ಭಾರತದಲ್ಲಿ ಫ್ಯೂಜಿಫಿಲ್ಮ್‌ನ ಹೊಸ ಕ್ಯಾಮೆರಾ ಲಾಂಚ್‌; ಬೆಲೆ ಎಷ್ಟು ಗೊತ್ತಾ!?

|

ಫ್ಯೂಜಿಫಿಲ್ಮ್ ಕಂಪೆನಿಯು ಸುಧಾರಿತ ತಂತ್ರಜ್ಞಾನ ಮೂಲಕ ಈಗಾಗಲೇ ಹಲವಾರು ರೀತಿಯ ಕ್ಯಾಮೆರಾಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅದರಲ್ಲೂ ಮಿರರ್‌ಲೆಸ್‌ ಕ್ಯಾಮೆರಾಗಳಿಗಾಗಿ ಕೆಲವು ವಾರಗಳ ಹಿಂದೆ ಎರಡು ಲೆನ್ಸ್‌ಗಳನ್ನೂ ಸಹ ಲಾಂಚ್‌ ಮಾಡಿತ್ತು. ಇದರ ಬೆನ್ನಲ್ಲೇ ಈಗ ಹೊಸದಾಗಿ ಫ್ಯೂಜಿಫಿಲ್ಮ್ ತನ್ನ X-T5 ಮಿರರ್‌ಲೆಸ್ ಕ್ಯಾಮೆರಾವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಹೊಸ ಫ್ಲ್ಯಾಗ್‌ಶಿಪ್ ಎಕ್ಸ್ ಸೀರಿಸ್‌ ಆಗಿದೆ.

ಫ್ಯೂಜಿಫಿಲ್ಮ್

ಹೌದು, ಭಾರತದಲ್ಲಿ ಫ್ಯೂಜಿಫಿಲ್ಮ್ X-T5 ಮಿರರ್‌ಲೆಸ್ ಕ್ಯಾಮೆರಾ (Fujifilm X-T5 mirrorless) ವನ್ನು ಅನಾವರಣ ಮಾಡಲಾಗಿದ್ದು, ಈ ಕ್ಯಾಮೆರಾ ಡಿಜಿಟಲ್ ಮಿರರ್‌ಲೆಸ್ ಕ್ಯಾಮೆರಾ X ಸರಣಿಯ ಮಿರರ್‌ಲೆಸ್ ಡಿಜಿಟಲ್ ಕ್ಯಾಮೆರಾಗಳ ಸಾಲಿಗೆ ಸೇರಲಿದೆ. ಈ ಕ್ಯಾಮೆರಾ ಹಗುರವಾದ ಬಾಡಿ ರಚನೆ ಹೊಂದಿದ್ದು, ಉತ್ತಮ ಗುಣಮಟ್ಟದ ಚಿತ್ರಗಳನ್ನು ಇದರಲ್ಲಿ ಸೆರೆಹಿಡಿಯಬಹುದಾಗಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಏನೇನು?, ಭಾರತದಲ್ಲಿ ಇದರ ಬೆಲೆ ಎಷ್ಟು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಹೊಸ ಕ್ಯಾಮೆರಾದ ಪ್ರಮುಖ ಫೀಚರ್ಸ್‌

ಹೊಸ ಕ್ಯಾಮೆರಾದ ಪ್ರಮುಖ ಫೀಚರ್ಸ್‌

X-T5 ಉತ್ತಮ ಚಿತ್ರದ ಗುಣಮಟ್ಟ ಮತ್ತು 1/180000 ಸೆಕೆಂಡ್‌ನ ವೇಗದ ಶಟರ್ ಆಯ್ಕೆಯನ್ನು ಹೊಂದಿದೆ. ಹಾಗೆಯೇ ಇದು ಛಾಯಾಗ್ರಹಣದ ವೈವಿಧ್ಯತೆ, ನಯವಾದ ಸ್ಕಿನ್‌ ಟೋನ್‌ ಎಫೆಕ್ಟ್‌ಗಳು ಮತ್ತು ಕಂಟೆಂಟ್‌ ಪತ್ತೆ AF ಅನ್ನು ವಿಸ್ತರಿಸಲು ಫಿಕ್ಸೆಲ್‌ ಶಿಫ್ಟ್‌ ಮಲ್ಟಿ-ಶಾಟ್ ಅನ್ನು ಒಳಗೊಂಡಿದ್ದು, ಚಿತ್ರದ ರೆಸಲ್ಯೂಶನ್ ಅನ್ನು ನಾಲ್ಕು ಪಟ್ಟು ಹೆಚ್ಚಿಸುತ್ತದೆ ಮತ್ತು ನಿಖರವಾದ ಬಣ್ಣ ಪುನರುತ್ಪಾದನೆಯನ್ನು ಇದು ನೀಡುತ್ತದೆ. ಅದರಲ್ಲೂ ಈ ಫೀಚರ್ಸ್‌ ಇರುವ ಕ್ಯಾಮೆರಾ ವಾಣಿಜ್ಯ ಛಾಯಾಗ್ರಹಣಕ್ಕೆ ಸೂಕ್ತವಾಗಿದೆ. ಕ್ಯಾಮೆರಾವು ಮೀಸಲಾದ ಸಾಫ್ಟ್‌ವೇರ್ ಅನ್ನು ಹೊಂದಿದ್ದು, ಬಳಕೆಯಲ್ಲಿ ಉತ್ತಮ ಅನುಭವ ನೀಡಲಿದೆ.

