ನಿಮ್ಮ ಫೋನಿನಲ್ಲಿ ಈ ಟಿಪ್ಸ್ ಬಳಿಸಿ; ದೀಪಾವಳಿಯ ಅದ್ಭುತ ಫೋಟೊ ಕ್ಲಿಕ್ಕಿಸಿ!

|

ಬೆಳಕಿನ ಹಬ್ಬ ದೀಪಾವಳಿ ಎಂದರೇ ಸಡಗರ, ಸಂಭ್ರಮದಿಂದ ಜೋರಾಗಿರುತ್ತದೆ. ಹಣತೆಗಳನ್ನು ಹಚ್ಚುವುದು, ಪಟಾಕಿ ಹೊಡೆಯುವ ಮೂಲಕ ಹಬ್ಬವನ್ನು ಸಂಭ್ರಮಿಸುತ್ತಾರೆ. ಇದರೊಂದಿಗೆ ಹಬ್ಬದ ಸುಂದರ ಕ್ಷಣಗಳನ್ನು ಫೋಟೊ/ವಿಡಿಯೋ ಮೂಲಕ ಫೋನಿನಲ್ಲಿ ದಾಖಲಿಸುತ್ತಾರೆ. ಆದರೆ ನಿಮ್ಮ ಬಳಿ ಇರುವ ಫೋನಿನಲ್ಲಿ ಕೆಲವು ಅಗತ್ಯ ಆಯ್ಕೆಗಳನ್ನು ಅನುಸರಿಸುವ ಮೂಲಕ ಫೋಟೊಗಳನ್ನು ಮತ್ತಷ್ಟು ಸೊಗಸಾಗಿಸಬಹುದು. ಹಾಗಾದರೇ ಆ ಟಿಪ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಮಾರ್ಟ್‌ಫೋನ್ ಕ್ಯಾಮೆರಾ ಕ್ಲೀನ್ ಮಾಡಿ

ಸ್ಮಾರ್ಟ್‌ಫೋನ್ ಕ್ಯಾಮೆರಾ ಕ್ಲೀನ್ ಮಾಡಿ

ಹಬ್ಬದ ಸುಂದರ ಕ್ಷಣಗಳನ್ನು ನಿಮ್ಮ ಫೋನಿನಲ್ಲಿ ಸೆರೆಹಿಡಿಯಲು, ಮೊದಲು ನಿಮ್ಮ ಫೋನ್ ಲೆನ್ಸ್‌ಗಳನ್ನು ಸ್ವಚ್ಛಗೊಳಿಸುವುದು. ಹಾಗೆಯೇ ಫೋನ್‌ ಬ್ಯಾಟರಿ ಚಾರ್ಜ್ ಮಾಡಿಕೊಳ್ಳುವುದು. ಈ ಸಿದ್ಧತೆಯು ಅತ್ಯುತ್ತಮ ಫೋಟೊಗ್ರಫಿಗೆ ಉತ್ತಮ.

ಸೂಕ್ತ ಸೆಟ್ಟಿಂಗ್‌ಗಳನ್ನು ಬಳಸಿ

ಸೂಕ್ತ ಸೆಟ್ಟಿಂಗ್‌ಗಳನ್ನು ಬಳಸಿ

ಇತ್ತೀಚಿನ ನೂತನ ಸ್ಮಾರ್ಟ್‌ಫೋನ್‌ಗಳು ವಿವಿಧ ಸನ್ನಿವೇಶಗಳಿಗೆ ಮೀಸಲಾದ ಕ್ಯಾಮೆರಾ ಆಯ್ಕೆಗಳನ್ನು ಒಳಗೊಂಡಿವೆ. ಫೋಟೊ ಕ್ಲಿಕ್ಕಿಸುವಾಗ ಆ ಸನ್ನಿವೇಶಕ್ಕೆ ಸೂಕ್ತ ಆಗುವ ಆಯ್ಕೆ ಸರಿಯಾಗಿ ಹೊಂದಿಸಲು ಮರೆಯಬೇಡಿ. ಗ್ರಿಡ್ ಲೈನ್‌ಗಳು, HDR ಮೋಡ್, ಕಡಿಮೆ ಬೆಳಕಿನ ಮೋಡ್, ಇತ್ಯಾದಿಗಳಂತಹ ಕೆಲವು ಸೆಟ್ಟಿಂಗ್‌ಗಳು ಬಹಳ ಮುಖ್ಯ.

