ಮನೆಯ ಲೈಟ್‌ ಬೆಳಕಿನಿಂದಲೇ ಚಾರ್ಜ್‌ ಆಗಲಿದೆ ಈ ರಿಮೋಟ್‌; ಹೇಗೆ ಗೊತ್ತಾ!?

|

ಸ್ಮಾರ್ಟ್‌ ಗ್ಯಾಜೆಟ್‌ಗಳು ವಿವಿಧ ರೀತಿಯ ಫೀಚರ್ಸ್‌ಗಳನ್ನು ಒಳಗೊಂಡಂತೆ ಗ್ರಾಹಕರ ಅಗತ್ಯತೆಗಳನ್ನು ಪೂರೈಸುತ್ತಾ ಬರುತ್ತಿವೆ. ಅದರಲ್ಲೂ ಏರುಗತಿಯಲ್ಲಿ ಸಾಗುತ್ತಿರುವ ಸುಧಾರಿತ ತಂತ್ರಜ್ಞಾನ ದಿನ ಬಳಕೆಯ ಡಿವೈಸ್‌ಗಳಿಗೆ ಹೊಸ ರೂಪವನ್ನೇ ನೀಡುತ್ತಿದೆ. ಇದರ ನಡುವೆ ಸ್ಮಾರ್ಟ್‌ಟಿವಿಗಳು ಸಹ ವಿಭಿನ್ನವಾದ ಫೀಚರ್ಸ್‌ಗಳನ್ನು ಪಡೆದುಕೊಳ್ಳುತ್ತಿದ್ದು, ಇನ್ನಷ್ಟು ಆಕರ್ಷಕವಾಗಿದೆ.

ಮನೆಯ ಲೈಟ್‌ ಬೆಳಕಿನಿಂದಲೇ ಚಾರ್ಜ್‌ ಆಗಲಿದೆ ಈ ರಿಮೋಟ್‌; ಹೇಗೆ ಗೊತ್ತಾ!?

ಹೌದು, ಸದ್ಯಕ್ಕೆ ಆಂಡ್ರಾಯ್ಡ್‌ ಟಿವಿ ಬಳಕೆಯಲ್ಲಿ ರಿಮೋಟ್‌ ಸಹ ವಿಶೇಷವಾದ ರೂಪ ಪಡೆದುಕೊಳ್ಳುತ್ತಿವೆ. ಮನೆಯಲ್ಲಿ ಟಿವಿ ರಿಮೋಟ್‌ನ ಸೆಲ್ ಅನ್ನು ಪದೇ ಪದೇ ಬದಲಾಯಿಸುವುದಕ್ಕೆ ಶೀಘ್ರದಲ್ಲೇ ಪರಿಹಾರ ಸಿಗಲಿದೆ. ಗೂಗಲ್ ಟಿವಿ ವಿಶೇಷ ರೀತಿಯ ರಿಮೋಟ್ ಅನ್ನು ಹೊರತರುತ್ತಿದ್ದು, ಅದರ ಬ್ಯಾಟರಿಯು ಸ್ವಯಂ-ಚಾರ್ಜ್ ಆಗುತ್ತದೆ. ಹಾಗಿದ್ರೆ, ಈ ರಿಮೋಟ್‌ ಹೇಗೆ ಕೆಲಸ ಮಾಡಲಿದೆ. ಯಾವ ಉದ್ದೇಶಕ್ಕೆ ಇದನ್ನು ಪರಿಚಯಿಸಲಾಗುತ್ತಿದೆ ಎನ್ನುವ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಮನೆಯ ಬೆಳಕಿನಿಂದಲೇ ಚಾರ್ಜ್‌
ಕಳೆದ ಕೆಲವು ವರ್ಷಗಳಿಂದ ಆಂಡ್ರಾಯ್ಡ್ ಟಿವಿ ಮತ್ತು ಗೂಗಲ್ ಟಿವಿಗೆ ರಿಮೋಟ್ ತಯಾರಿಸುತ್ತಿರುವ TW ಎಲೆಕ್ಟ್ರಾನಿಕ್ಸ್ ಈ ಬಾರಿ ರಿಮೋಟ್ ನ ಹೊಸ ವಿನ್ಯಾಸವನ್ನು ಪರಿಚಯಿಸಿದೆ. ಇದರ ಕೆಳಭಾಗದಲ್ಲಿ ದ್ಯುತಿವಿದ್ಯುಜ್ಜನಕ ಫಲಕವನ್ನು ಒಳಗೊಂಡಿದ್ದು, ಈ ಮೂಲಕ ರಿಮೋಟ್‌ನ ಬ್ಯಾಟರಿ ಸ್ವಯಂ ಚಾರ್ಜ್ ಆಗುತ್ತದೆ.

