ಫಾಸಿಲ್‌ನಿಂದ ಹೊಸ ಸ್ಮಾರ್ಟ್‌ವಾಚ್ ಘೋಷಣೆ; ವೇರ್ OS 3 ಬೆಂಬಲ!

|

ಆಕರ್ಷಕ ದುಬಾರಿ ವಾಚ್‌ಗಳ ತಯಾರಿಕೆಯಲ್ಲಿ ಫಾಸಿಲ್ (Fossil) ತನ್ನದೇ ಆದ ಫೀಚರ್ಸ್‌ಗಳನ್ನು ಪರಿಚಯಿಸಿ ಜನಪ್ರಿಯಗೊಂಡಿದೆ. ಇದರ ನಡುವೆ ಮಾರುಕಟ್ಟೆಯಲ್ಲಿ ಬಹು ವಿಧದ ಸ್ಮಾರ್ಟ್‌ವಾಚ್‌ಗಳು ಇದ್ದು, ಸಮಯದ ಮಾಹಿತಿ ನೀಡುವುದರ ಜೊತೆಗೆ ಬಳಕೆದಾರರ ಆರೋಗ್ಯ ಸಂಬಂಧಿತ ವಿಷಯಗಳನ್ನು ಮೇಲ್ವಿಚಾರಣೆ ಮಾಡುತ್ತವೆ. ಈಗ ಫಾಸಿಲ್‌ ಕಂಪೆನಿ ಸ್ಮಾರ್ಟ್‌ವಾಚ್‌ ಸರಣಿಯಲ್ಲಿ ಅತ್ಯುತ್ತಮವಾದ ವಾಚ್‌ ಬಗ್ಗೆ ಘೋಷಣೆ ಮಾಡಿದೆ.

ಫಾಸಿಲ್

ಹೌದು, ಫಾಸಿಲ್ ಕಂಪೆನಿಯು ವೆಲ್‌ನೆಸ್‌ ಆವೃತ್ತಿಯ ಫಾಸಿಲ್ ಜೆನ್ 6 ಸ್ಮಾರ್ಟ್‌ವಾಚ್‌ (Fossil Gen 6 Wellness Edition) ಅನ್ನು ಗ್ರಾಹಕರಿಗೆ ಪರಿಚಯಿಸಲು ಮುಂದಾಗಿದೆ. ಕಳೆದ ಆಗಸ್ಟ್‌ನಲ್ಲಿ ಫಾಸಿಲ್‌ ಕಂಪೆನಿಯು ಸ್ನಾಪ್‌ಡ್ರಾಗನ್‌ 4100+ SoC ಮತ್ತು ವೇರ್ OS ಆಯ್ಕೆ ಇರುವ ಸ್ಮಾರ್ಟ್‌ವಾಚ್‌ ಅನಾವರಣಗೊಳಿಸಿತ್ತು. ಈಗ ಘೋಷಣೆ ಮಾಡಲಾಗಿರುವ ವಾಚ್‌ ವೆಲ್‌ನೆಸ್ ಆವೃತ್ತಿಯ ಪಟ್ಟಿಗೆ ಸೇರಲಿದೆ. ಹಾಗಿದ್ರೆ ಇದರ ಇನ್ನಿತರ ಫೀಚರ್ಸ್‌ ಏನು?, ಹೇಗೆಲ್ಲಾ ಕಾರ್ಯನಿರ್ವಹಿಸಲಿದೆ ಎಂಬ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಓದಿರಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ಈ ಸ್ಮಾರ್ಟ್‌ವಾಚ್‌ 1.28 ಇಂಚಿನ ಆಂಬಿಯೆಂಟ್ ಲೈಟ್ ಸೆನ್ಸಿಂಗ್‌ನ OLED ಡಿಸ್‌ಪ್ಲೇ ಹೊಂದಿದ್ದು, ಇದು 44mm ಕೇಸ್ ಗಾತ್ರದಲ್ಲಿ ಲಭ್ಯವಿದೆ. ಇದರಲ್ಲಿ ದಿಕ್ಸೂಚಿ ಸೇರಿದಂತೆ ಮೂರು ಹೊಸ ವಾಚ್ ಫೇಸ್‌ಗಳ ಆಯ್ಕೆ ಹೊಂದಿದೆ. ಹಾಗೆಯೇ ಇವುಗಳಲ್ಲಿ ವಿಶೇಷವಾದುದು ಎಂದರೆ ವೆಲ್‌ನೆಸ್‌ ಗೇಜ್ ವಾಚ್ ಫೇಸ್‌.

ಸ್ಮಾರ್ಟ್‌ವಾಚ್‌

ಈ ಸ್ಮಾರ್ಟ್‌ವಾಚ್‌ 1GB RAM ಹಾಗೂ 8GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದಿದೆ. ಹಾಗೆಯೇ ಫಾಸಿಲ್ ಜೆನ್ 6 ವೆಲ್‌ನೆಸ್‌ ಆವೃತ್ತಿಯು ಸ್ನಾಪ್‌ಡ್ರಾಗನ್ 4100+ ಹೊಂದಿದ್ದು, ವೇರ್ ಓಎಸ್ 3 ನಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಮೂಲಕ ಗೂಗಲ್‌ನ ಸ್ಮಾರ್ಟ್‌ವಾಚ್‌ನ ಓಎಸ್ ಅನ್ನು ರನ್‌ ಮಾಡುವ ಮೊದಲ ಫಾಸಿಲ್‌ ಸ್ಮಾರ್ಟ್‌ವಾಚ್ ಆಗಿದೆ.

