ಭಾರತಕ್ಕೆ ಲಗ್ಗೆ ಇಟ್ಟ ಅಮೆರಿಕಾದ 'ಫೊಸಿಲ್' ಸ್ಮಾರ್ಟ್‌ವಾಚ್!..ಬೆಲೆ?

|

ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ಡಿವೈಸ್‌ಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಅವುಗಳಲ್ಲಿ ಮುಖ್ಯವಾಗಿ ಸ್ಮಾರ್ಟ್‌ವಾಚ್ ಭಾರೀ ಜನಪ್ರಿಯತೆ ಹೊಂದುತ್ತಿವೆ. ಪ್ರಮುಖ ಕಂಪನಿಗಳ ತರಹೇವಾರಿ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಗ್ರಾಹಕರು ಮಾತ್ರ ಅತ್ಯುತ್ತಮ ಗುಣಮಟ್ಟದ ಮತ್ತು ಹೊಸತನದ ಫೀಚರ್ಸ್‌ಗಳನ್ನು ಒಳಗೊಂಡಿರುವ ಬ್ರ್ಯಾಂಡೆಡ್ ಸ್ಮಾರ್ಟ್‌ವಾಚ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

ಭಾರತಕ್ಕೆ ಲಗ್ಗೆ ಇಟ್ಟ ಅಮೆರಿಕಾದ 'ಫೊಸಿಲ್' ಸ್ಮಾರ್ಟ್‌ವಾಚ್!..ಬೆಲೆ?

ಸದ್ಯ ದೇಶಿಯ ಸ್ವಾರ್ಟ್‌ಫೋನ್‌ ಮಾರುಕಟ್ಟೆಗೆ ಅಮೆರಿಕಾ ಮೂಲದ ಹೆಸರಾಂತ 'ಫೊಸಿಲ್' ಕಂಪನಿಯ ಸ್ಪೋರ್ಟ್ ಸ್ಮಾರ್ಟ್‌ವಾಚ್ ಬಿಡುಗಡೆ ಆಗಿದ್ದು, ಭಾರೀ ಟ್ರೆಂಡ್‌ ಹುಟ್ಟುಹಾಕುವ ಲಕ್ಷಣಗಳನ್ನು ಸೂಚಿಸಿವೆ. ಈ ಸ್ಮಾರ್ಟ್‌ವಾಚ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 3100 ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ನಾಲ್ಕು A7 CPUsಗಳನ್ನು ಹೊಂದಿದೆ. ಹಾಗೆಯೇ ಗೂಗಲ್ ವೇರ್ OS ಕಾರ್ಯನಿರ್ವಹಿಸುತ್ತದೆ.

ಭಾರತಕ್ಕೆ ಲಗ್ಗೆ ಇಟ್ಟ ಅಮೆರಿಕಾದ 'ಫೊಸಿಲ್' ಸ್ಮಾರ್ಟ್‌ವಾಚ್!..ಬೆಲೆ?

ಕಳೆದ ನವೆಂಬರ್‌ ತಿಂಗಳಲ್ಲಿ ಕಂಪನಿಯು 'ಫಾಸಿಲ್ ಸ್ಪೋರ್ಟ್‌ವಾಚ್'‌ ಅನ್ನು ಪರಿಚಯಿಸಿತ್ತು. ಹೊಸ ಫೊಸಿಲ್ ಸ್ಮಾರ್ಟ್‌ವಾಚ್‌ ಬ್ಯಾಟರಿ ಸೇವಿಂಗ್ ಮೋಡ್, ಆಂಬಿಯಂಟ್ ಮೋಡ್, ಹಾರ್ಟ್‌ ರೇಟ್ ಸೆನ್ಸಾರ್‌ ಆಯ್ಕೆಗಳನ್ನು ಸಹ ಒಳಗೊಂಡಿದೆ. ಹಾಗಾದರೇ ಫೊಸಿಲ್ ಕಂಪನಿಯ ಸ್ಮಾರ್ಟ್‌ವಾಚ್‌ ಇತರೆ ಯಾವೆಲ್ಲಾ ವಿಶೇಚತೆಗಳನ್ನು ಹೊಂದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಒಪ್ಪೊ ಕಂಪನಿಯ ಈ ಮೂರು ಸ್ಮಾರ್ಟ್‌ಫೋನ್‌ಗಳು ಭರ್ಜರಿ ಬೆಲೆ ಇಳಿಕೆ ಕಂಡಿವೆ!ಓದಿರಿ : ಒಪ್ಪೊ ಕಂಪನಿಯ ಈ ಮೂರು ಸ್ಮಾರ್ಟ್‌ಫೋನ್‌ಗಳು ಭರ್ಜರಿ ಬೆಲೆ ಇಳಿಕೆ ಕಂಡಿವೆ!

