ಕ್ಯಾಡ್ಬರಿ ಡೈರಿ ಮಿಲ್ಕ್ ತಿಂದರೆ ಜಿಯೋ 1ಜಿಬಿ ಡಾಟಾ ಫ್ರೀ

By GizBot Bureau
|
Get 1GB free Jio 4G data with Cadbury Dairy Milk - KANNADA

ನೀವು ನಿಮ್ಮ ಮಕ್ಕಳಿಗೆ ಚಾಕಲೇಟ್ ಕೊಡಿಸುತ್ತೀರಾ? ಅಥವಾ ನಿಮಗೂ ಚಾಕಲೇಟ್ ಅಂದರೆ ಇಷ್ಟವಾ? ಆಗಾಗ ಚಾಕಲೇಟ್ ಖರೀದಿಸುವ ಅಭ್ಯಾಸ ನಿಮಗಿದೆಯಾ? ಸರಿ ನೀವು ಜಿಯೋ ಗ್ರಾಹಕರಾಗಿದ್ದೀರಾ? ಒಂದಕ್ಕೊಂದು ಲಿಂಕೇ ಇಲ್ಲದಂತೆ ಪ್ರಶ್ನೆ ಕೇಳಿದ್ದಾರಲ್ಲ. ಚಾಕಲೇಟ್ ಗೂ ಜಿಯೋ ಫೋನ್ ಗೂ ಏನು ಸಂಬಂಧ ಎಂದು ಕೇಳುತ್ತಿದ್ದೀರಾ? ಸಂಬಂಧ ಇದೆ. ಚಾಕಲೇಟ್ ತಿಂದ್ರೆ ಜಿಯೋ ಡಾಟಾ ಫ್ರೀ ಆಗಿ ಸಿಗುತ್ತೆ. ಇದು ಜಿಯೋ ಮಾಡುತ್ತಿರುವ ಮತ್ತೊಂದು ಮಾರ್ಕೆಟಿಂಗ್ ತಂತ್ರ.

ಕ್ಯಾಡ್ಬರಿ ಡೈರಿ ಮಿಲ್ಕ್ ತಿಂದರೆ ಜಿಯೋ 1ಜಿಬಿ ಡಾಟಾ ಫ್ರೀ

ರಿಲಯನ್ಸ್ ಜಿಯೋ 4ಜಿ ಡಾಟಾವನ್ನು ಇತರೆ ಟೆಲಿಕಾಂ ಆಪರೇಟರ್ ಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಬೆಲೆಯಲ್ಲಿ ನೀಡುತ್ತಿದೆ. ಜಿಯೋ ಹಲವಾರು ಅತ್ಯುತ್ತಮ ಡೀಲ್ ಗಳು, ರಿಯಾಯಿತಿಗಳು ಮತ್ತು ಚಂದಾದಾರಿಕೆಯ ಪ್ಲಾನ್ ಗಳನ್ನು ಗ್ರಾಹಕರಿಗೆ ನೀಡಿದೆ. ಇದೀಗ ರಿಲಯನ್ಸ್ ಜಿಯೋ ಕ್ಯಾಡ್ಬರಿ ಡೈರಿಮಿಲ್ಕ್ ಚಾಕಲೇಟ್ ಜೊತೆಗೆ ಕೈಜೋಡಿಸಿದ್ದು, ಕ್ಯಾಡ್ಬರಿ ಚಾಕಲೇಟ್ ಸೇವನೆ ಮಾಡುವವರಿಗೆ ಒಂದು ಜಿಬಿ ಡಾಟಾ ಉಚಿತವಾಗಿ ಮೈಜಿಯೋ ಆಪ್ ಮೂಲಕ ಸಿಗಲಿದೆ.

ಉಚಿತ ಚಾಕಲೇಟ್ 1ಜಿಬಿ ಡಾಟಾ ಪಡೆಯುವುದು ಹೇಗೆ?

ನಿಮಗೂ ಕೂಡ ಚಾಕಲೇಟ್ ಜೊತೆಗೆ ಲಭ್ಯವಾಗುವ ಈ 1 ಜಿಬಿ ಉಚಿತ ಡಾಟಾ ಪಡೆದುಕೊಳ್ಳಬೇಕಾ. ಹಾಗಾದ್ರೆ ನೀವೇನು ಮಾಡಬೇಕು ಹೇಳ್ತೀವಿ ಕೇಳಿ. 1 ಜಿಬಿ ಹೆಚ್ಚುವರಿ ಜಿಯೋ ಡಾಟಾ ಪಡೆದುಕೊಳ್ಳಬೇಕಾದರೆ ನೀವು ಒಂದು ಕ್ಯಾಬ್ಡರಿ ಡೈರಿ ಮಿಲ್ಕ್ ಚಾಕಲೇಟ್ ನ್ನು ಖರೀದಿ ಮಾಡಬೇಕು. ನಂತರ ಆ ಡೈರಿ ಮಿಲ್ಕ್ ಚಾಕಲೇಟ್ ಸಂಪೂರ್ಣ ಚಿತ್ರಣ ಇಲ್ಲವೇ ಅದರ ರ್ಯಾಪರ್ ನ ಪಿಕ್ಚರ್ ನ್ನು ಅಪ್ ಲೋ ಮಾಡಬೇಕು. ಮತ್ತು ನಂತರ, ಮೈಜಿಯೋ ಆಪ್ ನಲ್ಲಿ Participate Now ಬಟನ್ ನ್ನು ಪ್ರೆಸ್ ಮಾಡಿ.