ಅಲೆಕ್ಸಾ ಫೀಚರ್ಸ್‌

ಅಲೆಕ್ಸಾ ಫೀಚರ್ಸ್‌

ಈ ಸ್ಮಾರ್ಟ್‌ವಾಚ್‌ ಯೂಟ್ಯೂಬ್‌ ಮ್ಯೂಸಿಕ್‌, ಸ್ಪೋಟಿಫೈ ಹಾಗೂ ಫೇಸರ್‌ ನಂತಹ ಆಪ್‌ಗಳಿಗೆ ಸಪೋರ್ಟ್‌ ಮಾಡಲಿದೆ. ಪ್ರಮುಖವಾಗಿ ಗೂಗಲ್‌ ಅಸಿಸ್ಟೆಂಟ್‌ ಆಯ್ಕೆ ಇದರಲ್ಲಿ ಇಲ್ಲವಾದರೂ ಅದರ ಬದಲಾಗಿ ಈ ವಾಚ್‌ ಅಲೆಕ್ಸಾ ಫೀಚರ್ಸ್‌ ಪಡೆದಿದೆ.

ಸ್ಮಾರ್ಟ್‌ವಾಚ್‌ನ ಇತರೆ ಸೌಲಭ್ಯ

ಸ್ಮಾರ್ಟ್‌ವಾಚ್‌ನ ಇತರೆ ಸೌಲಭ್ಯ

ಈ ಸ್ಮಾರ್ಟ್‌ವಾಚ್‌ ವೆಲ್‌ನೆಸ್‌ ಅಪ್ಲಿಕೇಶನ್‌ನ ವಿಶೇಷ ಫೀಚರ್ಸ್‌ ಪಡೆದಿದೆ. ಈ ಮೂಲಕ ಆರೋಗ್ಯ ಸಂಬಂಧಿ ಮೇಲ್ವಿಚಾರಣೆ ವಿಷಯದಲ್ಲಿ ಹೆಚ್ಚಿನ ಅಪ್‌ಡೇಟ್‌ ಪಡೆಯಬಹುದಾಗಿದೆ. ಅದರಲ್ಲೂ SpO2 ಮೇಲ್ವಿಚಾರಣೆ, ಕಾರ್ಡಿಯೋ ಫಿಟ್‌ನೆಸ್, ಆಟೋಮ್ಯಾಟಿಕ್‌ ವರ್ಕೌಟ್‌ ಡಿಟೆಕ್ಸನ್‌, ಹೃದಯ ಬಡಿತದ ಮೇಲ್ವಿಚಾರಣೆ, ನಿದ್ರೆಯ ಟ್ರ್ಯಾಕಿಂಗ್ ಹಾಗೂ ವ್ಯಾಯಾಮದ ನಂತರದ ನಿರಂತರ ಹೃದಯ ಬಡಿತದ ಮೇಲ್ವಿಚಾರಣೆಯಂತ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

ಸುಧಾರಿತ ವೇರ್ OS 3

ಸುಧಾರಿತ ವೇರ್ OS 3

ಸಾಮಾನ್ಯ ಆರೋಗ್ಯ ಸಂಬಂಧಿ ಮೇಲ್ವಿಚಾರಣೆಗಳನ್ನು ವೇರ್ OS 2 ಮತ್ತು ಹಳೆಯ ಸ್ನಾಪ್‌ಡ್ರಾಗನ್ ಚಿಪ್‌ ಸೆಟ್‌ ಇರುವ ಸ್ಮಾರ್ಟ್‌ವಾಚ್‌ಗಳು ನೀಡಿವೆಯಾದರೂ ಇದರಲ್ಲಿ ಈ ಸ್ಮಾರ್ಟ್‌ವಾಚ್‌ನಲ್ಲಿ ಸುಧಾರಿತ ವೇರ್ OS 3 ಬಳಕೆದಾರರ ಬಹುಪಾಲು ಎಲ್ಲಾ ರೀತಿಯ ಆರೋಗ್ಯ ಮಲ್ವಿಚಾರಣೆಯ ಮಾಹಿತಿಯನ್ನು ನಿಖರವಾಗಿ ತಿಳಿಸಲಿವೆ ಎನ್ನಲಾಗಿದೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಫಾಸಿಲ್ ತನ್ನ ಮೊದಲನೆಯ ಓಎಸ್ 3 ಸ್ಮಾರ್ಟ್‌ವಾಚ್‌ ಅನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ಅಕ್ಟೋಬರ್ 17 ರಿಂದ ಯುಎಸ್‌ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ ಎಂದು ತಿಳಿದುಬಂದಿದೆ. ಹಾಗೆಯೇ ಈ ಸ್ಮಾರ್ಟ್‌ವಾಚ್‌ ದರ ಯುಎಸ್‌ನಲ್ಲಿ $299 (ಭಾರತದಲ್ಲಿ ಅಂದಾಜು ದರ 24,624ರೂ.ಗಳು) ನಿಗದಿ ಮಾಡಲಾಗಿದೆ. ಈ ಸ್ಮಾರ್ಟ್‌ವಾಚ್ ಬ್ಲಾಕ್‌, ರೋಸ್‌ಗೋಲ್ಡ್ ಹಾಗೂ ಸಿಲ್ವರ್‌ ಕಲರ್‌ನಲ್ಲಿ ಕಂಡು ಬರಲಿದೆ.

Best Mobiles in India

English summary
Fossil has become popular by introducing its own features in the manufacture of watches. Now it has announced the Wellness Edition smartwatch with Wear OS 3 option.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X