ಮನೆಯ ಲೈಟ್‌ ಬೆಳಕಿನಿಂದಲೇ ಚಾರ್ಜ್‌ ಆಗಲಿದೆ ಈ ರಿಮೋಟ್‌; ಹೇಗೆ ಗೊತ್ತಾ!?

ಚಾರ್ಜಿಂಗ್ ರಿಮೋಟ್
ಈ ಸಂಬಂಧ ಕಂಪನಿಯು ಟ್ವೀಟ್‌ ಮಾಡಿದ್ದು, ಹೊಸ ಸ್ವಯಂ ಚಾರ್ಜಿಂಗ್ ರಿಮೋಟ್ ಅನ್ನು ಬಿಡುಗಡೆ ಮಾಡಲು ನಾವು ತುಂಬಾ ಉತ್ಸುಕರಾಗಿದ್ದೇವೆ. ಈ ರಿಮೋಟ್ ಒಳಾಂಗಣ ದೀಪಗಳೊಂದಿಗೆ ಸ್ವತಃ ಚಾರ್ಜ್ ಆಗುತ್ತದೆ ಎಂದು ತಿಳಿಸಿದೆ.

ಫಲಕವು ಬೆಳಕನ್ನು ವಿದ್ಯುಚ್ಛಕ್ತಿಗೆ ಪರಿವರ್ತಿಸುತ್ತದೆ
ರಿಮೋಟ್‌ನಲ್ಲಿ ಬಳಕೆ ಮಾಡಲಾಗಿರವ ಫಲಕವು ಮನೆಯಲ್ಲಿ ಇರುವ ಲೈಟ್ಸ್‌ ಬೆಳಕನ್ನು ವಿದ್ಯುತ್ ಆಗಿ ಪರಿವರ್ತಿಸುತ್ತದೆ. ಈ ಕಾರಣದಿಂದಾಗಿ ಬ್ಯಾಟರಿ ಸ್ವತಃ ಚಾರ್ಜ್ ಆಗುತ್ತದೆ. ಇತ್ತೀಚಿನ ವರ್ಷಗಳಲ್ಲಿ, ಸ್ಯಾಮ್‌ಸಂಗ್‌ ನಂತಹ ಬ್ರ್ಯಾಂಡ್‌ಗಳಿಂದ ಸ್ವಯಂ ಚಾರ್ಜಿಂಗ್ ರಿಮೋಟ್‌ಗಳನ್ನು ಪರಿಚಯಿಸಲಾಗಿದೆ.

ಅಮೆಜಾನ್‌ನಿಂದಲೂ ಪ್ರಯೋಗ
ಅಮೆಜಾನ್ ಸಹ ತನ್ನ ಮುಂದಿನ ಫೈರ್ ಟಿವಿ ರಿಮೋಟ್‌ನಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಲು ಕೆಲಸ ಮಾಡುವ ನಿರೀಕ್ಷೆಯಿದೆ ಎನ್ನಲಾಗಿದೆ. ಇನ್ನು ಗೂಗಲ್ ಟಿವಿ ಪರಿಚಯಿಸುತ್ತಿರುವ ಈ ಹೊಸ ರಿಮೋಟ್‌ ಯಾವಾಗ ಪ್ರಾರಂಭ ಆಗುತ್ತದೆ ಎನ್ನುವ ನಿಖರ ಮಾಹಿತಿ ತಿಳಿದುಬಂದಿಲ್ಲ.

ಮನೆಯ ಲೈಟ್‌ ಬೆಳಕಿನಿಂದಲೇ ಚಾರ್ಜ್‌ ಆಗಲಿದೆ ಈ ರಿಮೋಟ್‌; ಹೇಗೆ ಗೊತ್ತಾ!?

