ಸ್ಯಾಮ್‌ಸಂಗ್‌ ಟಿವಿ ಖರೀದಿಸಿ : ಉಚಿತವಾಗಿ ಪಡೆಯಿರಿ 'ಅಮೆಜಾನ್ ಫೈರ್‌ ಟಿವಿ ಸ್ಟಿಕ್'!

|

ಭಾರತೀಯ ಸ್ಮಾರ್ಟ್‌ಟಿವಿ ಮಾರುಕಟ್ಟೆ ವಲಯವು ಇಂದು ಸಾಕಷ್ಟು ಹೊಸತನದೊಂದಿಗೆ ಕಂಗೊಳಿಸುತ್ತಿದ್ದು, ವಿವಿಧ ಮಾದರಿಯ ಟಿವಿಗಳ ಶ್ರೇಣಿ ಲಭ್ಯ ಇವೆ. ಸ್ಮಾರ್ಟ್‌ಟಿವಿ ಆರಂಭದ ದಿನಗಳಲ್ಲಿ ಅವುಗಳ ಬೆಲೆಯು ಗಗನಮುಸುಮದಂತೆ ಎಂದೇನಿಸಿದ್ದು ಸುಳ್ಳಲ್ಲ. ಆದರೆ ತಂತ್ರಜ್ಞಾನ ಬೆಳವಣಿಗೆಯಿಂದ ಸ್ಮಾರ್ಟ್‌ಟಿವಿಗಳು ಕೇವಲ 15000ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿಯೂ ದೊರೆಯುತ್ತಿವೆ. ಅದರೊಂದಿಗೆ ಬೆಸ್ಟ್‌ ಆಫರ್‌ಗಳು ಗ್ರಾಹಕರನ್ನು ಮೋಡಿ ಮಾಡುತ್ತಿವೆ.

ಸ್ಯಾಮ್‌ಸಂಗ್‌ ಟಿವಿ ಖರೀದಿಸಿ ಉಚಿತವಾಗಿ ಪಡೆಯಿರಿ ಅಮೆಜಾನ್ ಫೈರ್‌ ಟಿವಿ ಸ್ಟಿಕ್'!

ಹೌದು, ಸದ್ಯ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಆಫರ್‌ಗಳಿಗೆನು ಬರವಿಲ್ಲ. ಅತ್ಯುತ್ತಮ ಬ್ಯ್ರಾಂಡ್‌ ಕಂಪನಿಗಳ ಟಿವಿಗಳಿಗೂ ಸೂಪರ್‌ ಆಫರ್‌ಗಳಿವೆ. ಈ ನಿಟ್ಟಿನಲ್ಲಿ ಸ್ಯಾಮ್‌ಸಂಗ್‌ ಕಂಪನಿಯ ಸಹ ಬೆಸ್ಟ್‌ ಆಫರ್‌ ಘೋಷಿಸಿದ್ದು, ತನ್ನ ಆಯ್ದ LED ಸ್ಮಾರ್ಟ್‌ಟಿವಿ ಖರೀದಿಸಿದರೇ ಅಮೆಜಾನ್ ಫೈರ್‌ ಟಿವಿ ಸ್ಟಿಕ್‌ ಡಿವೈಸ್‌ ಸಂಪೂರ್ಣ ಉಚಿತವಾಗಿ ನೀಡಲು ಮುಂದಾಗಿದೆ. ಈ ಕೊಡುಗೆ ಹೆಚ್ಚಿನ ಗ್ರಾಹಕರಿಗೆ ಆಕರ್ಷಿಸಲಿದೆ.

ಸ್ಯಾಮ್‌ಸಂಗ್‌ ಟಿವಿ ಖರೀದಿಸಿ ಉಚಿತವಾಗಿ ಪಡೆಯಿರಿ ಅಮೆಜಾನ್ ಫೈರ್‌ ಟಿವಿ ಸ್ಟಿಕ್'!