ನೈಟ್‌ ಮೋಡ್ ಆಯ್ಕೆ ಬಳಸಿ

ನೈಟ್‌ ಮೋಡ್ ಆಯ್ಕೆ ಬಳಸಿ

ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿನ ನೈಟ್ ಮೋಡ್ ಆಯ್ಕೆ ಇರುತ್ತದೆ. ಈ ಆಯ್ಕೆಯು ಮೊಬೈಲ್ ಫ್ಲ್ಯಾಶ್ ಬಳಸುವ ಅಗತ್ಯವನ್ನು ದೂರ ಮಾಡುತ್ತದೆ. ಅಲ್ಲದೇ ಫ್ರೇಮ್‌ನ ಪ್ರತಿ ಇಂಚಿಗೆ ಬೆಳಕನ್ನು ಸಮವಾಗಿ ವಿತರಿಸುತ್ತದೆ. ರಾತ್ರಿಯಲ್ಲಿ ಅಥವಾ ಮಂದ ಬೆಳಕಿನಲ್ಲಿ ಫೋಟೊ ತೆಗೆಯಲು ನೈಟ್ ಮೋಡ್ ಆಯ್ಕೆ ಬಳಕೆ ಉತ್ತಮ ಆಗಿದೆ.

ಡಿಜಿಟಲ್ ಜೂಮ್ ಬಳಕೆ

ಡಿಜಿಟಲ್ ಜೂಮ್ ಬಳಕೆ

ಫೋಟೊ ಸೆರೆಹಿಡಿಯುವ ಸಂದರ್ಭ ಅಗತ್ಯಕ್ಕೆ ಸೂಕ್ತ ವಾಗಷ್ಟು ಜೂಮ್ ಬಳಕೆ ಮಾಡಿ. ಹೆಚ್ಚಿನ ಜೂಮ್ ಫೋಟೊದ ಗುಣಮಟ್ಟವನ್ನು ಕಡಿಮೆ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ನಿಮ್ಮ ಸ್ಮಾರ್ಟ್‌ಫೋನ್ ಮೀಸಲಾದ ಟೆಲಿಫೋಟೋ ಸಂವೇದಕವನ್ನು ಹೊಂದಿದ್ದರೆ ಡಿಜಿಟಲ್ ಜೂಮ್ ಆಯ್ಕೆಗೆ ಹೋಗಿ, ಸಾಮಾನ್ಯ ಲೆನ್ಸ್ ಸ್ಮಾರ್ಟ್‌ಫೋನ್ ಬಳಕೆದಾರರು ಈ ಉಪಕರಣವನ್ನು ಬಳಸದಂತೆ ಪ್ರಯತ್ನಿಸಬೇಕು.

ಸ್ಪೋರ್ಟ್ಸ್ ಮೋಡ್‌ ಬಳಕೆ ಮಾಡಿ

ಸ್ಪೋರ್ಟ್ಸ್ ಮೋಡ್‌ ಬಳಕೆ ಮಾಡಿ

ದೀಪಾವಳಿ ಹಬ್ಬದ ವೇಳೆ ಪಟಾಕಿ ಹೊಡೆಯುವ ಫೋಟೊ ಸೆರೆ ಹಿಡಿಯುವಾಗ ನೇರವಾಗಿ ಫೋಟೊ ಕ್ಲಿಕ್ ಮಾಡುವ ಬದಲಾಗಿ ಸ್ಪೋರ್ಟ್ಸ್ ಮೋಡ್‌ ಆಯ್ಕೆ ಬಳಕೆ ಮಾಡಿ. ಪಟಾಕಿ ಸನ್ನಿವೇಶಗಳು ಸ್ಥಿರವಾಗಿರುವುದಿಲ್ಲ, ಆಗ ಈ ಆಯ್ಕೆ ಬಳಕೆ ಮಾಡಿದಾಗ ಇದು ಫೋಟೊ ಸೂಕ್ತ ಸ್ಥಿರತೆ ನೀಡುತ್ತದೆ.

ಫೋಟೊ ಫಿಲ್ಟರ್‌ಗಳನ್ನು ಪ್ರಯತ್ನಿಸಿ

ಫೋಟೊ ಫಿಲ್ಟರ್‌ಗಳನ್ನು ಪ್ರಯತ್ನಿಸಿ

ಸಾಮಾನ್ಯ ಫೋಟೊ ಕ್ಲಿಕ್ ಮಾಡುವ ಜೊತೆಗೆ ಅಗತ್ಯ ಸಂದರ್ಭಗಳಲ್ಲಿ ಫೋಟೊ ಫಿಲ್ಟರ್ ಆಯ್ಕೆಗಳನ್ನು ಪ್ರಯತ್ನಿಸಿ. ಫೋಟೊ ಫಿಲ್ಟರ್ ಆಯ್ಕೆ ಮೂಲಕ ಅತ್ಯುತ್ತಮ ಫೋಟೊಗಳನ್ನು ಪಡೆಯಬಹುದು. ಸಾಮಾನ್ಯ ರೀತಿ ಫೋಟೊ ಸೆರೆಹಿಡಿದು ಬಳಕ ಸಹ ಫೋಟೊ ಫಿಲ್ಟರ್‌ ಆಯ್ಕೆ ಬಳಕೆ ಮಾಡಬಹುದು. ಅಥವಾ ನೇರವಾಗಿ ಫೋಟೊ ಫಿಲ್ಟರ್‌ ಆಯ್ಕೆ ಮೂಲಕ ಫೋಟೊ ಕ್ಲಿಕ್ ಮಾಡಬಹುದು.