ಟಿವಿಯಲ್ಲಿ ವೈಯಕ್ತೀಕರಿಸಿಕೊಳ್ಳುವ ಪ್ರೊಫೈಲ್
ಕಳೆದ ವರ್ಷ ಗೂಗಲ್‌ ತನ್ನ ಗೂಗಲ್ ಟಿವಿಯಲ್ಲಿ ತನ್ನ ಬಳಕೆದಾರರಿಗಾಗಿ 'ವೈಯಕ್ತೀಕರಿಸಿದ ಪ್ರೊಫೈಲ್' ಅನ್ನು ಪ್ರಾರಂಭಿಸಿದೆ ಎಂಬುದು ನಿಮ್ಮ ಗಮನಕ್ಕಿರಲಿ. ಈ ಹೊಸ ಗೂಗಲ್‌ ಟಿವಿ ಬಳಕೆದಾರರಿಗೆ ಅವರು ವೀಕ್ಷಿಸಲು ಬಯಸುವ ಕಾರ್ಯಕ್ರಮಗಳನ್ನು ಹೊಂದಿಸಲು ಅನುಮತಿಸುವ ಪ್ರೊಫೈಲ್ ಅನ್ನು ರಚಿಸಲು ಇದು ಸಹಾಯಕವಾಗಿದೆ. ಇದಲ್ಲದೆ, ನೀವು ಚಿಕ್ಕ ಮಕ್ಕಳಿಗಾಗಿ ಮಕ್ಕಳ ಪ್ರೊಫೈಲ್ ಅನ್ನು ಸಹ ಹೊಂದಿಸಬಹುದಾಗಿದೆ. ಇದರಿಂದ ಮಕ್ಕಳು ನಿಮ್ಮ ಮೇಲ್ವಿಚಾರಣೆಯಲ್ಲಿ ತಮ್ಮ ನೆಚ್ಚಿನ ವಿಡಿಯೋಗಳು ವೀಕ್ಷಿಸಬಹುದು ಅಥವಾ ಇನ್ನಿತರೆ ಚಟುವಟಿಕೆಯಲ್ಲಿ ತೊಡಗಬಹುದಾಗಿದೆ.

ಮನೆಯ ಲೈಟ್‌ ಬೆಳಕಿನಿಂದಲೇ ಚಾರ್ಜ್‌ ಆಗಲಿದೆ ಈ ರಿಮೋಟ್‌; ಹೇಗೆ ಗೊತ್ತಾ!?

ಇದರೊಂದಿಗೆ ಗೂಗಲ್‌ ಟಿವಿ ಹೊಸ ಕ್ರೋಮಾ ಕಾಸ್ಟ್‌ ನಲ್ಲಿ ಕೆಲಸ ಮಾಡುತ್ತಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಈ ಹೊಸ ಕ್ರೋಮಾ ಕಾಸ್ಟ್‌ ಗೂಗಲ್‌ ಟಿವಿಯೊಂದಿಗೆ ಕ್ರೋಮಾ ಕಾಸ್ಟ್‌ ಗೆ ಮೂರನೇ ಸೇರ್ಪಡೆಯಾಗಬಹುದು. ಇದು HD ಮತ್ತು 4K ಯ ಎರಡು ವೇರಿಯಂಟ್‌ನಲ್ಲಿ ಲಭ್ಯವಾಗಲಿದೆ. ಇದರೊಂದಿಗೆ ಗೂಗಲ್‌ ಹೋಮ್‌ ಆಪ್‌ಗಳಿಗಾಗಿ ಪೂರ್ವವೀಕ್ಷಣೆ ಅಪ್‌ಡೇಟ್‌ನ ಮೂಲ ಕೋಡ್ ಅನ್ನು ಬದಲಾಯಿಸಿದ್ದು, ಈ ಹೊಸ ಗೂಗಲ್‌ ಟಿವಿ ಡಿವೈಸ್‌ನಲ್ಲಿ 'YTC' ಎಂದು ಉಲ್ಲೇಖಿಸಲಾಗಿದೆ ಹಾಗೆಯೇ ಕೋಡ್‌ನಲ್ಲಿ "ಕ್ರೋಮಾ ಕಾಸ್ಟ್‌ ವಿತ್‌ ಗೂಗಲ್‌ಟಿವಿ ಎಂದು ಉಲ್ಲೇಖಿಸಲಾಗಿದೆ.

Best Mobiles in India

English summary
Future Google TV to get self charging .

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X