ಅಪಾಯದಿಂದ ನಿಮ್ಮನ್ನು ದೂರವಿಡುವ ಫೇಸ್‌ಬುಕ್ ಟಿಪ್ಸ್

Written By:

ಇಂದು ಫೇಸ್‌ಬುಕ್ ಟಾಪ್ ತಾಣವಾಗಿ ಪ್ರಸಿದ್ಧಿಯನ್ನು ಗಳಿಸಿಕೊಳ್ಳುತ್ತಿದೆ. ಸಾಮಾಜಿಕ ತಾಣದಲ್ಲಿ ದಿನದಿಂದ ದಿನಕ್ಕೆ ಅಭಿವೃದ್ಧಿಯನ್ನು ಕಂಡುಕೊಳ್ಳುತ್ತಾ ತನ್ನ ವ್ಯವಹಾರವನ್ನು ವಿಸ್ತರಿಸಿಕೊಳ್ಳುತ್ತಾ ಬಳಕೆದಾರರ ಮೆಚ್ಚಿನ ತಾಣವಾಗಿ ಹೊರಹೊಮ್ಮಿದೆ. ಕಾಣೆಯಾದ ಮಗುವಿನ ಪತ್ತೆಯಿಂದ ಹಿಡಿದು ಮೋಸಗೊಳಿಸುವ ಉತ್ಪನ್ನಗಳ ಒಳತಿರುವನ್ನು ಬಿಚ್ಚಿಡುವಲ್ಲಿ ಫೇಸ್‌ಬುಕ್ ತನ್ನ ಸಾಹಸವನ್ನು ಪ್ರದರ್ಶಿಸಿದೆ. ಇಷ್ಟೆಲ್ಲಾ ಪ್ರಸಿದ್ಧಿಯ ತುತ್ತ ತುದಿಯಲ್ಲಿರುವ ಫೇಸ್‌ಬುಕ್ ಅಷ್ಟೊಂದು ಸೇಫ್ ಅಲ್ಲ ಎಂಬುದು ನಿಮಗೆ ಗೊತ್ತೇ?

ಓದಿರಿ: ಫೇಸ್‌ಬುಕ್ ಬಳಸುವಾಗ ತಲೆಯಲ್ಲಿರಲಿ ಕಟ್ಟಕಡೆಯ ಎಚ್ಚರ!!!

ಹೌದು ನಿರಂತರವಾಗಿ ಫೇಸ್‌ಬುಕ್ ಬಳಕೆಯನ್ನು ಮಾಡುತ್ತಿರುವವರು ನೀವಾಗಿದ್ದಲ್ಲಿ ಕೆಲವೊಂದು ಎಚ್ಚರಿಕೆಯ ಕ್ರಮಗಳನ್ನು ನೀವು ಪಾಲಿಸಬೇಕಾದ್ದು ಅನಿವಾರ್ಯವಾಗಿದೆ. ನೀವು ತುಸು ಏಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಅಂಶ ನಿಮ್ಮ ತಲೆಯಲ್ಲಿರಲಿ. ಬನ್ನಿ ಇಂದಿನ ಲೇಖನದಲ್ಲಿ ನೀವು ಪಾಲಿಸಬೇಕಾದ ಕ್ರಮಗಳನ್ನು ಕುರಿತು ಒಂದಿಷ್ಟು ಸಲಹೆಗಳನ್ನು ನಾವು ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೌಪ್ಯವಾಗಿರಲಿ

ಗೌಪ್ಯವಾಗಿರಲಿ

ಪ್ರೊಫೈಲ್ ಮಾಹಿತಿ ಗೌಪ್ಯವಾಗಿರಲಿ

ನಿಮ್ಮ ಮೊಬೈಲ್ ಸಂಖ್ಯೆ ಮನೆಯ ವಿಳಾಸವನ್ನು ಫೇಸ್‌ಬುಕ್ ಖಾತೆಯಲ್ಲಿ ಎಂದಿಗೂ ಭರ್ತಿಮಾಡದಿರಿ

ಇಮೇಲ್ ಐಡಿ ಬೇಡ

ಇಮೇಲ್ ಐಡಿ ಬೇಡ

ಪ್ರೊಫೈಲ್‌ನಲ್ಲಿ ಇಮೇಲ್ ಐಡಿ ಬೇಡ

ನಿಮ್ಮ ವೈಯಕ್ತಿಕ ಇಮೇಲ್ ಐಡಿಯನ್ನು ಫೇಸ್‌ಬುಕ್‌ನಲ್ಲಿ ಭರ್ತಿ ಮಾಡುವುದರಿಂದ ನೀವು ಹ್ಯಾಕರ್‌ಗಳ ಗಾಳಕ್ಕೆ ಬೀಳಬಹುದು. ನಿಮ್ಮ ವೈಯಕ್ತಿಕ ಇಮೇಲ್ ಐಡಿಯನ್ನು ಪೋಸ್ಟ್ ಮಾಡಬೇಕೇ ಎಂಬುದನ್ನು ನೂರು ಬಾರಿ ಆಲೋಚಿಸಿ ಫೇಸ್‌ಬುಕ್‌ನಲ್ಲಿ ಬಳಸಿ.