ಟಿಲ್ಟ್

ಇದರೊಂದಿಗೆ ಮೂರು ರೀತಿಯ ಟಿಲ್ಟ್ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಇದು ವಿವಿಧ ಭಂಗಿಯ ಫೋಟೋಗಳನ್ನು ಸೆರೆಹಿಡಿಯಲು ಸಹಕಾರಿಯಾಗಲಿದೆ. X-T5 ಐದನೇ ತಲೆಮಾರಿನ ಬ್ಯಾಕ್-ಇಲ್ಯುಮಿನೇಟೆಡ್ 40.2MP ಸೆನ್ಸರ್‌ ಎಕ್ಸ್ ಟ್ರಾನ್ಸ್ TM CMOS 5 HR ಮತ್ತು ಹೈ-ಸ್ಪೀಡ್ ಇಮೇಜ್ ಪ್ರೊಸೆಸಿಂಗ್ ಎಂಜಿನ್ ಎಕ್ಸ್‌-ಪ್ರೊಸೆಸರ್ 5 ಅನ್ನು ಹೊಂದಿದೆ. ಅಂತೆಯೇ ಹಿಂದಿನ ಮಾಡೆಲ್‌ಗಳಿಗಿಂತ ಚಿಕ್ಕದಾದ ಮತ್ತು ಹಗುರವಾದ ಕಾಂಪ್ಯಾಕ್ಟ್ ಬಾಡಿ ಇದರಲ್ಲಿದ್ದು, 5 ಆಕ್ಸಿಸ್ ಇನ್ ಬಾಡಿ ಇಮೇಜ್ ಸ್ಟೆಬಿಲೈಸೇಶನ್ ಸೇರಿದಂತೆ ಸುಧಾರಿತ ಫೀಚರ್ಸ್‌ ಗಮನ ಸೆಳೆದಿದೆ.

ಪೋಸ್ಟ್‌ ಪ್ರೊಸೆಸಿಂಗ್ ಕೆಲಸ ಕಡಿಮೆ

ಪೋಸ್ಟ್‌ ಪ್ರೊಸೆಸಿಂಗ್ ಕೆಲಸ ಕಡಿಮೆ

ಈ ಹೊಸ ಕ್ಯಾಮೆರಾದಿಂದ ಚಿತ್ರವನ್ನು ತೆಗೆಯುವಾಗ X-T5 ಸ್ಮೂತ್ ಸ್ಕಿನ್ ಎಫೆಕ್ಟ್‌ ಬಳಕೆ ಮಾಡಿಕೊಳ್ಳಬಹುದು. ಇದು ಚರ್ಮದ ಟೋನ್ ಅನ್ನು ಆಟೋಮ್ಯಾಟಿಕ್‌ ಆಗಿ ಸೆಟ್‌ ಮಾಡಿಕೊಳ್ಳಲಿದ್ದು, ಪೋಟ್ರೇಟ್ ಶೂಟ್‌ಗಳಲ್ಲಿ ಅಗತ್ಯವಿರುವ ಪೋಸ್ಟ್‌ ಪ್ರೊಸೆಸಿಂಗ್ ಕೆಲಸದ ಹೊರೆಯನ್ನು ಕಡಿಮೆ ಮಾಡುತ್ತದೆ. ಕ್ಯಾಮೆರಾದ ಆಟೋ ವೈಟ್ ಬ್ಯಾಲೆನ್ಸ್ ಫೀಚರ್ಸ್‌ ಡೀಪ್‌ ಲರ್ನಿಂಗ್‌ ಅಲ್ಗಾರಿದಮ್ ಅನ್ನು ಆಧರಿಸಿ ಕೆಲಸ ಮಾಡುತ್ತದೆ.