ಕಂಪನಿಯ ಸ್ಮಾರ್ಟ್‌ಟಿವಿಗಳು ಡಾಲ್ಬಿ ಸೌಂಡ್‌, ನೆಟ್‌ಫ್ಲೆಕ್ಸ್‌, ಪ್ರೈಮ್‌ ವಿಡಿಯೊ, ಫೇಸ್‌ಬುಕ್, ಯೂಟ್ಯೂಬ್‌ ಸೇರಿದಂತೆ ಜನಪ್ರಿಯ ಅಪ್ಲಿಕೇಶನ್‌ಗಳನ್ನು ಇನ್‌ಬಿಲ್ಟ್‌ ಆಗಿ ಪಡೆದುಕೊಂಡಿವೆ. ಎಕ್ಸ್‌ಚೇಂಜ್ ಡಿಸ್ಕೌಂಟ್‌, ನೋ ಕಾಸ್ಟ್‌ ಇಎಮ್‌ಐ, ಮತ್ತು ಫೈವ್‌ ಪರ್ಸೆಂಟ್‌ ಇನ್‌ಸ್ಟಂಟ್ ಡಿಸ್ಕೌಂಟ್‌ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಹಾಗಾದರೇ ಸ್ಯಾಮ್‌ಸಂಗ್‌ನ ಯಾವೆಲ್ಲಾ ಆಯ್ದ ಸ್ಮಾರ್ಟ್‌ಟಿವಿಗಳಿಗೆ ಆಫರ್‌ ಲಭ್ಯ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಶಿಯೋಮಿಯಿಂದ ಭಾರತೀಯ ಮಾರುಕಟ್ಟೆಗೆ ಹೊಸ 'ಟ್ರಿಮ್ಮರ್' ಬಿಡುಗಡೆ! ಓದಿರಿ : ಶಿಯೋಮಿಯಿಂದ ಭಾರತೀಯ ಮಾರುಕಟ್ಟೆಗೆ ಹೊಸ 'ಟ್ರಿಮ್ಮರ್' ಬಿಡುಗಡೆ!

32 ಇಂಚಿನ ಸ್ಮಾರ್ಟ್‌ಟಿವಿ

32 ಇಂಚಿನ ಸ್ಮಾರ್ಟ್‌ಟಿವಿ

ಸ್ಯಾಮ್‌ಸಂಗ್‌ನ ಈ ಟಿವಿಯು 1,366 x 768 ಪಿಕ್ಸಲ್ ರೆಸಲ್ಯೂಶನ್‌ನೊಂದಿಗೆ 32 ಇಂಚಿನ ಹೆಚ್‌ಡಿ ರೆಡಿ LED ಟಿವಿಯಾಗಿದ್ದು. 60Hz ಸಾಮರ್ಥ್ಯದ ಡಿಸ್‌ಪ್ಲೇಯನ್ನು ಹೊಂದಿದೆ. ಎರಡು HDMI ಫೋರ್ಟ್‌ಗಳನ್ನು ಒಳಗೊಂಡಿದ್ದು, ಒಂದು USB ಪೋರ್ಟ್‌ ಸಹ ಹೊಂದಿದೆ. ಕ್ಲಿಯರ್‌ವ್ಯೂವ್‌, ಯುಎಸ್‌ಬಿ ಕನೆಕ್ಟ್‌ ಮತ್ತು ಶೇರ್‌ ಆಯ್ಕೆಗಳಿದ್ದು, ಹೆಚ್‌ಡಿ ಗುಣಮಟ್ಟದ ದೃಶ್ಯಾವಳಿಗಳನ್ನು ವೀಕ್ಷಿಸಬಹುದಾಗಿದೆ. ಇದರ ಮಾಡೆಲ್‌ ನಂಬರ್‌(UA32N4010AR) ಮತ್ತು ಬೆಲೆಯು 14,999ರೂ.ಗಳು ಆಗಿದೆ.

43 ಇಂಚಿನ ಸ್ಮಾರ್ಟ್‌ಟಿವಿ

43 ಇಂಚಿನ ಸ್ಮಾರ್ಟ್‌ಟಿವಿ

ಸ್ಯಾಮ್‌ಸಂಗ್‌ನ UA43N5010ARXXL ಮಾಡೆಲ್‌ ನಂಬರಿನ ಈ ಸ್ಮಾರ್ಟ್‌ಟಿವಿಯು 1920 x 1080 ಪಿಕ್ಸಲ್ ರೆಸಲ್ಯೂಶನ್‌ನೊಂದಿಗೆ 43 ಇಂಚಿನ ಪೂರ್ಣ ಹೆಚ್‌ಡಿ ಪ್ಯಾನಲ್‌ ಹೊಂದಿದ್ದು, ಡಿಸ್‌ಪ್ಲೇ ಅನುಪಾತವು 16:09 ಆಗಿದೆ. ಎರಡು ಸ್ಪೀಕರ್ಸ್‌ಗಳಿದ್ದು, 20 ವ್ಯಾಟ್ಸ್‌ ಔಟ್‌ಪುಟ್‌ ಡಾಲ್ಬಿ ಸೌಂಡ್‌ ಕ್ವಾಲಿಟಿಯನ್ನು ಪಡೆದುಕೊಂಡಿದೆ. ಹಾಗೆಯೇ ಎರಡು HDMI ಫೋರ್ಟ್‌ಗಳನ್ನು ಮತ್ತು ಎರಡು USB ಪೋರ್ಟ್‌ಗಳನ್ನು ಸಹ ಹೊಂದಿದೆ. ಇದರ ಬೆಲೆಯು 29,999ರೂ.ಗಳು ಆಗಿದೆ.