ಲಾಗಿನ್ ಆಗಿಯೇ ಇರಬೇಡಿ

ಲಾಗಿನ್ ಆಗಿಯೇ ಇರಬೇಡಿ

ಫೇಸ್‌ಬುಕ್‌ನಲ್ಲಿ ಲಾಗಿನ್ ಆಗಿಯೇ ಇರಬೇಡಿ

ನೀವು ಎಫ್‌ಬಿಗೆ ಲಾಗಿನ್ ಆಗುವಾಗ ಕೀಪ್ ಮಿ ಲಾಗ್‌ಡ್ ಇನ್ ಬಾಕ್ಸ್‌ಗೆ ಟಿಕ್ ಮಾಡುತ್ತಿದ್ದೀರಾ. ಆದರೆ ಈ ಟಿಕ್ ಅನ್ನು ನಿರಂತರವಾಗಿ ಬಳಸದಿರಿ. ಕೀಪ್ ಮಿ ಲಾಗ್‌ಡ್ ಇನ್ ಆಯ್ಕೆ ನಿಮ್ಮನ್ನು ಅವಾಂತರಕ್ಕೆ ಬೀಳಿಸಬಹುದು.

ಸಾರ್ವಜನಿಕ ಕಂಪ್ಯೂಟರ್

ಸಾರ್ವಜನಿಕ ಕಂಪ್ಯೂಟರ್

ಸಾರ್ವಜನಿಕ ಕಂಪ್ಯೂಟರ್ ಮೂಲಕ ಲಾಗಿನ್ ಆಗಬೇಡಿ

ನಿಮ್ಮ ಫೇಸ್‌ಬುಕ್ ಖಾತೆಗೆ ಲಾಗಿನ್ ಮಾಡುವಾಗ ಸಾರ್ವಜನಿಕ ಕಂಪ್ಯೂಟರ್ ಅನ್ನು ಬಳಸಬೇಡಿ. ನೀವು ಒಮ್ಮೊಮ್ಮೆ ಫೇಸ್‌ಬುಕ್‌ನಿಂದ ಲಾಗ್ ಔಟ್ ಆಗಲು ಮರೆತಲ್ಲಿ ನಿಮ್ಮ ನಂತರ ಬರುವ ವ್ಯಕ್ತಿ ನಿಮ್ಮ ಖಾತೆಯನ್ನು ಅನಗತ್ಯವಾಗಿ ಬಳಸಬಹುದು.

ಅನಾಮಧೇಯ ವ್ಯಕ್ತಿ

ಅನಾಮಧೇಯ ವ್ಯಕ್ತಿ

ಅನಾಮಧೇಯ ವ್ಯಕ್ತಿಗಳ ಬಗ್ಗೆ ಜಾಗ್ರತೆ ಇರಲಿ

ಅನಾಮಧೇಯ ವ್ಯಕ್ತಿಗಳಿಂದ ಸ್ನೇಹಿತರ ಕೋರಿಕೆಯನ್ನು ಸ್ವೀಕರಿಸುವಾಗ ಹೆಚ್ಚು ಜಾಗರೂಕತೆಯಿಂದ ಇರಿ. ಇವರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೆ ಇವರನ್ನು ನಿಮ್ಮ ಖಾತೆಯೊಳಗೆ ಸೇರಿಸಿಕೊಳ್ಳುವುದು ನಿಮ್ಮನ್ನು ಗಂಡಾಂತರಕ್ಕೆ ನೂಕಬಹುದು.

ಎಸ್ಎಮ್‌ಎಸ್ ಮಾಡದಿರಿ

ಎಸ್ಎಮ್‌ಎಸ್ ಮಾಡದಿರಿ

ಚಾಟ್‌ನಲ್ಲಿ ಮೇಲ್ ಐಡಿ ಎಸ್ಎಮ್‌ಎಸ್ ಮಾಡದಿರಿ

ನಿಮ್ಮ ಸಹಾಯವನ್ನು ಕೋರಿ ಆತ/ಆಕೆ ಫೇಸ್‌ಬುಕ್‌ನಲ್ಲಿ ನಿಮ್ಮ ಇಮೇಲ್ ಐಡಿಯನ್ನು ಕೇಳಿದಾಗ ತಕ್ಷಣವೇ ಕೊಟ್ಟುಬಿಡಬೇಡಿ. ನೀವು ಆದಷ್ಟು ಈ ವಿಚಾರದಲ್ಲಿ ಹೆಚ್ಚಿನ ಜಾಗರೂಕತೆಯನ್ನು ವಹಿಸಬೇಕಾಗುತ್ತದೆ.