ರಚನೆ

ರಚನೆ

ಫೊಸಿಲ್ ಸ್ಮಾರ್ಟ್‌ವಾಚ್ ಡಿಸ್‌ಪ್ಲೇಯು ವೃತ್ತಾಕಾರದಲ್ಲಿದ್ದು, ಎರಡು ಗಾತ್ರದ ರಚನೆಯಲ್ಲಿದೆ ಕ್ರಮವಾಗಿ ಅವು 41mm ಮತ್ತು 43mm ಆಗಿವೆ. ಸೆಟ್ಟಿಂಗ್ ಬಟನ್‌ಗಳನ್ನು ನೀಡಲಾಗಿದೆ. ಈ ಸ್ಮಾರ್ಟ್‌ವಾಚ್ ಕೆಂಪು, ಹಸಿರು, ನೀಲಿ, ತಿಳು ಗುಲಾಬಿ ಮತ್ತು ಬೂದು ಬಣ್ಣಗಳ ಬೆಲ್ಟ್ ಆಯ್ಕೆಗಳನ್ನು ಹೊಂದಿದೆ.

ಪ್ರೊಸೆಸರ್ ಶಕ್ತಿ

ಪ್ರೊಸೆಸರ್ ಶಕ್ತಿ

ಈ ಸ್ಮಾರ್ಟ್‌ವಾಚ್‌ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 3100 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ನಾಲ್ಕು A7 CPUsಗಳ ಕಾರ್ಯದಕ್ಷತೆಯನ್ನು ಹೊಂದಿದ್ದು, ಬ್ಯಾಟರಿ ಲೈಫ್ ವೃದ್ಧಿಗಾಗಿ ಅಲ್ಟ್ರಾ ಲೋ ಪವರ್‌ ಪ್ರೊಸೆಸರ್‌ ಸಾಮರ್ಥ್ಯವನ್ನು ಸಹ ಹೊಂದಿದೆ. ವಾಚ್ ಬಳಕೆಯಲ್ಲಿ ಉತ್ತಮ ಎನಿಸಲಿದೆ.

ಓದಿರಿ : 'ಸ್ಯಾಮ್‌ಸಂಗ್‌'ನ ವಿಶ್ವದ ಮೊದಲ 'QLED 8K' ಟಿವಿ ಲಾಂಚ್!..ಹೇಗಿದೆ ಗೊತ್ತಾ? ಓದಿರಿ : 'ಸ್ಯಾಮ್‌ಸಂಗ್‌'ನ ವಿಶ್ವದ ಮೊದಲ 'QLED 8K' ಟಿವಿ ಲಾಂಚ್!..ಹೇಗಿದೆ ಗೊತ್ತಾ?