ಓದಿರಿ : BSNLನಿಂದ ಹೊಸ STV-1345ರೂ. ಪ್ಲ್ಯಾನ್‌!.ಒಂದು ವರ್ಷ ವ್ಯಾಲಿಡಿಟಿ!ಓದಿರಿ : BSNLನಿಂದ ಹೊಸ STV-1345ರೂ. ಪ್ಲ್ಯಾನ್‌!.ಒಂದು ವರ್ಷ ವ್ಯಾಲಿಡಿಟಿ!

49 ಇಂಚಿನ ಸ್ಮಾರ್ಟ್‌ಟಿವಿ

49 ಇಂಚಿನ ಸ್ಮಾರ್ಟ್‌ಟಿವಿ

ಸ್ಯಾಮ್‌ಸಂಗ್‌ನ 49 ಇಂಚಿನ ಫುಲ್‌ ಹೆಚ್‌ಡಿ LED ಪ್ಯಾನೆಲ್‌ನ (UA49N5300AR) ಈ ಸ್ಮಾರ್ಟ್‌ಟಿವಿಯು 1920 x 1080 ಪಿಕ್ಸಲ್ ರೆಸಲ್ಯೂಶನ್‌ ಒಳಗೊಂಡಿದ್ದು, ರಿಫ್ರೇಶಿಂಗ್ ರೇಟ್‌ 60 ಹರ್ಡ್ಜ್ ಆಗಿದೆ. ಎರಡು ಸ್ಪೀಕರ್ಸ್‌ಗಳಿದ್ದು, 40 ವ್ಯಾಟ್ಸ್‌ ಔಟ್‌ಪುಟ್‌ ಡಾಲ್ಬಿ ಡಿಜಿಟಲ್‌ ಪ್ಲಸ್‌ ಸೌಂಡ್‌ ಕ್ವಾಲಿಟಿಯನ್ನು ಪಡೆದುಕೊಂಡಿರುವ ಜೊತೆಗೆ ಎರಡು HDMI ಫೋರ್ಟ್‌ಗಳನ್ನು ಮತ್ತು ಒಂದು ಯುಎಸ್‌ಬಿ ಕನೆಕ್ಟರ್‌ ಆಯ್ಕೆ ಹೊಂದಿದೆ. ಈ ಸ್ಮಾರ್ಟ್‌ಟಿವಿಯ ಬೆಲೆಯು 45,999ರೂ.ಗಳು.

ಅಮೆಜಾನ್ ಫೈರ್‌ ಸ್ಟಿಕ್‌ ಉಚಿತ

ಅಮೆಜಾನ್ ಫೈರ್‌ ಸ್ಟಿಕ್‌ ಉಚಿತ

ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿಯೊಂದಿಗೆ ಅಮೆಜಾನ್ ಫೈರ್‌ ಟಿವಿ ಸ್ಟಿಕ್ ಉಚಿತವಾಗಿ ಪಡೆಯಲು, ಮೊದಲು ಕಾರ್ಟ್‌ನಲ್ಲಿ ಆಯ್ದ ಟಿವಿಯನ್ನು ಸೇರಿಸುವುದು. ನಂತರ ಫೈರ್‌ ಟಿವಿ ಸ್ಟಿಕ್‌ ಅನ್ನು ಕಾರ್ಟ್‌ಗೆ ಆಡ್‌ ಮಾಡಿಕೊಳ್ಳುವುದು. ಆಗ ಆಫರ್‌ ಲಭ್ಯತೆ ಕಾಣಿಸಲಿದೆ. ಆದರೆ ಈ ಫೈರ್‌ ಟಿವಿ ಸ್ಟಿಕ್‌ ಪ್ರೈಮ್‌ ಚಂದಾದಾರಿಕೆಯೊಂದಿಗೆ ಬರುವುದಿಲ್ಲ. ವಾರ್ಷಿಕ ಚಂದಾದಾರತ್ವಕ್ಕೆ 999ರೂ. ಅಥವಾ ತಿಂಗಳ ಚಂದಾದಾರತ್ವಕ್ಕೆ 129ರೂ.ಗಳನ್ನು ಸಂದಾಯಮಾಡಬೇಕು.

ಓದಿರಿ : ಅತೀ ಶೀಘ್ರದಲ್ಲೇ ಐಫೋನ್‌ನಲ್ಲಿ ಈ ಫೀಚರ್ಸ್‌ಗಳು ಕಾಣಿಸಿಕೊಳ್ಳಲಿವೆ! ಓದಿರಿ : ಅತೀ ಶೀಘ್ರದಲ್ಲೇ ಐಫೋನ್‌ನಲ್ಲಿ ಈ ಫೀಚರ್ಸ್‌ಗಳು ಕಾಣಿಸಿಕೊಳ್ಳಲಿವೆ!

Best Mobiles in India

English summary
On buying select Samsung LED TVs on Amazon India, you can now get a Fire TV Stick for free. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X