ನವೀಕರಿಸದಿರಿ

ನವೀಕರಿಸದಿರಿ

ರಜಾದಿನಗಳ ಮಾಹಿತಿ ನವೀಕರಿಸದಿರಿ

ನಿಮ್ಮ ಮುಂಬರುವ ರಜಾದಿನಗಳನ್ನು ನೀವು ಹೇಗೆ ಕಳೆಯಲಿದ್ದೀರಿ ಎಂಬುದನ್ನು ಫೇಸ್‌ಬುಕ್‌ನಲ್ಲಿ ನವೀಕರಿಸದಿರಿ. ನೀವು ಹೊರದೇಶಕ್ಕೆ ಹೋಗುವ ಮತ್ತು ಬರುವ ಮಾಹಿತಿ ನಿಮ್ಮನ್ನು ಕೊಳ್ಳೆಹೊಳೆಯುವವರಿಗೆ ಬಂಫರ್ ಕೊಡುಗೆಯಾಗಿ ಮಾರ್ಪಡಬಹುದು.

ಸ್ನೇಹಿತರ ಕೋರಿಗೆ ಮನ್ನಿಸದಿರಿ

ಸ್ನೇಹಿತರ ಕೋರಿಗೆ ಮನ್ನಿಸದಿರಿ

ಕಚೇರಿ ಸಿಬ್ಬಂದಿಗಳಿಂದ ಸ್ನೇಹಿತರ ಕೋರಿಗೆ ಮನ್ನಿಸದಿರಿ

ನಿಮ್ಮ ಕಚೇರಿ ಸಿಬ್ಬಂದಿಗಳನ್ನು ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗಿ ಆಯ್ದುಕೊಂಡಿದ್ದೀರಿ ಎಂದಾದಲ್ಲಿ ನಿಮ್ಮೆಲ್ಲಾ ವೈಯಕ್ತಿಕ ವಿಚಾರಗಳು ಅವರನ್ನು ತಲುಪುತ್ತವೆ ಎಂದರ್ಥವಾಗಿದೆ.

ಸ್ನೇಹಿತರಿಗೆ ಮಾತ್ರ

ಸ್ನೇಹಿತರಿಗೆ ಮಾತ್ರ

ಪೋಸ್ಟ್ ಅನುಮತಿಗಳು ಸ್ನೇಹಿತರಿಗೆ ಮಾತ್ರ

ಫೇಸ್‌ಬುಕ್‌ನಲ್ಲಿ ಪೋಸ್ಟ್‌ಗಳು ಅಥವಾ ಫೋಟೋಗಳನ್ನು ಪೋಸ್ಟ್ ಮಾಡುವಾಗ ಸಾರ್ವಜನಿಕಕ್ಕಿಂತ, ಸ್ನೇಹಿತರು ಆಯ್ಕೆಯನ್ನು ಆರಿಸಿಕೊಳ್ಳಿ. ನಿಮ್ಮ ಚಿತ್ರವನ್ನು ನೀವು ಸಾರ್ವಜನಿಕವಾಗಿ ಪೋಸ್ಟ್ ಮಾಡಿದಾಗ ಇದನ್ನವರು ತಪ್ಪು ಉದ್ದೇಶಗಳಿಗಾಗಿ ಬಳಸುವುದು ಹೆಚ್ಚಾಗಿರುತ್ತದೆ.

ಅಪ್‌ಡೇಟ್ ಮಾಡಿ

ಅಪ್‌ಡೇಟ್ ಮಾಡಿ

ಆಂಟಿವೈರಸ್ ಅಪ್‌ಡೇಟ್ ಮಾಡಿ

ನೀವು ವಾರಕ್ಕೊಮ್ಮೆ ಆಂಟಿವೈರಸ್ ಅನ್ನು ನವೀಕರಿಸುವುದು ಅತ್ಯಗತ್ಯವಾಗಿದೆ. ಹೆಚ್ಚಿನ ಮಾಲ್‌ವೇರ್ ದಾಳಿಗಳಿಗೆ ಫೇಸ್‌ಬುಕ್ ಮುಖ್ಯ ಲಕ್ಷ್ಯವಾಗಿರುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
While Social Media has many a benefits, it too has its own set of backdrops. Doing something too cheesy might harness your personal security. So always beware of what your are doing. Here are the top security tips for Facebook usage.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot