Subscribe to Gizbot

ಅಂತು ಇಂತೂ 'ಫ್ರೀಡಂ 251' ಜೂನ್‌ 28 ರಿಂದ ಬುಕ್ ಮಾಡಿದವರ ಕೈ ಸೇರಲಿದೆ

Written By:

ಕೇವಲ 251 ರೂಪಾಯಿಗೆ ಸ್ಮಾರ್ಟ್‌ಫೋನ್‌ ನೀಡುತ್ತೇವೆ ಎಂದು ವಿವಾದಕ್ಕೆ ಒಳಗಾಗಿದ್ದ ರಿಂಗಿಂಗ್‌ ಬೆಲ್ಸ್ ಕಂಪನಿಯು 'ಫ್ರೀಡಂ 251' ಸ್ಮಾರ್ಟ್‌ಫೋನ್‌ ಅನ್ನು ಇದೇ ತಿಂಗಳ 28 (ಜೂನ್‌ 28) ರಿಂದ ಡಿಲಿವರಿ ಮಾಡುತ್ತೇವೆ ಎಂದು ಹೇಳಿದೆ.

'ಫ್ರೀಡಂ 251' ಸ್ಮಾರ್ಟ್‌ಫೋನ್‌ ಅನ್ನು ಖರೀದಿಗಾಗಿ ಯಾರು ಬುಕ್‌ ಮಾಡಿದ್ದಾರೋ ಅವರಿಗೆ ಡಿಲಿವರಿ ನೀಡುತ್ತೇವೆ ಎಂದು ನೊಯ್ಡಾ ಮೂಲದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಸ್ಲೈಡರ್‌ನಲ್ಲಿ ಓದಿರಿ

'ಫ್ಲೇಯಿಂಗ್‌ ಸಾಸರ್‌ ಸ್ಮಾರ್ಟ್‌ಫೋನ್‌' ಖರೀದಿಗೆ ರೆಡಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಯಾಶ್ ಆನ್‌ ಡಿಲಿವರಿ

1

ರಿಂಗಿಂಗ್ ಬೆಲ್ಸ್‌ ಕಂಪನಿಯು 'ಫ್ರೀಡಂ 251' ಸ್ಮಾರ್ಟ್‌ಫೋನ್‌ ಅನ್ನು ಜೂನ್‌ 28 ರಿಂದ ಖರೀದಿಗಾಗಿ ಬುಕ್‌ ಮಾಡಿದವರಿಗೆ 'ಕ್ಯಾಶ್‌ ಆನ್‌ ಡಿಲಿವರಿ' ಆಧಾರದಲ್ಲಿ ನೀಡಲು ಪ್ರಾರಂಭಿಸುತ್ತೇವೆ ಎಂದು ಪಿಟಿಐಗೆ ಮೋಹಿತ್‌ ಗೋಯಲ್‌ ಹೇಳಿದ್ದಾರೆ.

ವಿವಾದಕ್ಕೊಳಗಾಗಿದ್ದ ಸ್ಮಾರ್ಟ್‌ಫೋನ್‌

2

ಸ್ಮಾರ್ಟ್‌ಫೋನ್‌ ಪ್ರಪಂಚದ ಅತಿ ಕಡಿಮೆ ಬೆಲೆಯದಾಗಿದ್ದರಿಂದ ಮೋಸದ ಯೋಜನೆ ಎಂದು ವಿವಾದಕ್ಕೆ ಒಳಗಾಗಿತ್ತು.

ವೆಬ್‌ಸೈಟ್‌ ಕ್ರ್ಯಾಶ್‌

3

251 ರೂ ಸ್ಮಾರ್ಟ್‌ಫೋನ್‌ನ ಅತಿ ಕಡಿಮೆ ಬೆಲೆಯಾದ್ದರಿಂದ, ಬೃಹತ್‌ ಸಂಖ್ಯೆಯ ಜನರು ವೆಬ್‌ಸೈಟ್‌ ಅನ್ನು ಒಮ್ಮೆಲೆ ಓಪನ್‌ ಮಾಡಿದ್ದರಿಂದ ವೆಬ್‌ಸೈಟ್‌ ಕ್ರ್ಯಾಶ್‌ ಆಗಿತ್ತು. ಮೊದಲ ಬ್ಯಾಚ್‌ನಲ್ಲಿ 30,000 ಗ್ರಾಹಕರು ಮೊಬೈಲ್‌ ಬುಕ್‌ ಮಾಡಿದ್ದಾರೆ ಎಂದು ಕಂಪನಿ ಹೇಳಿದೆ.