ಕಡಿಮೆ ಬೆಳಕಿನಲ್ಲಿಯೂ ಉತ್ತಮ ಕ್ವಾಲಿಟಿ ಚಿತ್ರ

ಕಡಿಮೆ ಬೆಳಕಿನಲ್ಲಿಯೂ ಉತ್ತಮ ಕ್ವಾಲಿಟಿ ಚಿತ್ರ

ಈ ಕ್ಯಾಮೆರಾದಲ್ಲಿ ನೈಟ್‌ಸ್ಕೇಪ್ ಛಾಯಾಗ್ರಹಣದಂತಹ ಕಡಿಮೆ ಬೆಳಕಿನ ಸಂದರ್ಭದಲ್ಲಿಯೂ ಉತ್ತಮ ಕ್ವಾಲಿಟಿಯ ಚಿತ್ರಗಳನ್ನು ಸೆರೆಹಿಡಿಯಲು ಸಹಕಾರಿಯಾಗಿದೆ. ಪಿಕ್ಸೆಲ್ ಶಿಫ್ಟ್ ಮಲ್ಟಿ ಶಾಟ್ ಕಾರ್ಯವನ್ನು ಸುಲಭಗೊಳಿಸಲು ಕ್ಯಾಮೆರಾದ ಇಮೇಜ್ ಸೆನ್ಸರ್ ಅನ್ನು ಹೆಚ್ಚಿನ ನಿಖರತೆಯಲ್ಲಿ ಬದಲಾಯಿಸಲು IBIS ಕಾರ್ಯವಿಧಾನವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರೊಂದಿಗೆ ISO, ಶಟರ್ ಸ್ಪೀಡ್‌ ಮತ್ತು ಇತರೆ ಆಯ್ಕೆಗಳನ್ನು ಕಂಟ್ರೋಲ್‌ ಮಾಡಲು ಮೇಲ್ಭಾಗದಲ್ಲಿ ಮೂರು ಡಯಲ್‌ಗಳನ್ನು ಹೊಂದಿದೆ. ಇದಷ್ಟೆ ಅಲ್ಲದೆ ಫೀಚರ್ಸ್‌ ಜೊತೆಗೆ 10-ಬಿಟ್ ಕಲರ್ ಮೋಡ್‌ನಲ್ಲಿ 30 fps ನಲ್ಲಿ 6.2K ವರೆಗೆ ರೆಕಾರ್ಡಿಂಗ್ ಮಾಡಲು ಈ ಕ್ಯಾಮೆರಾ ಅವಕಾಶ ನೀಡಲಿದೆ.

ಭಾರತದಲ್ಲಿ ಈ ಕ್ಯಾಮೆರಾದ ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಈ ಕ್ಯಾಮೆರಾದ ಬೆಲೆ ಮತ್ತು ಲಭ್ಯತೆ

ಫ್ಯೂಜಿಫಿಲ್ಮ್ X-T5 ಮಿರರ್‌ಲೆಸ್ ಕ್ಯಾಮೆರಾಗೆ 169,999 ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಇದರೊಂದಿಗೆ X-T5 ಕಿಟ್ ಲೆನ್ಸ್‌ ಸಹ ಲಭ್ಯವಿದ್ದು, ಇದರಲ್ಲಿ X-T5/1855 ಮತ್ತು X-T5/1680 ಲೆನ್ಸ್‌ಗಳಿಗೆ ಕ್ರಮವಾಗಿ 209,000 ರೂ. ಮತ್ತು 219,000 ರೂ. ಗಳ ಬೆಲೆ ನಿಗದಿ ಮಾಡಲಾಗಿದೆ. ಇನ್ನು ಈ ಕ್ಯಾಮೆರಾ ಕಪ್ಪು ಮತ್ತು ಬೆಳ್ಳಿಯ ಎರಡು ಬಣ್ಣಗಳಲ್ಲಿ ಲಭ್ಯ ಇದೆ.

ಆರಂಭಿಕ ಕೊಡುಗೆ

ಆರಂಭಿಕ ಕೊಡುಗೆಯಾಗಿ ಗ್ರಾಹಕರು 14,000 ರೂ. ಮೌಲ್ಯದ ಉಚಿತ ಪ್ರೊಡಕ್ಟ್‌ಗಳನ್ನು ಕೊಡುಗೆಯಾಗಿ ಪಡೆಯಬಹುದಾಗಿದೆ. ಇದರಲ್ಲಿ ಉಚಿತ ಡ್ಯುಯಲ್ ಬ್ಯಾಟರಿ ಚಾರ್ಜರ್, ಹಾಗೂ 64GB ಮೆಮೊರಿ ಕಾರ್ಡ್ ಅನ್ನು ಸಹ ನೀಡಲಾಗುತ್ತದೆ.

Best Mobiles in India

English summary
Fujifilm X-T5 mirrorless camera launched in India with new features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X