ವಿಶೇಷ ಫೀಚರ್ಸ್‌

ವಿಶೇಷ ಫೀಚರ್ಸ್‌

ಕ್ವಿಕ್ಕ್ ಸ್ವಾಪ್‌, ಮಾಹಿತಿಗಾಗಿ ವೇಗವಾಗಿ ವಾಚ್‌ ಅನ್ನು ಆಕ್ಸಸ್‌ ಮಾಡಬಹುದಾಗಿದೆ, ಗೂಗಲ್‌ ಅಸಿಸ್ಟಂಟ್‌ನಿಂದ ಪ್ರೊಆಕ್ಟಿವ್ ನೆರವು ಆಯ್ಕೆ, ಗೂಗಲ್‌ ಫಿಟ್‌ನಿಟ್‌ನಿಂದ ಹೆಲ್ತ್ ಕುರಿತ ಮಾಹಿತಿಗಳ ಆಯ್ಕೆ ಇದೆ. ಈ ಎಲ್ಲ ಫೀಚರ್ಸ್‌ಗಳು ಗೂಗಲ್ ವೇರ್‌ ಓಎಸ್‌ನ ಬೆಂಬಲದೊಂದಿದೆ ನಡೆಯುತ್ತವೆ.

ಮೂರು ವಿಧ

ಮೂರು ವಿಧ

ಪ್ರೊಸೆಸರ್‌ ಮೂರು ವಿಧವಾದ ಆಯ್ಕೆಯ ಬೆಂಬಲ ಇದೆ. ಆಂಬಿಯೆಂಟ್ ಮೋಡ್ (ಬ್ಯೂಟಿ ಆಫ್ ಫ್ಯಾಶನ್ ವಾಚ್ + ಸ್ಮಾರ್ಟ್‌ವಾಚ್‌ ಪವರ್), ಡೆಡಿಕೇಟೆಡ್ ಸ್ಪೋರ್ಟ್ಸ್ ಎಕ್ಸ್ಪೀರಿಯೆನ್ಸ್ (ಬ್ಯಾಟರಿ ಲೈಫ್ ಆಫ್ ಎ ಸ್ಪೋರ್ಟ್ಸ್ ವಾಚ್ + ಸ್ಮಾರ್ಟ್‌ವಾಚ್‌ಆಫ್ ರಿಚ್ನೆಸ್), ಸಾಂಪ್ರದಾಯಿಕ ವಾಚ್ ಮೋಡ್ (ಯುಟಿಲಿಟಿ ಅನಲಾಗ್ ವಾಚ್ + ಸ್ಮಾರ್ಟ್‌ವಾಚ್ ಹೊಂದಿಕೊಳ್ಳುವಿಕೆ).

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಬಿಡುಗಡೆ ಆಗಿರುವ ಫೋಸಲ್ ಸ್ಮಾರ್ಟ್‌ವಾಚ್ ಬೆಲೆಯು ರೂ. 17,995ರೂ.ಗಳು ಎನ್ನಲಾಗಿದೆ. ಕಂಪನಿಯ ಅಧಿಕೃತ ವೆಬ್‌ತಾಣದ ಮೂಲಕ ಗ್ರಾಹಕರು ಆನ್‌ಲೈನ್‌ ಆರ್ಡರ್‌ ಮಾಡಿ ಖರೀದಿಸಬಹುದಾಗಿದೆ. ಹಾಗೂ ಇತರೆ ಆಯ್ದ ಪ್ರಮುಖ ರೀಟೈಲ್‌ ಶಾಪ್‌ಗಳಲ್ಲಿಯೂ ದೊರೆಯಲಿದೆ.

ಓದಿರಿ : ಗೂಗಲ್‌ ಮ್ಯಾಪ್‌ ಸೇರಿದ ಮೂರು ಪಬ್ಲಿಕ್‌ ಟ್ರಾನ್ಸ್‌ಫೋರ್ಟ್‌ ಫೀಚರ್ಸ್‌! ಓದಿರಿ : ಗೂಗಲ್‌ ಮ್ಯಾಪ್‌ ಸೇರಿದ ಮೂರು ಪಬ್ಲಿಕ್‌ ಟ್ರಾನ್ಸ್‌ಫೋರ್ಟ್‌ ಫೀಚರ್ಸ್‌!

Best Mobiles in India

English summary
Fossil has launched its new smartwatch in the Indian market. to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X