಕೋಡ್‌ ನಮೂದಿಸಿ.

Best Mobiles in India

English summary
flipkart has a new initiative to repair devices at home.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X