ಫೋಕಸ್‌ ಮಾಡಿ

ಫೋಕಸ್‌ ಮಾಡಿ

ಫೋಟೊ ಸೆರೆಹಿಡಿಯುವಾಗ ಫೋನ್ ಕ್ಯಾಮೆರಾ ತೆರೆದು ತಕ್ಷಣಕ್ಕೆ ಫೋಟೊ ಕ್ಲಿಕ್ ಮಾಡಬೇಡಿ. ನೀವು ಫೋಟೊ ಸೆರೆಹಿಡಿಯುವ ವ್ಯಕ್ತಿ/ಇಮೇಜ್ ಅನ್ನು ಫೋಕಸ್ ಮಾಡಿ. ಇಂದಿನ ಪ್ರತಿ ಫೋನ್‌ಗಳಲ್ಲಿ ಫೋಕಸ್ ಆಯ್ಕೆ ಇರುತ್ತದೆ. ಫೋಕಸ್ ಮಾಡದೇ ಸೆರೆ ಹಿಡಿದ ಫೋಟೊಗಳು ಸಾಧಾರಣ ಮಟ್ಟದಲ್ಲಿ ಇರುತ್ತವೆ. ಅದೇ ಫೋಕಸ್ ಮಾಡಿದಾಗ ಫೋಟೊ ಅತ್ಯುತ್ತಮವಾಗಿ ಮೂಡಿಬರಲಿದೆ.

ಕ್ಯಾಮೆರಾ ಸ್ಟಡಿ ಇರಲಿ

ಕ್ಯಾಮೆರಾ ಸ್ಟಡಿ ಇರಲಿ

ಫೋನಿನಲ್ಲಿ ಫೋಟೊ ಸೆರೆ ಹಿಡಿಯುವಾಗ ಫೋಕಸ್ ಮಾಡಿ ಜೊತೆಗೆ ಕ್ಯಾಮೆರಾ ಸ್ಟಡಿಯಾಗಿ ಹಿಡಿದು ಕ್ಲಿಕ್ ಮಾಡಿ. ಫೋಟೊ ಕ್ಲಿಕ್ಕಿಸುವಾಗ ಕೈ ಶೇಕ್ ಮಾಡಿದರೇ ಫೋಟೊಗಳು ಮರ್ಜ/ಮಸಕು ಮಸಕಾಗಿ ಮೂಡಿಬಂದಂತೆ ಕಾಣಿಸುತ್ತವೆ.

ಅಗತ್ಯ ಇದ್ರೆ ಮಾತ್ರ ಫ್ಲ್ಯಾಶ್ ಬಳಸಿ

ಅಗತ್ಯ ಇದ್ರೆ ಮಾತ್ರ ಫ್ಲ್ಯಾಶ್ ಬಳಸಿ

ಇಂದಿನ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಫ್ಲ್ಯಾಶ್ ಲೈಟ್ ನೀಡಿರುತ್ತಾರೆ. ಪ್ರತಿ ಬಾರಿ ಫೋಟೊ ಸೆರೆ ಹಿಡಿಯುವಾಗಲು ಫ್ಲ್ಯಾಶ್ ಲೈಟ್ ಬಳಸುವುದು ಉತ್ತಮವಲ್ಲ. ಏಕೆಂದರೇ ಇಂದಿನ ಫೋನ್‌ಗಳು ಮಂದ ಬೆಳಕಿನಲ್ಲಿ/ರಾತ್ರಿ ಫೋಟೊ ಕ್ಲಿಕ್ ಮಾಡಲು ನೈಟ್ ಮೋಡ್ ಆಯ್ಕೆ ಹೊಂದಿರುತ್ತವೆ. ಅದಾಗ್ಯೂ ಎಕ್ಸ್‌ಟ್ರಾ ಲೈಟಿಂಗ್ ಬೇಕು ಅಂದಾಗ ಮಾತ್ರ ಫ್ಲ್ಯಾಶ್ ಲೈಟ್ ಬಳಕೆ ಮಾಡಿ. ಅನಗತ್ಯವಾಗಿ ಫ್ಲ್ಯಾಶ್ ಲೈಟ್ ಬಳಸಿದರೇ ಫೋಟೊದಲ್ಲಿ ಲೈಟ್ ಸ್ಪಾಟ್ ಕಾಣಿಸುತ್ತದೆ.

Best Mobiles in India

English summary
Follow These Tips To Click Photos of Diwali lights On Your Smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X