ಮತ್ತು ಈಗ ನಿಮಗೆ 1ಜಿಬಿ ಉಚಿತ ಡಾಟಾ ನಿಮ್ಮ ಜಿಯೋ ಅಕೌಂಟ್ ಗೆ ಲಭ್ಯವಾಗುತ್ತದೆ. ಆದರೆ ಈ ಡಾಟಾವನ್ನು ನೀವು ಇಟ್ಟುಕೊಳ್ಳಲು ಬಹುದು ಅಥವಾ ಪ್ರಥಮ್ ಪೌಂಡೇಷನ್ ಅನ್ನೋ ಎನ್.ಜಿ.ಓ ಗೆ ದಾನ ಕೂಡ ಮಾಡಬಹುದು. ಈ NGO ದೇಶಾದ್ಯಂತ ಇರುವ ಅಂಡರ್ ಪ್ರಿವಿಲೇಜ್ಡ್ ಮಕ್ಕಳಿಗೆ ವಿಧ್ಯಾಬ್ಯಾಸ ಒದಗಿಸುವ ಕೆಲಸವನ್ನು ಮಾಡುತ್ತಿದೆ.

ಆದರೆ ನೀವು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾಗಿರುವ ಅಂಶವೇನೆಂದರೆ ಹೀಗೆ ಮಾಡಿದಾಗ ನಿಮ್ಮ ಅಕೌಂಟಿನಲ್ಲಿ ಹೆಚ್ಚುವರಿ ಡಾಟಾವು ರಿಫ್ಲೆಕ್ಟ್ ಆಗಲು ಕೆಲವು ಸಮಯ ಬೇಕಾಗಬಹುದು.ಕಂಪೆನಿ ಹೇಳುವ ಪ್ರಕಾರ ಕೆಲವರಿಗೆ ಒಂದು ವಾರವೂ ಆಗಬಹುದು. ಆದರೆ ನಮ್ಮ Gizbot ತಂಡಕ್ಕೆ ಕೂಡಲೇ ಲಭ್ಯವಾಗಿದೆ. ಮತ್ತೊಂದು ವಿಚಾರವೇನೆಂದರೆ ಈ ಹೆಚ್ಚುವರಿ ಡಾಟಾವನ್ನು ಒಂದು ನಂಬರ್ ಗೆ ಒಮ್ಮೆ ಮಾತ್ರ ಪಡೆಯಲು ಸಾಧ್ಯವಾಗುತ್ತದೆ.

ಈ ಹಿಂದಿನ ಜಿಯೋ ಆಫರ್ ಗಳು

ಇತ್ತೀಚೆಗೆ ಜಿಯೋ 2ಜಿಬಿ ಡಾಟಾವನ್ನು ಆಫರ್ ಮಾಡಿತ್ತು ಆದರೆ ಅದು ನಿರ್ಧಿಷ್ಟ ಸಮಯವನ್ನು ಒಳಗೊಂಡಿತ್ತು. ಈಗಾಗಲೇ ಗ್ರಾಹಕರು ಹೊಂದಿರುವ ಪ್ಯಾಕ್ ನ ಜೊತೆಗೆ ಅವರು ಅನಿಯಮಿತ ವಾಯ್ಸ್ ಕರೆಗಳು, ಚಂದಾದಾರಿಕೆಯೊಂದಿಗಿರುವ ಡಾಟಾ ಮತ್ತು ಎಸ್ಎಂಎಸ್ ಬೆನಿಫಿಟ್ ಗಳು ಮತ್ತು 2ಜಿ ಡಾಟಾ ಕೂಡ ಅದರ ಜೊತೆಗೆ ಲಭ್ಯವಾಗುತ್ತಿತ್ತು.

ಗಮನಿಸಬೇಕಾಗಿದ್ದ ಅಂಶವೇನೆಂದರೆ ಮೈಜಿಯೋ ಆಪ್ ಮೂಲಕ ಆಯ್ದ ಕೆಲವು ಗ್ರಾಹಕರಿಗೆ ಮಾತ್ರ ಈ ಸೌಲಭ್ಯವಿತ್ತು. ಆದರೆ, ಆಯ್ಕೆ ಪ್ರಕ್ರಿಯೆ ಹೇಗೆ ನಡೆಯಿತು ಎಂಬ ಬಗ್ಗೆ ತಿಳಿದಿಲ್ಲ.ಆಸಕ್ತ ಗ್ರಾಹಕರು ಮೈಜಿಯೋ ಆಪ್ ಗೆ ತೆರಳಿ ಮೈ ಪ್ಲಾನ್ ಸೆಕ್ಷನ್ ನಲ್ಲಿ ಟಾಪ್ ಅಪ್ ಪ್ಲಾನ್ ನ್ನು ವಿಕ್ಷಿಸಬಹುದು ಮತ್ತು ನೀವು ಅರ್ಹರಾಗಿದ್ದೀರಾ ಎಂಬುದನ್ನು ಗಮನಿಸಿಕೊಳ್ಳಬಹುದು.

Most Read Articles
Best Mobiles in India

Read more about:
English summary
Reliance Jio has tied up with Cadbury to offer 1GB of free data to all the customers via the MyJio app. To avail this offer that gives 1GB of additional data, you need to buy a Cadbury Dairy Milk chocolate and upload a picture of either the whole chocolate bar or the empty wrapper.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more