ಹಣ ಮರುಪಾವತಿ

4

ಸ್ಮಾರ್ಟ್‌ಫೋನ್‌ಗೆ ಹಣ ಸ್ವೀಕರಿಸಿದ್ದ ಕಂಪನಿ ಸರ್ಕಾರಿ ಏಜೆನ್ಸಿಗಳ ನಿಕಟ ಪರಿಶೀಲನೆ ಹಿತದೃಷ್ಟಿಯಿಂದ ಗ್ರಾಹಕರಿಗೆ ಹಣ ಮರುಪಾವತಿ ಮಾಡಿತ್ತು. 30,000 ಗ್ರಾಹಕರು ಮೊಬೈಲ್ ಬುಕ್‌ ಮಾಡಿ ಹಣ ಪಾವತಿಸಿದ್ದರು, 7 ಕೋಟಿ ಗ್ರಾಹಕರು ರಿಜಿಸ್ಟರ್‌ ಮಾಡಿದ್ದರು. ನಂತರದಲ್ಲಿ ಕಂಪನಿ ಕ್ಯಾಶ್‌ ಆನ್‌ ಡಿಲಿವರಿ ಬಗ್ಗೆ ಮಾಹಿತಿ ತಿಳಿಸಿತ್ತು.

2,500 ಫೋನ್‌ ತಯಾರಿ ಬೆಲೆ

5

'ಫ್ರೀಡಂ 251' ಸ್ಮಾರ್ಟ್‌ಫೋನ್ ತಯಾರಿ ಬೆಲೆ 2,500 ಆಗಿದ್ದು, ಇ-ಕಾಮರ್ಸ್‌ ಮಾರುಕಟ್ಟೆಯ ಮೂಲಕ ಮತ್ತು ಹಲವು ಸಿರೀಸ್‌ಗಳ ಮೂಲಕ ಹಣವನ್ನು ರಿಕವರ್‌ ಮಾಡಿಕೊಳ್ಳಲಿದೆ ಎಂದು ರಿಂಗಿಂಗ್‌ ಬೆಲ್ಸ್‌ ಕಂಪನಿಯ ಅಧ್ಯಕ್ಷರಾದ 'ಅಶೋಕ್‌ ಛಾಡ್ಢಾ' ಹೇಳಿದ್ದಾರೆ.

ಫ್ರೀಡಂ 251

6

'ಫ್ರೀಡಂ 251' ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ತಯಾರಿಸುವುದರಿಂದ 13.8 ಶೇಕಡ ಉಳಿತಾಯ ಕರ್ತವ್ಯದಿಂದ ಮತ್ತು ಇತರೆ ಉಳಿತಾಯ ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದರಿಂದ ಆಗುತ್ತದೆ ಎಂದು ಆಶೋಕ್‌ ಛಾಡ್ಢಾ ಹೇಳಿದ್ದಾರೆ. ಫೋನ್‌ ಅನ್ನು ನೊಯ್ಡಾ ಮತ್ತು ಉತ್ತರಾಂಚಲ್‌ನಲ್ಲಿ ತಯಾರಿಸಲಾಗಿದೆ.

ಸಂಶಯ

7

ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಪ್ಲೇಯರ್‌ಗಳು ಡಿಲಿವರಿ ಹೇಲಿಕೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಟೆಲಿಕಾಂ ಸಚಿವರಾದ 'ರವಿ ಶಂಕರ್‌ ಪ್ರಸಾದ್‌'ರವರು ' ಎಲೆಕ್ಟ್ರಾನಿಕ್‌ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗಕ್ಕೆ ಪರಿಶೀಲಿಸಲು ಹೇಳಿದ್ದಾರೆ. ಕಂಪನಿಯ ಆದಾಯ ಮತ್ತು ತೆರಿಗೆ ಇಲಾಖೆಯ ಪರಿಶೀಲನೆಗೆ ಒಳಪಟ್ಟಿದ್ದು, 3G ಹ್ಯಾಂಡ್‌ಸೆಟ್‌ ಎಂಬುದನ್ನು ಪರಿಶೀಲನೆ ಮಾಡಲಾಗುತ್ತಿದೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಭಾರತದಲ್ಲಿ ಬಜೆಟ್ ಬೆಲೆ ರೂ.6,999 ಕ್ಕೆ 'ಲೆನೊವೊ ವೈಬ್ ಕೆ5' ಸ್ಮಾರ್ಟ್‌ಫೋನ್‌

'ಫ್ಲೇಯಿಂಗ್‌ ಸಾಸರ್‌ ಸ್ಮಾರ್ಟ್‌ಫೋನ್‌' ಖರೀದಿಗೆ ರೆಡಿ!!

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಟೆಕ್ನಾಲಜಿ ಬಗೆಗಿನ ನಿರಂತರ ಸುದ್ದಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Freedom 251 Ringing Bells Says Will Begin Phone Deliveries From June 28. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot