Subscribe to Gizbot

ಮುಂದುವರೆಯುತ್ತಾ ಜಿಯೋ ಉಚಿತ ಕೊಡುಗೆ.? ಫೆಬ್ರವರಿ 6 ರಂದು ನಿರ್ಧಾರವಾಗಲಿದೆ ಜಿಯೋ ಭವಿಷ್ಯ

Written By:

ರಿಲಯನ್ಸ್ ಮಾಲಿಕತ್ವದ ಜಿಯೋ ಮಾರುಕಟ್ಟೆಗೆ ಬಂದ ನಂತರದಿಂದ ಭಾರತೀಯ ಟೆಲಿಕಾಮ್ ವಲಯದಲ್ಲಿ ಅನೇಕ ಬೆಳವಣಿಗೆಗಳು ನಡೆಯುತ್ತಿದೆ. ಜಿಯೋ ಉಚಿತ ಸೇವೆಯನ್ನು ವಿರೋಧಿಸುತ್ತಿರುವ ಇತರೆ ಟೆಲಿಕಾಮ್ ಕಂಪನಿಗಳು ಇದರಿಂದ ತಮಗೆ ಅತೀ ಹೆಚ್ಚಿನ ನಷ್ಟ ಉಂಟಾಗುತ್ತಿದ್ದು, ಇದು ಆರೋಗ್ಯಕಾರಿ ಸ್ಪರ್ಧೆಯಲ್ಲ ಎಂದು ಬೊಬ್ಬೆ ಇಡುತ್ತಿವೆ.

ಮುಂದುವರೆಯುತ್ತಾ ಜಿಯೋ ಉಚಿತ ಕೊಡುಗೆ..?

ಓದಿರಿ: ಈ ವರ್ಷ ಭಾರತದಲ್ಲಿ 270 ಮಿಲಿಯನ್ ಮೊಬೈಲ್ ಮಾರಾಟವಾಗಲಿದೆಯಂತೆ..!

ಇದೇ ಕಾರಣಕ್ಕೆ ಏರ್‌ಟೆಲ್, ವೊಡೋಪೋನ್, ಐಡಿಯಾ ಕಂಪನಿಗಳು ಕೋರ್ಟ್‌ ಮೆಟ್ಟಿಲೇರಿದ್ದು, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಗೆ ಸಹ ದೂರು ನೀಡಿವೆ, ಜಿಯೋ ಉಚಿತ ಸೇವೆಗೆ ಕಡಿವಾಣ ಹಾಕುವಂತೆ ಮನವಿ ಸಹ ಮಾಡಿವೆ.

ಈ ಹಿನ್ನಲೆಯಲ್ಲಿ ದೆಹಲಿ ಹೈ ಕೋರ್ಟ್‌, ಜಿಯೋ ದೇಶದಲ್ಲಿ ಉಚಿತ 4G ಡೇಟಾ ಸೇವೆ ಮತ್ತು ಉಚಿಯ ಕರೆ ಸೇವೆಯನ್ನು ನೀಡುತ್ತಿರುವ ಕುರಿತು ಮಾಹಿತಿ ನೀಡುವಂತೆ ಟ್ರಾಯ್‌ಗೆ ಸೂಚನೆ ನೀಡಿತ್ತು, ಅಲ್ಲದೇ ಜಿಯೋ ನಿರ್ಧಾರದಿಂದ ಬೇರೆ ಕಂಪನಿಗಳು ನಷ್ಟದ ಹಾದಿ ಹಿಡಿದಿರುವ ಕಾರಣ ಜಿಯೋ ತನ್ನ ಉಚಿತ ಸೇವೆಯನ್ನು ಮುಂದುವರೆಸಬೇಕೋ..? ಬೇಡವೋ. ಎನ್ನುವ ಕುರಿತು ನಿರ್ಧಾರವೊಂದನ್ನು ತೆಗೆದುಕೊಳ್ಳುವಂತೆ ಸೂಚಿಸಿತ್ತು.

ಮುಂದುವರೆಯುತ್ತಾ ಜಿಯೋ ಉಚಿತ ಕೊಡುಗೆ..?

ಓದಿರಿ: ಕೇಂದ್ರ ಬಜೆಟ್ 2017-18: 1.5 ಲಕ್ಷ ಗ್ರಾಪಂಗಳಿಗೆ ಆಪ್ಟಿಕಲ್ ಫೈಬರ್ ಮೂಲಕ ಇಂಟರ್ನೆಟ್ ಸೌಲಭ್ಯ

ಈ ಕುರಿತು ದೆಹಲಿ ಹೈ ಕೋರ್ಟ್‌ಗೆ ಉತ್ತರ ನೀಡಿರುವ ಟ್ರಾಯ್‌, ಶೀಘ್ರವೇ ಜಿಯೋ ಉಚಿತ ಸೇವೆಯನ್ನು ಮುಂದುವರೆಸಬೇಕೇ ಅಥವಾ ಬೇಡವೇ ಎನ್ನುವ ಕುರಿತು ಶೀಘ್ರವೇ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದೆ. ಆದರೆ ತಾನು ಯಾವ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಎಂಬುದನ್ನು ಕೋರ್ಟ್‌ಗೆ ತಿಳಿಸಿಲ್ಲ.

ಇದೇ ಫೆಬ್ರವರಿ 6 ರಂದು ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ಮತ್ತೆ ನಡೆಯಲಿದ್ದು, ಅಂದು ತನ್ನ ನಿರ್ಧಾರವನ್ನು ಪ್ರಕಟಿಸುವುದಾಗಿ ತಿಳಿಸಿದೆ.

Read more about:
English summary
TRAI on Wednesday told the Delhi High Court that it has taken a decision on free offers of Reliance JIO to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot